ಹೈದರಾಬಾದ್: ವೈರಸ್ ಮತ್ತು ಬ್ಯಾಕ್ಟಿರೀಯಾಗಳು ಸೋಂಕಿನ ರೂಪವಾಗಿರುತ್ತದೆ. ಫಂಗಸ್ (ಶಿಲೀಂಧ್ರ)ಗಳು ಇದರ ಹೊರತಲ್ಲ. ಅನೇಕ ಹಾನಿಕಾರಕ ಫಂಗಸ್ಗಳು ಜೀವಕ್ಕೆ ಕುತ್ತು ತರುತ್ತದೆ. ಅದರಲ್ಲಿ ಕೆಲವು ಫಂಗಸ್ಗಳು ಚರ್ಮ ಸಮಸ್ಯೆ ಮತ್ತು ಶ್ವಾಸಕೋಶ ಸೋಂಕಿನಂತಹ ರೋಗಕ್ಕೆ ಕಾರಣವಾಗುತ್ತದೆ.
ಫಂಗಸ್ ಸರ್ವಭಕ್ಷಕ ಆಗಿದೆ. ಇದು ಸಾಮಾನ್ಯವಾಗಿ ನೆಲ ಮತ್ತು ಮರದ ಮೇಲೆ ಬೆಳೆಯುತ್ತದೆ. ಮನೆ ಮೇಲೆ, ಕೀಟ, ವಾಯುವಿನ ಮೇಲೆ ಇದು ಹಾರಾಡಬಹುದು. ಇವುಗಳನ್ನು ಅನೇಕ ಬಾರಿ ಉಸಿರಾಡುತ್ತವೆ. ಇತರ ಕೀಟಾಣುಗಳಿಗೆ ಹೋಲಿಕೆ ಮಾಡಿದಾಗ ಇದರ ಸೋಂಕು ಕಡಿಮೆ ಪ್ರಮಾಣದಲ್ಲಿರುತ್ತದೆ. ಬಹುತೇಕ ಸಮಯದಲ್ಲಿ ಫಂಗಸ್ ಗಂಭೀರ ಪರಿಣಾಮ ಉಂಟು ಮಾಡುವುದಿಲ್ಲ. ಎಸ್ಜಿಮಾ, ತುರಿಕೆ ಪಾದಗಳು ಮತ್ತು ಗುಳ್ಳೆಗಳ ರೀತಿ ಸಮಸ್ಯೆ ಉಂಟು ಮಾಡುತ್ತದೆ. ಕೆಲವು ಫಂಗಸ್ಗಳು ಶ್ವಾಸಕೋಶ, ರಕ್ತ ಮತ್ತು ಮಿದುಳಿಗೆ ಅಪಾಯವನ್ನು ಒಡ್ಡುತ್ತವೆ. ಫಂಗಸ್ಗಳು ಎಷ್ಟು ಹಾನಿಕಾರಕ ಎಂಬುದು ಕೋವಿಡ್ ಸಮಯದಲ್ಲೂ ಕಂಡು ಬಂದಿದೆ.
ಯಾರಿಗೆ ಬೇಕಾದರೂ ಅಪಾಯ: ಫಂಗಸ್ ಸೋಂಕು ಯಾರಿಗೆ ಬೇಕಾದರೂ ಆಗಬಹುದು. ಆದರೆ, ಪ್ರತಿರೋಧಕ ಶಕ್ತಿ ಇಲ್ಲದೇ ಇರುವವರಲ್ಲಿ ಇದರ ಅಪಾಯ ಹೆಚ್ಚು. ಎಚ್ಐವಿ ಸೋಂಕಿತರು, ಅಂಗಾಂಗ ಕಸಿಗೆ ಒಳಗಾದವರು, ಕ್ಯಾನ್ಸರ್ ರೋಗಿ, ಶ್ವಾಸಕೋಶ ಸಮಸ್ಯೆ ಹೊಂದಿರುವವರಲ್ಲಿ ಇದರ ಪರಿಣಾಮ ಹೆಚ್ಚಿನ ರೀತಿಯಲ್ಲಿರುತ್ತದೆ.
ಪತ್ತೆ ಮಾಡುವುದು ಕಷ್ಟ: ಫಂಗಸ್ ಸೋಂಕು ದೇಹದೊಳಗೆ ಉಂಟಾಗುವುದರಿಂದ ಇದನ್ನು ಪತ್ತೆ ಮಾಡುವುದು ಕಷ್ಟ. ಬಹುತೇಕ ಇದು ವೈರಲ್ ಮತ್ತು ಬ್ಯಾಕ್ಟಿರೀಯಾ ಸೋಂಕಿನ ಲಕ್ಷಣವೇ ಹೊಂದಿರುತ್ತದೆ. ಜ್ವರ, ಕೆಮ್ಮು, ಉಸಿರಾಟ ತೊಂದರೆ, ಚಳಿ, ತಲೆನೋವು, ಎದೆ ನೋವು, ತಲೆ ಸುತ್ತು ಲಕ್ಷಣ ಹೆಚ್ಚು ಕಾಡುತ್ತದೆ. ಇದರ ಆಧಾರದ ಮೇಲೆ ವೈದ್ಯರು ಇದನ್ನು ನಿರ್ಧರಿಸುತ್ತಾರೆ. ಫಂಗಸ್ ಸೋಂಕಿನ ಅನುಮಾನ ಉಂಟಾದರೆ, ರಕ್ತ ಅಥವಾ ಮೂತ್ರದ ಪರೀಕ್ಷೆಗೆ ಸೂಚಿಸಲಾಗುವುದು. ಕೆಲವು ಸಲ ಶ್ವಾಸಕೋಶ ಎಕ್ಸ್ರೇ, ಸ್ಕಾನ್ಗಳನ್ನು ನಡೆಸಲಾಗುವುದು. ಆದಾಗ್ಯೂ ಸೋಂಕು ಹೋಗುವುದಿಲ್ಲ. ವೈರಲ್ ಮತ್ತು ಬ್ಯಾಕ್ಟೀರಿಯಾದ ಸೋಂಕುಗಳಿಗೆ ಚಿಕಿತ್ಸೆ ಪರಿಣಾಮಕಾರಿಯಾಗದಿದ್ದರೂ ಅದು ಫಂಗಸ್ ಸೋಂಕು ಎಂದು ಊಹಿಸುವುದು ಉತ್ತಮ ಎಂದು ತಜ್ಞರು ಹೇಳುತ್ತಾರೆ.
ಔಷಧ ಕೊರತೆ: ಪ್ರಸ್ತುತ ಆಂಟಿಫಂಗಲ್ ಔಷಧಗಳು ಇದರ ಚಿಕಿತ್ಸೆಗೆ ಇದೆ. ಇದರಿಂದ ಅನೇಕ ಅಡ್ಡ ಪರಿಣಾಮ ಇದೆ. ಕಾರಣ ಫಂಗಲ್ ಕೋಶಗಳು ಮಾನವ ಕೋಶಗಳ ರೀತಿ ಇರುತ್ತದೆ. ಇದರಿಂದ ಆಂಟಿಫಂಗಲ್ ಔಷಧಗಳಿಗೆ ಅವುಗಳ ನಡುವೆ ವ್ಯತ್ಯಾಸ ಹುಡುಕುವುದು ಕಷ್ಟ. ಫಂಗಸ್ ಕೊಲ್ಲಲು ನಮ್ಮ ಜೀವಕೋಶಗಳ ಮೇಲೆ ದಾಳಿ ಮಾಡುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು, ಸಂಶೋಧಕರು ಈಗ ಕಡಿಮೆ ಅಡ್ಡ ಪರಿಣಾಮದೊಂದಿಗೆ ಹೊಸ ಆಂಟಿಫಂಗಲ್ ಔಷಧಗಳನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸಿದ್ದಾರೆ.
ಬ್ಯಾಕ್ಟಿರೀಯಾ ಸಹಾಯ: ಅನೇಕ ವಿಧದ ಬ್ಯಾಕ್ಟಿರೀಯಾಗಳು ನೈಸರ್ಗಿಕ ರಾಸಾಯನಿಕಗಳನ್ನು ಬಿಡುಗಡೆ ಮಾಡಿ ಫಂಗಸ್ ಕೊಲ್ಲುತ್ತದೆ. ಇದೇ ಕಾರಣಕ್ಕೆ ಸಂಶೋಧಕರು ಪ್ರಾಣಿಗಳಲ್ಲಿ ಜೀವಿಸುವ ಬ್ಯಾಕ್ಟಿರೀಯಾಗಳು ಉತ್ಪಾದಿಸುವ ರಾಸಾಯನಿಕ ಕುರಿತು ಪರೀಕ್ಷೆ ನಡೆಸಿದರು. ಎಲ್ಲ ಪ್ರಾಣಿಗಳು ಈ ಬ್ಯಾಕ್ಟಿರೀಯಾ ಪ್ರಯೋಜನ ಪಡೆಯುತ್ತದೆ. ಈ ರಾಸಾಯನಿಕಗಳು ಪ್ರಾಣಿಗಳಿಗೆ ಯಾವುದೇ ಹಾನಿ ಮಾಡುವುದಿಲ್ಲ. ಇದು ಮನುಷ್ಯರಿಗೂ ಹಾನಿ ಮಾಡುವುದಿಲ್ಲ. ಇದು ಆಂಟಿ ಫಂಗಲ್ ಔಷಧ ಅಭಿವೃದ್ಧಿಗೆ ಭರವಸೆ ನೀಡುತ್ತದೆ.
ವಿಸ್ಕೊನ್ಸಿನ್ ಯುನಿವರ್ಸಿಟಿ ಸಂಶೋಧಕರು ಸಮುದ್ರದ ಸ್ಕರ್ಟ್ ಜೀವಿಗಳಲ್ಲಿ ಕಂಡುಬರುವ ಟರ್ಬಿನ್ಮೈಸಿನ್ ಎಂಬ ರಾಸಾಯನಿಕವನ್ನು ಪತ್ತೆ ಮಾಡಿದ್ದಾರೆ. ಇದು ಹಲವು ಫಂಗಸ್ ಅನ್ನು ಕೊಲ್ಲುತ್ತದೆ. ಇದು ಮಾನವ ಕೋಶಕ್ಕೆ ಹಾನಿ ಮಾಡುವುದಿಲ್ಲ. ಸಂಶೋಧಕರು ಇದಕ್ಕಾಗಿ ಅಭಿವೃದ್ಧಿಹೊಂದಿದ ತಂತ್ರಜ್ಞಾನ ಬಳಕೆ ಮಾಡಿದ್ದು, ಹೇಗೆ ಆಂಟಿ ಫಂಗಲ್ ಔಷಧಗಳನ್ನು ಕೆಲಸ ಮಾಡುತ್ತದೆ ಎಂದು ಅರ್ಥ ಮಾಡಿಕೊಂಡಿದ್ದಾರೆ. ಈ ಔಷಧಗಳು ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿದೆ. ಸದ್ಯ ಫಂಗಸ್ ಸೋಂಕಿಗೆ ಅನೇಕ ಪರಿಣಾಮಕಾರಿ ಔಷಧ ಇಲ್ಲದಿರುವ ಸಂದರ್ಭದಲ್ಲಿ ಇದು ಹೊಸ ಭರವಸೆಯಾಗಿದೆ.
ಇದನ್ನೂ ಓದಿ: ಶಿವಮೊಗ್ಗ: ಅಣಬೆ ಸಾಂಬಾರು ಸೇವಿಸಿ ಐವರು ಮಕ್ಕಳು ಅಸ್ವಸ್ಥ