ETV Bharat / health

ಫೋನ್ ಚಟದಿಂದ ಬಳಲುತ್ತಿದ್ದೀರಾ?: ಈ ಸರಳ ಸಲಹೆಗಳನ್ನು ಪಾಲಿಸಿ ಸಮಸ್ಯೆಯಿಂದ ಹೊರಬನ್ನಿ - HOW TO OVER COME PHONE ADDICTION

ನೀವು ಸ್ಮಾರ್ಟ್‌ಫೋನ್ ವ್ಯಸನಿಯಾಗಿದ್ದೀರಾ? ಫೋನ್ ಇಲ್ಲದೇ ಒಂದು ಕ್ಷಣವೂ ಇರಲು ಸಾಧ್ಯವಿಲ್ಲವೇ? ನಾವು ನೀಡುವ ಕೆಲವು ಸರಳ ಸಲಹೆಗಳನ್ನು ಪಾಲಿಸುವ ಮೂಲಕ ನೀವು ಫೋನ್ ಚಟದಿಂದ ಸುಲಭವಾಗಿ ಹೊರಬರಬಹುದು.

author img

By ETV Bharat Karnataka Team

Published : Jul 8, 2024, 10:57 PM IST

Smartphone
ಸ್ಮಾರ್ಟ್‌ಫೋನ್ (ETV Bharat)

How To Overcome Phone Addiction: ಸ್ಮಾರ್ಟ್‌ಫೋನ್‌ಗಳು ನಮ್ಮ ಜೀವನವನ್ನೇ ಆವರಿಸಿವೆ. ನಾವು ಕುಳಿತುಕೊಳ್ಳುವ ಸ್ಥಳದಲ್ಲಿಯೇ ಸ್ಮಾರ್ಟ್​ಪೋನ್​ಗಳು ನಮಗೆ ಮಾಹಿತಿ ಮತ್ತು ಮನರಂಜನೆ ಒದಗಿಸುತ್ತವೆ. ಅವುಗಳಿಂದಾಗಿ ನಾವು ಯಾರೊಂದಿಗೂ ಸುಲಭವಾಗಿ ಮಾತನಾಡಬಹುದು. ಆದರೆ, ಮಿತಿ ಮೀರಿ ಸ್ಮಾರ್ಟ್ ಫೋನ್​ಗಳನ್ನು ಬಳಸಿದರೆ ಹಲವು ಮಾನಸಿಕ ಮತ್ತು ಆರೋಗ್ಯ ಸಮಸ್ಯೆಗಳು ಎದುರಾಗುವ ಅಪಾಯವಿದೆ. ನಿಮ್ಮ ಉತ್ಪಾದಕತೆ ಮತ್ತು ಸಂಬಂಧಗಳು ಸಹ ಹಾನಿಗೊಳಗಾಗುತ್ತವೆ. ಹಾಗಾದರೆ, ಈ ಸ್ಮಾರ್ಟ್‌ಫೋನ್ ಚಟದಿಂದ ಹೊರಬರಲು ಏನು ಮಾಡಬೇಕು ಎಂಬುದನ್ನು ನೋಡೋಣ.

1. ಜಾಗೃತಿ ಮುಖ್ಯ : ನೀವು ಈಗಾಗಲೇ ಸ್ಮಾರ್ಟ್‌ಫೋನ್​ಗೆ ಅಡಿಕ್ಟ್ ಆಗಿದ್ದರೆ, ಅದರ ಹಿಂದಿನ ಕಾರಣಗಳನ್ನು ಮೊದಲು ತಿಳಿದುಕೊಳ್ಳಿ. ನಿಮ್ಮ ಅತಿಯಾದ ಫೋನ್ ಬಳಕೆಯು ನೀವು ಏನು ಮಾಡಬೇಕೆಂಬುದರ ಬಗ್ಗೆ ಹೇಗೆ ಹಸ್ತಕ್ಷೇಪ ಮಾಡುತ್ತದೆ ಎಂಬುದನ್ನು ಪರಿಗಣಿಸಿ. ಫೋನ್ ಬಳಕೆ ಕುಟುಂಬ ಮತ್ತು ಸ್ನೇಹಿತರೊಂದಿಗೆ ನಿಮ್ಮ ಸಂಬಂಧಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಸಹ ನೋಡಿ. ಇದು ನಿಮ್ಮ ಸಮಸ್ಯೆ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಅಗತ್ಯವಿದ್ದರೆ ಬೇರೆಯವರ ಸಹಾಯವನ್ನೂ ತೆಗೆದುಕೊಳ್ಳಿ. ಅದರಲ್ಲಿ ತಪ್ಪೇನಿಲ್ಲ.

2. ಸರಿಯಾದ ಗುರಿಗಳು : ನಿಮ್ಮ ಸ್ಮಾರ್ಟ್‌ಫೋನ್ ಬಳಕೆಯನ್ನು ಕಡಿಮೆ ಮಾಡಲು ಸರಿಯಾದ ಗುರಿಗಳನ್ನು ಹೊಂದಿಸಿ. ನಿಮ್ಮ ಪರದೆಯ ಸಮಯವನ್ನು ಸಾಧ್ಯವಾದಷ್ಟು ಕಡಿಮೆ ಮಾಡಲು ಪ್ರಯತ್ನಿಸಿ. ವಿಶೇಷವಾಗಿ ನೀವು ಏನನ್ನಾದರೂ ಮಾಡುತ್ತಿರುವಾಗ ಫೋನ್ ಅನ್ನು ಮ್ಯೂಟ್‌ನಲ್ಲಿ ಇಡುವುದು ಉತ್ತಮ. ರಾತ್ರಿ ಮಲಗುವ ಮುನ್ನ ಫೋನ್ ಅನ್ನು ಸೈಲೆಂಟ್‌ನಲ್ಲಿ ಇರಿಸಿ.

3. ಮಾನಿಟರಿಂಗ್ ಅಪ್ಲಿಕೇಶನ್‌ಗಳು: ನಾವು ಪ್ರತಿದಿನ ಫೋನ್ ಅನ್ನು ಎಷ್ಟು ಸಮಯವನ್ನು ಬಳಸುತ್ತೇವೆ ಎಂಬುದನ್ನು ಟ್ರ್ಯಾಕ್ ಮಾಡುವ ಅಪ್ಲಿಕೇಶನ್‌ಗಳನ್ನು ನಾವು ಡೌನ್‌ಲೋಡ್ ಮಾಡಬೇಕಾಗುತ್ತದೆ. ಇದಕ್ಕಾಗಿ ಸಾಕಷ್ಟು ಆಪ್‌ಗಳು ಪ್ಲೇಸ್ಟೋರ್‌ನಲ್ಲಿ ಲಭ್ಯವಿದೆ. ಉತ್ತಮ ಅಪ್ಲಿಕೇಶನ್ ಅನ್ನು ಸ್ಥಾಪಿಸಿ ಮತ್ತು ಫೋನ್ ಬಳಕೆಯ ಸಮಯವನ್ನು ಹೊಂದಿಸಿ. ಆ ಸಮಯ ಮುಗಿದ ನಂತರ ನೀವು ಎಚ್ಚರಿಕೆಯನ್ನು ಪಡೆಯುತ್ತೀರಿ. ಇದು ಫೋನ್ ಬಳಕೆಯನ್ನು ತಕ್ಷಣವೇ ನಿಲ್ಲಿಸಲು ನಿಮಗೆ ಸಹಾಯ ಮಾಡುತ್ತದೆ.

4. ಫೋನ್-ಮುಕ್ತ ವಲಯಗಳನ್ನು ರಚಿಸಿ : ಡೈನಿಂಗ್ ಟೇಬಲ್‌ಗಳು, ಮಲಗುವ ಕೋಣೆಗಳನ್ನ ಫೋನ್-ಮುಕ್ತ ವಲಯಗಳನ್ನಾಗಿ ಮಾಡಿ. ಈ ರೀತಿ ನೀವು ನಿಮಗಾಗಿ ಗಡಿಗಳನ್ನು ಹೊಂದಿಸಿ. ಮೊದಮೊದಲು ಸ್ವಲ್ಪ ಕಷ್ಟ ಎನಿಸಿದರೂ ಕ್ರಮೇಣ ಅಭ್ಯಾಸವಾಗಿಬಿಡುತ್ತದೆ.

5. ಸ್ಕ್ರೀನ್-ಫ್ರೀ ಸಮಯವನ್ನು ಹೊಂದಿಸಿ : ಹೆಚ್ಚಿನ ಜನರಿಗೆ ಊಟದ ಸಮಯದಲ್ಲಿ, ಮಲಗುವ ಮುನ್ನ ಫೋನ್ ಬಳಸಬಾರದು ಎಂದು ತಿಳಿದಿದೆ. ಆದರೆ, ಅಂತಹ ಸಮಯದಲ್ಲಿ ಅನೇಕ ಜನರು ತಮ್ಮ ಫೋನ್ ಬಳಸುತ್ತಾರೆ. ಊಟದ ಸಮಯದಲ್ಲಿ ಫೋನ್ ಬಳಸಿದರೆ ನೀವು ತಿನ್ನುವ ಆಹಾರವು ವ್ಯರ್ಥವಾಗುತ್ತದೆ. ಇದಲ್ಲದೇ, ನೀವು ಮಲಗುವಾಗ ನಿಮ್ಮ ಫೋನ್ ಅನ್ನು ನೋಡಿದರೆ, ನೀವು ನಿದ್ರಾಹೀನತೆಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

6. ಅಧಿಸೂಚನೆಗಳನ್ನು ನಿಷ್ಕ್ರಿಯಗೊಳಿಸಿ: ನಿಮ್ಮ ಫೋನ್‌ನಲ್ಲಿ ಅನಗತ್ಯ ಅಧಿಸೂಚನೆಗಳನ್ನು ಆಫ್ ಮಾಡಿ. ಏಕೆಂದರೆ ನೀವು ಫೋನ್ ಬಳಸುವಾಗ ಕೆಲವು ನೋಟಿಫಿಕೇಶನ್ ಬರುತ್ತಲೇ ಇರುತ್ತದೆ. ಆದ್ದರಿಂದ ನಾವು ಆ ಅಧಿಸೂಚನೆಗಳನ್ನು ನೋಡುತ್ತಾ ಸಮಯವನ್ನು ವ್ಯರ್ಥ ಮಾಡುತ್ತಿರುತ್ತೇವೆ. ಅದಕ್ಕಾಗಿಯೇ ಅನಗತ್ಯ ಅಧಿಸೂಚನೆಗಳನ್ನು ನಿಷ್ಕ್ರಿಯಗೊಳಿಸುವುದು ಉತ್ತಮವಾಗಿದೆ.

7. ಪರ್ಯಾಯ ಚಟುವಟಿಕೆಗಳತ್ತ ಗಮನಹರಿಸಿ : ನೀವು ಸ್ಮಾರ್ಟ್‌ಫೋನ್‌ಗಳ ಬದಲಿಗೆ ಪರ್ಯಾಯಗಳತ್ತ ಗಮನ ಹರಿಸಬೇಕು. ನೀವು ಓದುವುದು, ಬರೆಯುವುದು, ವ್ಯಾಯಾಮ ಮಾಡುವುದು, ಆಟಗಳನ್ನು ಆಡುವುದು ಮತ್ತು ಸ್ನೇಹಿತರೊಂದಿಗೆ ಮೋಜು ಮಾಡುವಂತಹ ಕೆಲಸಗಳನ್ನು ಮಾಡಬೇಕು. ಹೀಗೆ ಮಾಡಿದರೆ ಫೋನ್ ಚಟದಿಂದ ಕ್ರಮೇಣ ಮುಕ್ತಿ ಸಿಗುತ್ತದೆ.

8. ಮೈಂಡ್‌ಫುಲ್‌ನೆಸ್ ಅನ್ನು ಅಭ್ಯಾಸ ಮಾಡಿ: ನಿಮ್ಮ ಮನಸ್ಸನ್ನು ಶಾಂತಗೊಳಿಸಲು, ಧ್ಯಾನ ಮತ್ತು ಯೋಗದಂತಹ ಕೆಲಸಗಳನ್ನು ಮಾಡಿ. ಇದನ್ನು ಪ್ರತಿದಿನ ಮಾಡುವುದರಿಂದ ನಿಮ್ಮ ಆಲೋಚನೆ ಮತ್ತು ಕಾರ್ಯಕ್ಷಮತೆ ಸುಧಾರಿಸುತ್ತದೆ. ಇದರೊಂದಿಗೆ, ನೀವು ಕ್ರಮೇಣ ಫೋನ್‌ನಿಂದ ದೂರ ಸರಿಯುತ್ತೀರಿ.

9. ಸಹಾಯ ಪಡೆಯಿರಿ : ಸ್ಮಾರ್ಟ್‌ಫೋನ್ ಚಟದಿಂದ ಹೊರಬರಲು, ನಿಮ್ಮ ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಸಹಾಯವನ್ನು ತೆಗೆದುಕೊಳ್ಳುವುದು ಉತ್ತಮ. ಈ ಬಗ್ಗೆ ಆಡಂಬರ ಬೇಡ. ಅಗತ್ಯವಿದ್ದರೆ ಮನೋವೈದ್ಯರನ್ನು ಸಹ ಸಂಪರ್ಕಿಸಿ.

10. ವಾಸ್ತವಾಂಶಗಳ ಬಗ್ಗೆ ಎಚ್ಚರವಿರಲಿ: ಸ್ಮಾರ್ಟ್ ಫೋನ್​ಗಳಲ್ಲಿ ನಾವು ಬಹಳಷ್ಟು ಅನುಪಯುಕ್ತ ವಿಷಯಗಳನ್ನು ಓದುತ್ತೇವೆ ಅಥವಾ ನೋಡುತ್ತೇವೆ. ಅದಕ್ಕಾಗಿಯೇ ಅಂತಹ ವಿಷಯಗಳಿಂದ ಹೊರಬರಲು, ನೀವು ಸತ್ಯಗಳನ್ನು ತಿಳಿದಿರಬೇಕು. ಅದು ಅಷ್ಟು ಸುಲಭವಲ್ಲದಿರಬಹುದು. ಆದರೆ, ನೀವು ನಿಮ್ಮ ಮನಸ್ಸನ್ನು ಕೇಂದ್ರಿಕರಿಸಿದರೆ ಖಂಡಿತವಾಗಿಯೂ ಅದರಿಂದ ಹೊರಬರಲು ಸಾಧ್ಯವಿದೆ. ಹೀಗೆ ಮಾಡುವುದರಿಂದ ಫೋನ್ ಚಟದಿಂದ ಸಂಪೂರ್ಣ ಮುಕ್ತಿ ಪಡೆಯಬಹುದು.

ಇದನ್ನೂ ಓದಿ : 'ಓದಿದ್ದು ನೆನಪಾಗ್ತಿಲ್ಲ ಮಮ್ಮಿ': ಮಕ್ಕಳಿಗೆ ಈ ಆಹಾರ ನೀಡಿದರೆ ಸೂಪರ್ ಮೆಮೊರಿ ಪವರ್! - Foods For Kids Memory

ETV Bharat Logo

Copyright © 2024 Ushodaya Enterprises Pvt. Ltd., All Rights Reserved.