ETV Bharat / health

ಪಾದದಲ್ಲಿ ಜುಮ್ಮೆನಿಸುವಿಕೆ, ಮರಗಟ್ಟುವಿಕೆ ಅನುಭವ ಕಾಡುತ್ತಿದ್ರೆ ಅದು ಪೂರ್ವ ಮಧುಮೇಹದ ಲಕ್ಷಣ - burning numbness in your feet - BURNING NUMBNESS IN YOUR FEET

ಪೂರ್ವ ಮಧುಮೇಹದಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ರಕ್ತದ ಸಕ್ಕರೆ ಮಟ್ಟ ಹೊಂದಿರುತ್ತದೆ. ಇದು ಟೈಪ್​ 2 ಮಧುಮೇಹ ಅಭಿವೃದ್ಧಿ ಅಪಾಯವನ್ನು ಹೊಂದಿರುತ್ತದೆ.

Prediabetes regularly experiencing tingling burning numbness in your feet

author img

By ETV Bharat Karnataka Team

Published : Apr 6, 2024, 6:24 PM IST

ನವದೆಹಲಿ: ನಿಯಮಿತವಾಗಿ ಪಾದದಲ್ಲಿ ಜುಮ್ಮೆನಿಸುವಿಕೆ, ಸುಡುವಿಕೆ, ಮರಗಟ್ಟುವಿಕೆ ಅನುಭವ ಆಗುತ್ತಿದ್ದರೆ, ಅದು ಪೂರ್ವಮಧುಮೇಹ (ಪ್ರಿಡಯಾಬಿಟಿಕ್ಸ್​​) ಆಗಿರುವ ಸಾಧ್ಯತೆ ಇರುತ್ತದೆ. ದೇಹದ ಇನ್ಸುಲಿನ್​ ಮಟ್ಟ ಏರಿಕೆ ಕಂಡಲ್ಲಿ ಇದು ಲಕ್ಷಣ ಗೋಚರಿಸುತ್ತದೆ ಎಂದು ಹೈದರಾಬಾದ್​ ಮೂಲದ ನರರೋಗಶಾಸ್ತ್ರಜ್ಞ ಡಾ ಸುಧೀರ್​​ ಕುಮಾರ್​ ತಿಳಿಸಿದ್ದಾರೆ.

ಪೂರ್ವ ಮಧುಮೇಹದಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ರಕ್ತದ ಸಕ್ಕರೆ ಮಟ್ಟ ಹೊಂದಿರುತ್ತದೆ. ಇದು ಟೈಪ್​ 2 ಮಧುಮೇಹ ಅಭಿವೃದ್ಧಿ ಅಪಾಯವನ್ನು ಹೊಂದಿರುತ್ತದೆ. ಮಧುಮೇಹವು ಅನೇಕ ರೋಗಗಳಿಗೆ ರಹದಾರಿಯಾಗಿದ್ದು, ಇದು ಹೃದಯಾಘಾತ, ಪಾರ್ಶ್ವವಾಯು ಮತ್ತು ಇತರೆ ಗಂಭೀರ ಕಾಯಿಲೆಗಳ ಅಪಾಯ ಹೆಚ್ಚಿಸುತ್ತದೆ. ಆದಾಗ್ಯೂ ಪೂರ್ವ ಮಧುಮೇಹದ ಬಗ್ಗೆ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಯ ನರರೋಗಶಾಸ್ತ್ರಜ್ಞ ಡಾ ಸುಧೀರ್​​ ತಿಳಿಸಿದ್ದಾರೆ.

ಭಾರತದಲ್ಲಿ 136 ಮಿಲಿಯನ್​ ಜನರು ಅಥವಾ 15.3ರಷ್ಟು ಜನಸಂಖ್ಯೆ ಈ ಪೂರ್ವ ಮಧುಮೇಹದ ಅಪಾಯವನ್ನು ಹೊಂದಿದ್ದಾರೆ ಎಂದು ದತ್ತಾಂಶ ತೋರಿಸಿದೆ. ಇದು ಮಧುಮೇಹ ತಡೆಗಟ್ಟಬೇಕಾದ ಮುನ್ನೆಚ್ಚರಿಕೆಯಾಗಿದೆ.

ಪೂರ್ವ ಮಧುಮೇಹ ಹೊಂದಿರುವವರಲ್ಲಿ ಪಾರ್ಶ್ವವಾಯು, ಹೃದಯಾಘಾತ ಮತ್ತು ನರಗಳ ಹಾನಿ ಮತ್ತು ರೆಟಿನೋಪತಿ ಅಪಾಯ ಹೆಚ್ಚಿರುತ್ತದೆ ಎಂದು ಡಾ ಸುಧೀರ್​ ತಿಳಿಸಿದ್ದಾರೆ.

HbA1C ಎಂಬ ಸರಳ ರಕ್ತ ಪರೀಕ್ಷೆ ಮೂಲಕ ಮಧುಮೇಹದ ಮಟ್ಟವನ್ನು ಅರಿಯಬಹುದಾಗಿದೆ. ಹಿಮೋಗ್ಲೋಬಿನ್​ ಎ1ಸಿ ಪರೀಕ್ಷೆ ವ್ಯಕ್ತಿಯ ಗ್ಲುಕೋಸ್​ ನಿಯಂತ್ರಣ ಮಟ್ಟದ ಮೌಲ್ಯಮಾಪನ ಮಾಡುತ್ತದೆ.

HbA1C ಮಧುಮೇಹ ಪರೀಕ್ಷೆಯಲ್ಲಿ ಶೇ. 6ರಷ್ಟು ಕಂಡು ಬಂದರೆ ಅದು ಸಾಮಾನ್ಯ ಎಂದು ಪರಿಗಣಿಸಲಾಗುವುದು. ಆದಾಗ್ಯೂ ವೈದ್ಯರು ಹೇಳುವ ಪ್ರಕಾರ, HbA1C ಶೇ. 6 ಸಾಮಾನ್ಯವಲ್ಲ. HbA1C 5.7 ಪೂರ್ವಮಧುಮೇಹ ಶಿಫಾರಸು ಮಾಡುತ್ತದೆ. 10ಕ್ಕಿಂತ HbA1C ಹೊಂದಿರುವ ರೋಗಿಗಳಲ್ಲಿ ಪಾದಲ್ಲಿ ಜುಮ್ಮೆನಿಸುವಿಕೆ, ಸುಡುವಿಕೆ ಮತ್ತು ಮರಗಟ್ಟುವಿಕೆ ಅನುಭವ ಕಾಡುತ್ತದೆ. ಈ ಪರಿಸ್ಥಿತಿಯನ್ನು ಪೂರ್ವಮಧುಮೇಹದ ನರಸಮಸ್ಯೆ ಎನ್ನಲಾಗುವುದು.

ಕಾರ್ಬೋಹೈಡ್ರೇಟ್​​ ನಿರ್ಬಂಧಿತ ಡಯಟ್​ ಮೂಲಕ ನಿಯಂತ್ರಣ ಡಯಟ್​​ ಮೂಲಕ HbA1C ಅನ್ನು ಕಡಿಮೆ ಮಾಡಬಹುದಾಗಿದೆ. ಜೊತೆಗೆ ನಿರ್ಬಂಧಿತ ಸಕ್ಕರೆ, ಬೆಲ್ಲ, ಜೇನುತುಪ್ಪ ಮುಂತಾದವುಗಳನ್ನು ತಪ್ಪಿಸುವ ಮೂಲಕ ಇದನ್ನು ಸಾಧಿಸಬಹುದು. ಸಕ್ಕರೆ ಸಿಹಿಯ ಪಾನೀಯಗಳನ್ನು ಕೂಡ ತಪ್ಪಿಸುವುದು ಅಗತ್ಯ ಎಂದು ವೈದ್ಯರು ತಿಳಿಸಿದ್ದಾರೆ.

ಅಕ್ಕಿ, ರೊಟ್ಟಿ, ಇಡ್ಲಿ, ದೋಸೆ ಮತ್ತು ಆಲೂಗಡ್ಡೆ ಮತ್ತು ಹಣ್ಣುಗಳ ಸೇವನೆಯನ್ನು ಸಲಹೆ ಆಧಾರಿತವಾಗಿ ಮಿತಿ ಮಾಡುವುದರ ಜೊತೆಗೆ ವ್ಯಾಯಾಮ ಮತ್ತು ದೈಹಿಕ ಚಟುವಟಿಕೆ ಅಭ್ಯಾಸ ರೂಢಿಸಿಕೊಳ್ಳುವುದಕ್ಕೆ ಸಲಹೆ ನೀಡಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ಮಧುಮೇಹಿಗಳಾಗಿದ್ದರೆ, ಪಾದದ ಬಗ್ಗೆ ಇರಲಿ ಹೆಚ್ಚಿನ ಕಾಳಜಿ; ಕಾರಣ ಇದು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.