ETV Bharat / health

ವಸಡುಗಳಲ್ಲಿ ರಕ್ತಸ್ರಾವ, ಬಾಯಿ ದುರ್ವಾಸನೆ, ಹಲ್ಲುನೋವು ಸಮಸ್ಯೆಯೇ: ಇಲ್ಲಿದೆ ಸುಲಭ ಪರಿಹಾರ! - Guava Leaves Health Benefits

author img

By ETV Bharat Karnataka Team

Published : Jun 20, 2024, 11:12 AM IST

Guava Leaves Health Benefits: ವಸಡುಗಳಲ್ಲಿ ರಕ್ತಸ್ರಾವ, ಹಲ್ಲುನೋವು ಮತ್ತು ಬಾಯಿ ದುರ್ವಾಸನೆಯಂತಹ ತೊಂದರೆಗೆ ಪೇರಳೆ ಎಲೆಯಿಂದ ಪರಿಹಾರ ಕಂಡುಕೊಳ್ಳಬಹುದು ಎನ್ನುತ್ತಾರೆ ತಜ್ಞರು. ಈ ಬಗ್ಗೆ ಇಲ್ಲಿದೆ ಮಾಹಿತಿ..

guava leaves
ಪೇರಳೆ ಎಲೆ (ETV Bharat)

Guava Leaves for toothache: ಬಾಯಿ ಎಷ್ಟೇ ಸ್ವಚ್ಛವಾಗಿದ್ದರೂ ಕೆಲವೊಮ್ಮೆ ವಿವಿಧ ಹಲ್ಲಿನ ಸಮಸ್ಯೆಗಳು ಎದುರಾಗುತ್ತವೆ. ಬಾಯಿಯ ಆರೋಗ್ಯ ಸರಿಯಿಲ್ಲದಿದ್ದರೆ, ವಸಡು ಸಮಸ್ಯೆಯಿಂದ ಹಿಡಿದು ಹಲ್ಲುನೋವಿನವರೆಗೆ ಹಲವಾರು ಸಮಸ್ಯೆಗಳು ಕಾಡುತ್ತವೆ. ನೀವೂ ಇಂತಹ ಸಮಸ್ಯೆಗಳಿಂದ ಬಳಲುತ್ತಿದ್ದರೆ ಪೇರಳೆ ಎಲೆಯಿಂದ ನಿವಾರಿಸಿಕೊಳ್ಳಬಹುದು ಎನ್ನುತ್ತಾರೆ ತಜ್ಞರು. ಇವುಗಳಿಂದ ಎಲ್ಲ ಹಲ್ಲಿನ ಸಮಸ್ಯೆಗಳು ದೂರವಾಗುತ್ತವೆ ಎಂದು ಹೇಳಲಾಗುತ್ತದೆ. ಇದಲ್ಲದೇ, ಪೇರಳೆ ಎಲೆಗಳ ಮೂಲಕ ಇತರ ಕೆಲವು ಆರೋಗ್ಯ ಪ್ರಯೋಜನಗಳೂ ಇವೆ.

ಪೇರಳೆ ಹಣ್ಣನ್ನು ತಿನ್ನುವುದರಿಂದ ಆಗುವ ಆರೋಗ್ಯ ಪ್ರಯೋಜನಗಳು ನಮಗೆಲ್ಲರಿಗೂ ಗೊತ್ತು. ಪೇರಳೆ ಹಣ್ಣಿನಲ್ಲಿ ಆರೋಗ್ಯಕ್ಕೆ ಉತ್ತಮವಾದ ನಾರಿನಂಶ, ವಿಟಮಿನ್ ಸಿ, ಎ, ಪೊಟ್ಯಾಸಿಯಮ್, ಮ್ಯಾಂಗನೀಸ್ ನಂತಹ ಪೋಷಕಾಂಶಗಳು ಹೇರಳವಾಗಿವೆ. ಆದರೆ ಅವುಗಳ ಎಲೆಗಳಲ್ಲಿಯೂ ಸಹ ಅಂತಹದೇ ಆರೋಗ್ಯ ಗುಣಗಳಿವೆ ಎಂಬುದು ನಿಮಗೆ ಗೊತ್ತೇ?. ಎಲೆಗಳು ಗಾಯಗಳನ್ನು ಗುಣಪಡಿಸುವಲ್ಲಿ ಚೆನ್ನಾಗಿ ಕೆಲಸ ಮಾಡುತ್ತವೆ ಎಂದು ಹೇಳಲಾಗುತ್ತದೆ.

ಅಂತೆಯೇ, ಪೇರಳೆ ಎಲೆಗಳು ಬಾಯಿಯ ಆರೈಕೆಯಲ್ಲಿ ಸಹಾಯ ಮಾಡುವ ಆ್ಯಂಟಿಮೈಕ್ರೊಬಿಯಲ್ ಹೊಂದಿವೆ ಎಂದು ಹೇಳಲಾಗುತ್ತದೆ. ಹಾಗಾಗಿ ಹಲ್ಲುನೋವು, ವಸಡಿನ ಸಮಸ್ಯೆ, ಬಾಯಿ ದುರ್ವಾಸನೆಯಂತಹ ಸಮಸ್ಯೆಗಳು ತಲೆದೋರಿದಾಗ ತಾಜಾ ಪೇರಳೆ ಎಲೆಗಳನ್ನು ತೊಳೆದು ತಿಂದರೆ ಸಾಕು. ಮೇಲಿನ ಎಲ್ಲ ಸಮಸ್ಯೆಗಳು ಇದರಿಂದ ಕಡಿಮೆಯಾಗುತ್ತವೆ ಎಂದು ಹೇಳಲಾಗುತ್ತದೆ. ಇಲ್ಲವಾದರೆ ಪೇರಳೆ ಎಲೆಗಳನ್ನು ನುಣ್ಣಗೆ ಕತ್ತರಿಸಿ ಬಿಸಿ ನೀರಿನಲ್ಲಿ ಕುದಿಸಿ ಆ ನೀರಿನಿಂದ ಬಾಯಿ ಮುಕ್ಕಳಿಸಿದರೆ ಹಲ್ಲು, ವಸಡು ಸಮಸ್ಯೆ ದೂರವಾಗುತ್ತದೆ ಎನ್ನುತ್ತಾರೆ ತಜ್ಞರು.

2014 ರಲ್ಲಿ 'ಜರ್ನಲ್ ಆಫ್ ಡೆಂಟಲ್ ರಿಸರ್ಚ್' ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಪೇರಳೆ ಎಲೆಗಳ ಉರಿಯೂತದ ಗುಣಲಕ್ಷಣಗಳು ಜಿಂಗೈವಿಟಿಸ್ ಮತ್ತು ಒಸಡುಗಳಲ್ಲಿ ರಕ್ತಸ್ರಾವದಂತಹ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಕಂಡು ಬಂದಿದೆ. ಬ್ರೆಜಿಲ್​ನ ಖ್ಯಾತ ದಂತ ವೈದ್ಯ ಡಾ.ಡೇವಿಡ್ ಜಾನ್ಸನ್ ಈ ಸಂಶೋಧನೆಯಲ್ಲಿ ಭಾಗವಹಿಸಿದ್ದರು. ದಂತ ಮತ್ತು ವಸಡಿನ ಸಮಸ್ಯೆಯಿಂದ ಬಳಲುತ್ತಿರುವವರು ಪೇರಳೆ ಎಲೆಗಳನ್ನು ತಿನ್ನುವುದರಿಂದ ಪ್ರಯೋಜನವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಪೇರಳೆ ಎಲೆಗಳು ಬಾಯಿಯ ಆರೋಗ್ಯಕ್ಕೆ ಮಾತ್ರವಲ್ಲ, ಇತರ ಸಮಸ್ಯೆಗಳನ್ನು ತಡೆಯುವಲ್ಲಿಯೂ ಬಹಳ ಚೆನ್ನಾಗಿ ಕೆಲಸ ಮಾಡುತ್ತದೆ. ಈ ಎಲೆಗಳು ವಿಟಮಿನ್ ಸಿ ಜೊತೆಗೆ ಅಲರ್ಜಿ ವಿರೋಧಿ ಗುಣಗಳನ್ನು ಹೊಂದಿವೆ. ಆದ್ದರಿಂದ ಶೀತ, ಕೆಮ್ಮು ಮತ್ತು ಗಂಟಲು ನೋವು ಕಡಿಮೆ ಮಾಡುವ ಕೆಲಸ ಮಾಡುತ್ತದೆ. ಅಲ್ಲದೇ, ಪೇರಳೆ ಎಲೆಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹಾಗೆಯೇ ನಾರಿನಂಶವಿರುವ ಈ ಎಲೆಗಳನ್ನು ತಿನ್ನುವುದರಿಂದ ಅಜೀರ್ಣ, ಮಲಬದ್ಧತೆಯಂತಹ ಸಮಸ್ಯೆಗಳು ಕಡಿಮೆಯಾಗಿ ಜೀರ್ಣಕ್ರಿಯೆಯ ಆರೋಗ್ಯ ಉತ್ತಮಗೊಳ್ಳುತ್ತದೆ. ಹೆಚ್ಚುವರಿ ದೇಹದ ತೂಕವನ್ನು ಕಡಿಮೆ ಮಾಡಲು ಪೇರಲ ಎಲೆಗಳು ಸಹ ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.

ವಿಶೇಷ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ನಿಮ್ಮ ವೈಯಕ್ತಿಕ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ: ಗರ್ಭಿಣಿಯರ ಆರೋಗ್ಯ ಕಾಪಾಡುವಲ್ಲಿ ವಾಕಿಂಗ್​ ಎಂಬುದು ಭಾರಿ ವರದಾನ: ಸ್ತ್ರೀ ರೋಗ ತಜ್ಞರು ಹೇಳುವುದೇನು? - PREGNANT WOMEN WALKING

ETV Bharat Logo

Copyright © 2024 Ushodaya Enterprises Pvt. Ltd., All Rights Reserved.