ETV Bharat / health

ಯಾವ ಸಮಯದಲ್ಲಿ ನೀರು ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು?: ಇಲ್ಲಿದೆ ನೋಡಿ ಮಹತ್ವದ ಮಾಹಿತಿ - Best Time For Drinking Water - BEST TIME FOR DRINKING WATER

Health Tips: ಯಾವ ಸಮಯದಲ್ಲಿ ನೀರು ಕುಡಿಯಬೇಕು? ಸರಿಯಾದ ಸಮಯಕ್ಕೆ ನೀರು ಕುಡಿಯುವುದರಿಂದ ಆಗುವ ಲಾಭಗಳೇನು? ಎಷ್ಟು ಪ್ರಮಾಣದಲ್ಲಿ ನೀರು ಕುಡಿದರೆ ದೇಹಕ್ಕೆ ಒಳ್ಳೆಯದು? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುವವರು ಈ ಸ್ಟೋರಿಯನ್ನು ಸಂಪೂರ್ಣವಾಗಿ ಓದಿ.

BEST TIME FOR DRINKING WATER  DRINK WATER ON RIGHT TIME  HEALTH TIPS  WATER FOR HEALTH
ಉತ್ತಮ ಆರೋಗ್ಯಕ್ಕೆ ನೀವು ಯಾವ ಸಮಯದಲ್ಲಿ ನೀರನ್ನು ಕುಡಿದರೆ ಒಳ್ಳೆಯದು? (Getty Images)
author img

By ETV Bharat Karnataka Team

Published : Aug 9, 2024, 8:45 AM IST

Updated : Aug 9, 2024, 12:02 PM IST

Best Time For Drinking Water: ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಆರೋಗ್ಯದ ಬಗ್ಗೆ ತುಂಬಾ ಜಾಗೃತರಾಗಿದ್ದಾರೆ. ತಮ್ಮ ದೇಹವನ್ನು ಸದೃಢವಾಗಿಡಲು, ಅವರು ತಿನ್ನುವುದರಿಂದ ಹಿಡಿದು ಕುಡಿಯುವ ನೀರಿನವರೆಗೆ ಪ್ರತಿಯೊಂದರಲ್ಲೂ ಸರಿಯಾದ ಕ್ರಮಗಳನ್ನು ಅಳವಡಿಸಿಕೊಳ್ಳಲು ಮುಂದಾಗಿದ್ದಾರೆ. ಇದಕ್ಕಾಗಿಯೇ ಆರೋಗ್ಯ ಪರಿಣತರು, ಆಹಾರ ತಜ್ಞರು ಮತ್ತು ಪೌಷ್ಟಿಕ ಆಹಾರ ತಜ್ಞರು ತಮ್ಮ ಸಾಮಾಜಿಕ ಮಾಧ್ಯಮದ ಖಾತೆಗಳಲ್ಲಿ ಆರೋಗ್ಯ ಸಂಬಂಧಿತ ಮಾಹಿತಿಯನ್ನು ಹಂಚಿಕೊಳ್ಳುತ್ತಾರೆ.

ಇತ್ತೀಚೆಗೆ, ಜಾರ್ಖಂಡ್‌ನ ರಾಂಚಿಯ ರಾಜೇಂದ್ರ ವೈದ್ಯಕೀಯ ಕಾಲೇಜಿನ ನರ ಮತ್ತು ಬೆನ್ನುಮೂಳೆಯ ಶಸ್ತ್ರಚಿಕಿತ್ಸಕ ಡಾ. ವಿಕಾಸ್ ಕುಮಾರ್ ಮತ್ತು ಫೆಡರೇಶನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್‌ನ ರಾಷ್ಟ್ರೀಯ ಮುಖ್ಯ ಸಲಹೆಗಾರ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ ಅವರು ನೀರು ಕುಡಿಯಲು ದಿನದ ಉತ್ತಮ ಸಮಯ ಯಾವುದು ಎಂಬುದರ ಬಗ್ಗೆ ತಿಳಿಸಿದ್ದಾರೆ. ಸರಿಯಾದ ಸಮಯಕ್ಕೆ ನೀರು ಕುಡಿಯುವುದರಿಂದ ಅನೇಕ ಪ್ರಯೋಜನಗಳು ದೇಹಕ್ಕೆ ಲಭಿಸುತ್ತದೆ. ಹಾಗಾದರೆ, ಡಾ.ವಿಕಾಸ್ ಪ್ರಕಾರ, ದಿನದ ಯಾವ ಸಮಯದಲ್ಲಿ ನೀರು ಕುಡಿಯುವುದು ಉತ್ತಮ ಎಂದು ನಾವು ಈಗ ನಿಮಗೆ ತಿಳಿಸುತ್ತೇವೆ.

ನೀರು ಕುಡಿಯಲು ಉತ್ತಮ ಸಮಯ:

  • ಬೆಳಗ್ಗೆ ಎದ್ದ ನಂತರ ನೀರು ಕುಡಿಯಲು ಅದು ಉತ್ತಮ ಸಮಯ. ಇದು ಆಂತರಿಕ ಅಂಗಗಳನ್ನು ಸಕ್ರಿಯಗೊಳಿಸಲು ಸಹಾಯ ಮಾಡುತ್ತದೆ.
  • ವ್ಯಾಯಾಮದ ನಂತರವೂ ನೀರು ಕುಡಿಯುವುದು ಒಳ್ಳೆಯದು. ಇದು ಹೃದಯ ಬಡಿತವನ್ನು ಸಾಮಾನ್ಯಗೊಳಿಸಲು ಸಹಾಯ ಮಾಡುತ್ತದೆ.
  • ಇದಲ್ಲದೇ, ಉತ್ತಮ ಆರೋಗ್ಯಕ್ಕಾಗಿ ಊಟಕ್ಕೆ 30 ನಿಮಿಷಗಳ ಮೊದಲು ನೀರನ್ನು ಕುಡಿಯಬೇಕು. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
  • ಸ್ನಾನ ಮಾಡುವ ಮೊದಲು ನೀರನ್ನು ಕುಡಿಯಬೇಕು, ಇದು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
  • ರಾತ್ರಿ ಮಲಗುವ ಮುನ್ನ ನೀರು ಕುಡಿಯುವುದರಿಂದ ದೇಹದಲ್ಲಿ ಯಾವುದೇ ದ್ರವದ ಕೊರತೆಯಾಗದಂತೆ ತಡೆಯುತ್ತದೆ.
  • ನೀವು ದಣಿದಿರುವಾಗ, ನೀರು ಕುಡಿಯುವುದು ಉತ್ತಮ. ಆಯಾಸಗೊಂಡಾಗ, ಆಂತರಿಕ ಅಂಗಗಳು ನೀರಿನಿಂದ ಸಕ್ರಿಯವಾಗುತ್ತವೆ.
  • ಇದಲ್ಲದೇ, ಯಾರಿಗಾದರೂ ಅನಾರೋಗ್ಯ ಅನಿಸಿದರೆ ಅವರು ನೀರನ್ನು ಕುಡಿಯಬೇಕು. ಇದರಿಂದ ದೇಹಕ್ಕೆ ತುಂಬಾ ಒಳ್ಳೆಯದು. ನಿರ್ಜಲೀಕರಣ ಸಮಸ್ಯೆಯನ್ನು ದೂರ ಮಾಡುತ್ತದೆ.
  • ಒಬ್ಬ ವ್ಯಕ್ತಿಯು ಸೋಂಕಿತ ಮತ್ತು ರೋಗಿಗಳಿಂದ ಸನಿಹದಲ್ಲಿ ಇದ್ದ ಸಮಯದಲ್ಲಿ ನೀರನ್ನು ಕುಡಿಯಬೇಕು. ಈ ವೇಳೆ ದೇಹದಲ್ಲಿ ಸೋಂಕು ನೆಲೆಗೊಳ್ಳಲು ಅನುಮತಿಸುವುದಿಲ್ಲ.

ನೀರು ಕುಡಿಯಲು ಅನುಸರಿಸುವ ಕ್ರಮಗಳೇನು?: ಊಟದ ನಡುವೆ ನೀರು ಕುಡಿಯಬಾರದು. ಆಹಾರ ಸೇವಿಸುವ 30 ನಿಮಿಷಗಳ ಮೊದಲು ಮತ್ತು 30 ನಿಮಿಷಗಳ ನಂತರ ಯಾವಾಗಲೂ ನೀರು ಕುಡಿಯುವುದು ಆರೋಗ್ಯಕ್ಕೆ ಪ್ರಯೋಜನಕಾರಿ. ಇದಲ್ಲದೇ ಎದ್ದು ನಿಂತು ನೀರು ಕುಡಿಯುವುದನ್ನು ತಪ್ಪಿಸಬೇಕು. ಹೀಗೆ ಮಾಡುವುದರಿಂದ ದೇಹದ ಕೆಳಭಾಗಕ್ಕೆ ನೀರು ವೇಗವಾಗಿ ತಲುಪುತ್ತದೆ. ಮತ್ತು ದೇಹಕ್ಕೆ ನೀರಿನ ಪೋಷಕಾಂಶಗಳು ಸಿಗುವುದಿಲ್ಲ. ನೀರನ್ನು ಯಾವಾಗಲೂ ಒಂದೊಂದೇ ಸಿಪ್​ಗಳ ಮೂಲಕ ಕುಡಿಯಬೇಕು. ಈ ಕಾರಣದಿಂದಾಗಿ, ಲಾಲಾರಸವು ನೀರಿನೊಂದಿಗೆ ಬೆರೆತು ದೇಹವನ್ನು ಪ್ರವೇಶಿಸುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ.

ಇದನ್ನೂ ಓದಿ: ಅಕ್ಕಿ ನೆನೆಸುವ ಕಷ್ಟವಿಲ್ಲ, ನಿಮಿಷದಲ್ಲೇ ತಯಾರಿಸಿ ಬಿಸಿ ಬಿಸಿ​ ಇಡ್ಲಿ; ಸಿಕ್ಕಾಪಟ್ಟೆ ಮೃದು - ಟೇಸ್ಟಿ ಟೇಸ್ಟಿ! - quick IDLI RECIPE

Last Updated : Aug 9, 2024, 12:02 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.