ಹೈದರಾಬಾದ್: ಬಹುತೇಕರ ನೆಚ್ಚಿನ ತಿಂಡಿಗಳಲ್ಲಿ ಇಡ್ಲಿಯೂ ಒಂದು. ಬೆಳಗಿನ ಹೊತ್ತು ಹಿತಕರ ಮತ್ತು ಹಗುರವಾಗಿ ಹೊಟ್ಟೆ ತುಂಬಿಸುವ ಇಡ್ಲಿ ಆರೋಗ್ಯಕ್ಕೂ ಉತ್ತಮ. ಆದರೆ, ಈ ಇಡ್ಲಿಯನ್ನು ತಯಾರಿಸಲು ಹಿಂದಿನ ದಿನವೇ ಅಕ್ಕಿ, ಉದ್ದು ನೆನೆಸಿ, ರುಬ್ಬಿ ಅದನ್ನು ಹುದುಗು ಬರುವವರೆಗೂ ಕಾಯಬೇಕು. ಆದರೆ, ಇದೀಗ ಇಷ್ಟೆಲ್ಲ ಶ್ರಮ ಪಡುವ ಅಗತ್ಯವೇ ಬೀಳುವುದಿಲ್ಲ. ತಕ್ಷಣಕ್ಕೆ ನಿಮಿಷದಲ್ಲೇ ಮನೆಯಲ್ಲಿ ರುಚಿಕರ ಮೃದುವಾದ ಇಡ್ಲಿಯನ್ನು ದಿಢೀರ್ ಎಂದು ತಯಾರಿಸಬಹುದಾಗಿದೆ. ಹೋಟೆಲ್ನಲ್ಲಿ ಸಿಗುವ ಇಡ್ಲಿಯನ್ನು ಮನೆಯಲ್ಲಿ ತಯಾರಿಸಿ ಮನೆಯಲ್ಲೇ ಸವಿಯಬಹುದು.
ಮೃದುವಾದ ಇಡ್ಲಿ ತಯಾರಿಸಲು ಬೇಕಾಗುವ ಸಾಮಗ್ರಿಗಳು
- ಬಾಂಬೆ ರವಾ ಒಂದು ಕಪ್
- ಮೊಸರು- ಒಂದು ಕಪ್
- ಉಪ್ಪು - ರುಚಿಗೆ
- ಗಟ್ಟಿ ಅವಲಕ್ಕಿ- ಒಂದು ಕಪ್
- ಬೇಕಿಂಗ್ ಸೋಡಾ - ಅರ್ಧ ಟೀ ಸ್ಪೂನ್
- ನೀರು - ಅಗತ್ಯಕ್ಕೆ ತಕ್ಕಷ್ಟು
ಹೋಟೆಲ್ನಲ್ಲಿ ಸಿಗುವಂತಾ ಇಡ್ಲಿ ಮನೆಯಲ್ಲೇ ಮಾಡುವ ವಿಧಾನ
- ಮೊದಲಿಗೆ ಗಟ್ಟಿ ಅವಲಕ್ಕಿಯನ್ನು ಅರ್ಧಗಂಟೆಗಳ ಕಾಲ ನೆನೆ ಹಾಕಿ. ಬಳಿಕ ಅದನ್ನು ಚೆನ್ನಾಗಿ ಹಿಂಡಿ ಬಳಿಕ ಅದನ್ನು ಬೇರೊಂದು ಪಾತ್ರೆಗೆ ಹಾಕಿ
- ಬಳಿಕ ಮತ್ತೊಂದು ಬಟ್ಟಲಿಲ್ಲಿ ಮೊಸರು ತೆಗೆದುಕೊಂಡು ಅದಕ್ಕೆ ಅಡುಗೆ ಸೋಡಾ ಹಾಕಿ ಸರಿಯಾಗಿ ಮಿಶ್ರಣ ಮಾಡಿ. ಆ ಬಳಿಕ ಅದಕ್ಕೆ ಬಾಂಬೆ ರವೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಅರ್ಧಗಂಟೆಗಳ ಕಾಲ ಎತ್ತಿಡಿ.
- ಬಳಿಕ ನೆನೆಸಿ ತೆಗೆದಿಟ್ಟ ಅವಲಕ್ಕಿಯನ್ನು ಮಿಕ್ಸಿಜಾರ್ನಲ್ಲಿ ಹಾಕಿ ಸರಿಯಾಗಿ ಅಥವಾ ಹದವಾಗಿ ರುಬ್ಬಿಟ್ಟುಕೊಳ್ಳಿ. ಹದಕ್ಕೆ ಬೇಕಾದಂತೆ ನೀರಿನ ಮಿಶ್ರಣ ಮಾಡಿ.
- ಬಳಿಕ ಇದಕ್ಕೆ ಬಾಂಬೆ ರವೆ ಹಾಗೂ ಮೊಸರಿನ ಮಿಶ್ರಣವನ್ನು ಸೇರಿಸಿ, ನೀರು ಬೆರಸಿ, ಇಡ್ಲಿ ಹಿಟ್ಟಿನ ಹದಕ್ಕೆ ತಯಾರಿಸಿಕೊಳ್ಳಿ. ಬಳಿಕ ರುಚಿಗೆ ಬೇಕಾದಷ್ಟು ಉಪ್ಪನ್ನು ಹಾಕಿ.
- ತದನಂತರ ಇಡ್ಲಿ ಪಾತ್ರೆಯನ್ನು ಇಟ್ಟು ಅದಕ್ಕೆ ನೀರು ಹಾಕಿ ಬಿಸಿ ಮಾಡಿ. ಬಳಿಕ ಇಡ್ಲಿ ತಟ್ಟೆಗಳಿಗೆ ಸ್ವಲ್ಪ ಎಣ್ಣೆ ಸವರಿ, ಈ ಇಡ್ಲಿ ಮಿಶ್ರಣವನ್ನು ಹಾಕಿ, 15 ನಿಮಿಷ ಬೆರಸಿ ಬೇಯಿಸಿದರೆ, ಮೃದುವಾದ ಇಡ್ಲಿ ತಯಾರಿ ಆಗುತ್ತದೆ.
- ಈ ಇಡ್ಲಿಯನ್ನು ರುಚಿಯಾದ ಚಟ್ನಿ,ಯೊಂದಿಗೆ ಆಹ್ಲಾದಕರವಾಗಿ ಸವಿಯಬಹುದಾಗಿದೆ. ಹೋಟೆಲ್ಗೆ ಹೋಗಿ ಕಾದು ತಿನ್ನುವ ಬದಲು ಇನ್ಸ್ಟಂಟ್ ಆಗಿ ಅರ್ಧಗಂಟೆಯಲ್ಲೇ ಮನೆಯಲ್ಲಿ ಮಾಡಿ ಬೇಕಾದಾಗ ಇಡ್ಲಿ ರುಚಿಯನ್ನು ಸವಿಯಬಹುದು. ಮತ್ತೇಕ ತಡ ಮಾಡುವ ವಿಧಾನ ಗೊತ್ತಾಯ್ತಲ್ಲ ಟ್ರೈ ಮಾಡಿ ನೋಡಿ.
ಇದನ್ನೂ ಓದಿ: ಹಾಗಲಕಾಯಿ ತಿನ್ನೋದರಿಂದ ಇವೆ ಹಲವು ಪ್ರಯೋಜನ, ನಿತ್ಯ ಉಪಯೋಗಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ: ತಜ್ಞರು ಹೀಗೆ ಹೇಳಿದ್ದೇಕೆ?