ETV Bharat / health

ಡಬ್ಲ್ಯೂಎಚ್​ಒ ಮಾರ್ಗಸೂಚಿಗಳ ಅಳವಡಿಕೆ ಮೂಲಕ ಅನಗತ್ಯ ಸಿ ಸೆಕ್ಷನ್ ಹೆರಿಗೆ ಕಡಿತ; ಅಧ್ಯಯನ - ಅನಗತ್ಯ ಸಿ ಸೆಕ್ಷನ್ ಹೆರಿಗೆ ಕಡಿತ

ಜಾಗತಿಕವಾಗಿ ಸಿ ಸೆಕ್ಷನ್​ ಹೆರಿಗೆ ಪ್ರಮಾಣ ಹೆಚ್ಚಳವಾಗಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿ ಸಹಾಯ ಮಾಡಲಿದೆ ಎಂದು ಅಧ್ಯಯನ ತಿಳಿಸಿದೆ.

implementing-who-guidelines-can-cut-unnecassary-c-section-deliveries

author img

By PTI

Published : Feb 1, 2024, 2:59 PM IST

ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಹೆರಿಗೆ ವೇಳೆ ಮಹಿಳೆಯರ ಆರೈಕೆ ಸುಧಾರಣೆ ಮತ್ತು ಅನಗತ್ಯ ಸಿಸೇರಿಯನ್​ ಸೆಕ್ಷನ್​ ಹೆರಿಗೆಯನ್ನು ಕಡಿಮೆ ಮಾಡಬಹುದು ಎಂದು ಭಾರತದಲ್ಲಿ ನಡೆಸಿದ ಅಧ್ಯಯನವೊಂದು ತಿಳಿಸಿದೆ.

ಸಿ ಸೆಕ್ಷನ್​ ಹೆಚ್ಚಳ ಪ್ರವೃತ್ತಿ ಕುರಿತು ಕಳವಳ ವ್ಯಕ್ತಪಡಿಸಿರುವ ವಿಶ್ವ ಆರೋಗ್ಯ ಸಂಸ್ಥೆ, ಜಾಗತಿಕವಾಗಿ ಐದರಲ್ಲಿ ಒಂದು ಮಗು ಸಿ ಸೆಕ್ಷನ್​ ಮೂಲಕ ಜನಿಸುತ್ತಿದೆ. ಮುಂದಿನ ದಶಕದಲ್ಲಿ ಈ ಸಂಖ್ಯೆಯು ಏರಿಕೆ ಕಾಣಲಿದ್ದು, ಮೂರನೇ ಒಂದು ಭಾಗದಷ್ಟು ಪ್ರಮಾಣದಲ್ಲಿ ಏರಿಕೆ ಆಗಬಹುದು ಎಂದಿದೆ.

ವೈದ್ಯಕೀಯ ಉದ್ದೇಶಕ್ಕಾಗಿ ನಡೆಸುವ ಸಿಸೇರಿಯನ್​ ಸೆಕ್ಷನ್​ ಹೆರಿಗೆಯು ಜೀವ ಉಳಿಸಬಹುದು. ಇದು ಉತ್ತಮ ವೈದ್ಯಕೀಯ ಆರೈಕೆಯ ಜೊತೆಗೆ ಹಲವು ಅಪಾಯಗಳನ್ನು ಕೂಡ ಹೊಂದಿದೆ.

ಈ ಅಧ್ಯಯನವನ್ನು ಜರ್ನಲ್​ ನೇಚರ್​ ಮೆಡಿಸಿನ್​ನಲ್ಲಿ ಪ್ರಕಟಿಸಲಾಗಿದೆ. ಡಬ್ಲ್ಯೂಎಚ್​ಒನ ಲೇಬರ್​ ಕೇರ್ ಗೈಡ್​ (ಹೆರಿಗೆ ಆರೈಕೆ ಮಾರ್ಗಸೂಚಿ- ಎಲ್​ಸಿಜಿ) ವಿಶ್ವದ ಮೊದಲ ಯಾದೃಚ್ಛಿಕ ಪ್ರಯೋಗವಾಗಿದೆ. ಈ ತಂಡದಲ್ಲಿ ಕರ್ನಾಟಕದ ಜವಾಹರ್​​ಲಾಲ್​ ನೆಹರು ಮೆಡಿಕಲ್​ ಕಾಲೇಜ್​ ಸಂಶೋಧಕರು ಪಾಲ್ಗೊಂಡಿದ್ದಾರೆ. ಈ ಕುರಿತು ದೇಶದ ನಾಲ್ಕು ಆಸ್ಪತ್ರೆಗಳಲ್ಲಿ ಮೊದಲ ಪ್ರಯೋಗವನ್ನು ನಡೆಸಲಾಗಿದ್ದು, ಎಲ್​ಸಿಜಿ ತಂತ್ರಗಾರಿಕೆಯ ಅಳವಡಿಕೆ ಮೌಲ್ಯಮಾಪವನ್ನು ಮಾಡಲಾಗಿದ್ದು, ಅದನ್ನು ಸಾಮಾನ್ಯ ಆರೈಕೆಯೊಂದಿಗೆ ಹೋಲಿಕೆ ಮಾಡಲಾಗಿದೆ.

ಈ ಅಧ್ಯಯನ, ನಿಯಮಿತ ಸಂಪನ್ಮೂಲ ಸೌಲಭ್ಯ ಹೊಂದಿರುವ ರೂಟಿನ್​ ಕ್ಲಿನಿಕಲ್​ ಕೇರ್​ನಲ್ಲಿ ಎಲ್​ಸಿಜಿ ಅಳವಡಿಕೆ ಸಾಧ್ಯ ಎಂಬುದನ್ನು ತೋರಿಸಿದೆ ಎಂದು ಆಸ್ಟ್ರೇಲಿಯಾದ ಬುರ್ನೆಟ್​​ ಇನ್ಸ್​ ಟಿಟ್ಯೂಟ್​​ನ ಪ್ರೊ. ಮತ್ತು ಅಧ್ಯಯನದ ಪ್ರಮುಖ ಲೇಖಕ ಜೊಶುವ ವೊಗೆಲ್​ ತಿಳಿಸಿದ್ದಾರೆ.

ಎಲ್​ಸಿಯನ್ನು ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿದೆ. ಈ ಮೂಲಕ ಜಗತ್ತಿನಾದ್ಯಂತ ಮಹಿಳೆಯರ ಹೆರಿಗೆ ಸಮಯದಲ್ಲಿ ವೈದ್ಯಕೀಯ ಮತ್ತು ಬೆಂಬಲದ ಆರೈಕೆ ಸುಧಾರಿಸಿದೆ. ಇದನ್ನು ಲಭ್ಯವಿರುವ ಪುರಾವೆಗಳೊಂದಿಗೆ ಜೋಡಿಸಲು ಅಭಿವೃದ್ಧಿ ಪಡಿಸಲಾಗಿದೆ. ಆದರೆ, ಮಹಿಳೆಯರು ಮತ್ತು ಅವರ ಮಕ್ಕಳ ಮೇಲೆ ಪರಿಣಾಮದ ಬಗ್ಗೆ ಖಚಿತತೆ ಇಲ್ಲ ಎಂದಿದ್ದಾರೆ.

ಎಲ್​ಸಿಜಿಯು ಅನಗತ್ಯ ಸಿಸೇರಿಯನ್​ ಸೆಕ್ಷನ್​ ಅನ್ನು ಕಡಿತ ಮಾಡುತ್ತದೆ. ಈ ಸಿಸೇರಿಯನ್​ ಸೆಕ್ಷನ್​ ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ತೊಂದರೆಯಾಗಿದೆ. ಇತ್ತೀಚಿನ ದಶಕದಲ್ಲಿ ಹಲವು ದೇಶದಲ್ಲಿ ಹೆರಿಗೆ ಸಮಯದಲ್ಲಿ ಸಿಸೇರಿಯನ್​ ಸೆಕ್ಷನ್​ ಅಧಿಕವಾಗಿದ್ದು, ಆಗ್ಯುಮೆಂಟಿಂಗ್​​ ಹೆರಿಗೆಯ ಜೊತೆಗೆ ಔಷಧ ಮತ್ತು ಎಪಿಸಿಟೊಮಿ ಬಳಕೆ ಹೆಚ್ಚಿದೆ.

ಸರಿಯಾದ ಸಮಯದಲ್ಲಿ ಸಿಸೇರಿಯನ್​ ಸೆಕ್ಷನ್​ ಬಳಕೆ ಮಾಡುವುದರಿಂದ ಉತ್ತಮ ಆರೋಗ್ಯ ಫಲಿತಾಂಶವನ್ನು ಪಡೆಯಬಹುದು. ಆದರೆ, ಇದನ್ನು ಆಗಾಗ್ಗೆ ಅಗತ್ಯ ವೈದ್ಯಕೀಯ ಅವಶ್ಯಕತೆ ಇಲ್ಲದೇ ಬಳಕೆ ಮಾಡಲಾಗುತ್ತಿದೆ. ಅಧ್ಯಯನದಲ್ಲಿ ಎಲ್​ಸಿಜಿಯನ್ನು ಯಾವಾಗ ಅಳವಡಿಸಿಕೊಳ್ಳಬಹುದು. ಯಾವುದೇ ಹಾನಿಯಾಗದಂತೆ ಸಿಸೇರಿಯನ್ ವಿಭಾಗದ ದರಗಳಲ್ಲಿ ಇಳಿಕೆ ಕುರಿತು ತೋರಿಸಲಾಗಿದೆ ಎಂದು ವೊಗೆಲ್​ ತಿಳಿಸಿದ್ದಾರೆ.

2018ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು, ಮಗುವಿನ ಜನನದ ವೇಳೆ ಮಹಿಳೆಯರ ಆರೋಗ್ಯ ಸುಧಾರಣೆ ನಿಟ್ಟಿನಲ್ಲಿ 56 ಶಿಫಾರಸ್ಸನ್ನು ಪ್ರಕಟಿಸಿತು. (ಪಿಟಿಐ)

ಇದನ್ನೂ ಓದಿ: 9-14 ವರ್ಷದ ಬಾಲಕಿಯರಿಗೆ ಗರ್ಭಕಂಠ ಕ್ಯಾನ್ಸರ್​ ತಡೆಯಲು ಲಸಿಕೆ; ವಿತ್ತ ಸಚಿವೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.