ಹೈದರಾಬಾದ್: ಬಾತ್ರೂಂ, ಸಿಂಕ್ಗಳಲ್ಲಿನ ನಲ್ಲಿಗಳು ನೀರಿನ ಶಾಖ ಸೇರಿ ಇನ್ನಿತರ ಕಾರಣದಿಂದ ದಿನ ಕಳೆದಂತೆ ಕಳೆಗುಂದುತ್ತವೆ. ಇವುಗಳನ್ನು ನಿಯಮಿತವಾಗಿ ಶುಚಿ ಮಾಡಿದರೂ, ಅದರ ಹೊಳಪು ಮಾತ್ರ ಮರೀಚಿಕೆಯಾಗುತ್ತದೆ. ಅದರಲ್ಲಿನ ಕಲೆಗಳನ್ನು ಹೋಗಲಾಡಿಸುವುದು ಅನೇಕ ಬಾರಿ ಸವಾಲಾಗುತ್ತದೆ. ಇದಕ್ಕಾಗಿ ಮಾರುಕಟ್ಟೆಯಲ್ಲಿ ಲಭ್ಯವಾಗುವ ಅನೇಕ ಪೌಡರ್, ಕೆಮಿಕಲ್ಸ್ ಹಾಕಿದರೂ ಪ್ರಯೋಜನವಾಗುವುದಿಲ್ಲ. ಇಂತಹ ಸಮಸ್ಯೆಯನ್ನು ನೀವು ಎದುರಿಸುತ್ತಿದ್ದರೆ, ಚಿಂತೆ ಬೇಡ. ಮನೆಯಲ್ಲಿ ಸಿಗುವ ವಸ್ತುಗಳಿಂದಲೇ ಅವುಗಳನ್ನು ಸ್ಟೈನ್ಲೆಸ್ ಸ್ಟೀಲ್ ನಲ್ಲಿಗಳನ್ನು ಮಿರಿ ಮಿರಿ ಮಿನುಗುವಂತೆ ಮಾಡಬಹುದು. ಅದಕ್ಕೆ ಮಾಡಬೇಕಾಗಿರುವುದು ಇಷ್ಟೇ.
ನಿಂಬೆ ಹಣ್ಣಿನ ರಸ: ಸಣ್ಣ ಬಟ್ಟಲಿನಲ್ಲಿ ನಿಂಬೆ ರಸವನ್ನು ತೆಗೆದುಕೊಳ್ಳಿ. ಅದಕ್ಕೆ ಒಂದಷ್ಟು ಸರ್ಫ್ ಪೌಡರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈ ನೀರನ್ನು ಕಳೆಗುಂದಿದ ನಲ್ಲಿಗೆ ಹಾಕಿ ಚೆನ್ನಾಗಿ ಉಚ್ಚಿ, ಐದು ನಿಮಿಷ ಬಿಟ್ಟು ಅದನ್ನು ಶುಚಿ ಮಾಡಿ.
ಟೂತ್ಪೇಸ್ಟ್: ಹಲ್ಲು ಮಿಂಚುವಂತೆ ಮಾಡುವ ಟೂತ್ಪೇಸ್ಟ್ಗಳು ಅನೇಕ ಬಾರಿ ನಲ್ಲಿಗಳ ಹೊಳಪಿಗೂ ಸಹಾಯ ಮಾಡುತ್ತವೆ. ಹಳೆಯ ಬ್ರಶ್ಗೆ ಟೂತ್ಪೇಸ್ಟ್ ಹಾಕಿ ಅದನ್ನು ಕೊಳೆಯಾದ ನಲ್ಲಿ ಮೇಲೆ ಚೆನ್ನಾಗಿ ಉಚ್ಚಿ. ಇದಾದ ಹತ್ತು ನಿಮಿಷ ಹಾಗೇ ಬಿಟ್ಟು ನೀರಿನಿಂದ ತೊಳೆಯಿರಿ.
ವಿನೆಗರ್: ವಿನೆಗರ್ ಅನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಂಡು ಅದಕ್ಕೆ ಒಂದು ಸ್ವಲ್ಪ ನೀರು ಬೆರಸಿ. ಬಳಿಕ ಅದನ್ನು ಸ್ಪಂಜ್ ಅಥವಾ ಸ್ಕ್ರಬರ್ನಿಂದ ಐದು ನಿಮಿಷ ಕಾಲ ತಿಕ್ಕಿ. ಹಾಗೇ ಬಿಡಿ. ಐದು ನಿಮಿಷದ ಬಳಿಕ ಅದನ್ನು ತೊಳೆಯಿರಿ. ಈ ರೀತಿ ವಾರಕ್ಕೆ ಒಮ್ಮೆ ಮಾಡುವುದರಿಂದ ನಲ್ಲಿ ಹೊಸ ರೂಪಾಂತರ ಪಡೆಯಲಿದೆ.
ಬೇಕಿಂಗ್ ಸೋಡಾ, ನಿಂಬೆ ರಸ: ಮೊದಲಿಗೆ ಎರಡು ಸ್ಪೂನ್ ಬೇಕಿಂಗ್ ಸೋಡಾವನ್ನು ಒಂದು ಬಟ್ಟಲಿಗೆ ಹಾಕಿ, ಬಳಿಕ ಅದಕ್ಕೆ ನಿಂಬೆ ರಸ ಬೆರೆಸಿ, ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಅದನ್ನು ನಲ್ಲಿಗೆ ಹಾಕಿ ನಿಂಬೆ ಹಣ್ಣಿನಿಂದ ತಿಕ್ಕಿ. ಇದರಿಂದ ಶೀಘ್ರದಲ್ಲೇ ಅದರ ಹೊಳಪು ಪಡೆಯಬಹುದು.
ಮನೆಯಲ್ಲಿ ಸಿಗುವ ನೈಸರ್ಗಿಕ ಪದಾರ್ಥಗಳಲ್ಲಿನ ರಾಸಾಯನಿಕಗಳಿಂದಲೇ ಸ್ಟೇನ್ಲೆಸ್ ಸ್ಟೀಲ್ ನಲ್ಲಿಗಳನ್ನು ಪರಿಣಾಮಕಾರಿಯಾಗಿ ಶುಚಿಗೊಳಿಸುವಲ್ಲಿ ಸಹಾಯ ಮಾಡುವ ಜೊತೆಗೆ ಅಗ್ಗದ ದರದಲ್ಲಿ ಇವು ನಿಮ್ಮ ಸಮಸ್ಯೆಗಳಿಗೆ ಮುಕ್ತಿ ನೀಡುತ್ತದೆ. ಇದರಿಂದ ನಿಮ್ಮ ಮನೆಯ ಸಿಂಕ್, ಬಾತ್ರೂಂ ನಲ್ಲಿಗಳು ಪಳ ಪಳ ಹೊಳೆಯುವಂತೆ ಆಗುತ್ತದೆ.
ಇದನ್ನೂ ಓದಿ: ನಾನ್ವೆಜ್ಗೆ ಪೈಪೋಟಿ ನೀಡುವ ಸೋಯಾ ಚಂಕ್ಸ್ ಮಸಾಲಾ ಕರಿ: ಹೀಗೆ ಮಾಡಿದರೆ ಮಟನ್ಗಿಂತಲೂ ಟೇಸ್ಟ್ ಜಾಸ್ತಿ!