Reasons For Belly Fat: ಇತ್ತೀಚಿನ ದಿನಗಳಲ್ಲಿ ಹೊಟ್ಟೆಯ ಕೊಬ್ಬಿನ ಸಮಸ್ಯೆಯಿಂದ ಅನೇಕರು ಬಳಲುತ್ತಿದ್ದಾರೆ. ಡಯಟ್, ವ್ಯಾಯಾಮ ಮಾಡಿದರೂ ಕೆಲವರಿಗೆ ಕೊಬ್ಬು (ಬೆಲ್ಲಿ ಫ್ಯಾಟ್) ಕಡಿಮೆಯಾಗುವುದಿಲ್ಲ. ಅಧಿಕ ಹೊಟ್ಟೆಯ ಕೊಬ್ಬು ಹೃದ್ರೋಗ, ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಂತಹ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.
ಹೊಟ್ಟೆಯ ಸುತ್ತ ಕೊಬ್ಬು ಏಕೆ ಸಂಗ್ರಹವಾಗುತ್ತದೆ ಎಂಬುದು ಅನೇಕ ಜನರಿಗೆ ತಿಳಿದಿಲ್ಲ. ಮಿತ ಆಹಾರ ಸೇವನೆಯ ಬದಲು, ಹೆಚ್ಚು ತಿಂದರೆ ಹೊಟ್ಟೆಯ ಭಾಗದಲ್ಲಿ ಕೊಬ್ಬು ಶೇಖರಣೆಗೊಳ್ಳುತ್ತದೆ ಎಂದು ಜನರು ಭಾವಿಸುತ್ತಾರೆ. ಆದರೆ, ತಜ್ಞ ವೈದ್ಯರು ಹೇಳುವಂತೆ ಹೊಟ್ಟೆಯ ಸುತ್ತ ಕೊಬ್ಬಿಗೆ ಹಲವು ಕಾರಣಗಳಿವೆ.
ವ್ಯಾಯಾಮದ ಕೊರತೆ: ಆಧುನಿಕ ಯುಗದಲ್ಲಿ ಹೆಚ್ಚಿನ ಜನರು ವ್ಯಾಯಾಮವನ್ನೇ ಮಾಡುವುದಿಲ್ಲ. ಇದು ಅನಾರೋಗ್ಯಕರ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ದಿನನಿತ್ಯದ ವ್ಯಾಯಾಮ ತಪ್ಪಿಸಿಕೊಳ್ಳುವುದರಿಂದ ಹೊಟ್ಟೆಯ ಸುತ್ತ ಕೊಬ್ಬು ಸಂಗ್ರಹವಾಗುತ್ತದೆ ಎನ್ನುತ್ತಾರೆ ತಜ್ಞರು.
ಉತ್ತಮ ಆಹಾರ ಕ್ರಮ ಅನುಸರಿಸದೇ ಇರುವುದು: ಹೊಟ್ಟೆಯ ಸುತ್ತ ಕೊಬ್ಬು ಹೆಚ್ಚಾಗಲು ಸರಿಯಾದ ಆಹಾರ ಕ್ರಮ ಅನುಸರಿಸದಿರುವುದು ಮುಖ್ಯ ಕಾರಣ. ಅನೇಕರು ತಮ್ಮ ದೈನಂದಿನ ಅವಶ್ಯಕತೆಗಳನ್ನು ಮೀರಿ ಹೆಚ್ಚಿನ ಕ್ಯಾಲೊರಿಗಳನ್ನು ಹೊಂದಿರುವ ಆಹಾರ ಸೇವಿಸುತ್ತಾರೆ. ಇದು ಕೊಬ್ಬನ್ನು ಉಂಟುಮಾಡುತ್ತದೆ ಎನ್ನುತ್ತಾರೆ ವೈದ್ಯರು.
ಹೆಚ್ಚು ಮದ್ಯಪಾನ ಸೇವನೆ: ಆಲ್ಕೋಹಾಲ್ ಹೆಚ್ಚಿನ ಕ್ಯಾಲೊರಿಗಳನ್ನು ಹೊಂದಿರುತ್ತದೆ. ನಾವು ಹೆಚ್ಚಿನ ಪ್ರಮಾಣದಲ್ಲಿ ಆಲ್ಕೋಹಾಲ್ ಸೇವಿಸಿದಾಗ ಅದು ದೇಹದಲ್ಲಿ ಕೊಬ್ಬಿನ ಶೇಖರಣೆಗೆ ಕಾರಣವಾಗುತ್ತದೆ. ಅಲ್ಲದೇ ಮದ್ಯ ಸೇವಿಸುತ್ತಾ ನಾನ್ ವೆಜ್ ಫುಡ್ ತಿನ್ನುತ್ತಾರೆ. ಇದು ಹೊಟ್ಟೆಯ ಸುತ್ತ ಕೊಬ್ಬು ಹೆಚ್ಚಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.
ಧೂಮಪಾನ: ಧೂಮಪಾನ (ನ್ಯಾಷನಲ್ ಲೈಬ್ರರಿ ಆಫ್ ಸೈನ್ಸ್ ರಿಪೋರ್ಟ್) ಸಹ ಹೊಟ್ಟೆಯ ಕೊಬ್ಬನ್ನು ಉಂಟುಮಾಡುತ್ತದೆ. ಆದರೆ, ಅನೇಕರಿಗೆ ಇದು ತಿಳಿದಿಲ್ಲ. ಧೂಮಪಾನವು ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಮತ್ತು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. ಇದರಿಂದ ಹೊಟ್ಟೆಯ ಸುತ್ತ ಕೊಬ್ಬು ಸಂಗ್ರಹವಾಗುತ್ತದೆ ಎನ್ನುತ್ತಾರೆ ತಜ್ಞರು.
2011ರಲ್ಲಿ 'ಇಂಟರ್ನ್ಯಾಷನಲ್ ಜರ್ನಲ್ ಆಫ್ ಒಬೆಸಿಟಿ'ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಧೂಮಪಾನಿಗಳು ಧೂಮಪಾನಿಗಳಲ್ಲದವರಿಗಿಂತ ಹೊಟ್ಟೆಯ ಕೊಬ್ಬು ಹೆಚ್ಚಾಗುವ ಸಾಧ್ಯತೆ ಇರುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಜಪಾನ್‌ನ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಫಾರ್ ಲಾಂಗ್ವಿಟಿ ಸೈನ್ಸಸ್‌ನ ಡಾ.ಶಿಮೋಕಟಾ ಹಿರೋಶಿ ಈ ಸಂಶೋಧನೆಯಲ್ಲಿ ಭಾಗವಹಿಸಿದ್ದರು.
ರಾತ್ರಿ ಸರಿಯಾಗಿ ನಿದ್ದೆ ಮಾಡದಿರುವುದು: ರಾತ್ರಿ ಸರಿಯಾಗಿ ನಿದ್ದೆ ಮಾಡದ ಕಾರಣ ಬೆಳಗ್ಗೆ ಹೆಚ್ಚು ಆಹಾರ ಸೇವಿಸುತ್ತೇವೆ. ಇದರಿಂದ ಹೊಟ್ಟೆಯ ಸುತ್ತ ಕೊಬ್ಬು ಸಂಗ್ರಹವಾಗುತ್ತದೆ.
ಒತ್ತಡ: ನಮ್ಮ ದೇಹದಲ್ಲಿ ಅಂದ್ರೆ, ಪ್ರಮುಖವಾಗಿ ಹೊಟ್ಟೆಯ ಸುತ್ತ ಕೊಬ್ಬು ಹೆಚ್ಚಾಗಲು ಒತ್ತಡವೂ ಒಂದು ಕಾರಣ. ಸಾಮಾನ್ಯವಾಗಿ, ನಾವು ಒತ್ತಡದಲ್ಲಿದ್ದಾಗ, ದೇಹವು ಕಾರ್ಟಿಸೋಲ್ ಎಂಬ ಹಾರ್ಮೋನ್ ಅನ್ನು ಬಿಡುಗಡೆ ಮಾಡುತ್ತದೆ. ದೀರ್ಘಕಾಲಿಕವಾಗಿ ಹೆಚ್ಚಿನ ಪ್ರಮಾಣದಲ್ಲಿ ಅವುಗಳು ಬಿಡುಗಡೆಯಾದರೆ, ಹೊಟ್ಟೆಯ ಸುತ್ತ ಕೊಬ್ಬು ಹೆಚ್ಚಾಗಲು ಕಾರಣವಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ನೀವು ಈ ವೆಬ್ಸೈಟ್ಗೆ ಸಂಪರ್ಕಿಸಬಹುದು: (National Library of Medicine Report): https://www.ncbi.nlm.nih.gov/pmc/articles/PMC3454366/
ಓದುಗರಿಗೆ ವಿಶೇಷ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿ ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.