ಹೈದರಾಬಾದ್: ಪ್ರತಿಯೊಬ್ಬರು ಆರೋಗ್ಯಯುತವಾಗಿರಬೇಕು ಎಂದು ಬಯಸುತ್ತಾರೆ. ಈ ನಿಟ್ಟಿನಲ್ಲಿ ಸಮತೋಲಿತ ಆಹಾರ ಸೇವನೆ ಅಗತ್ಯವಾಗಿರುತ್ತದೆ. ಜೊತೆಗೆ ಅಗತ್ಯ ನಿದ್ರೆಯೂ ಅವಶ್ಯ. ಪೂರಕವಾಗಿ ದೈಹಿಕ ಚಟುವಟಿಕೆ ಮರೆಯಬಾರದು. ಇವೆಲ್ಲವನ್ನು ನಡೆಸಿದರೂ ಅನೇಕ ಬಾರಿ, ಅನೇಕ ಕಾರಣದಿಂದ ಕೆಲವರು ಸಣ್ಣ ವಯಸ್ಸಿನಲ್ಲಿಯೇ ಆರೋಗ್ಯ ಸಮಸ್ಯೆಗೆ ಒಳಗಾಗುತ್ತಾರೆ. ಇದಕ್ಕೆ ಪಡೆಯುವ ಚಿಕಿತ್ಸೆಗಳು ಅನೇಕ ಬಾರಿ ಪ್ರಯೋಜನವಾಗುವುದಿಲ್ಲ. ಆದರೆ, ಈ ಒಂದು ಪೌಡರ್ ನಿಮ್ಮೆಲ್ಲ ಆರೋಗ್ಯ ಸಮಸ್ಯೆಗೆ ಉತ್ತಮ ಆಗಬಲ್ಲದು ಎಂದು ತಜ್ಞರು ಹೇಳುತ್ತಾರೆ. ಹಾಗಾದರೆ ಏನಿದು ಪುಡಿ, ಇದರಿಂದ ಯಾವ ಪ್ರಯೋಜನ ಇಲ್ಲಿದೆ ಅದೆಲ್ಲದರ ಸಂಪೂರ್ಣ ಮಾಹಿತಿ
ಈ ಪೌಡರ್ ಅನ್ನು ಸುಲಭವಾಗಿ ಮನೆಯಲ್ಲಿಯೇ ಪ್ರತಿಯೊಬ್ಬರು ತಯಾರಿಸಬಹುದಾಗಿದೆ. ಇದು ಹೆಚ್ಚಿನ ಆರೋಗ್ಯ ಪ್ರಯೋಜನವನ್ನು ಹೊಂದಿದೆ. ಇದಕ್ಕೆ ಬೇಕಾಗುವ ಸಾಮಗ್ರಿಗಳು ಹೀಗಿವೆ.
ಕಡ್ಲೆಬೀಜ: ಇದು ಪ್ರೊಟೀನ್ ಸಮೃದ್ಧವಾಗಿದೆ. ಇದರ ಹೊರತಾಗಿ ಮೊನೊ ಪಾಲಿ ಅಪಾರ್ಯಾಪ್ತ ಕೊಬ್ಬುಗಳು ಇದೆ. ಇವು ದೇಹಕ್ಕೆ ಬೇಕಾದ ಪೋಷಕಾಂಶಗಳು ನೀಡುತ್ತದೆ. ಇದು ವಿಟಮಿನ್ ಇ, ಬಿ1, ಬಿ3, ಬಿ9, ಮೆಗ್ನಿಷಿಯಂ, ಫಾಸ್ಪಾರಸ್ ಮತ್ತು ತಾಮ್ರದಂತಹ ಖನಿಜಾಂಶಗಳಿಂದ ಸಮೃದ್ಧವಾಗಿದೆ.
ಕೆಂಪು ಅಕ್ಕಿ: ಇದು ಕೂಡ ಅನೇಕ ಆರೋಗ್ಯ ಪ್ರಯೋಜನ ಹೊಂದಿದೆ. ಇದನ್ನು ಆಯುರ್ವೇದದಲ್ಲಿ ಅನೇಕ ಔಷಧಕ್ಕೆ ಬಳಕೆ ಮಾಡಲಾಗುವುದು. ಇದು ಕ್ಯಾಲ್ಸಿಯಂ, ವಿಟಮಿನ್ ಬಿ, ಫೈಬರ್, ಕಬ್ಬಿಣ ಮತ್ತು ಮೆಗ್ನಿಶಿಯಂನ ಗುಣಗಳನ್ನು ಹೊಂದಿದೆ.
ಬೆಲ್ಲ: ಇದು ಸಕ್ಕರೆಗಿಂತ ಆರೋಗ್ಯಯುತವಾಗಿದ್ದು, ಕಬ್ಬಿಣಾಂಶ ಹೆಚ್ಚಿರುತ್ತದೆ. ಇದು ಆಂಟಿ - ಆಕ್ಸಿಡೆಂಟ್, ವಿಟಮಿನ್ಸ್, ಖನಿಜಾಂಶವನ್ನು ಹೊಂದಿದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸಿ, ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ಎಳ್ಳು: ಇದು ಆರೋಗ್ಯಕರ ಪ್ರಯೋಜನ ಹೊಂದಿದೆ. ಇದರಲ್ಲಿ ಒಮೆಗಾ 6, ಕ್ಯಾಲ್ಸಿಯಂ, ಮೆಗ್ನಿಶಿಯಂ, ಫಾಸ್ಪರಸ್, ಕಬ್ಬಿಣ, ವಿಟಮಿನ್ ಬಿ ಮತ್ತು ಒ ಹೊಂದಿದ್ದು, ಕ್ಯಾಲ್ಸಿಯಂ ಸಮೃದ್ಧವಾಗಿದೆ.
ಕೊಬ್ಬರಿ: ಇದರಲ್ಲಿ ಫೈಬರ್, ಮೆಗ್ನಿಶಿಯಂ, ಪೋಟಾಶಿಯಂ, ಕಬ್ಬಿಣ, ವಿಟಮಿನ್ ಸಿ ಮತ್ತು ಆರೋಗ್ಯಯುತ ಕೊಬ್ಬು ಹೊಂದಿರುತ್ತದೆ.
ಹೇಗೆ ರೆಡಿ ಮಾಡುವುದು: ಮೊದಲಿಗೆ ಅಕ್ಕಿ, ಎಳ್ಳಿನ ಬೀಜ, ಕಡಲೇ ಬೀಜವನ್ನು ಹುರಿದು ಪಕ್ಕದಲ್ಲಿಡಿ. ಅದು ತಣ್ಣಗಾದ ಬಳಿಕ ಅದಕ್ಕೆ ಬೆಲ್ಲ, ಕೊಬ್ಬರಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ರುಬ್ಬಿ. ಇದನ್ನು ಬಿಗಿ ಡಬ್ಬದಲ್ಲಿ ಶೇಖರಣೆ ಮಾಡಿ, ದಿನಕ್ಕೆ ಒಂದು ಚಮಚ ಸೇವಿಸುತ್ತ ಬನ್ನಿ.
ಇದರ ಪ್ರಯೋಜನಗಳೇನು?
ಹೃದಯದ ಆರೋಗ್ಯ ಸುಧಾರಣೆ: ತಜ್ಞರ ಪ್ರಕಾರ, ಕಡಲೆ ಬೀಜದಲ್ಲಿನ ಆರೋಗ್ಯಯುತ ಕೊಬ್ಬು ಕೆಟ್ಟ ಕೊಬ್ಬಿನ ಮಟ್ಟವನ್ನು ಕಡಿಮೆ ಮಾಡಿ, ಎಚ್ಡಿಎಲ್ ಉತ್ತಮ ಕೊಬ್ಬಿನ ಮಟ್ಟ ಹೆಚ್ಚಿಸುತ್ತದೆ. ಜೊತೆಗೆ ಅಕ್ಕಿಯಲ್ಲಿನ ಫೈಬರ್ ಹೃದಯದ ಆರೋಗ್ಯಕ್ಕೆ ಉತ್ತಮ.
ಜೀರ್ಣಕ್ರಿಯೆಗೆ ಸಹಕಾರಿ: ಕಡೆಲೆ ಬೀಜ, ಅಕ್ಕಿನಲ್ಲಿನ ಫೈಬರ್ ಜೀರ್ಣಕ್ರಿಯೆ ಸುಧಾರಿಸುತ್ತದೆ. ಮಲಬದ್ಧತೆ ತಡೆಯುತ್ತದೆ.
ರೋಗ ನಿರೋಧಕತೆ: ಎಳ್ಳು, ಬೆಲ್ಲ, ಕೊಬ್ಬರಿಯಲ್ಲಿನ ಆಂಟಿ ಆಕ್ಸಿಡೆಂಟ್ ರೋಗ ನಿರೋಧಕತೆ ಸಹಾಯ ಮಾಡಿಮ ಕೆಮ್ಮು ಮತ್ತು ಶೀತದ ವಿರುದ್ಧ ಹೋರಾಡುತ್ತದೆ.
ಮೂಳೆ ಆರೋಗ್ಯ: ತಜ್ಞರ ಪ್ರಕಾರ, ಎಳ್ಳು, ಬೆಲ್ಲ, ಕೊಬ್ಬರಿಯಲ್ಲಿನ ಕ್ಯಾಲ್ಸಿಯಂಗಳು ಮೂಳೆ ಆರೋಗ್ಯಕ್ಕೆ ಉತ್ತಮ. ಇದು ಬೆನ್ನು ಮತ್ತು ಕೀಲು ನೋವಿನ ಸಮಸ್ಯೆ ಕಡಿಮೆ ಮಾಡುತ್ತದೆ. ಅದರಲ್ಲೂ ಮಹಿಳೆಯರಲ್ಲಿ ಮೆನೋಪಾಸ್ ಸಂದರ್ಭದಲ್ಲಿ ಉಂಟಾಗುವ ಬೆನ್ನು ನೋವು ಕಡಿಮೆ ಮಾಡುತ್ತದೆ.
2012ರಲ್ಲಿ ಜರ್ನಲ್ ಆಫ್ ನ್ಯೂಟ್ರಿಷನ್ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ನಿಯಮಿತವಾಗಿ ಎಳ್ಳು ಸೇವನೆಯಿಂದ ಶೇ 30ರಷ್ಟು ಅಸ್ಥಿ ಸಂಧಿವಾತ ಕಡಿಮೆ ಆಗುತ್ತದೆ. ಚೀನಾದ ಬೀಜಿಂಗ್ನಲ್ಲಿನ ಪೆಕಿಂಗ್ ಯುನಿವರ್ಸಿಟಿಯ ಡಾ ಲಿ ಕ್ವಿಂಗ್ ವಾಂಗ್ ಭಾಗಿಯಾಗಿದ್ದು, ಎಳ್ಳಿನಲ್ಲಿನ ಕ್ಯಾಲ್ಸಿಯಂ, ಮೆಗ್ನಿಶಿಯಂ ಮತ್ತು ಆಂಟಿ - ಆಕ್ಸಿಡೆಂಟ್ಗಳು ಮೂಳೆಗಳ ಸುಧಾರಣೆ ಮಾಡುತ್ತವೆ ಎಂದಿದ್ದಾರೆ.
ತ್ವಚೆ ಮತ್ತು ಕೂದಲಿನ ಆರೋಗ್ಯ: ಎಳ್ಳು, ಬೆಲ್ಲ, ಕೊಬ್ಬರಿಯಲ್ಲಿನ ವಿಟಮಿನ್ ಮತ್ತು ಖನಿಜಾಂಶಗಳು ತ್ವಚೆ ಮತ್ತು ಕೂದಲಿನ ಆರೋಗ್ಯಕ್ಕೆ ಉತ್ತಮವಾಗಿದ್ದು, ತ್ಚಚೆ ಸಮಸ್ಯೆ ತಗ್ಗಿಸುತ್ತದೆ. ಜೊತೆಗೆ ಕೂದಲಿನ ಉದುರುವಿಕೆ ತಡೆದು ಹೊಸ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಓದುಗರ ಗಮನಕ್ಕೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಮತ್ತು ಸಲಹೆಗಳು ಕೇವಲ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ನಿಮಗೆ ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಈ ಸಂಬಂಧಿತ ಪರಿಣತರ ಬಳಿ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.
ಇದನ್ನೂ ಓದಿ: ರಾತ್ರಿ ತಲೆಗೆ ಎಣ್ಣೆ ಹಚ್ಚಿ ಮಲಗುವುದರಿಂದ ಎಷ್ಟೆಲ್ಲ ಪ್ರಯೋಜನಗಳಿವೆ ಗೊತ್ತಾ...?