ETV Bharat / health

ಕೋವಾಕ್ಸಿನ್​ ಕುರಿತು ತಪ್ಪು ದಾರಿಗೆ ಎಳೆಯುವ ಮಾಹಿತಿ; ಕಾನೂನು ಕ್ರಮದ ಎಚ್ಚರಿಕೆ ನೀಡಿದ ಐಸಿಎಂಆರ್​​ - legal action against bhu - LEGAL ACTION AGAINST BHU

ಅಧ್ಯಯನದಲ್ಲಿ ಜನಸಂಖ್ಯೆಯಲ್ಲಿ ಅಡ್ಡ ಪರಿಣಾಮಗಳನ್ನು ಗಮನಿಸಿದ ಘಟನೆಗಳ ಕುರಿತು ಮಾಹಿತಿ ಒದಗಿಸುವುದಿಲ್ಲ. ಲಸಿಕೆ ನಂತರದ ಅವಧಿಯಲ್ಲಿ ಗಮನಿಸಿದ ಘಟನೆಗಳ ಬದಲಾವಣೆಯನ್ನು ನಿರ್ಣಯಿಸುವುದು ಅಸಾಧ್ಯ ಎಂದು ತಿಳಿಸಿದ್ದಾರೆ.

icmr-warns-legal-action-against-bhu-researchers-for-publishing-misleading-paper-over-covaxin-safety
icmr-warns-legal-action-against-bhu-researchers-for-publishing-misleading-paper-over-covaxin-safety (ANI)
author img

By ETV Bharat Karnataka Team

Published : May 20, 2024, 3:49 PM IST

ನವದೆಹಲಿ: ಕೋವಾಕ್ಸಿನ್​ ಸುರಕ್ಷತೆ ಕುರಿತು ಇತ್ತೀಚಿಗೆ ಬನರಾಸ್​ ಹಿಂದೂ ವಿಶ್ವವಿದ್ಯಾಲಯ (ಬಿಎಚ್​ಯು) ಪ್ರಕಟಿಸಿದ ಲೇಖನದ ವಿರುದ್ಧ ಶೋಕಾಸ್​ ನೋಟಿಸ್​ ಹೊರಡಿಸಲಾಗಿದೆ. ಅಲ್ಲದೇ, ತಮ್ಮ ತಪ್ಪು ಒಪ್ಪಿಕೊಳ್ಳುವ ದೋಷಾರೋಪಣೆ ಪ್ರಕಟಿಸದಿದ್ದರೆ ಕಾನೂನು ಮತ್ತು ಆಡಳಿತ ಕ್ರಮ ಎದುರಿಸಬೇಕಾಗುತ್ತದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಎಚ್ಚರಿಸಿದೆ.

ಈ ಸಂಬಂಧ ಬಿಎಚ್​ಯುನ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಪ್ರಿ ಸಂಖ್ವರ್​ ಅವರಿಗೆ ಪತ್ರ ಬರೆದಿರುವ ಐಸಿಎಂಆರ್​ ಪ್ರಧಾನ ನಿರ್ದೇಶಕ ರಾಜೀವ್​ ಬಹ್ಲ್​, 'Long-Term Safety Analysis of the BBV152 Coronavirus Vaccine in Adolescents and Adults: Findings from a l-Year Prospective Study in North India.' ಹೆಸರಿನಲ್ಲಿ ಪ್ರಕಟವಾದ ಅಧ್ಯಯನವೂ ತಪ್ಪಾಗಿದ್ದು, ತಪ್ಪು ದಾರಿಗೆ ಎಳೆಯುವ ಲೇಖನ ಎಂದು ಐಸಿಎಂಆರ್​ ತಿಳಿಸಿದೆ

ಐಸಿಎಂಆರ್​ನ ಯಾವುದೇ ಪೂರ್ವಾನುಮತಿ ಪಡೆಯದೇ ಅಧ್ಯಯನ ನಡೆಸಿರುವ ಜೆರಿಯಾಟ್ರಿಕ್ ಮೆಡಿಸಿನ್​ನ ವಿಭಾಗದ ಮುಖ್ಯಸ್ಥ, ಡಾ ಸಂಖ ಸುಬ್ರಾ ಚಕ್ರವರ್ತಿ ಮತ್ತು ಡಾ ಉಪಿಂದರ್​ ಕೌರ್​ ಅವರ ನಡೆ ಕೂಡ ಅಸಬಂದ್ಧ ಮತ್ತು ಸ್ವೀಕಾರಾರ್ಹವಲ್ಲ ಎಂದು ಟೀಕಿಸಿದೆ

ಪ್ರಕಟವಾಗಿರುವ ಅಧ್ಯಯನವನ್ನು ತೆಗೆದು ಹಾಕಿ, ಈ ಸಂಬಂಧ ತತ್​ಕ್ಷಣಕ್ಕೆ ದೋಷಾರೋಪಣೆ ಕೋರಬೇಕು. ಬಿಎಚ್​ಯು ಈ ಹಿಂದೆ ಕೂಡ ಯಾವುದೇ ಪೂರ್ವಾನುಮತಿ ಇಲ್ಲದೇ ಅಧ್ಯಯನ ನಡೆಸಿರುವುದು ಕಂಡು ಬಂದಿದೆ. ಈ ಸಂಬಂಧ ಯಾಕೆ ನಾನು ಕಾನೂನು ಮತ್ತು ಆಡಳಿತಾತ್ಮಕ ಕ್ರಮವನ್ನು ನಿಮ್ಮ ವಿರುದ್ಧ ನಡೆಸಬಾರದು ಎಂದು ಕೂಡ ಡಾ ಬಹ್ಲ್​ ಪತ್ರದಲ್ಲಿ ತಿಳಿಸಿದ್ದಾರೆ.

ಕೋವಾಕ್ಸಿನ್​ನ ಸುರಕ್ಷತೆಯು ವಿಶ್ಲೇಷಣೆ ಕುರಿತು ಅಧ್ಯಯನ ಕಳಪೆಯಾಗಿ ವಿನ್ಯಾಸ ಮಾಡಲಾಗಿದೆ. ಅಧ್ಯಯನದಲ್ಲಿ ಲಸಿಕೆ ಪಡೆಯದವರು. ಲಸಿಕೆ ಪಡೆದವರ ನಡುವೆ ಆಗಿರುವ ಹಾನಿ ಕುರಿತು ಹೋಲಿಕೆಯಲ್ಲಿ ಯಾವುದೆ ನಿಯಂತ್ರಣವಿಲ್ಲ. ಈ ಹಿನ್ನೆಲೆಯಲ್ಲಿ ವರದಿಯನ್ನು ಕೋವಿಡ್​ 19 ಲಸಿಕೆಯೊಂದಿಗೆ ಸಂಬಂಧ ಮಾಡಲು ಸಾಧ್ಯವಿಲ್ಲ ಎಂದು ಬಹ್ಲ್​ ತಿಳಿಸಿದ್ದಾರೆ.

ಜೊತೆಗೆ ಅಧ್ಯಯನದಲ್ಲಿ ಜನಸಂಖ್ಯೆಯಲ್ಲಿ ಅಡ್ಡ ಪರಿಣಾಮಗಳನ್ನು ಗಮನಿಸಿದ ಘಟನೆಗಳ ಕುರಿತು ಮಾಹಿತಿ ಒದಗಿಸುವುದಿಲ್ಲ. ಲಸಿಕೆ ನಂತರದ ಅವಧಿಯಲ್ಲಿ ಗಮನಿಸಿದ ಘಟನೆಗಳ ಬದಲಾವಣೆಯನ್ನು ನಿರ್ಣಯಿಸುವುದು ಅಸಾಧ್ಯ ಎಂದು ತಿಳಿಸಿದ್ದಾರೆ. ಜೊತೆಗೆ ಅಧ್ಯಯನದಲ್ಲಿ ಭಾಗಿಯಾದವರ ಮೂಲ ಮಾಹಿತಿ ಕಾಣೆಯಾಗಿದೆ.

ಅಧ್ಯಯನದಲ್ಲಿ ಬಳಕೆಯಾದ ಸಾಧನ ಅಸಮಂಜಸವಾಗಿದೆ. ದತ್ತಾಂಶ ಸಂಗ್ರಹದ ವಿಧಾನವೂ ತಾರತಮ್ಯದ ಹೆಚ್ಚಿನ ಅಪಾಯವಾಗಿದೆ. ಅಧ್ಯಯನದ ಭಾಗಿದಾರರನ್ನು ಲಸಿಕೆ ಪಡೆದ ವರ್ಷದ ಬಳಿಕ ಟೆಲಿಫೋನ್​ ಮೂಲಕ ಸಂಪರ್ಕಿಸಲಾಗಿದೆ. ಅವರ ಪ್ರತಿಕ್ರಿಯೆಯನ್ನು ಕ್ಲಿನಿಕಲ್​ ದಾಖಲೆ ದೃಢೀಕರಣವಿಲ್ಲದೇ, ದಾಖಲಿಸಲಾಗಿದೆ.

ಇದೇ ರೀತಿಯ ಪತ್ರವನ್ನು ಐಸಿಎಂಆರ್, ಅಧ್ಯಯನ ಪ್ರಕಟಿಸಿದ​ ನ್ಯೂಜಿಲ್ಯಾಂಡ್​ ಮೂಲದ ಔಷಧ ಸುರಕ್ಷತಾ ಜರ್ನಲ್​ ಸಂಪಾದಕರಾಗಿರುವ ನಿತಿನ್​ ಜೋಶಿ ಅವರಿಗೆ ಕೂಡ ನೋಟಿಸ್​ ನೀಡಲಾಗಿದೆ. ಅವರ ಪತ್ರದಲ್ಲಿ ಜೋಶಿಯವರಿಗೆ ಈ ಅಧ್ಯಯನ ಪ್ರಕಟಣೆಯನ್ನು ಹಿಂತೆಗೆದುಕೊಳ್ಳುವಂತೆ ಕೇಳಲಾಗಿದ್ದು, ಅಧ್ಯಯನವೂ ಯಾವುದೇ ಸಾಕ್ಷ್ಯಾಧಾರಗಳಿಂದ ಬೆಂಬಲಿಸದ ಲಸಿಕೆ ಸುರಕ್ಷತೆಯ ಬಗ್ಗೆ ಸೂಚ್ಯವಾಗಿ ತೀರ್ಮಾನಗಳನ್ನು ಮಾಡುತ್ತದೆ ಎಂದು ತಿಳಿಸಲಾಗಿದೆ.

ಈ ವಿಷಯದ ಕುರಿತು ಮಾತನಾಡಿರುವ ಕೇಂದ್ರ ಆರೋಗ್ಯ ಸಚಿವರು, ಕೌರ್​ ಅವರು ಬರೆದಿರುವ 'Long-Term Safety Analysis of the BBVl52 Coronavirus Vaccine in Adolescents and Adults: Findings from a l-Year Prospective Study in North India' ಲೇಖನದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಐಸಿಎಂಆರ್​ ಈ ಲೇಖನದೊಂದಿಗೆ ಸಂಬಂಧ ಹೊಂದಿಲ್ಲ. ಅಲ್ಲದೇ ಈ ಸಂಬಂಧ ಯಾವುದೇ ಆರ್ಥಿಕ ಅಥವಾ ತಾಂತ್ರಿಕ ಬೆಂಬಲವನ್ನು ನೀಡಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಕೋವಾಕ್ಸಿನ್​ ಸುರಕ್ಷತೆಯ ದಾಖಲೆ ಹೊಂದಿದೆ: ಭಾರತ್​ ಬಯೋಟೆಕ್ ಸ್ಪಷ್ಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.