ETV Bharat / health

ಗ್ರಾಮೀಣ ಭಾರತದಲ್ಲಿ ಜೀವನ ಮಟ್ಟ ಸುಧಾರಿಸಲಿದೆ ಹೊಸ ತ್ಯಾಜ್ಯ ನಿರ್ವಹಣೆ ತಂತ್ರಜ್ಞಾನ - ತ್ಯಾಜ್ಯ ನಿರ್ವಹಣೆ

ಪೈರೋಲಿಸಿಸ್ ಎಂಬ ಪ್ರಕ್ರಿಯೆಯು ಭತ್ತದ ಹುಲ್ಲು, ಗೊಬ್ಬರ ಮತ್ತು ಮರದಂತಹ ತ್ಯಾಜ್ಯವನ್ನು ಒಂದೇ ಬಾರಿಗೆ ಮೂರು ಸಾಮಾನ್ಯ ಸಮಸ್ಯೆಗಳಿಗೆ ಪರಿಹಾರವಾಗಿ ಪರಿವರ್ತಿಸುತ್ತದೆ

New waste management tech could improve life in rural India

author img

By ETV Bharat Karnataka Team

Published : Feb 26, 2024, 5:42 PM IST

ನವದೆಹಲಿ: ತ್ಯಾಜ್ಯ ನಿರ್ವಹಣೆಯ ಹೊಸ ತಂತ್ರಜ್ಞಾನವು ಭಾರತದ ಹಳ್ಳಿಗಳಲ್ಲಿನ ಒಳಾಂಗಣ ವಾಯು ಮಾಲಿನ್ಯವನ್ನು ಕಡಿಮೆ ಮಾಡಿ, ಮಣ್ಣಿನ ಆರೋಗ್ಯ ಸುಧಾರಿಸಲು ಮತ್ತು ಶುದ್ಧ ಶಕ್ತಿಯ ಸೃಷ್ಟಿಗೆ ಸಹಾಯ ಮಾಡಲಿದೆ ಎಂದು ಅಧ್ಯಯನವೊಂದು ತಿಳಿಸಿದೆ.

ಜರ್ನಲ್​ ಸೈನ್ಸ್​​ ಆಫ್​ ದ ಟೋಟಲ್​ ಎನ್ವರನ್ಮೆಂಟ್​ನಲ್ಲಿ ಈ ವರದಿಯನ್ನು ಪ್ರಕಟಿಸಲಾಗಿದೆ. ಪೈರೋಲಿಸಿಸ್ ಎಂಬ ಪ್ರಕ್ರಿಯೆಯು ಭತ್ತದ ಹುಲ್ಲು, ಗೊಬ್ಬರ ಮತ್ತು ಮರದಂತಹ ತ್ಯಾಜ್ಯವನ್ನು ಒಂದೇ ಬಾರಿಗೆ ಮೂರು ಸಾಮಾನ್ಯ ಸಮಸ್ಯೆಗಳಿಗೆ ಪರಿಹಾರವಾಗಿ ಪರಿವರ್ತಿಸುತ್ತದೆ.

ಪೈರೋಲಿಸಿಸ್​ ಎಂಬುದು ರಾಸಾಯನಿಕ ಮರುಬಳಕೆಯಾಗಿದೆ. ಇದು ಉಳಿದಿರುವ ಸಾವಯವ ಉತ್ಪನ್ನಗಳ ಮತ್ತು ಅದರ ಕಣಗಳನ್ನು ಮರುಬಳಕೆ ಮಾಡುತ್ತದೆ. ಇದು ಆಮ್ಲಜನಕ ಮುಕ್ತ ಚೆಂಬರ್​ನಲ್ಲಿ ತ್ಯಾಜ್ಯವನ್ನು ಮುಚ್ಚಿ, ಅದಕ್ಕೆ 400 ಡಿಗ್ರಿ ಸೆಲ್ಸಿಯಸ್​​ಗಿಂತ ಹೆಚ್ಚಿನ ಶಾಖ ನೀಡಿದಾಗ ಈ ಪ್ರಕ್ರಿಯೆಯಲ್ಲಿ ಉಪಯುಕ್ತ ರಾಸಾಯನಿಕವನ್ನು ಬಿಡುಗಡೆ ಮಾಡುತ್ತದೆ.

ಯುಕೆಯ ಗ್ಲಾಸ್​ಗೌ ವಿಶ್ವವಿದ್ಯಾಲಯದ ಸಂಶೋಧಕರು ಈ ಅಧ್ಯಯನ ನಡೆಸಿದ್ದು, ಹೇಗೆ ಪೈರೋಲಿಸಿಸ್​​​ನ ಮೂರು ಉತ್ಪನ್ನಗಳಾದ ಜೈವಿಕ ಇಂಧನ, ಸಿಂಗಾಸ್ ಬಯೋಚಾರ್ ಗೊಬ್ಬರಗಳು ಗ್ರಾಮವಾಸಿಗಳು ಆರೋಗ್ಯದಿಂದ ಜೀವಿಸಲು ಮತ್ತು ಕೃಷಿ ಭೂಮಿ ಹೆಚ್ಚು ಫಲವತ್ತಾಗಿಸಲು ಸಹಾಯ ಮಾಡುತ್ತವೆ ಎಂಬುದನ್ನು ತೋರಿಸಿದ್ದಾರೆ.

ಸಂಶೋಧಕರು ವ್ಯವಸ್ಥೆಯ ಆರ್ಥಿಕ ಕಾರ್ಯಸಾಧ್ಯತೆಯನ್ನು ಗರಿಷ್ಠಗೊಳಿಸಲು ಶಿಫಾರಸುಗಳ ಸರಣಿಯನ್ನು ನೀಡುತ್ತಾರೆ. ಒಡಿಶಾದ 1,200 ಗ್ರಾಮಗಳ ಮನೆಗಳ ಮೇಲೆ ಈ ಸಮೀಕ್ಷೆ ನಡೆಸಿದ್ದು, ಅಡುಗೆ ವಿಧಾನ ಮತ್ತು ಕುಟುಂಬವನ್ನು ಸಬಲಗೊಳಿಸುವಿಕೆ ಮತ್ತು ಕೃಷಿ ಕುರಿತು ಪರಿಶೀಲನೆ ನಡೆಸಲಾಗಿದೆ.

ಸಮೀಕ್ಷೆಯಲ್ಲಿ ಶೇ 80 ರಷ್ಟು ಮಂದಿ ಒಳಾಂಗಣ ಅಡುಗೆ ಮಾಲಿನ್ಯದಿಂದ ಹೊಗೆ ರಹಿತ ಇಂಧನದಿಂದ ಶುದ್ಧತೆಗೆ ಆಯ್ಕೆಯಲ್ಲಿ ಬದಲಾವಣೆ ಬಯಸಿದ್ದಾರೆ. ಶೇ 90ರಷ್ಟು ಮಂದಿ ಕೃಷಿ ತ್ಯಾಜ್ಯವನ್ನು ಜೈವಿಕ ಇಂಧನವಾಗಿ ಮಾರಲು ಇಚ್ಛಿಸಿದ್ದಾರೆ ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ.

ಪ್ರತಿಕ್ರಿಯೆಯು ತಂಡವೂ ಸಮುದಾಯದ ಮಟ್ಟದ ಪೈರೋಲಿಸಿಸ್​​ ವ್ಯವಸ್ಥೆಯಾದ ಬಯೋ ಟ್ರಿಗ್​​ ಅನ್ನು ವಿನ್ಯಾಸ ಮಾಡಿದ್ದಾರೆ. ಭವಿಷ್ಯ ಚಕ್ರದಲ್ಲಿ ಪೈರೋಲಿಸಿಸ್​​ ವ್ಯವಸ್ಥೆಯ ಶಕ್ತಿ ಮತ್ತು ಶಾಖಕ್ಕೆ ಸಿಂಗಾಸ್​​​ ಮತ್ತು ಜೈವಿಕ ಎಣ್ಣೆ ಸಹಾಯ ಮಾಡಲಾಗಿದೆ. ಇದು ಸ್ಥಳಯ ಮನೆ ಮತ್ತು ಉದ್ಯಮದಲ್ಲಿ ಬಳಕೆ ಮಾಡುವ ವಿದ್ಯುತ್​​ ಅನ್ನು ಕೂಡ ಕಡಿಮೆ ಮಾಡುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಮನೆಯಲ್ಲಿನ ಕೆಟ್ಟ ಅಡುಗೆ ಇಂಧನಕ್ಕೆ ಬದಲಾಗಿ ಶುದ್ಧ ಜೈವಿಕ ಎಣ್ಣೆಯನ್ನು ಬಳಕೆ ಮಾಡಬಹುದು. ಬಯೋಚಾರ್​​​ ಕಾರ್ಬನ್​ ಶೇಖರಣೆಗೆ ಸಹಾಯ ಮಾಡಿ, ಮಣ್ಣಿನ ಫಲವತ್ತತೆಯನ್ನು ಸುಧಾರಿಸುತ್ತದೆ ಎಂದಿದ್ದಾರೆ.

ಗ್ರಾಮೀಣ ಭಾರತದಲ್ಲಿ ಒಳಾಂಗಣ ವಾಯು ಮಾಲಿನ್ಯವು ಗಂಭೀರ ಸಮಸ್ಯೆಯಾಗಿದೆ. ಪಳೆಯುಳಿಕೆ ಇಂಧನದೊಂದಿಗೆ ಅಡಿಗೆ ಮಾಡಿದಾಗ ಅದು ಮಹಿಳೆಯರು ಮತ್ತು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಗ್ಲಾಸ್​​ಗೌ ಯುನಿವರ್ಸಿಟಿಯ ಸೈಮಿಂಗ್​ ಯು ತಿಳಿಸಿದ್ದಾರೆ. (ಪಿಟಿಐ)

ಇದನ್ನೂ ಓದಿ: ಭಾರತದ ಶೇ 90ರಷ್ಟು ಮಹಿಳೆಯರಲ್ಲಿ ಕಬ್ಬಿಣಾಂಶದ ಕೊರತೆ: ವೈದ್ಯರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.