ನವದೆಹಲಿ: ಹವಾಮಾನ ಬದಲಾವಣೆಯ ಕುರಿತು ವಿಶ್ವಸಂಸ್ಥೆ ರೆಡ್ ಆಲರ್ಟ್ ನೀಡಿದೆ. ಜಾಗತಿಕ ತಾಪಮಾನ ಏರಿಕೆ ಆರೋಗ್ಯ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಎಚ್ಚರಿಸಲಾಗಿದೆ.
ವಿಶ್ವ ಹವಾಮಾನ ಸಂಸ್ಥೆಯ ಇತ್ತೀಚಿನ ವರದಿಯಲ್ಲಿ, 2023ರಲ್ಲಿ ಹಸಿರು ಮನೆ ಅನಿಲ, ಭೂ ಮೇಲ್ಮೈ ತಾಪಮಾನ, ಸಾಗರದ ಶಾಖ, ಸಮುದ್ರ ಮಟ್ಟ ಏರಿಕೆ, ಹಿಮ ಕರಗುವಿಕೆ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದೆ. 2023 ಈಗಾಗಲೇ ಅತ್ಯಂತ ಶಾಖದ ವರ್ಷವಾಗಿ ದಾಖಲಾಗಿದ್ದು, 2024 ಮತ್ತೊಂದು ದಾಖಲೆಯ ಶಾಖದ ವರ್ಷವಾಗುವ ಸಂಭವ ಜಾಸ್ತಿ ಎಂದು ವರದಿ ಹೇಳಿದೆ.
ಹವಾಮಾನದ ಬದಲಾವಣೆಯು ವಿಶೇಷವಾಗಿ ಶ್ವಾಸಕೋಶದ ಮೇಲೆ ವಿಪರೀತ ಪರಿಣಾಮ ಉಂಟು ಮಾಡಲಿದೆ. ಅಸ್ತಮಾ, ನ್ಯುಮೋನಿಯಾ, ಶ್ವಾಸಕೋಶದ ಕ್ಯಾನ್ಸರ್ನಂತಹ ಉಸಿರಾಟದ ಸಮಸ್ಯೆಗಳನ್ನು ಹೊಂದಿರುವ ಜನರ ಆರೋಗ್ಯ ಮತ್ತಷ್ಟು ಹದಗೆಡುತ್ತದೆ ಎಂದು ಗುರುಗ್ರಾಮದ ಸಿ.ಕೆ.ಬಿರ್ಲಾ ಆಸ್ಪತ್ರೆಯ ಶ್ವಾಸಕೋಶ ತಜ್ಞ ಡಾ ಕುಲ್ದೀಪ್ ಕುಮಾರ್ ಗ್ರೋವರ್ ತಿಳಿಸಿದ್ದಾರೆ.
ಕಡಿಮೆ ಅವಧಿಯ ಚಳಿಗಾಲ ಮತ್ತು ಬೇಸಿಗೆಯ ಶೀಘ್ರ ಆಗಮನ ವೈರಸ್ಗಳ ನಡವಳಿಕೆಗಳ ಮಾದರಿ ಮೇಲೆ ಪರಿಣಾಮ ಬೀರಲಿದ್ದು, ಇದು ಸೋಂಕಿನ ರೋಗದ ಉಲ್ಬಣಕ್ಕೆ ಕಾರಣವಾಗುತ್ತದೆ ಎಂಬುದನ್ನು ಗಮನಿಸಬೇಕಾಗಿದೆ ಎಂದರು.
ಹವಾಮಾನ ಬದಲಾವಣೆ ಭೌಗೋಳಿಕ ವಿತರಣೆಯ ಋತುಮಾನವನ್ನು ಬದಲಾಯಿಸಿದ್ದು, ಇದರಿಂದ ಡೆಂಗ್ಯೂ ಜ್ವರ ಮತ್ತು ಜಿಕಾ ವೈರಸ್ ನಂತಹ ರೋಗವಾಹಕಗಳ ಹೆಚ್ಚಳವಾಗಬಹುದು. ಈ ರೋಗಗಳು ಕೂಡ ಕೆಲವು ಪ್ರಕರಣದಲ್ಲಿ ಶ್ವಾಕೋಶದ ತೊಂದರೆಗೆ ಕಾರಣವಾಗಬಹುದು ಎಂದು ಡಾ.ವಿಕಾಸ್ ತಿಳಿಸಿದ್ದಾರೆ.
2023 ಕೇವಲ ಭೂಮಿ ಮೇಲಿನ ಶಾಖದ ವರ್ಷವಾಗಿಲ್ಲ. ಜೊತೆಗೆ, ಮೊದಲ ಬಾರಿಗೆ ಜಗತ್ತು ಪೂರ್ವ ಕೈಗಾರಿಕಾ ಮೊದಲಿನ ತಾಪಮಾನದ 1.5 ಡಿಗ್ರಿ ಸೆಲ್ಸಿಯಸ್ ಕಡಿಮೆ ಮಾಡುವ ಗುರಿ ಮೀರಿ, 1.48 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. 2024ರಲ್ಲಿ ವಿಶ್ವಸಂಸ್ಥೆಯ 1.5 ಡಿಗ್ರಿ ಸೆಲ್ಸಿಯಸ್ ಆದೇಶವನ್ನು ಮೀರುವ ಸಾಧ್ಯತೆ ಇದೆ ಎಂದು ಹಲವು ವಿಜ್ಞಾನಿಗಳು ಅಂದಾಜಿಸಿದ್ದಾರೆ.
ಹೆಚ್ಚುತ್ತಿರುವ ಜಾಗತಿಕ ತಾಪಮಾನ ಶಾಖದ ಅಲೆಯನ್ನು ಪ್ರಚೋದಿಸುತ್ತದೆ. ಇದು ಆಗಿಂದಾಗ್ಗೆ ನಡೆಯಬಹುದು ಅಥವಾ ತೀವ್ರವಾಗಬಹುದು. ಈ ಪರಿಸ್ಥಿತಿಗಳು ಶಾಖದ ಪಾರ್ಶ್ವವಾಯು, ನಿರ್ಜಲೀಕರಣ ಮತ್ತು ಹೃದಯರಕ್ತನಾಳ ಮತ್ತು ಶ್ವಾಸಕೋಶ ರೋಗಗಳಿಗೆ ಕಾರಣವಾಗಲಿದೆ ಎಂದು ವೈದ್ಯರು ಎಚ್ಚರಿಸಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: 2023ರಲ್ಲಿ ದಾಖಲೆ ಮಟ್ಟ ತಲುಪಿದ ಹವಾಮಾನ ಬದಲಾವಣೆ ಸೂಚಕಗಳು!