ಹೈದರಾಬಾದ್: ಮುಖದ ಸೌಂದರ್ಯಕ್ಕೆ ಅಡ್ಡಿಯಾಗುವ ಮೊಡವೆಗಳು ಸಾಮಾನ್ಯವಾಗಿ ಹದಿಹರೆಯದವರನ್ನು ಕಾಡುವುದು ಹೆಚ್ಚು. ಆದರೆ, ಇತ್ತೀಚಿನ ದಿನದಲ್ಲಿ 30 ಮತ್ತು 40 ವರ್ಷದವರಲ್ಲಿ ಕೂಡ ಈ ಮೊಡವೆ ಸಮಸ್ಯೆ ಹೆಚ್ಚುತ್ತಿದೆ. ಮೊಡವೆಗಳು ತ್ವಚೆ ಕೆಳಗಿರುವ ಕೂದಲು ಕಿರುಚೀಲ (ರಂಧ್ರ) ಮುಚ್ಚಿದಾಗ ಸಂಭವಿಸುವ ಸಾಮಾನ್ಯ ಚರ್ಮದ ಸ್ಥಿತಿ ಆಗಿದೆ. ಇದು ಮಧ್ಯ ವಯಸ್ಕರನ್ನು ಕಾಡಲು ಕೆಲವು ಕಾರಣಗಳು ಇದೆ.
ಹಾರ್ಮೋನ್: ಸಾಮಾನ್ಯವಾಗಿ ಹದಿವಯಸ್ಸಿನಲ್ಲಿ ಉಂಟಾಗುವ ಹಾರ್ಮೋನ್ಗಳ ಬದಲಾವಣೆ ಮೊಡವೆಗೆ ಕಾರಣವಾಗಿದೆ. ಆದರೆ ವಯಸ್ಸಾದಂತೆ ಕಾಡುವ ನೈಸರ್ಗಿಕ ಹಾರ್ಮೋನ್ ಏರಿಳಿತಗಳು ಕೂಡ ಮೊಡವೆ ಉಲ್ಬಣಕ್ಕೆ ಕಾರಣವಾಗುತ್ತದೆ. ಹಾರ್ಮೋನ್ಗಳ ಏರಿಳಿತದಿಂದ ತ್ವಚೆಯಲ್ಲಿ ಹೆಚ್ಚಿನ ಎಣ್ಣೆಯನ್ನು ಉತ್ಪಾದನೆ ಮಾಡುತ್ತದೆ. ಇದು ಸೇರಿ ತ್ವಚೆಯ ಉಸಿರಾಡುವ ರಂಧ್ರವನ್ನೇ ಮುಚ್ಚುವುದರಿಂದ ಮೊಡವೆ ಜೊತೆಗೆ ಬ್ಯಾಕ್ಟೀರಿಯಾ ಸಮಸ್ಯೆಗೆ ಕಾರಣವಾಗುತ್ತದೆ. ಈ ಸಮಸ್ಯೆ ಮಹಿಳೆಯರಲ್ಲಿ ಹೆಚ್ಚಿದೆ. ವಿಶೇಷವಾಗಿ ಋತುಚಕ್ರ, ಗರ್ಭಾವಸ್ಥೆ ಮತ್ತು ಜನನ ನಿಯಂತ್ರಣ ಮಾತ್ರೆ ಆರಂಭ ಮತ್ತು ನಿಲ್ಲುವ ಅವಧಿಯಲ್ಲಿ ಕಾಣಬಹುದು.
ಔಷಧಗಳು: ಕೆಲವು ನಿರ್ದಿಷ್ಟ ಔಷಧಗಳು ಅಡ್ಡ ಪರಿಣಾಮದಿಂದ ಇದು ಉಂಟಾಗಬಹುದು. ಉದಾಹರಣೆ, ಸೈಕೋಥೆರಪಿ ಮತ್ತು ಕೊರ್ಟಿಕೊಸ್ಟೆರೊಯ್ಡ್ನಂತಹ ಔಷಧಗಳು ಮೊಡವೆಗೆ ಕಾರಣವಾಗುತ್ತದೆ. ಟೆಸ್ಟೊಸ್ಟ್ರೊನ್ ಚಿಕಿತ್ಸೆ, ಜನನ ನಿಯಂತ್ರಣ ಮಾತ್ರೆಗಳು ಕೂಡ ಈ ಪರಿಣಾಮ ಹೊಂದಿದೆ.
ಮಾನಸಿಕ ಒತ್ತಡ: ಮಾನಸಿಕ ಒತ್ತಡವೂ ಕೊರ್ಟಿಸೊಲ್ ಹಾರ್ಮೋನ್ ಮಟ್ಟವನ್ನು ಹೆಚ್ಚಿಸುತ್ತದೆ. ಫಲಿತಾಂಶವಾಗಿ ಎಣ್ಣೆ ಉತ್ತಪಾದನೆ ಹೆಚ್ಚಳ ಆಗಿ, ಮೊಡವೆಗಳು ಮೂಡುತ್ತದೆ. ಆದಾಗ್ಯೂ ಮಾನಸಿಕ ಒತ್ತಡ ಕಡಿಮೆ ಮಾಡುವ ಮೂಲಕ ಇದರ ನಿವಾರಣೆ ಮಾಡಬಹುದು.
ಮೊಡವೆ ನಿಯಂತ್ರಣ ಹೇಗೆ ?
- ದಿನಕ್ಕೆರಡು ಬಾರಿ ಮುಖವನ್ನು ಸೌಮ್ಯ ಕ್ಲೇನ್ಸರ್ನೊಂದಿಗೆ ತೊಳೆಯುವುದರಿಂದ ಅವು ಮುಖದಲ್ಲಿರುವ ಕೊಳೆ, ಎಣ್ಣೆ ಮತ್ತು ಅಶುದ್ಧತೆಯನ್ನು ತೆಗೆದು ಹಾಕುತ್ತದೆ.
- ಇದರ ಜೊತೆಗೆ ಸಮೃದ್ಧ ಪೋಷಕಾಂಶಗಳಿಂದ ಕೂಡಿದ ಹಣ್ಣು, ತರಕಾರಿ ಮತ್ತು ಬೆಳೆಕಾಳುಗಳಿಂದ ಕೂಡಿದ ಸಮತೋಲಿತ ಅಹಾರ ಸೇವನೆಯು ಆರೋಗ್ಯಯುತ ತ್ವಚೆಗೆ ಸಹಾಯ ಮಾಡುತ್ತದೆ.
- ರಕ್ತದ ಪರಿಚಲನೆ ಸುಧಾರಿಸುವ ದೈಹಿಕ ಚಟುವಟಿಕೆಯಲ್ಲಿ ಭಾಗಿಯಾಗುವುದರಿಂದ ತ್ವಚೆ ಕೋಶಗಳಿಗೆ ಪೋಷಕಾಂಶ ಮತ್ತು ಆಮ್ಲಜನಕ ಪೂರೈಕೆ ಮಾಡುತ್ತದೆ.
- ಸ್ಕೀನ್ಕೇರ್ ಮತ್ತು ಮೇಕಪ್ ಉತ್ಪನ್ನ ಆಯ್ಕೆ ಮಾಡುವಾಗ ಕಾಮೆಡೋಜೆನಿಕ್ ಅಲ್ಲದ ಉತ್ಪನ್ನಗಳ ಆಯ್ಕೆ ಮಾಡಿ.
- ಹಾನಿಕಾರಕ ಯುವ ಕಿರಣಗಳಿಂದ ತ್ವಚೆಯ ರಕ್ಷಣೆ ಪಡೆಯುವುದು ಅವಶ್ಯ. ಇದು ಅಕಾಲಿಕ ವಯಸ್ಸಾಗುವಿಕೆ ತಡೆಯುವ ಜೊತೆಗೆ ಮೊಡವೆಯನ್ನು ತಡೆಯುತ್ತದೆ. ತ್ವಚೆಗೆ ಪ್ರತಿನಿತ್ಯ ಸನ್ಸ್ಕ್ರೀನ್ ರಕ್ಷಣೆ ಪಡೆಯುವುದು ಅವಶ್ಯ.
ಪ್ರಮುಖ ಸೂಚನೆ: ಇಲ್ಲಿ ನೀಡಿರುವ ಮಾಹಿತಿಗಳು ಸಂಶೋಧನೆ, ಅಧ್ಯಯನಗಳ ಆಧರಿಸಿ ನೀಡಲಾಗಿದೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.
ಇದನ್ನೂ ಓದಿ: ನರಹುಲಿಯಿಂದ ಬಳಲುತ್ತಿದ್ದೀರಾ? ಈ ಸಮಸ್ಯೆಗೆ ಇಲ್ಲಿದೆ ನೋಡಿ ಮನೆಮದ್ದು