ಹೈದರಾಬಾದ್: TWO SPOONS OF GHEE A DAY - ಈಗಾಗಲೇ ಬಳಕೆ ಮಾಡಿದ ಅಡುಗೆ ಎಣ್ಣೆಯನ್ನು ಮತ್ತೊಮ್ಮೆ ಬಳಸಬಾರದು ಎಂಬ ನಿಯಮ ಮನೆಗಳಿಗೂ ಅನ್ವಯ. ಕರಿದ ಎಣ್ಣೆಗಳನ್ನು ಹಲವು ಅಡುಗೆಗಳ ಒಗ್ಗರಣೆಗೆ ಬಳಕೆ ಮಾಡಲಾಗುವುದು. ಆದರೆ, ಈ ಎಣ್ಣೆಗಳನ್ನು ದೀರ್ಘಕಾಲ ಸಂಗ್ರಹಿಸಬಾರದು ಎಂದು ರಾಷ್ಟ್ರೀಯ ಪೌಷ್ಟಿಕಾಂಶ ಸಂಸ್ಥೆ (ಎನ್ಐಎನ್) ತಿಳಿಸಿದೆ.
ಕೊಬ್ಬು ಸಂಬಂಧಿತ ಆಹಾರ ಕುರಿತು ಹೊಸ ಮಾರ್ಗಸೂಚಿ ಹೊರಡಿಸಿರುವ ಎನ್ಐಎನ್, ವಾರಕ್ಕೆ 200 ಗ್ರಾಂ ಮೀನು ಬಳಕೆ ಮಾಡಬಹುದು. ಸಿದ್ದ ಆಹಾರ, ಫಾಸ್ಟ್ ಫುಡ್ಗಳನ್ನು ತಪ್ಪಿಸಿ. ಡ್ರೈಫ್ರೂಟ್ಸ್, ಎಣ್ಣೆ ಬೀಜ, ಮೀನಿನ ಎಣ್ಣೆ, ಕೋಳಿ ಮೊಟ್ಟೆ ಬಳಕೆ ಮಾಡಿ. ತುಪ್ಪ, ಬೆಣ್ಣೆಯನ್ನು ದಿನಕ್ಕೆ ಎರಡು ಸ್ಪೂನ್ ಬಳಕೆ ಮಾಡಬಹುದು. ಕಾರ್ಯನಿರತ ಪುರುಷರು ದಿನಕ್ಕೆ 40 ರಿಂದ 50 ಗ್ರಾಂ ಕೊಬ್ಬು ಸೇವಿಸಿದರೆ, ಮಹಿಳೆಯರು 30 ರಿಂದ 40 ಗ್ರಾಂ ಸೇವನೆ ಮಾಡಬಹುದು. ಕೆಲಸದಿಂದ ದೂರ ಇರುವವರು 20 ರಿಂದ 30 ಗ್ರಾಂ ಕೊಬ್ಬು ಸೇವನೆ ಮಾಡಿದರೆ ಸಾಕು ಎಂದು ತಿಳಿಸಿದೆ.
ಮಾರ್ಗಸೂಚಿಯ ಮುಖ್ಯಾಂಶಗಳು: 10 ರಿಂದ 15 ನಿಮಿಷ ನೀರು ಕುದಿಸಿದರೆ ಉತ್ತಮ: ನೀರು ಕಾಯಿಸಿ ಕುಡಿಯುವುದರಿಂದ ಆರೋಗ್ಯ ಸಮಸ್ಯೆ ತಡೆಯಬಹುದು. ನೀರನ್ನು 10 ರಿಂದ 15 ನಿಮಿಷ ಕಾಯಿಸುವುದು ಉತ್ತಮ. ಇದರಿಂದ ನೀರಿನಲ್ಲಿ ಸೂಕ್ಷ್ಮಜೀವಿಗಳು ಉಳಿಯುವುದಿಲ್ಲ. ಜೊತೆಗೆ 20 ಲೀಟರ್ ನೀರಿಗೆ 0.5 ಎಂಜಿ ಕ್ಲೋರಿನ್ ಟಾಬ್ಲೆಟ್ ಸೇರಿಸುವುದು ಉತ್ತಮವಾದ ಮಾರ್ಗ, ಇದು ರಾಸಾಯನಿಕದ ಬೆದರಿಕೆಯನ್ನು ತಪ್ಪಿಸುತ್ತದೆ. ಒಂದು ಲೀ ನೀರಿನಲ್ಲಿ 1.5 ಎಂಜಿಗಿಂತ ಹೆಚ್ಚಿನ ಫ್ಲೋರೈಡ್ ಇರಬಾರದು. ಇದಕ್ಕಿಂತ ಹೆಚ್ಚಿದ್ದರೆ, ಎಚ್ಚರ ಅಗತ್ಯ ಎಂದಿದೆ.
ಜ್ಯೂಸ್ ಬೇಡ ಹಣ್ಣು ತಿನ್ನಿ: ಹಣ್ಣನ್ನು ಜ್ಯೂಸ್ ಬದಲಾಗಿ ಹಾಗೇ ಸೇವಿಸುವುದರಿಂದ ಆರೋಗ್ಯಕ್ಕೆ ಪ್ರಯೋಜನ. 100 ರಿಂದ 150 ಎಂಎಲ್ ಜ್ಯೂಸ್ ಸೇವಿಸಬಹುದು. ಕಬ್ಬಿನ ಜ್ಯೂಸ್ನಲ್ಲಿ ಸಕ್ಕರೆ ಅಂಶ ಹೆಚ್ಚಿರುವ ಹಿನ್ನೆಲೆಯಲ್ಲಿ 13 ರಿಂದ 15 ಗ್ರಾಂ ಸೇವನೆ ಮಾಡಬೇಕು. ಪ್ಯಾಕೇಜ್ ಆಹಾರ ಉತ್ಪನ್ನದ ಮೇಲೆ ಫುಡ್ ಲೇಬಲ್ ಇರಬೇಕು. ಹಣ್ಣಿನ ಜ್ಯೂಸ್ ಸೇವನೆ ಮಾಡುವುದಾದರೆ ಅದಕ್ಕೆ ಸಕ್ಕರೆ ಸೇರಿಸಬೇಡಿ.
ದಿನಕ್ಕೆ 8 ಗ್ಲಾಸ್ ನೀರು ಕುಡಿಯಿರಿ: ದೇಹದ ಅಂಗಾಂಗಗಳಿಗೆ ನೀರು ಅಗತ್ಯ. ನೀರು ದೇಹದ ಅನೈರ್ಮಲ್ಯವನ್ನು ತೊಡೆದು ಹಾಕಿ ಚಯಾಪಚಯ ಸರಾಗಗೊಳಿಸಿ, ಕಿಡ್ನಿ ಕಾರ್ಯಾಚರಣೆಗೆ ಸಹಾಯ ಮಾಡುತ್ತದೆ. ದೇಹ ಸಾಮಾನ್ಯ ತಾಪಮಾನಕ್ಕೆ ಇಡಲು ಸಹಾಯ ಮಾಡುತ್ತದೆ. ಇದು ಅಂಗಾಂಶ ಹಾನಿ ತಪ್ಪಿಸಿ, ಕೀಲು ಚಲನೆಗೆ ಸಹಾಯ ಮಾಡುತ್ತದೆ. ಮಲಬದ್ಧತೆಗೂ ಬ್ರೇಕ್ ಹಾಕುತ್ತದೆ. ದಿನಕ್ಕೆ ವ್ಯಕ್ತಿ 8 ಗ್ಲಾಸ್ ಅಥವಾ 3 ಲೀಟರ್ ನೀರು ಸೇವಿಸಬೇಕು. ಎಲ್ಲ ವಯೋಮಾನದವರು ಹಾಲು ಸೇವಿಸಬಹುದು. ಹಾಲಿನಲ್ಲಿನ ಕ್ಯಾಲ್ಸಿಯಂ ಇದ್ದು, ಬೆಳವಣಿಗೆಗೆ ಸಹಾಯ ಮಾಡುತ್ತದೆ. ಕೋಲ್ಡ್ ಡ್ರಿಕ್ಸ್ ಸೇವನೆ ಬೇಡ
ಆಲ್ಕೋಹಾಲ್ನಿಂದಲೇ ಎಲ್ಲ ಸಮಸ್ಯೆ: ನಿತ್ಯ 60 ಎಂಎಲ್ ಆಲ್ಕೋಹಾಲ್ಗಿಂತ ಹೆಚ್ಚು ಸೇವನೆ ಮಾಡುವುದರಿಂದ ಅಧಿಕ ರಕ್ತದೊತ್ತಡ ಹೆಚ್ಚುತ್ತದೆ. ಇದು ಹೃದಯಾಘಾತಕ್ಕೆ ಕಾರಣವಾಗುತ್ತದೆ. ಅಧಿಕ ಕುಡಿಯುವಿಕೆಯು ಬಾಯಿಯ ಕ್ಯಾನ್ಸರ್ಗೆ ಕಾರಣವಾಗುತ್ತದೆ. ಇದರಿಂದ ಇತರ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತದೆ. ಇಥೇಲ್ ಆಲ್ಕೋಹಾಲ್ನಲ್ಲಿ ಬಿಯರ್ನಲ್ಲಿ 2 ರಿಂದ 5ರಷ್ಟು, ವೈನ್ನಲ್ಲಿ 8 ರಿಂದ 10ರಷ್ಟು, ಬ್ರಾಂಡಿ, ರಮ್ ಮತ್ತು ವಿಸ್ಕಿಯಲ್ಲಿ 30 ರಿಂದ 40ರಷ್ಟಿದೆ.
ತೂಕದ ಬಗ್ಗೆ ಇರಲಿ ಎಚ್ಚರಿಕೆ: ಇಂದಿನ ಯುವ ಜನತೆ ತಮ್ಮ 20ನೇ ವಯಸ್ಸಿನಿಂದಲೇ ತೂಕ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಮೊದಲ ಹೆರಿಗೆ ಬಳಿಕ ಮಹಿಳೆಯರಲ್ಲಿ ತೂಕ ಹೆಚ್ಚಳವಾಗುತ್ತಿದೆ. ತೂಕ ಇಳಿಕೆ ನಿಧಾನವಾಗಿ ಸಾಗುತ್ತಿದೆ. ಸಕ್ಕರೆ ಸೇವನೆ ಕಡಿಮೆ ಮಾಡಬೇಕಿದೆ. ರಿಫೈಂಡ್ ಎಣ್ಣೆ ಬಳಕೆ ತಪ್ಪಿಸಬೇಕಿದೆ. ಕರಿದ ಪದಾರ್ಥ ಸೇವನೆ ಉತ್ತಮವಲ್ಲ. ದಿನಕ್ಕೆ 7 ರಿಂದ 8 ಗಂಟೆ ನಿದ್ದೆ ಮಾಡಬೇಕಿದೆ. ಹೆಚ್ಚು ಹಣ್ಣು ಮತ್ತು ತರಕಾರಿ ಸೇವಿಸುವುದರಿಂದ ಪೋಟಾಶಿಯಂ ಹೆಚ್ಚಲಿದೆ. ರಕ್ತದ ಪರಿಚಲನೆಗೆ ಇದು ಉತ್ತಮ. ಅಡುಗೆ ಮಾಡಿದ 6 ಗಂಟೆಯ ಒಳಗೆ ಆಹಾರ ಸೇವಿಸುವುದು ಉತ್ತಮ. ರೆಫ್ರಿಜರೇಟರ್ನಲ್ಲಿಟ್ಟ ಆಹಾರವನ್ನು ಬಿಸಿ ಮಾಡಿ ಸೇವಿಸಬೇಕು.
ಇದನ್ನೂ ಓದಿ: ನಿಂಬೆಹಣ್ಣನ್ನು ಕಟ್ ಮಾಡಿ ಬೆಡ್ರೂಂನಲ್ಲಿಟ್ರೆ ಸಾಕು; ಸುಖ ನಿದ್ರೆ ಪಕ್ಕಾ!