ರಾಮೇಶ್ವರಪುರ (ಹೂಗ್ಲಿ): ಲಫಾ ಬಗ್ಗೆ ಕೇಳಿದ್ದೀರಾ? ನಿಖರವಾಗಿ ಫ್ರೆಂಚ್ ಬೀನ್ಸ್‌ನಂತೆ ಕಾಣುವ ಈ ಮೃದುವಾದ ತರಕಾರಿಯನ್ನು ಹಸಿಯಾಗಿ ಮತ್ತು ಬೇಯಿಸಿ ತಿನ್ನಬಹುದಾಗಿದೆ. ಈ ವೆಜಿಟೇಬಲ್ ಅನ್ನು ಹೆಚ್ಚಾಗಿ ಪಶ್ಚಿಮ ಬಂಗಾಳದಿಂದ ದೇಶದ ಇತರ ಭಾಗಗಳಿಗೆ ಮತ್ತು ಲಂಡನ್, ದುಬೈ ಮತ್ತು ಕತಾರ್ ಸೇರಿದಂತೆ ವಿದೇಶಗಳಿಗೆ ರಫ್ತು ಮಾಡಲಾಗುತ್ತಿದೆ.
ಈ ಅದ್ಭುತ ತರಕಾರಿಗೆ ಹೆಚ್ಚುತ್ತಿರುವ ಜಾಗತಿಕ ಬೇಡಿಕೆ ನಿಭಾಯಿಸಲು ಕೋಲ್ಕತ್ತಾ ಮೂಲದ ರಫ್ತುದಾರರು ಈಗ ಹೆಣಗಾಡುತ್ತಿದ್ದಾರೆ. ಲಾಫಾ ಕೃಷಿಯನ್ನು ತ್ವರಿತವಾಗಿ ಅಭಿವೃದ್ಧಿ ಪಡಿಸಿದರೆ ಮುಂಬರುವ ವರ್ಷಗಳಲ್ಲಿ ಆದಾಯವನ್ನು ಹೆಚ್ಚು ಮಾಡಿಕೊಳ್ಳಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಲಾಫಾ ಎಂದರೇನು?: ಗ್ರೀನ್ ಬೀನ್ಸ್‌ನಂತೆ ಕಾಣುವ ಈ ಲಾಫಾ 'ವಿಗ್ನಾ ಅಂಗ್ಯುಕ್ಯುಲಾಟಾ' ಎಂಬ ವೈಜ್ಞಾನಿಕ ಹೆಸರು ಹೊಂದಿದೆ. ಹಸಿರು ಬೀನ್ಸ್‌ನ ಉಪ-ಜಾತಿಯಾದ ಲಾಫಾವನ್ನು ಫೆಬ್ರವರಿ ಮತ್ತು ಡಿಸೆಂಬರ್ ನಡುವೆ ಬೆಳೆಸಬಹುದು. ಚಳಿಗಾಲದ ಮೊದಲು ಇದರ ಇಳುವರಿ ಜಾಸ್ತಿ ಎಂಬುದು ಗಮನದಲ್ಲಿರಬೇಕಾಗಿರುವುದು ಅವಶ್ಯಕವಾಗಿದೆ.
ಯಾವೆಲ್ಲ ಪೌಷ್ಟಿಕಾಂಶಗಳಿವೆ ಗೊತ್ತಾ?: ಕೃಷಿ ಇಲಾಖೆಯ ಪ್ರಕಾರ, ಈ ತರಕಾರಿಯಲ್ಲಿ ಪೌಷ್ಟಿಕಾಂಶದ ಮೌಲ್ಯವು ಹೆಚ್ಚಾಗಿದೆ. ಪ್ರೋಟೀನ್, ವಿಟಮಿನ್ ಮತ್ತು ವಿವಿಧ ಖನಿಜಗಳಿಂದ ಲಾಫಾ ಸಮೃದ್ಧವಾಗಿದೆ. ಅರಬ್ ಮತ್ತು ಯುರೋಪಿಯನ್ ದೇಶಗಳಲ್ಲಿ ಈ ತರಕಾರಿಗೆ ಹೆಚ್ಚಿನ ಬೇಡಿಕೆಯಿದೆ. ಈ ತರಕಾರಿಯನ್ನು ಪ್ರಪಂಚದಾದ್ಯಂತ ಚೈನೀಸ್, ಮಲೇಷಿಯನ್ ಮತ್ತು ಇಟಾಲಿಯನ್ ಪಾಕಪದ್ಧತಿಗಳಲ್ಲಿ ಬಳಸಲಾಗುತ್ತದೆ. ಹೆಚ್ಚುತ್ತಿರುವ ಬೇಡಿಕೆಯನ್ನು ಉಳಿಸಿಕೊಳ್ಳಲು, ಧನೆಖಲಿ, ಪೋಲ್ಬಾ, ಪಾಂಡುವಾ, ಬುರ್ದ್ವಾನ್ ಮತ್ತು ನಾಡಿಯಾದಲ್ಲಿ ಹೆಚ್ಚಿನ ಉತ್ಪಾದನೆ ಮಾಡಲಾಗುತ್ತಿದೆ. ತಿಂಗಳಿಗೆ 1.5 ಕೋಟಿ ರೂಪಾಯಿಗಳ ಮೌಲ್ಯದ ವ್ಯಾಪಾರವನ್ನು ಮಾಡಲಾಗುತ್ತಿದೆ.
ಪೌಷ್ಟಿಕಾಂಶಯುಕ್ತ ಲಾಫಾಗೆ ಬೆಲೆ ಎಷ್ಟು ಗೊತ್ತಾ?: ರೈತರು ಈ ಸೊಪ್ಪನ್ನು ಕೆಜಿಗೆ 50 ರಿಂದ 70 ರೂ. ಕೊಟ್ಟು ಖರೀದಿಸುತ್ತಾರೆ. ಕೆಜಿಗೆ 345 ರೂ (ಕೆಜಿಗೆ 15 ರಿಯಾಲ್) ಭಾರಿ ಬೆಲೆಗೆ ಮಾರಾಟ ಮಾಡುತ್ತಾರೆ. ರಾಮೇಶ್ವರಪುರ ಜಿಲ್ಲೆಯನ್ನು ಹೊರತುಪಡಿಸಿ, ಇತರ ಉತ್ಪಾದನಾ ಕೇಂದ್ರಗಳಲ್ಲಿ ಬೇಡಿಕೆಗೆ ತಕ್ಕ ಹಾಗೆ ಪೂರೈಕೆ ಮಾಡಲು ರೈತರು ಹೆಣಗಾಡುತ್ತಿದ್ದಾರೆ.
ಲಾಫಾ ಬಗ್ಗೆ ಯಾರು ಏನು ಹೇಳಿದರು?: ರಾಮೇಶ್ವರಪುರದ ರೈತ ಸುಜೋಯ್ ಕುಮಾರ್ ಮಾಝಿ ಈ ಬಗ್ಗೆ ಮಾತನಾಡಿದ್ದು, ರೈತ ಉತ್ಪಾದಕ ಕಂಪನಿಯು ಧನೆಖಾಲಿ, ಪಾಂಡುವಾ ಮತ್ತು ರಾಮೇಶ್ವರಪುರ ಪ್ರದೇಶಗಳಲ್ಲಿ ಘಟಕಗಳನ್ನು ತೆರೆಯುವ ಮೂಲಕ ಉತ್ಪಾದನೆಯ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ, ಇದು ಸಾಕಷ್ಟು ಪ್ರಯೋಜನವನ್ನು ಪಡೆಯುತ್ತಿದೆ. ದುಬೈ ಮತ್ತು ಕತಾರ್‌ಗೆ ರಫ್ತು ದ್ವಿಗುಣಗೊಂಡಿದೆ.
ಲಾಫಾವನ್ನು ಬಾಂಗ್ಲಾದೇಶದಲ್ಲಿ ಬೆಳೆಸಲಾಗಿದ್ದರೂ, ಪಶ್ಚಿಮ ಬಂಗಾಳದಲ್ಲಿ ಮಾತ್ರ ಭಾರಿ ಜನಪ್ರಿಯತೆಯನ್ನು ಗಳಿಸಿದೆ. ಹೆಚ್ಚುತ್ತಿರುವ ಬೇಡಿಕೆಯಿಂದ ರಫ್ತುದಾರರಿಗೆ ಸರಿಯಾದ ಸಮಯಕ್ಕೆ ತರಕಾರಿಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ ಎನ್ನುತ್ತಿದ್ದಾರೆ ರೈತ ಸುಜೋಯ್,
ಈ ತರಕಾರಿಯ ಜನಪ್ರಿಯತೆ ತುಂಬಾ ಹೆಚ್ಚಿದ್ದು, ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ಕೋಲ್ಕತ್ತಾದ ರಫ್ತುದಾರ ಅಂಕುಶ್ ಸಹಾ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ ಕೆಲವು ವ್ಯಾಪಾರಸ್ಥರು, ಕಾನೂನು ತೊಡಕುಗಳನ್ನು ಎದುರಿಸುತ್ತಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. "ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹಯೋಗದಲ್ಲಿ ಮತ್ತು ಲಾಫಾ ಉತ್ಪಾದನೆಯನ್ನು ಹೆಚ್ಚಿಸಲು ಉಪಕ್ರಮಗಳನ್ನು ತೆಗೆದುಕೊಂಡರೆ, ಮುಂದಿನ ವರ್ಷಗಳಲ್ಲಿ ಪ್ರಯೋಜನಗಳು ಹೆಚ್ಚಾಗುತ್ತವೆ" ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ:ಕೈಗೆಟಕುವ ದರದಲ್ಲಿ, ಸ್ಟೈಲಿಶ್ ಲುಕ್ ಹೊಂದಿರುವ ಟಾಪ್ 10 ಕಾರುಗಳಿವು - Best Cars in India
ಮದ್ಯ ಪ್ರಿಯರಿಗೆ ಸಿಹಿ ಸುದ್ದಿ: ದುಬಾರಿ ಬೆಲೆಯ ಪ್ರೀಮಿಯಂ ಬ್ರಾಂಡ್ ಮದ್ಯದ ದರ ಇಳಿಸಿ ಸರ್ಕಾರದ ಆದೇಶ - Liquor Price