ನವದೆಹಲಿ: ಜಾಗತಿಕ ಮಟ್ಟದಲ್ಲಿ ಎಚ್5ಎನ್1 ಅಥವಾ ಹಕ್ಕಿ ಜ್ವರದ ಸೋಂಕು ಉಲ್ಬಣಗೊಂಡಿದೆ. ಅಲ್ಲದೇ ಆಸ್ಟ್ರೇಲಿಯಾ ಮತ್ತು ಅಮೆರಿಕದಲ್ಲಿ ಮಾನವರಲ್ಲೂ ಈ ಸೋಂಕು ಕಂಡು ಬಂದಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಪಕ್ಷಿಗಳು ಮತ್ತು ಪ್ರಾಣಿಗಳಲ್ಲಿ ಹರಡುವ ಈ ಸೋಂಕಿನ ತಡೆಗೆ ಯಾವುದೇ ಲಸಿಕೆ ಇಲ್ಲ. ಈ ಹಿನ್ನೆಲೆಯಲ್ಲಿ ಸೋಂಕಿತ ಪಕ್ಷಿಗಳ ಸಾಮೂಹಿಕ ಹತ್ಯೆ ನಡೆಸುವ ಮೂಲಕ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತದೆ.
ಈ ಹಕ್ಕಿ ಜ್ವರದ ವಿರುದ್ಧ ಲಸಿಕೆ ಅಭಿವೃದ್ಧಿಗೆ ಮುಂದಾಗಿರುವ ಅಮೆರಿಕದ ತಜ್ಞರು, ಕೋವಿಡ್ 19ಕ್ಕೆ ಬಳಕೆ ಮಾಡಿದ್ದ ಎಂಆರ್ಎನ್ಎ ತಂತ್ರಜ್ಞಾನವನ್ನು ಪ್ರಯೋಗ ಮಾಡಿದ್ದಾರೆ. ಪ್ರಿಕ್ಲಿನಿಕಲ್ ಮಾದರಿಯ ಕುರಿತು ಮಾಹಿತಿಯನ್ನು ನೇಚರ್ ಕಮ್ಯೂನಿಕೇಷನ್ ಜರ್ನಲ್ನಲ್ಲಿ ಪ್ರಕಟಿಸಲಾಗಿದೆ. ಇದರಲ್ಲಿ ಎಂಆರ್ಎನ್ ತಂತ್ರಜ್ಞಾನದ ಆಧಾತಿಗ ಲಸಿಕೆಯು ಎಚ್5ಎನ್1 ಸೋಂಕಿನ ವಿರುದ್ಧ ಪರಿಣಾಮಕಾರಿಯಾಗಿದ್ದು, ಇದು ಸೋಂಕಿನ ಅಸ್ವಸ್ಥತೆ ಮತ್ತು ಸಾವಿನ ತಡೆಗೆ ಸಹಾಯವಾಗುತ್ತದೆ.
ಹಕ್ಕಿ ಜ್ವರದ ಲಸಿಕೆಗೆ ಅಭಿವೃದ್ಧಿಗೆ ಎಂಆರ್ಎನ್ಎ ತಂತ್ರಜ್ಞಾನ ಲಭ್ಯವಿದೆ. ಹೊಸ ತಳಿಗಳ ಸಹಾಯದಿಂದ ಎಂಆರ್ಎನ್ಎ ಲಸಿಕೆಗಳನ್ನು ಕೆಲವೇ ಗಂಟೆಗಳಲ್ಲಿ ಈ ಲಸಿಕೆಯನ್ನು ಅಭಿವೃದ್ಧಿಪಡಿಸಬಹುದು ಎಂದು ಪೆರೆಲ್ಮಾನ್ ಸ್ಕೂಲ್ ಆಫ್ ಮೆಡಿಸಿನ್ ಯುನಿವರ್ಸಿಟಿಯ ಮೈಕ್ರೋಬಯೋಲಾಜಿ ಪ್ರೊಫೆಸರ್ ಸ್ಕಾಟ್ ಹೆನ್ಸ್ಲೆ ತೊಳಿಸಿದ್ದಾರೆ.
ವಿವಿಧ ರೀತಿಯ ಇನ್ಫುಯೆಂಜಾ ವೈರಸ್ ತಳಿಗಳ ವಿರುದ್ಧ ರಕ್ಷಣೆಗೆ ಎಂಆರ್ಎನ್ಎ ಲಸಿಕೆಗಳು ಸುಲಭ ಮತ್ತು ಶೀಘ್ರ ಅಳವಡಿಕೆಯ ನಡೆಸಬಹುದು. ಹೊಸ ಎಂಆರ್ಎನ್ಎ ಲಸಿಕೆಗಳು ಗುರಿಯು ನಿರ್ಧಿಷ್ಟ ಎಚ್5ಎನ್1 ವೈರಸ್ನ ಉಪತಳಿಯಾಗಿದೆ ಇದರರಲ್ಲಿ ಬಲವಾದ ಪ್ರತಿ ರಕ್ಷಣೆ ಮತ್ತು ಟಿ ಕೋಶದ ಪ್ರತಿಕ್ರಿಯೆಯನ್ನು ಕಾಣಬಹುದು.
ಎಂಆರ್ಎನ್ಎ ಲಸಿಕೆ ರೋಗ ಉಂಟುಮಾಡುವ ಸೂಕ್ಷ್ಮಜೀವಿಗಳನ್ನು ಗುರುತಿಸಲು ಮತ್ತು ತರುವಾಯ ಅವುಗಳನ್ನು ಎದುರಿಸಿ, ಅವುಗಳನ್ನು ತ್ವರಿತವಾಗಿ ತೊಡೆದು ಹಾಕಲು ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ
ಪ್ರಮುಖವಾಗಿ ಲಸಿಕೆಗಳ ಬಳಿಕವೂ ಹಲವು ವರ್ಷಗಳ ಬಳಿಕ ಪ್ರಾಣಿಗಳು ಅತಿ ಹೆಚ್ಚಿನ ಮಟ್ಟದ ಪ್ರತಿರೋಧಕವನ್ನು ಹೊಂದಿರುತ್ತವೆ. ಲಸಿಕೆ ಪಡೆದ ಪ್ರಾಣಿಗಳಿಗೆ ಹೋಲಿಕೆ ಮಾಡಿದಾಗ ಲಸಿಕೆ ಪಡೆಯದ ಎಚ್5ಎನ್2 ಸೋಂಕಿನ ಪ್ರಾಣಿಗಳ ಸಾವಿನ ಸಂಖ್ಯೆ ಹೆಚ್ಚಿದೆ. (ಐಎಎನ್ಎಸ್)
ಇದನ್ನೂ ಓದಿ: ಆಸ್ಟ್ರೇಲಿಯಾದಲ್ಲಿ ಮನುಷ್ಯರಲ್ಲಿ ಹಕ್ಕಿ ಜ್ವರ ಪತ್ತೆ; ಭಾರತದಿಂದ ಮರಳಿದ ಬಾಲಕಿಯಲ್ಲಿ ಸೋಂಕು