ಹೈದರಾಬಾದ್: ಇಡ್ಲಿ, ದೋಸೆ ಇರಲಿ, ಚಿತ್ನಾನ್ನವೇ ಆಗಿರಲಿ.. ಅಲ್ಲಿ ಶೇಂಗಾ ಚಟ್ನಿ ಒಂಚೂರು ಇದ್ದರೆ ತಿನ್ನುವಾಗ ಅದರ ರುಚಿಯೇ ಅದ್ಭುತವಾಗಿರುತ್ತೆ. ಆದರೆ, ಅನೇಕ ಬಾರಿ ಮನೆಯಲ್ಲಿ ಮಾಡಿದ ಈ ಶೇಂಗಾ ಚಟ್ನಿ ಹೋಟೆಲ್ ರೀತಿಯ ರುಚಿಯನ್ನು ನೀಡುವುದಿಲ್ಲ. ಅಯ್ಯೋ ಎಲ್ಲಾ, ಸರಿಯಾಗಿ ಮಾಡಿದೆ ಎಂದರೂ ರುಚಿ ಸಿಗದಿರಲು ಕಾರಣ ಅದನ್ನು ತಯಾರಿಸುವ ವಿಧಾನದಲ್ಲಿ ಮಾಡುವ ಸಣ್ಣ ತಪ್ಪುಗಳು. ಇದೇ ರೀತಿ ಪರಿಸ್ಥಿತಿ ನೀವು ಕೂಡ ಅನುಭವಿಸುತ್ತಿದ್ದರೆ, ಈ ಕ್ರಮ ಅನುಸರಿಸಿ, ಆಗ ನಿಮ್ಮಿಷ್ಟವಾದ ಚಟ್ನಿ ರುಚಿಯ ಕೆಡಲು ಸಾಧ್ಯವಿಲ್ಲ. ಹಾಗಾದ್ರೆ ಬಾಯಿ ಚಪ್ಪರಿಸುವ ಕಡಲೆ ಚಟ್ನಿ ಮಾಡುವ ವಿಧಾನದ ಬಗ್ಗೆ ನಾವ್ ತಿಳಿಸುತ್ತೇವೆ.
ಬೇಕಾಗುವ ಸಾಮಗ್ರಿ
- ಶೇಂಗಾ ಬೀಜ- ಒಂದು ಕಪ್
- ಈರುಳ್ಳಿ - ಒಂದು
- ಎಣ್ಣೆ- ಸ್ವಲ್ಪ
- ಒಣ ಮೆಣಸಿನಕಾಯಿ - 7
- ಶುಂಠಿ ಪುಡಿ- ಅರ್ಧ ಟೀ ಸ್ಪೂನ್
- ಟೊಮೆಟೊ - ಕಾಲು(1/4) ಕಪ್
- ನೀರು- ಅಗತ್ಯಕ್ಕೆ ಅನುಗುಣವಾಗಿ
- ಬೆಳ್ಳುಳ್ಳಿ ಎಸಳು- 7
- ಉಪ್ಪು- ರುಚಿಗೆ ತಕ್ಕಷ್ಟು
- ಜೀರಿಗೆ- ಅರ್ಧ ಟೀ ಸ್ಪೂನ್
ಒಗ್ಗರಣೆಗೆ
- ಸಾಸಿವೆ, ಜೀರಿಗೆ - ಕಾಲು(1/4) ಟೀ ಚಮಚ
- ಕಡಲೆಬೇಳೆ- ಅರ್ಧ ಟೀ ಚಮಚ
- ಎಣ್ಣೆ- ಒಂದು ಟೀ ಚಮಚ
- ಒಣ ಮೆಣಸು - 1
- ಕರಿಬೇವು - ಒಗ್ಗರಣೆಗೆ
ಮಾಡುವ ವಿಧಾನ:
- ಮೊದಲಿಗೆ ಸಣ್ಣ ಉರಿಯಲ್ಲಿ ಬಾಣಲೆಯಲ್ಲಿ ಶೇಂಗಾ ಬೀಜವನ್ನು ಹಾಕಿ ಹುರಿಯಿರಿ. ಚೆನ್ನಾಗಿ ಹುರಿದ ಬಳಿಕ ತಣ್ಣಗಾಗಲು ಬಿಡಿ
- ಇದೀಗ ಮತ್ತೊಂದು ಬಾಣಲೆಗೆ ಅರ್ಧ ಟೀ ಚಮಚ ಎಣ್ಣೆ ಹಾಕಿ, ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ
- ಇದಕ್ಕೆ ಒಣ ಮೆಣಸಿನಕಾಯಿ, ಹೆಚ್ಚಿದ ಟೊಮೆಟೊ, ಶುಂಠಿ ಪುಡಿ, ಜೀರಿಗೆ, ಬೆಳ್ಳುಳ್ಳಿ ಎಸಳು ಹಾಕಿ ಹುರಿಯಿರಿ. ಟೊಮೆಟೊ ಚೆನ್ನಾಗಿ ಮೃದುವಾಗುವವರೆಗೆ ಹುರಿದು, ಅದನ್ನು ತಣ್ಣಗೆ ಆಗಲು ಬಿಡಿ.
- ಬಳಿಕ ಮಿಕ್ಸಿ ಜಾರಿಗೆ ಹುರಿದ ಸಿಪ್ಪೆ ತೆಗೆದ ಕಡಲೇಬೀಜ, ಟೊಮೆಟೊ, ಈರುಳ್ಳಿ ಸೇರಿಸಿ ಹುರಿದ ಪದಾರ್ಥವನ್ನು ಹಾಕಿ. ಬಳಿಕ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ರುಬ್ಬಿ
- ಇದೀಗ ಬಾಣಲೆಗೆ ಎಣ್ಣೆ ಹಾಕಿ. ಸಾಸಿವೆ, ಕಡಲೆಬೇಳೆ, ಜೀರಿಗೆ, ಕರಿಬೇವು ಹಾಕಿ ಒಗ್ಗರಣೆ ನೀಡಿ. ಎರಡು ನಿಮಿಷದ ಬಳಿಕ ರುಬ್ಬಿದ ಚಟ್ನಿಯನ್ನು ಹಾಕಿ ಮಿಶ್ರಣ ಮಾಡಿ.
ಈ ರೀತಿ ಮಾಡಿದ್ದಲ್ಲಿ ಹೋಟೆಲ್ ರೀತಿಯಲ್ಲಿ ರುಚಿಕರವಾದ ಶೇಂಗಾ ಚಟ್ನಿ ಸಿದ್ಧವಾಗುತ್ತದೆ.
ಈ ಚಟ್ನಿಯನ್ನು ನೀವು ಪೂರಿ, ಇಡ್ಲಿ, ವಡಾ ಸೇರಿದಂತೆ ನಿಮ್ಮಿಷ್ಟದ ತಿಂಡಿ ಜೊತೆಗೆ ಸೇವಿಸಬಹುದು.
ಇದನ್ನೂ ಓದಿ: ಆಹಾರ ಪದ್ಧತಿ ಮತ್ತು ಸಾವಿನ ಅಪಾಯ: ಯಾವುದನ್ನು ತಿನ್ನಬೇಕು, ಯಾವುದನ್ನು ತಿನ್ನಬಾರದು?- ಹೀಗಿದೆ ಅಧ್ಯಯನ -