ETV Bharat / health

ನೀಳ ಕಾಲಿನ ಸೌಂದರ್ಯಕ್ಕೆ ಅಡ್ಡಿಯಾಗುತ್ತಿದ್ಯಾ ತೊಡೆಯ ಕೊಬ್ಬು; ಇಲ್ಲಿದೆ ಸರಳ ಪರಿಹಾರ - how to cut Thigh Fat - HOW TO CUT THIGH FAT

ತೊಡೆಯಲ್ಲಿ ಶೇಖರವಾಗುವ ಹೆಚ್ಚುವರಿ ಕೊಬ್ಬು ದೇಹದ ಸೌಂದರ್ಯಕ್ಕೆ ತೊಡಕು ಆಗಬಹುದು. ಅದಕ್ಕೆ ಜೀವನಶೈಲಿ ಬದಲಾವಣೆ ಅವಶ್ಯ.

how-to-cut-thigh-fat-with-exercises-other-method
ತೊಡೆಯ ಕೊಬ್ಬು (File Photo)
author img

By ETV Bharat Karnataka Team

Published : May 16, 2024, 4:17 PM IST

ಹೈದರಾಬಾದ್​: ನೀಳ ಕಾಲಿನ ದೇಹ ಪಡೆಯುವುದು ಅನೇಕ ಮಂದಿಯ ಆಶಯ. ಆದರೆ, ತೊಡೆಯಲ್ಲಿ ಶೇಖರಣೆಗೊಳ್ಳುವ ಕೊಬ್ಬು ಇದಕ್ಕೆ ವಿಘ್ನವಾಗುತ್ತದೆ. ಕೆಲವರಿಗೆ ತೊಡೆಯಲ್ಲಿ ಸಂಗ್ರಹವಾಗುವ ಹೆಚ್ಚುವರಿ ಕೊಬ್ಬು ಅನೇಕ ಬಾರಿ ದೇಹದ ಆಕಾರದ ಕುರಿತು ಕಿರಿಕಿರಿ ಮೂಡಿಸುತ್ತದೆ. ಈ ಬಗ್ಗೆ ಚಿಂತೆ ಪಡುವ ಅಗತ್ಯವಿಲ್ಲ. ಜೀವನಶೈಲಿ ಬದಲಾವಣೆಯೊಂದಿಗೆ ಈ ಕೊಬ್ಬನ್ನು ಕರಗಿಸಬಹುದಾಗಿದೆ.

ಸೈಕಲ್​ ತುಳಿಯಿರಿ: ತೊಡೆಯಲ್ಲಿ ಶೇಖರಣೆಗೊಳ್ಳುವ ಕೊಬ್ಬಿಗೆ ಅನೇಕ ಬಾರಿ ಕಾರಣ ಸುಲಭ ಸಾರಿಗೆ ವ್ಯವಸ್ಥೆ. ಈ ಹಿನ್ನೆಲೆ ಸೈಕಲ್​ ತುಳಿಯುವ ಅಭ್ಯಾಸ ರೂಢಿಸಿಕೊಳ್ಳುವುದು ಅವಶ್ಯ. ಇದರಿಂದ ಕ್ಯಾಲೋರಿ ನಷ್ಟವಾಗುತ್ತದೆ. ಸಣ್ಣ ದೂರದ ಪ್ರಯಾಣಕ್ಕೆ ಸೈಕಲ್​ಗಳನ್ನು ಆರಿಸಿಕೊಳ್ಳುವುದರಿಂದ ಪರಿಸರ ಸ್ನೇಹಿ ಜೊತೆಗೆ ತೊಡೆಯ ಕೊಬ್ಬು ಕರಗಿಸಬಹುದು.

ಹೈಡ್ರೇಟ್​ ಆಗಿರಿ: ದೇಹದ ಯಾವತ್ತೂ ಉತ್ತಮವಾಗಿದ್ದು ಎಂದರೆ ಅದು ನೀರು. ನಿರ್ಜಲೀಕರಣವೂ ಅನೇಕ ಬಾರಿ ಚಯಾಪಚಯನವನ್ನು ಕಡಿಮೆ ಮಾಡುತ್ತದೆ. ಇದು ಕೊಬ್ಬಿನ ನಷ್ಟವನ್ನು ತಡೆಯುತ್ತದೆ. ಈ ಹಿನ್ನೆಲೆ ದಿನದಲ್ಲಿ ಕನಿಷ್ಠ ಎರಡರಿಂದ ಮೂರು ಲೀಟರ್​​ ನೀರು ಕುಡಿಯಬೇಕು. ಇದರಿಂದ ಚಯಾಪಚಯವೂ ಕೊಬ್ಬು ನಿರ್ವಹಣೆಗೆ ಸಹಾಯ ಮಾಡುತ್ತದೆ.

ಮೆಟ್ಟಿಲು ಬಳಕೆ ಮಾಡಿ: ಲಿಫ್ಟ್​, ಎಲಿವೇಟರ್​​ಗಳು ಅನುಕೂಲಕರವಾಗಿದ್ದರೂ, ಮೆಟ್ಟಿಲು ಹತ್ತುವುದರಿಂದ ಸಣ್ಣ ವರ್ಕ್​ಔಟ್​ ಆಗುತ್ತದೆ. ಪ್ರತಿ ಮೆಟ್ಟಿಲು ಹತ್ತಿದಾಗ ಅದು ತೊಡೆಯ ಸ್ನಾಯುವಿನ ಮೇಲೆ ಪ್ರಭಾವ ಬೀರಿ ನಿಧಾನವಾಗಿ ಕೊಬ್ಬು ಕರಗಿಸಲು ಸಹಾಯ ಮಾಡುತ್ತದೆ.

ಪೋಷಕಾಂಶ ಸಮೃದ್ಧ, ಕಡಿಮೆ ಕ್ಯಾಲೋರಿ ಆಹಾರ: ಪೋಷಕಾಂಶಗಳಿಂದ ಕೂಡಿದ ಕಡಿಮೆ ಕ್ಯಾಲೋರಿ ಆಹಾರ ಸೇವನೆಗೆ ಒತ್ತು ನೀಡಿ. ಹಣ್ಣು, ತರಕಾರಿ, ತೆಳು ಪ್ರೊಟೀನ್​ ಮತ್ತು ಧಾನ್ಯಗಳಿಂದ ಕೂಡಿದ ಸಮತೋಲಿತ ಆಹಾರ ಸೇವಿಸಿ. ಇದು ನಿಮಗೆ ತೂಕ ನಷ್ಟ ಮಾತ್ರವಲ್ಲ, ಒಟ್ಟಾರೆ ಯೋಗಕ್ಷೇಮ ಸುಧಾರಣೆಗೆ ಸಹಾಯ ಮಾಡುತ್ತದೆ.

ಸ್ಕ್ವಾಟ್​​: ದೈನಂದಿನ ಚಟುವಟಿಕೆಯಲ್ಲಿ ವಾಲ್​ ಸಿಟ್ಸ್​ ಮತ್ತು ಸ್ಕ್ವಾಟ್​​ಗಳು ಕೂಡ ತೊಡೆ ಸ್ನಾಯು ಕರಗಿಸಲು ಸಹಾಯ ಮಾಡುತ್ತದೆ. ನಿರಂತರ ವ್ಯಾಯಾಮವು ಕೆಲವೇ ದಿನಗಳಲ್ಲಿ ಇದರ ಫಲಿತಾಂಶವನ್ನು ನೀಡುತ್ತದೆ.

ವಾಕಿಂಗ್​ ಮತ್ತು ಜಾಗಿಂಗ್​​ ಶಕ್ತಿ: ಬಿರುಸಿನ ನಡುಗೆ ಅಥವಾ ಜಾಗಿಂಗ್​ ಕೂಡ ಹೃದಯದ ಆರೋಗ್ಯ ಕಾಪಾಡುವ ಜೊತೆಗೆ ಕ್ಯಾಲೋರಿ ನಿರ್ವಹಣೆಗೆ ಸಹಾಯ ಮಾಡುತ್ತದೆ. ಜೊತೆಗೆ ಇದು ತೊಡೆಯ ಕೊಬ್ಬು ಕರಗಿಸಲು ಸಹಾಯವಾಗುತ್ತದೆ. ವಿಶೇಷವಾಗಿ ಬೆಳಗಿನ ನಡಿಗೆ ನಿಮ್ಮ ದಿನವನ್ನು ಉತ್ಸಾಹಗೊಳಿಸಲು ಸಹಾಯ ಮಾಡುತ್ತದೆ.

ಸಾಮಾನ್ಯ ಕಾಲಿನ ವ್ಯಾಯಾಮ: ತೊಡೆಯಲ್ಲಿರುವ ಸ್ನಾಯುವನ್ನು ಬಲಗೊಳಿಸಲು ಸರಳವಾದ ಕಾಲಿನ ವ್ಯಾಯಾಮ ಮಾಡುವುದು ಅಗತ್ಯ. ನಿಧಾನ ಮತ್ತು ನಿಯಂತ್ರಿತ ಚಲನೆಯು ಯಾವುದೇ ಗಾಯದ ಅಪಾಯವಿಲ್ಲದೆ ಹೆಚ್ಚು ಪರಿಣಾಮಕಾರಿಯಾಗಿದೆ.

ಆಟದಂತಹ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ: ಬಾಸ್ಕೆಟ್​ ಬಾಲ್​ ಮತ್ತು ಫುಟ್​​ಬಾಲ್​ನಂತಹ ಆಟವು ನಿಮ್ಮ ಮನಸನ್ನು ಮುದಗೊಳಿಸುವ ಜೊತೆಗೆ ನಿಮ್ಮ ಮನಸ್ಥಿತಿ ಸುಧಾರಣೆ ಹಾಗೂ ದೇಹದ ಕೊಬ್ಬು ಕರಗಿಸುವಲ್ಲಿ ಸಹಾಯ ಮಾಡುತ್ತದೆ.

ಮೀನಿನಂತೆ ಈಜಿ: ತೊಡೆಯ ಬೊಜ್ಜು ಕರಗಲು ಇರುವ ಮತ್ತೊಂದು ಉತ್ತಮ ವ್ಯಾಯಾಮ ಅಂದರೆ ಅದು ಈಜು. ಈಜು ಹೆಚ್ಚುವರಿ ಕೊಬ್ಬು ಕರಗಿಸುವ ಜೊತೆಗೆ ಸ್ನಾಯುಗಳ ಆರೋಗ್ಯ ಸುಧಾರಣೆ ಮಾಡುತ್ತದೆ. ಹಾಗೇ ಹೃದಯರಕ್ತನಾಳದ ಆರೋಗ್ಯ ಸುಧಾರಣೆ ಮಾಡುತ್ತದೆ. ನಿಯಮಿತವಾದ ಈಜಿನಿಂದ ಪಾರ್ಶ್ವವಾಯು ಅಪಾಯ ತಪ್ಪಿಸಬಹುದು.

2001ರಲ್ಲಿ ಸ್ಟ್ರೆಂತ್​​ ಅಂಡ್​ ಕಂಡಿಷನಿಂಗ್​ ರಿಸರ್ಚ್​​ ಜರ್ನಲ್​​ನಲ್ಲಿ ಪ್ರಕಟವಾದ ಮಾಹಿತಿ ಜೊತೆಗೆ ಸಂಶೋಧಕರು ನಡೆಸಿದ ಅಧ್ಯಯನದಲ್ಲೂ ಕೂಡ ಈಜು ತೊಡೆಯ ಹೆಚ್ಚುವರಿ ಕೊಬ್ಬು ಕರಗಿಸಲು ಸಹಾಯ ಮಾಡುತ್ತದೆ ಎಂಬುದು ತಿಳಿದು ಬಂದಿದೆ. ಈ ಕುರಿತು 12 ವಾರಗಳ ಅಧ್ಯಯನವನ್ನು ಅಮೆರಿಕದ ಟೆಕ್ಸಾಸ್​ ಎ ಅಂಡ್​ ಎಂ ಯುನಿವರ್ಸಿಟಿ ಸಂಶೋಧಕರು ನಡೆಸಿದ್ದಾರೆ. ಈಜು ಅಧಿಕ ತೂಕ ಹೊಂದಿರುವ ಮಹಿಳೆಯರ ಕೊಬ್ಬು ಕರಗಿಸಲು ಪರಿಣಾಮಕಾರಿಯಾಗಿದೆ.

ತೊಡೆಯ ಕೊಬ್ಬನ್ನು ಒಂದೇ ದಿನದಲ್ಲಿ ಕರಗಿಸುತ್ತೇವೆ ಎಂಬುದು ಸಾಧ್ಯವಿಲ್ಲ. ಇದಕ್ಕೆ ನಿರಂತರ, ಪ್ರೇರಣೆದಾಯಕ, ಆರೋಗ್ಯಯುತ ಪ್ರಯಾಣ ಅಗತ್ಯವಾಗಿದೆ.

ಪ್ರಮುಖ ಸೂಚನೆ: ಮೇಲಿನ ಎಲ್ಲ ಆರೋಗ್ಯ ಮಾಹಿತಿಗಳನ್ನು ಪಾಲಿಸುವ ಮುನ್ನ ವೈದ್ಯರು, ಆರೋಗ್ಯ ವೃತ್ತಿಪರರ ಸಲಹೆಯನ್ನು ಪಡೆಯುವುದು ಅಗತ್ಯ. ಯಾವುದೇ ಸಲಹೆ ಸೂಚನೆಗಳನ್ನು ನಿಮ್ಮ ಕುಟುಂಬದ ವೈದ್ಯರ ಶಿಫಾರಸಿನ ಮೇಲೆ ಪಾಲಿಸಿ.

ಇದನ್ನೂ ಓದಿ: ಬೆಂಬಿಡದೇ ಕಾಡುವ ಬೆನ್ನುನೋವು ನಿವಾರಣೆಗೆ ಮನೆಯಲ್ಲೇ ಮಾಡಿ ಈ ವ್ಯಾಯಾಮ; ನೋವೆಲ್ಲ ಮಂಗಮಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.