ನವದೆಹಲಿ: 2017-2023ರ ನಡುವೆ ಭಾರತದಲ್ಲಿ ಮಲೇರಿಯಾ ಬಾಧೆ ಗಮನಾರ್ಹ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಇತ್ತೀಚಿನ ವರದಿ ಹೇಳಿದೆ.
ಅನಾಫಿಲಿಸ್ ಎಂಬ ಹೆಣ್ಣು ಸೊಳ್ಳೆಯಿಂದ ಮನುಷ್ಯರಿಗೆ ಹರಡುವ ಕಾಯಿಲೆಯೇ ಮಲೇರಿಯಾ.
2017ರಲ್ಲಿ 6.4 ಮಿಲಿಯನ್ನಷ್ಟಿದ್ದ ಪ್ರಕರಣಗಳು 2023ರಲ್ಲಿ 2 ಮಿಲಿಯನ್ಗೆ ಇಳಿದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಮಲೇರಿಯಾ ತಡೆಗಟ್ಟುವ ವಿಶ್ವಸಂಸ್ಥೆಯ ಉಪಕ್ರಮವನ್ನು ಛತ್ತೀಸ್ಗಢ, ಜಾರ್ಖಂಡ್, ಮಧ್ಯ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಕಾರ್ಯಗತಗೊಳಿಸಲಾಗಿದೆ.
ಆಫ್ರಿಕಾದ ಕೆಲವು ದೇಶಗಳಲ್ಲಿ ಇನ್ನೂ ಈ ರೋಗ ಗಂಭೀರ ಜಾಗತಿಕ ಆರೋಗ್ಯ ಸಮಸ್ಯೆಯಾಗಿದೆ ಎಂದು ವರದಿ ಹೇಳಿದೆ. (ಐಎಎನ್ಎಸ್)
ಇದನ್ನೂ ಓದಿ: ಈ ಹತ್ತು ಲಕ್ಷಣಗಳು ಕಾಣಿಸಿಕೊಂಡಿವೆಯಾ? ಹಾಗಾದರೆ ಅದು ಮಲೇರಿಯಾ ಅನ್ನೋದು ಕನ್ಫರ್ಮ್: ಏನು ಆ ಲಕ್ಷಣಗಳು?