ಹೈದರಾಬಾದ್: ಮಲಬದ್ಧತೆಯ ಸಮಸ್ಯೆಯು ಹಲವರಿಗೆ ಭಾರಿ ಕಿರಿಕಿರಿಯನ್ನುಂಟು ಮಾಡುತ್ತದೆ. ಇದು ನಮ್ಮ ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಒಳಗೊಂಡಂತೆ ಇಡೀ ದೇಹವನ್ನು ಹಾನಿಗೊಳಿಸುತ್ತದೆ. ಕರುಳಿನ ಚಲನೆಯನ್ನು ನಾವು ಹಿಡಿತದಲ್ಲಿಟ್ಟುಕೊಳ್ಳದಿದ್ದರೆ, ಒಟ್ಟಾರೆ ಆರೋಗ್ಯವು ಅಪಾಯದಲ್ಲಿದೆ ಎಂಬುದು ನಿಶ್ಚಿತ. ದೈಹಿಕ ಸಮಸ್ಯೆಗಳಷ್ಟೇ ಅಲ್ಲ, ಮಲಬದ್ಧತೆ, ಗ್ಯಾಸ್ಸ್ಟಿಕ್ನಂತಹ ಸಮಸ್ಯೆಯಿಂದ ಬಳಲುತ್ತಿರುವವರು ಮಾನಸಿಕವಾಗಿ ತೀರಾ ಕಿರಿಕಿರಿ ಹಾಗೂ ಖಿನ್ನತೆಗೆ ಒಳಗಾಗಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು.
ಈ ಸಮಸ್ಯೆ ನಿವಾರಣೆಗೆ ಮಾರುಕಟ್ಟೆಯಲ್ಲಿ ಸಿಗುವ ಔಷಧಿಗಳಿಗಿಂತ ಯೋಗಾಸನಗಳೇ ಉತ್ತಮ ಎನ್ನುತ್ತಾರೆ ಬಲ್ಲವರು. ನಿಮ್ಮ ಕರುಳಿನ ಚಲನೆಯನ್ನು ಸುಧಾರಿಸಲು ಮತ್ತು ಮಲಬದ್ಧತೆ ಮತ್ತು ಗ್ಯಾಸ್ಸ್ಟಿಕ್ನಂತಹ ಸಮಸ್ಯೆಗಳನ್ನು ನಿವಾರಿಸಲು ಕೆಲವು ಯೋಗ ಆಸನಗಳು ಇಲ್ಲಿವೆ.
1. ಅಪಾನಾಸನ: ಮೊಣಕಾಲುಗಳಿಂದ ಎದೆಯವರೆಗೆ ಮಾಡುವ ಆಸನವನ್ನು ಅಪಾನಾಸನ ಎಂದು ಕರೆಯಲಾಗುತ್ತದೆ. ನೆಲದ ಮೇಲೆ ಮುಖಾಮುಖಿಯಾಗಿ ಮಲಗಿ ಮತ್ತು ನಿಮ್ಮ ಮೊಣಕಾಲುಗಳನ್ನು ನಿಮ್ಮ ಎದೆ ಭಾಗಕ್ಕೆ ತನ್ನಿ. ಮೊಣಕಾಲುಗಳನ್ನು ಎದೆಯ ಮೇಲೆ ಇರಿಸಿ ಮತ್ತು ಅವುಗಳನ್ನು ಕೈಗಳಿಂದ ದೃಢವಾಗಿ ಹಿಡಿದುಕೊಳ್ಳಿ. ಇದು 15 ಸೆಕೆಂಡುಗಳ ಕಾಲ ಮಾಡಬೇಕಾಗುತ್ತದೆ. ಸತತ ಆರು ಬಾರಿ ಹೀಗೆ ಮಾಡುವುದರಿಂದ ಕರುಳಿನ ಚಲನೆ ಉತ್ತಮಗೊಳ್ಳುವುದಲ್ಲದೇ, ಹೊಟ್ಟೆಯ ಸುತ್ತಲಿನ ಕೊಬ್ಬನ್ನು ಕೂಡಾ ಕರಗಿಸುತ್ತದೆ. ಮುಟ್ಟಿನ ಸೆಳೆತವೂ ಹೀಗೆ ಮಾಡುವುದರಿಂದ ಕಡಿಮೆಯಾಗುತ್ತದೆ.
2. ಪಶ್ಚಿಮೋತ್ಥಾನಾಸನ: ಯೋಗಾಸನಗಳಲ್ಲಿ ಪ್ರಮುಖವಾದದ್ದು ಈ ಪಶ್ಚಿಮೋತ್ಥಾನಾಸನ. ನಿಮ್ಮ ಕಾಲುಗಳನ್ನು ನೆಲದ ಮೇಲೆ ಹರಡಿ ಕುಳಿತುಕೊಳ್ಳಿ ಮತ್ತು ದೇಹದ ಹಿಂಭಾಗವನ್ನು ಮೇಲಕ್ಕೆತ್ತಿ ಮತ್ತು ಹಿಮ್ಮಡಿಯವರೆಗೆ ಮುಂದಕ್ಕೆ ಬಾಗಿ. ಈ ಭಂಗಿಯು ಬೆನ್ನಿನ ಸ್ನಾಯುಗಳನ್ನು ವಿಸ್ತರಿಸುವುದು ಸೇರಿದಂತೆ ಕಿಬ್ಬೊಟ್ಟೆಯ ಅಂಗಗಳಿಗೆ ಮಸಾಜ್ ಮಾಡುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
3. ಭುಜಂಗಾಸನ: ಭುಜಂಗಾಸನವು ಹಾವಿನ ಭಂಗಿಯನ್ನು ಹೋಲುತ್ತದೆ. ಇದನ್ನು ನಾಗರ ಭಂಗಿ ಅಂತಲೂ ಕರೆಯುತ್ತಾರೆ. ನೆಲದ ಮೇಲೆ ಮಲಗಿ ಮತ್ತು ನಿಮ್ಮ ಅಂಗೈಗಳ ಮೇಲೆ ಭಾರದಿಂದ ನಿಮ್ಮ ಎದೆಯನ್ನು ಮೇಲಕ್ಕೆತ್ತಿ. ಇದು ಕಿಬ್ಬೊಟ್ಟೆಯ ಸ್ನಾಯುಗಳನ್ನು ಬಲಪಡಿಸುವುದು ಮಾತ್ರವಲ್ಲದೇ ಉತ್ತಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
4. ಮಲಾಸನ: ಎರಡೂ ಕೈಗಳನ್ನು ಮಡಚಿ, ಮೊಣಕಾಲುಗಳನ್ನು ಅಗಲವಾಗಿ ಮತ್ತು ಪಾದಗಳನ್ನು ನೆಲದ ಮೇಲೆ ಇರಿಸಿ. ಇದನ್ನು ಗಾರ್ಲ್ಯಾಂಡ್ ಪೋಸ್ ಎಂದೂ ಕರೆಯಲಾಗುತ್ತದೆ. ಈ ಭಂಗಿಯು ಶ್ರೋಣಿಯ ಪ್ರದೇಶವನ್ನು ತೆರೆಯಲು ಸಹಾಯ ಮಾಡುತ್ತದೆ ಮತ್ತು ಮಲಬದ್ಧತೆಯನ್ನು ನಿವಾರಿಸುತ್ತದೆ. ಕರುಳಿನ ಚಲನೆಯನ್ನು ಸುಗಮಗೊಳಿಸುತ್ತದೆ.
5. ಮಾರ್ಜಾರ್ಯಾಸನ: ಮಾರ್ಜರ್ಯಾಸನವನ್ನೇ ಕ್ಯಾಟ್-ಕೌ ಪೋಸ್ ಅಂತಾ ಕರೆಯಲಾಗುತ್ತದೆ. ಅಂಗೈ ಮತ್ತು ಮೊಣಕಾಲುಗಳೊಂದಿಗೆ ನೆಲದ ಮೇಲೆ ಬೆಕ್ಕಿನಂತೆ ಮಲಗಬೇಕಾಗುತ್ತದೆ. ಹೀಗೆ ಮಲಗಿ ಆಳವಾದ ಉಸಿರನ್ನು ತೆಗೆದುಕೊಳ್ಳಿ ಮತ್ತು ನಿಮ್ಮ ಸೊಂಟವನ್ನು ಹಸುವಿನಂತೆ ಮೇಲಕ್ಕೆತ್ತಿ. ನಂತರ ಉಸಿರು ಬಿಡುವಾಗ ಸೊಂಟವನ್ನು ಕೆಳಕ್ಕೆ ಬಗ್ಗಿಸಿ. ಹೀಗೆ 5 ರಿಂದ 10 ಬಾರಿ ಮಾಡುವುದರಿಂದ ಜೀರ್ಣಾಂಗಗಳು ಚೆನ್ನಾಗಿ ಮಸಾಜ್ ಆಗುತ್ತವೆ. ಕರುಳಿನ ಚಲನೆಗಳು ಮೃದುವಾಗಿಸುತ್ತದೆ. ಇದರೊಂದಿಗೆ, ಬೆನ್ನಿನ ಮೇಲಿನ ಒತ್ತಡವು ಕಡಿಮೆಯಾಗುತ್ತದೆ ಮತ್ತು ಮನಸಿಗೆ ಶಾಂತತೆಯನ್ನು ನೀಡುತ್ತದೆ.
ಇದಲ್ಲದೇ ಸುಪ್ತ ಮತ್ಸ್ಯೇಂದ್ರಾಸನ, ಧನುರಾಸನ, ಪವನಮುಕ್ತಾಸನ, ಉತ್ತಾನಾಸನ, ಸೇತು ಬಂಧಾಸನಗಳನ್ನು ನಿತ್ಯವೂ ಅಭ್ಯಾಸ ಮಾಡುವುದರಿಂದ ಮಲಬದ್ಧತೆ, ಅಜೀರ್ಣ, ಗ್ಯಾಸ್ಸ್ಟಿಕ್ ಸಮಸ್ಯೆ ದೂರವಾಗುತ್ತದೆ ಎನ್ನುತ್ತಾರೆ ಯೋಗ ತಜ್ಞರು.
ದಯವಿಟ್ಟು ಗಮನಿಸಿ: ಈ ವೆಬ್‌ಸೈಟ್‌ನಲ್ಲಿ ನಿಮಗೆ ಒದಗಿಸಲಾದ ಎಲ್ಲ ಆರೋಗ್ಯ ಮಾಹಿತಿ, ವೈದ್ಯಕೀಯ ಸಲಹೆಗಳು ನಿಮ್ಮ ಮಾಹಿತಿಗಾಗಿ ಮಾತ್ರವೇ ನೀಡಲಾಗಿದೆ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಇವುಗಳನ್ನು ಅನುಸರಿಸುವ ಮೊದಲು ನುರಿತ ತಜ್ಞರ ಸಲಹೆ ತೆಗೆದುಕೊಳ್ಳುವುದು ಉತ್ತಮ.
ಇದನ್ನು ಓದಿ: ಯೂರಿಕ್ ಆ್ಯಸಿಡ್ ಹೆಚ್ಚಾಯ್ತೇ? ಆಯುರ್ವೇದದ ಪ್ರಕಾರ ಈ ಎಲೆಗಳನ್ನು ತಿಂದ್ರೆ ಆಲ್ ಕ್ಲಿಯರ್! - Uric Acid Control Tips