ETV Bharat / health

ಕಳೆದ 10 ವರ್ಷಗಳಿಂದ 1.19 ಡಿಗ್ರಿ ಸೆಲ್ಸಿಯಸ್​ ತಾಪಮಾನ ಏರಿಕೆಗೆ ಮಾನವ ಚಟುವಟಿಕೆಗಳೇ ಕಾರಣವಂತೆ! - Human induced warming rose - HUMAN INDUCED WARMING ROSE

ಜಾಗತಿಕ ತಾಪಮಾನ ಏರಿಕೆಯಲ್ಲಿ ಮಾನವ ಸಂಬಂಧಿ ಚಟುವಟಿಕೆ ಪ್ರಮುಖವಾಗಿದ್ದು, ಇದರಿಂದಲೇ 1.19 ಡಿಗ್ರಿ ಸೆಲ್ಸಿಯಸ್​ ಉಷ್ಣಾಂಶ ಹೆಚ್ಚಾಗಿದೆ.

Human activities are accelerating global warming at record levels
ಜಾಗತಿಕ ತಾಪಮಾನ (ಸಾಂದರ್ಭಿಕ ಚಿತ್ರ)
author img

By IANS

Published : Jun 5, 2024, 11:20 AM IST

ನವದೆಹಲಿ: ಮಾನವ ನಿರ್ಮಿತ ಚಟುವಟಿಕೆಗಳು ಜಾಗತಿಕ ತಾಪಮಾನವನ್ನು ದಾಖಲೆ ಮಟ್ಟದಲ್ಲಿ ಹೆಚ್ಚಿಸುತ್ತದೆ. ಅದರಲ್ಲೂ 2014 ಮತ್ತು 2023ರ ನಡುವೆ ಈ ತಾಪಮಾನ 1.19 ಡಿಗ್ರಿ ಸೆಲ್ಸಿಯಸ್ ಏರಿಕೆ ಕಂಡಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

50ಕ್ಕೂ ಹೆಚ್ಚು ಪ್ರಮುಖ ಅಂತಾರಾಷ್ಟ್ರೀಯ ವಿಜ್ಞಾನಿಗಳ ನೇತೃತ್ವದ ತಂಡ ಈ ಕುರಿತು ಮಾತನಾಡಿದ್ದು, 2013 - 2022ರ ನಡುವೆ ತಾಪಮಾನ 1.41 ಡಿಗ್ರಿ ಸೆಲ್ಸಿಯಸ್​ ಏರಿಕೆ ಕಂಡಿದೆ ಎಂದಿದ್ದಾರೆ. ಈ ಅಂಶವನ್ನು ಯುಕೆಯ ಲೀಡ್ಸ್​ ಯುನಿವರ್ಸಿಟಿಯ ಎರಡನೇ ವಾರ್ಷಿಕ ಸೂಚಕಗಳು ಜಾಗತಿಕ ಹವಾಮಾನ ಬದಲಾವಣೆ ವರದಿಯಲ್ಲಿ ತಿಳಿಸಲಾಗಿದೆ.

ಮಾನವ ಸಂಬಂಧಿತ ಚಟುವಟಿಕೆಗಳಿಂದ ಆಗುತ್ತಿರುವ ಜಾಗತಿಕ ತಾಪಮಾನವು ಪ್ರತಿ ದಶಕದಲ್ಲಿ 0.26 ಡಿಗ್ರಿ ಸೆ ಯಲ್ಲಿ ಮುಂದುವರಿಯುತ್ತಿದೆ. ಆದರೆ, ಕಳೆದ ದಶಕದ ಅವಧಿಯಲ್ಲಿ ದಾಖಲೆ ಮಟ್ಟದಲ್ಲಿ ಇದು ವರದಿಯಾಗಿದೆ ಎಂದು ತಿಳಿಸಲಾಗಿದೆ.

ಹಸಿರುಮನೆ ಅನಿಲ ಹೊರಸೂಸುವಿಕೆಯ ಹವಾಮಾನ ಏರಿಕೆಯನ್ನು ಕಡಿಮೆ ಮಾಡಿದರೂ, ಮಾನವ ಚಟುವಟಿಕೆಯಿಂದ ಉಂಟಾಗುವ ಜಾಗತಿಕ ತಾಪಮಾನದ ಮಟ್ಟವು ಕಳೆದ ವರ್ಷದಿಂದ ಹೆಚ್ಚುತ್ತಲೇ ಇದೆ. ಜಾಗತಿಕ ತಾಪಮಾನವು ಹಿಂದೆಂದಿಗಿಂತಲೂ ವೇಗವಾಗಿ ತಪ್ಪು ಹಾದಿಯಲ್ಲಿ ಸಾಗಿದೆ ಎಂದು ಲೀಡ್ಸ್​ ಯುನಿವರ್ಸಿಟಿಯ ಪ್ರೀಸ್ಟ್ಲಿ ಸೆಂಟರ್ ಫಾರ್ ಕ್ಲೈಮೇಟ್ ಫ್ಯೂಚರ್ಸ್ ನ ನಿರ್ದೇಶಕ ಪ್ರೊಫೆಸರ್ ಪಿಯರ್ಸ್ ಫಾರ್ಸ್ಟರ್ ತಿಳಿಸಿದ್ದಾರೆ.

ಈ ಅಧ್ಯಯನವನ್ನು ಜರ್ನಲ್​ ಅರ್ಥ್​ ಸಿಸ್ಟಮ್​ ಸೈನ್ಸ್​ ಡೇಟಾದಲ್ಲಿ ಪ್ರಕಟಿಸಲಾಗಿದೆ. ವರದಿಯಲ್ಲಿ ತಾಪಮಾನ ಹೆಚ್ಚಳ ದರದಿಂದ ಹಸಿರುಮನೆ ಅನಿಲ ಹೊರಸೂಸುವಿಕೆಯ ಸ್ಥಿರವಾಗಿ ಹೆಚ್ಚಾಗಿರುತ್ತದೆ, ವರ್ಷಕ್ಕೆ 53 ಬಿಲಿಯನ್ ಟನ್ ಇಂಗಾಲದ ಡೈಆಕ್ಸೈಡ್​​ಗೆ ಸಮವಾಗಿದೆ. ಹೆಚ್ಚಿನ ಹಸಿರುಮನೆ ಅನಿಲ ಹೊರಸೂಸುವಿಕೆ ಮಟ್ಟಗಳು ಭೂಮಿಯ ಶಕ್ತಿಯ ಸಮತೋಲನದ ಮೇಲೆ ಪರಿಣಾಮ ಬೀರುತ್ತದೆ. ತಾಪಮಾನ ಹೆಚ್ಚಳ ಕುರಿತು ಸಾಗರಗಳು, ಮಂಜುಗಡ್ಡೆಗಳು, ಮಣ್ಣು ಮತ್ತು ವಾತಾವರಣ ತಿಳಿಸುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಪಳೆಯುಳಿಕೆ ಇಂಧನ ಹೊರಸೂಸುವಿಕೆಯು ಜಿಎಚ್​ಜಿ ಹವಾಮಾನ ಬದಲಾವಣೆಯ ಸ್ಪಷ್ಟ ಚಾಲಕವಾಗಿದೆ. ಸಿಮೆಂಟ್ ಉತ್ಪಾದನೆ, ಅರಣ್ಯನಾಶದಿಂದ ಮಾಲಿನ್ಯದ ಇತರ ಮೂಲಗಳು ಮತ್ತು ಸಲ್ಫರ್ ಹೊರಸೂಸುವಿಕೆಯ ಮಟ್ಟಕ್ಕೆ ಕಡಿತಗಳು ಸಹ ತಾಪಮಾನ ಏರಿಕೆಗೆ ಕಾರಣವಾಗಿವೆ.

2023 ಅತ್ಯಂತ ಬಿಸಿಯಾದ ವರ್ಷವಾಗಿ ಹೊರಹೊಮ್ಮಿದ್ದು, ದಾಖಲೆಯ ತಾಪಮಾನ ವರದಿ ಜೊತೆಗೆ ನೈಸರ್ಗಿಕ ಹವಾಮಾನ ವ್ಯತ್ಯಾಸದ ಪರಿಣಾಮಕ್ಕೆ ಭೂಮಿ ಸಾಕ್ಷಿಯಾಗಿದೆ. (ಐಎಎನ್​ಎಸ್​)

ಇದನ್ನೂ ಓದಿ: ಭಾರತೀಯರಲ್ಲಿ ಭಯ ಹುಟ್ಟಿಸಿದೆ ಜಾಗತಿಕ ತಾಪಮಾನ ಏರಿಕೆ: ಅಂತಾರಾಷ್ಟ್ರೀಯ ಮಟ್ಟದ ವರದಿ ಬಹಿರಂಗ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.