ETV Bharat / health

ಮಧುಮೇಹಿಗಳು ಇಡ್ಲಿ, ದೋಸೆಗೆ ಉದ್ದಿನ ಬೇಳೆ ಬಳಸುತ್ತಿದ್ದೀರಾ?: ಈ ಬೇಳೆ ಆರೋಗ್ಯಕ್ಕೆ ಒಳ್ಳೆಯದಾ, ಕೆಟ್ಟದ್ದಾ?, ಇಲ್ಲಿದೆ ಡೀಟೇಲ್ಸ್​​! - is Urad Dal good or Bad for health

author img

By ETV Bharat Health Team

Published : Aug 30, 2024, 10:37 AM IST

Black Gram Health Benefits: ಬ್ಲ್ಯಾಕ್ ಗ್ರಾಂ ಅಥವಾ ಉದ್ದಿನ ಬೇಳೆ ಅನ್ನು ಬೆಳಗಿನ ಉಪಾಹಾರಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಜೊತೆಗೆ ಬಹುತೇಕರು ಉದ್ದಿನ ಬೇಳೆ ಸಾಂಬಾರ್​ ಅನ್ನು ಹೆಚ್ಚಾಗಿ ಸೇವಿಸುತ್ತಾರೆ?ಉದ್ದಿನ ಬೇಳೆಯನ್ನು ಹೆಚ್ಚಾಗಿ ಸೇವಿಸುವುದರಿಂದ ನಿಮ್ಮ ದೇಹದಲ್ಲಿ ಯಾವೆಲ್ಲಾ ಬದಲಾವಣೆಗಳು ಆಗುತ್ತದೆ ಎಂಬುದನ್ನು ತಜ್ಞರು ತಿಳಿಸುತ್ತಾರೆ. ಈ ಕುರಿತು ವರದಿ ಇಲ್ಲಿದೆ ಸಂಪೂರ್ಣವಾಗಿ ಓದಿ.

HEALTH BENEFITS OF URAD DAL  BLACK GRAM HEALTH BENEFITS  VIGNA MUNGO HEALTH BENEFITS  BLACK GRAM FOR DIABETES
ಸಾಂದರ್ಭಿಕ ಚಿತ್ರ (CANVA)

Health Benefits of Urad Dal : ಉದ್ದಿನ ಬೇಳೆ ಕೇವಲ ಖಾದ್ಯಗಳ ರುಚಿಯನ್ನು ಮಾತ್ರ ಹೆಚ್ಚಿಸುವುದಿಲ್ಲ. ಉದ್ದಿನ ಬೇಳೆ ಸೇವನೆಯಿಂದ ಅನೇಕ ಆರೋಗ್ಯ ಲಾಭಗಳನ್ನು ಪಡೆಯಬಹುದು ಎನ್ನುತ್ತಾರೆ ತಜ್ಞರು. ಮಧುಮೇಹಿಗಳು ತಮ್ಮ ದೈನಂದಿನ ಆಹಾರದಲ್ಲಿ ಉದ್ದಿನ ಬೇಳೆ ಸಿದ್ಧಪಡಿಸಿದ ಭಕ್ಷ್ಯಗಳನ್ನು ಸೇವಿಸಿದರೆ ಅದು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಹಾಗಾದರೆ, ಉದ್ದಿನ ಬೇಳೆಯಲ್ಲಿ ಯಾವ ಪೋಷಕಾಂಶಗಳಿವೆ? ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಆಗುವ ಲಾಭಗಳೇನು ಎಂಬುದನ್ನು ತಿಳಿದುಕೊಳ್ಳೋಣ.

ಪೋಷಕಾಂಶಗಳ ಕಣಜ: ಉದ್ದಿನ ಬೇಳೆಯಲ್ಲಿ ಪ್ರೋಟೀನ್, ಆ್ಯಂಟಿ ಆಕ್ಸಿಡೆಂಟ್, ವಿಟಮಿನ್, ಫೈಬರ್, ಮೆಗ್ನೀಷಿಯಂ, ಕಬ್ಬಿಣ, ಪೊಟ್ಯಾಸಿಯಮ್, ರಂಜಕ, ಕ್ಯಾಲ್ಸಿಯಂ ಹೀಗೆ ಹಲವಾರು ಪೋಷಕಾಂಶಗಳು ಹೇರಳವಾಗಿವೆ. ಹಾಗಾಗಿಯೇ ಈ ಬೇಳೆಯನ್ನು ಪೋಷಕಾಂಶಗಳ ಗಣಿ ಎನ್ನುತ್ತಾರೆ ತಜ್ಞರು. ಇದರ ಫಲವಾಗಿ ಇದನ್ನು ದಿನನಿತ್ಯದ ಆಹಾರದ ಭಾಗವನ್ನಾಗಿ ಮಾಡಿಕೊಂಡರೆ ಅನೇಕ ಆರೋಗ್ಯದ ಲಾಭಗಳು ಸಿಗುತ್ತವೆ ಎಂದು ಹೇಳುತ್ತಾರೆ ತಜ್ಞರು.

ಜೀರ್ಣಕ್ರಿಯೆ ಸುಧಾರಿಸುತ್ತೆ: ಉದ್ದಿನ ಬೇಳೆಯು ಹೆಚ್ಚಿನ ಪ್ರಮಾಣದ ಫೈಬರ್ ಅನ್ನು ಹೊಂದಿರುತ್ತದೆ. ಆದ್ದರಿಂದ, ಇದನ್ನು ಆಹಾರದ ಭಾಗವಾಗಿ ಮಾಡುವುದರಿಂದ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯಕಾರಿಯಾಗಿದೆ. ಮಲಬದ್ಧತೆ ಮತ್ತು ಅಜೀರ್ಣದಂತಹ ಸಮಸ್ಯೆಗಳಿಂದ ನೀವು ಪರಿಹಾರವನ್ನು ಪಡೆಯಬಹುದು ಎಂದು ತಜ್ಞರು ತಿಳಿಸುತ್ತಾರೆ.

ಮಧುಮೇಹಕ್ಕೆ ಮದ್ದು: ಇತ್ತೀಚಿನ ದಿನಗಳಲ್ಲಿ ಅನೇಕರನ್ನು ಕಾಡುತ್ತಿರುವ ಆರೋಗ್ಯ ಸಮಸ್ಯೆ ಅಂದ್ರೆ, ಅದು ಮಧುಮೇಹ. ಮಧುಮೇಹಿಗಳು ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸುವ ಭಯದ ಹಿನ್ನೆಲೆ ಯಾವ ರೀತಿಯ ಆಹಾರವನ್ನು ಸೇವಿಸಬೇಕು ಎಂದು ಯೋಚಿಸುತ್ತಾರೆ. ಅಂತಹವರು ದಿನನಿತ್ಯದ ಆಹಾರದಲ್ಲಿ ಉದ್ದಿನ ಬೇಳೆ ಸೇರಿಸಿಕೊಂಡರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಸಿಪ್ಪೆ ತೆಗೆಯದ ಉದ್ದಿನ ಬೇಳೆಯಲ್ಲಿ ಫೈಬರ್‌ ಸಮೃದ್ಧವಾಗಿರುವ ಕಾರಣ (ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ರಿಪೋರ್ಟ್​), ಪ್ರೋಟೀನ್‌ಗಳು ಮತ್ತು ಇತರ ಪೋಷಕಾಂಶಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಬಹಳ ಸಹಾಯಕವಾಗಿವೆ.

2018 ರಲ್ಲಿ "ಜರ್ನಲ್ ಆಫ್ ಫುಡ್ ಸೈನ್ಸ್ ಅಂಡ್ ಟೆಕ್ನಾಲಜಿ" ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಸಿಪ್ಪೆ ತೆಗೆಯದ ಉದ್ದಿನ ಬೇಳೆ ಸೇವನೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಕಂಡು ಬಂದಿದೆ. ಪಂಜಾಬ್ ಕೃಷಿ ವಿಶ್ವವಿದ್ಯಾಲಯದ ಪ್ರಮುಖ ಪೌಷ್ಟಿಕತಜ್ಞ ಡಾ.ಪ್ರವೀಣ್ ಕುಮಾರ್ ಈ ಸಂಶೋಧನೆಯಲ್ಲಿ ಭಾಗವಹಿಸಿದ್ದರು.

ಮೂಳೆಗಳು ಬಲಗೊಳ್ಳುತ್ತವೆ: ಉದ್ದಿನ ಬೇಳೆಯಲ್ಲಿ ಕ್ಯಾಲ್ಸಿಯಂ ಮತ್ತು ಫಾಸ್ಫರಸ್ ಸಮೃದ್ಧವಾಗಿದೆ. ಇದು ಮೂಳೆಗಳ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ಅದೇ ರೀತಿ ತೂಕ ಇಳಿಸಿಕೊಳ್ಳಲು ಬಯಸುವವರು ಈ ಬೇಳೆಯಿಂದ ಮಾಡಿದ ಆಹಾರಗಳನ್ನು ಸೇವಿಸಿದರೆ ಪ್ರಯೋಜನವಾಗುತ್ತದೆ ತಜ್ಞರು ಸಲಹೆ ನೀಡುತ್ತಾರೆ. ಏಕೆಂದರೆ, ಇದರಲ್ಲಿರುವ ಹೆಚ್ಚಿನ ಫೈಬರ್ ಅಂಶವು ಹಸಿವಿನ ಕಡು ಬಯಕೆಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮತ್ತು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.

ರಕ್ತಹೀನತೆ ಕಡಿಮೆ ಮಾಡುತ್ತೆ: ಉದ್ದಿನ ಬೇಳೆ ಹೆಚ್ಚಿನ ಕಬ್ಬಿಣದ ಅಂಶ ಹೊಂದಿದೆ. ಇದರಿಂದ ರಕ್ತಹೀನತೆ ಕಡಿಮೆ ಮಾಡಲು ಬಹಳ ಸಹಾಯಕವಾಗಿದೆ ಎಂದು ಹೇಳಲಾಗುತ್ತದೆ. ಅಲ್ಲದೇ, ಮೂತ್ರಪಿಂಡಗಳ ಆರೈಕೆಯಲ್ಲಿ ಈ ಉದ್ದಿನ ಬೇಳೆ ಅದ್ಭುತವಾಗಿ ಕೆಲಸ ಮಾಡುತ್ತದೆ ಎಂದು ಹೇಳಲಾಗುತ್ತದೆ. ಅಂತೆಯೇ ಇದರಲ್ಲಿರುವ ಪೋಷಕಾಂಶಗಳು ತಲೆನೋವು, ಜ್ವರ, ಉರಿಯೂತ ಮುಂತಾದ ಸಮಸ್ಯೆಗಳಿಂದ ಮುಕ್ತಿ ಹೊಂದಲು ನೆರವಾಗುತ್ತದೆ ಎನ್ನುತ್ತಾರೆ ತಜ್ಞರು.

ಚರ್ಮದ ಸೌಂದರ್ಯ ಸುಧಾರಿಸುತ್ತೆ: ಉದ್ದಿನ ಬೇಳೆ ಚರ್ಮದ ಸೌಂದರ್ಯವನ್ನು ಸುಧಾರಿಸಲು ತುಂಬಾ ಉಪಯುಕ್ತವಾಗಿದೆ. ವಿಶೇಷವಾಗಿ ಈ ಬೇಳೆಯಲ್ಲಿರುವ ಪೋಷಕಾಂಶಗಳು ಸನ್ ಟ್ಯಾನ್ಸ್, ಮೊಡವೆ ಮತ್ತು ಇತರ ಚರ್ಮದ ಸಮಸ್ಯೆಗಳನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿದೆ. ಅದೇ ರೀತಿ ಉದ್ದಿನ ಬೇಳೆಯು ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನುತ್ತಾರೆ ತಜ್ಞರು.

ಹೆಚ್ಚಿನ ಮಾಹಿತಿಗಾಗಿ ನೀವು ಈ ವೆಬ್​ಸೈಟ್​ಗೆ ಸಂಪರ್ಕಿಸಬಹುದು: (National Library of Medicine Report)

https://www.ncbi.nlm.nih.gov/pmc/articles/PMC8357861/

ಓದುಗರಿಗೆ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿ ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.