ETV Bharat / health

ಸಾಮಾಜಿಕ ಜಾಲತಾಣದಿಂದ ಮಕ್ಕಳನ್ನು ರಕ್ಷಿಸಿ: ಪೋಷಕರಿಗೆ ತಜ್ಞರ ಮನವಿ - social media effect

ಮಕ್ಕಳಲ್ಲಿರುವ ಸಾಮಾಜಿಕ ಜಾಲತಾಣದ ಚಟಗಳು ಸಾಕಷ್ಟು ಅಪಾಯ ತಂದೊಡ್ಡುತ್ತಿದೆ. ಈ ನಿಟ್ಟಿನಲ್ಲಿ ಪೋಷಕರು ಎಚ್ಚರವಹಿಸುವುದು ಅಗತ್ಯ ಎಂದು ತಜ್ಞರು ತಿಳಿಸಿದ್ದಾರೆ.

Experts suggested holding off on giving adolescents smartphones with social media

author img

By IANS

Published : Apr 22, 2024, 11:40 AM IST

ಲಖನೌ: ರೀಲ್ಸ್​ ಮಾಡಲು ಹೋಗಿ 19 ವರ್ಷದ ಯುವಕ ಶಿವಾಂಶ ನೀರಿನ ತೊಟ್ಟಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಮತ್ತೊಮ್ಮೆ ಮಕ್ಕಳ ಮೊಬೈಲ್​ ಮತ್ತು ಸಾಮಾಜಿಕ ಜಾಲತಾಣದ ಗೀಳಿನ ಬಗ್ಗೆ ಪೋಷಕರು ಮತ್ತೊಮ್ಮೆ ಆಲೋಚಿಸುವಂತೆ ಮಾಡಿದೆ. ಈ ಸಂಬಂಧ ಆತಂಕ ವ್ಯಕ್ತಪಡಿಸಿರುವ ತಜ್ಞರು, ಮಕ್ಕಳು ಬಯಸುವ ಪ್ರೀತಿ, ಮನ್ನಣೆ ಮತ್ತು ಶಾಲೆಗಳೊಂದಿಗೆ ಸಮನ್ವಯತೆ ಕೆಲಸ ಮಾಡುವಂತೆ ಕೋರಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಸಾಮಾಜಿಕ ಮಾಧ್ಯಮದಿಂದ ಮಕ್ಕಳ ಜೀವನವನ್ನು ಅಪಾಯದಲ್ಲಿಡುತ್ತಿರುವುದರ ಬಗ್ಗೆ ಮರೆಯಬೇಡಿ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಿಂದ ಯುವ ಜನತೆ ಸಂಬಂಧಗಳನ್ನು ಕಡಿದುಕೊಳ್ಳುತ್ತಿದ್ದಾರೆ ಎಂದು ಕ್ಲಿನಿಕಲ್ ಸೈಕಾಲಜಿಸ್ಟ್ ಮತ್ತು ಲಕ್ನೋ ವಿಶ್ವವಿದ್ಯಾನಿಲಯದ ಮನೋವಿಜ್ಞಾನ ವಿಭಾಗದ ಮಾಜಿ ಮುಖ್ಯಸ್ಥೆ ಪ್ರೊ.ಪಲ್ಲವಿ ಭಟ್ನಾಗರ್ ತಿಳಿಸಿದ್ದಾರೆ.

ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಸಂಬಂಧಗಳು ಹೆಚ್ಚಾಗಿ ಬಳಲುತ್ತಿವೆ. ಯುವ ಜನತೆಯ ಭದ್ರತೆ ಮತ್ತು ಅವರ ಕುರಿತು ವಿಚಾರಕ್ಕೆ ಇಂಟರ್​ನೆಟ್​ ಬೆಂಬಲವನ್ನು ಪಡೆಯುತ್ತಿದ್ದಾರೆ. ಅನನ್ಯ ಕೆಲಸಗಳನ್ನು ಮಾಡುವುದರಿಂದ ಅವರು ಗಮನ ಸೆಳೆಯಬಹುದು. ಇದರಿಂದ ಅವರು ಉತ್ತಮ ಎಂದು ಭಾವಿಸುತ್ತಾರೆ. ಇಂತಹ ಚಟಗಳು ಹೆಚ್ಚಾಗಿ ಬಯಸುವಂತೆ ಮಾಡುತ್ತದೆ ಎಂದು ವಿವರಿಸಿದ್ದಾರೆ.

ಐದರಿಂದ ಆರು ಯುವ ಜನತೆ ಸಾಮಾಜಿಕ ಮಾಧ್ಯಮಗಳ ವೀಕ್ಷಣಾ ಚಟದಿಂದ ಬಳಲುತ್ತಿದ್ದಾರೆ. ಅವರಲ್ಲಿ ಆತ್ಮಹತ್ಯೆಯಂತಹ ಭಾವನೆಗಳು ಮೂಡುತ್ತಿದ್ದು,. ವೈದ್ಯರ ಭೇಟಿಗೆ ಮುಂದಾಗಿದ್ದಾರೆ. ಅವರು ಕೆಲವು ಬಾರಿ ಅಪಾಯಕಾರಿ ಮತ್ತು ಸ್ಪಷ್ಟವಾದ ತೀರ್ಮಾನಗಳಿಗೆ ಬರುತ್ತಾರೆ ಎಂದು ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ (ಕೆಜಿಎಂಯು) ಮನೋವೈದ್ಯಕೀಯ ವಿಭಾಗದ ಪ್ರೊ.ಆದರ್ಶ ತ್ರಿಪಾಠಿ ತಿಳಿಸಿದ್ದಾರೆ.

ಸಾಮಾಜಿಕ ಮಾಧ್ಯಮಗಳು ಮೆದುಳಿನಲ್ಲಿ ಚಟದಂತೆ, ಡೋಪಮೈನ್ ರಶ್ ನೀಡುತ್ತದೆ. ಇಂತಹ ಪ್ರವೃತ್ತಿ ಕುರಿತು ಪೋಷಕರು ಗಮನಹರಿಸಬೇಕು. ಮಕ್ಕಳಿಗೆ ಇಂಟರ್ನೆಟ್​ ಅನ್ನು ಗಂಭೀರವಾಗಿ ಪರಿಗಣಿಸದಂತೆ ಸಲಹೆ ನೀಡಬಹುದು. ಜೊತೆಗೆ ಶಾಲೆಗಳು ಕೂಡ ಇಂತಹ ಅಪಾಯಕಾರಿ ಸಂಗತಿ ಗಮನದಲ್ಲಿರಿಸಿಕೊಂಡು ಚರ್ಚೆಗಳನ್ನು ನಡೆಸಬೇಕು ಎಂದು ಪ್ರೊ ಭಟ್ನಾಗರ್​ ತಿಳಿಸಿದ್ದಾರೆ.

ಹದಿಹರೆಯದವರಿಗೆ ಸಾಮಾಜಿಕ ಮಾಧ್ಯಮದ ವ್ಯವಸ್ಥೆಯಿರುವ ಸ್ಮಾರ್ಟ್​ಫೋನ್​ಗಳನ್ನು ನಿಲ್ಲಿಸಬೇಕು. ಅವರಿಗೆ ಹೊರಾಂಗಣ ಕ್ರೀಡೆ ಆಡುವುದಕ್ಕೆ ಪ್ರೋತ್ಸಾಹಿಸಬೇಕು ಎಂದಿದ್ದಾರೆ.

ಹದಿಹರೆಯದರಲ್ಲಿ ಹೆಚ್ಚಿನ ಮಟ್ಟದಲ್ಲಿರುವ ಈ ಸಾಮಾಜಿಕ ಜಾಲತಾಣದ ಗೀಳು ಅವರ ದೈನಂದಿನ ಅಗತ್ಯ ಚಟುವಟಿಕೆಗಳಾದ ತಿನ್ನುವುದು, ಮಲಗುವುದು ಮತ್ತು ವ್ಯಾಯಾಮಗಳನ್ನು ಮರೆಸುತ್ತದೆ ಎಂದು ಇತ್ತೀಚಿಗೆ ಫಿನ್​​​ಲ್ಯಾಂಡ್​ ​ಸಂಶೋಧಕರು ಪತ್ತೆ ಮಾಡಿದ್ದಾರೆ.

ಇದನ್ನೂ ಓದಿ: ಪೋಷಕರೇ ಎಚ್ಚರ: ಮಕ್ಕಳು ಶಾಲೆಗೆ ಚಕ್ಕರ್​ ಹೊಡೆಯಲು ಕಾರಣವಾಗಬಹುದು ಈ ಮೊಬೈಲ್​ ಗೀಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.