ನವದೆಹಲಿ: ಅನೇಕ ಮಂದಿಗೆ ಇಟ್ಟ ಕೀ ಅಥವಾ ಬಳಕೆ ಮಾಡಿದ ವಸ್ತುಗಳನ್ನು ಎಲ್ಲಿಟ್ಟಿದ್ದೇವೆ ಎಂಬುದೇ ಮರೆತು ಹೋಗುತ್ತದೆ. ಇದು ಸಾಮಾನ್ಯವಾಗಿ ಬಹುತೇಕರನ್ನು ಕಾಡುವ ಸಹಜ ಸಮಸ್ಯೆಯೂ ಹೌದು. ಈ ಬಗ್ಗೆ ಹೆಚ್ಚು ಗಂಭೀರವಾಗಿ ಚಿಂತೆ ಮಾಡಬೇಕಾಗಿರುವುದು ಏನಿಲ್ಲ ಬಿಡಿ. ಆದರೆ, ಹೊಸ ಅಧ್ಯಯನ ಹೇಳುವಂತೆ ನಿತ್ಯ ನಡೆಯುವ ಈ ಮರೆತು ಹೋಗುವ ಸಂಗತಿ ಸಾಮಾನ್ಯವಲ್ಲ ಎಂದು ಹೇಳಿದ್ದಾರೆ.
ರೋಡ್ ಐಲ್ಯಾಂಡ್ ಕಾಲೇಜ್ ಹಾಗೂ ಇಂಡಿಯಾನಾ ವಿಶ್ವವಿದ್ಯಾಲಯದ ಇಬ್ಬರು ಅಮೆರಿಕದ ಪ್ರಾಧ್ಯಾಪಕರು ಬರೆದ ಹೊಸ ಪುಸ್ತಕ 'ದಿ ಸೈಕಾಲಜಿ ಆಫ್ ಮೆಮೊರಿ' ಪುಸ್ತಕದಲ್ಲಿ ಈ ಕುರಿತು ತಿಳಿಸಲಾಗಿದೆ. ಅಲ್ಲದೇ ಈ ರೀತಿ ಇಟ್ಟ ವಸ್ತು ಮರೆತು ಹೋಗುವ ನೆನಪಿನ ಶಕ್ತಿಯನ್ನು ಮರು ಸ್ಥಾಪಿಸಬಹುದು ಎಂಬ ವಿಚಾರವನ್ನು ಈ ಅಧ್ಯಾಪಕರು ತಮ್ಮ ಪುಸ್ತಕದಲ್ಲಿ ಮಂಡಿಸಿದ್ದಾರೆ.
ಡಾ ಮೇಗನ್ ಸುಮೆರಾಕಿ ಮತ್ತು ಡಾ ಅಲ್ಥಿಯಾ ನೀಡ್ ಕಮಿನ್ಸ್ಕೆ ಸಂಗ್ರಹಿಸಿದ ಮಾಹಿತಿ ಪ್ರಕಾರ, ಈ ರೀತಿ ಜನರು ವಸ್ತುಗಳನ್ನು ಮರೆತು ಹೋಗುವುದು ಏನು ಮಹಾನ್ ವಿಷ್ಯಾ ಎಂದು ಚಿಂತಿಸುತ್ತಾರೆ. ಆದರೆ, ಮರೆತು ಹೋದ ವ್ಯಕ್ತಿ ಯಾವ ವಸ್ತು ಎಲ್ಲಿಟ್ಟೆ ಎಂದು ನೆನಪಿಸಿಕೊಳ್ಳುವುದಕ್ಕೆ ಹೆಚ್ಚು ಸಮಸ್ಯೆ ಅನುಭವಿಸುತ್ತಿರುತ್ತಾರೆ ಎಂದಿದ್ದಾರೆ. ಇದಕ್ಕೆ ಸಂಬಂಧಿಸಿದ ಕೆಲವು ಚಟುವಟಿಕೆ ಮೂಲಕ ಈ ಮರೆಯುವ ಶಕ್ತಿ ಕಡಿಮೆ ಮಾಡಬಹುದು ಎಂದಿದ್ದಾರೆ. ಅಷ್ಟೇ ಅಲ್ಲದೇ, ವಿದ್ಯಾರ್ಥಿ ಹಾಗೂ ಜನರ ಕಲಿಕೆಯನ್ನು ಸುಧಾರಿಸಲು ಸರಳವಾದ ಸ್ಮರಣಶಕ್ತಿ ಉತ್ತೇಜಿಸುವ ತಂತ್ರಗಳನ್ನು ಪುಸ್ತಕದಲ್ಲಿ ತಿಳಿಸಲಾಗಿದೆ.
ಯಾವುದಾದರೂ ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಲು ತೊಂದರೆ ಉಂಟಾದಾಗ ನಿಮ್ಮ ಸ್ಮರಣೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಕುರಿತು ಅಧ್ಯಯನ ಮಾಡಿದಾಗ ಸ್ಮರಣೆ ಪಕ್ಷಪಾತ ತೋರುವುದು ಕಂಡು ಬಂದಿದೆ. ಅಷ್ಟೇ ಅಲ್ಲದೆ, ನಿಮ್ಮ ಸ್ಮರಣೆಯಲ್ಲಿ ನೀವು ಫೋನ್ ಇಟ್ಟಿದ್ದ ಜಾಗ, ಅಥವಾ ಕೀ, ನೀರಿನ ಬಾಟಲ್ ಇಟ್ಟಿದ್ದ ಜಾಗವನ್ನು ನೆನಪಿನಲ್ಲಿಡಲು ಸ್ಮರಣ ವ್ಯವಸ್ಥೆಯಲ್ಲಿ ಅಗತ್ಯ ವಿನ್ಯಾಸ ಆಗಿಲ್ಲ ಎಂಬುದು ಅಚ್ಚರಿಯ ಸಂಗತಿಯಾಗಿದೆ.
ಜನರು ಅದನ್ನು ಫಿಟ್ನೆಸ್ ಸಂಬಂಧಿತ ಸನ್ನಿವೇಶ ಪ್ರಕ್ರಿಯೆ ಮೂಲಕ ಕಾರ್ಯಗೊಳಿಸಿದಾಗ ಈ ರೀತಿ ವಸ್ತುಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಸಹಾಯವಾಗುತ್ತದೆ. ಆಲ್ಕೋಹಾಲ್, ನಿದ್ರಾಹೀನತೆ ಮತ್ತು ಕೆಫೀನ್‌ಗಳು ಸ್ಮರಣೆಯನ್ನು ಹೇಗೆ ದುರ್ಬಲಗೊಳ್ಳಬಹುದು ಎಂಬುದನ್ನು ಪುಸ್ತಕದಲ್ಲಿ ತಿಳಿಸಲಾಗಿದೆ.
ಮತ್ತೆ ಪಡೆಯುವು ಅಭ್ಯಾಸ, ಅಥವಾ ಸ್ಮರಣೆಯಿಂದ ನೆನಪನ್ನು ಎಳೆಯುವಂತ ತಂತ್ರಗಳ ಮೂಲಕ ಈ ಸಮಸ್ಯೆ ಸುಧಾರಣೆ ಮಾಡಬಹುದಾಗಿದೆ. ಉದಾಹರಣೆ, ಹೊಸ ಉದ್ಯೋಗಿಯ ಹೆಸರನ್ನು ಪದೇ ಪದೆ ಕರೆಯುವ ಮೂಲಕ ಹೆಸರನ್ನು ನೆನಪಿನಲ್ಲಿಟ್ಟುಕೊಳ್ಳುವ ಕ್ರಿಯೆಯಂತೆ, ಪದೆ ಪದೇ ಮಿದುಳಿಗೆ ಈ ಸಂಬಂಧ ವಿಷಯಗಳನ್ನು ತುಂಬಬೇಕು ಎನ್ನುತ್ತಾರೆ ಲೇಖಕರು. (ಐಎಎನ್ಎಸ್)
ಇದನ್ನೂ ಓದಿ: ಸ್ಮರಣೆ, ಅರಿವಿನ ಸಮಸ್ಯೆಗೆ 'ಸ್ಲೀಪ್ ಅಪ್ನಿಯಾ' ಕಾರಣ: ಇದರ ಬಗ್ಗೆ ಗೊತ್ತೇ?