ETV Bharat / health

ಜಂಕ್​ಫುಡ್​ ಸೇವನೆಯಿಂದ ಮಕ್ಕಳ ದೈಹಿಕ ಆರೋಗ್ಯ ಮಾತ್ರವಲ್ಲ, ಮಾನಸಿಕ ಆರೋಗ್ಯಕ್ಕೂ ಕುತ್ತು - JUNK FOOD PROBLEM - JUNK FOOD PROBLEM

ಜಂಕ್​ಫುಡ್​ಗಳು ಮಕ್ಕಳ ನಡುವಳಿಕೆ ಮತ್ತು ಮನಸ್ಥಿತಿ ಮೇಲೆ ಪರಿಣಾಮ ಬೀರುತ್ತವೆ. ಈ ಸಂಬಂಧ ಅನೇಕ ಅಧ್ಯಯನಗಳು ಸಾಕ್ಷಿ ನೀಡಿವೆ.

JUNK FOOD PROBLEM
ಜಂಕ್​ಫುಡ್​ ಸೇವನೆಯಿಂದ ಮಕ್ಕಳ ದೈಹಿಕ ಆರೋಗ್ಯ ಮಾತ್ರವಲ್ಲ, ಮಾನಸಿಕ ಆರೋಗ್ಯಕ್ಕೂ ಕುತ್ತು (IANS)
author img

By ETV Bharat Karnataka Team

Published : May 15, 2024, 12:53 PM IST

ನವದೆಹಲಿ: ಜಂಕ್​ ಫುಡ್​ಗಳಲ್ಲಿ ಸಕ್ಕರೆ, ಉಪ್ಪು ಮತ್ತು ಅನಾರೋಗ್ಯಕರ ಕೊಬ್ಬಿನಾಂಶಗಳು ಹಚ್ಚಾಗಿರುತ್ತವೆ. ಇವು ಕೇವಚ ಮಕ್ಕಳ ದೈಹಿಕ ಆರೋಗ್ಯ ಮಾತ್ರವಲ್ಲ, ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತವೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಜಂಕ್​ ಫುಡ್​ಗಳನ್ನು ಸಾಮಾನ್ಯವಾಗಿ ಮಕ್ಕಳು ತಿನ್ನುತ್ತಾರೆ. ಇದರಿಂದ ಅವರ ಬೆಳವಣಿಗೆಗೆ ಕಾರಣವಾಗುವ ಅಗತ್ಯ ಪೋಷಕಾಂಶಗಳ ಕೊರತೆ ಕಾಡುತ್ತದೆ. ಜೊತೆಗೆ ಇದು ಮಧುಮೇಹಕ್ಕೆ ಪ್ರಮುಖ ಕಾರಣವಾಗಿರುವ ಸ್ಥೂಲಕಾಯ ಮತ್ತು ಅಧಿಕ ತೂಕಕ್ಕೆ ದಾರಿಮಾಡಿಕೊಡುತ್ತದೆ. ಹಾಗೇ ಅಧಿಕ ರಕ್ತದೊತ್ತಡ, ಹೃದಯ ರೋಗ, ಕ್ಯಾನ್ಸರ್​ನಂತಹ ಸಮಸ್ಯೆಗೆ ಕಾರಣವಾಗುತ್ತದೆ.

ಸಂಶೋಧನೆಯಲ್ಲಿ ಕಂಡ ಮತ್ತೊಂದು ಅಂಶ ಎಂದರೆ, ಜಂಕ್​ಫುಡ್​ಗಳು ಮಕ್ಕಳ ನಡುವಳಿಕೆ ಮತ್ತು ಮನಸ್ಥಿತಿ ಮೇಲೆ ಪರಿಣಾಮ ಬೀರುತ್ತವೆ. ಈ ಸಂಬಂಧ ಅನೇಕ ಅಧ್ಯಯನಗಳು ಸಾಕ್ಷಿ ನೀಡಿವೆ. ಹೆಚ್ಚಿನ ಫಾಸ್ಟ್​ಫುಡ್​ ಮತ್ತು ಸಾಫ್ಟ್​​ ಡ್ರಿಂಕ್​ಗಳು ಮಕ್ಕಳಲ್ಲಿ ಹೈಪರ್​ಆಕ್ಟಿವಿಟಿ, ಏಕಾಗ್ರತೆ ಕೊರತೆ, ಖಿನ್ನತೆಯಂತಹ ನಡುವಳಿಕೆ ಬದಲಾವಣೆಗೆ ಕಾರಣವಾಗುತ್ತದೆ.

ಜಂಕ್​ಫುಡ್​ಗಳು ಮಕ್ಕಳ ಮಾನಸಿಕ ಆರೋಗ್ಯದ ಮೇಲೂ ಹೆಚ್ಚಿನ ಪರಿಣಾಮ ಬೀರುತ್ತವೆ. ಅಧಿಕ ಜಂಕ್​ ಫುಡ್​ ಸೇವನೆಯುಂದ ಪೋಷಕಾಂಶ ಕೊರತೆ ಮತ್ತು ಅಸಮತೋಲನಕ್ಕೆ ಕಾರಣವಾಗುತ್ತದೆ ಎಂದು ವೈಶಾಲಿಯ ಮ್ಯಾಕ್ಸ್​ ಆಸ್ಪತ್ರೆಯ ಸಹಾಯಕ ನಿರ್ದೇಶಕರಾಗಿರುವ ಡಾ ಅಮಿತಾಬ್​ ಸಹಾ ತಿಳಿಸಿದ್ದಾರೆ.

ಇದು ಏಕಾಗ್ರತೆ ಮತ್ತು ಅರಿವಿನ ಕಾರ್ಯಾಚರಣೆ ಮತ್ತು ಮನಸ್ಥಿತಿ ನಿಯಂತ್ರಣದ ಮೇಲೆ ಪರಿಣಾಮ ಬೀರುತ್ತದೆ. ಅಂತಿಮವಾಗಿ ಮಕ್ಕಳ ಮಾನಸಿಕ ಯೋಗಕ್ಷೇಮದ ಮೇಲೆ ಪ್ರಭಾವ ಬೀರುತ್ತದೆ ಎಂದು ಅಧ್ಯಯನ ವಿವರಿಸಿದೆ.

ಬಿಎಂಜೆಯಲ್ಲಿ ಇತ್ತೀಚಿಗೆ ಪ್ರಕಟವಾದ ಅಧ್ಯಯನದಲ್ಲಿ ಸಿದ್ಧ ಆಹಾರಗಳನ್ನು ಹೆಚ್ಚಾಗಿ ಸೇವಿಸುವುದು ಆತಂಕ ಮತ್ತು ಖಿನ್ನತೆಯ ಅಪಾಯದೊಂದಿಗೆ ಸಂಬಂಧ ಹೊಂದಿದೆ ಎಂಬುದನ್ನು ತೋರಿಸಿದೆ.

ಫಾಸ್ಟ್​ ಫುಡ್​ ಮತ್ತು ಕಾರ್ಬೋಹೈಡ್ರೇಟ್​​ ಸಾಫ್ಟ್​ ಡ್ರಿಂಕ್ಸ್​​ಗಳು ಅತಿ ಹೆಚ್ಚಿನ ಸಕ್ಕರೆ ಅಂಶ ಹೊಂದಿರುವ ಕೆಫೆನ್​ ಅನ್ನು ಒಳಗೊಂಡಿರುತ್ತದೆ. ಇದು ದೇಹದಲ್ಲಿ ಸಕ್ಕರೆ ಅಂಶವನ್ನು ಹೆಚ್ಚಿಸುತ್ತದೆ. ಇದರಿಂದ ಕಿರಿಕಿರಿ ಮತ್ತು ಮೂಡ್​ ಸ್ವಿಂಗ್​ ಅನುಭವ ಮಕ್ಕಳಲ್ಲಿ ಉಂಟಾಗುತ್ತದೆ ಎಂದು ಶ್ರೀ ಗಂಗಾ ರಾಮ್​ ಆಸ್ಪತ್ರೆಯ ಕನ್ಸಲ್ಟಂಟ್​​ ಡಾ ರಿಶಿಕೇಷ್​​ ದೇಸಾಯಿ ಮಾಹಿತಿ ನೀಡಿದ್ದಾರೆ.

ಪೋಷಕರು ಏನ್​ ಮಾಡಬೇಕು; ಮಕ್ಕಳಿಗೆ ಇಂತಹ ಆಹಾರಗಳ ಸೇವನೆಗೆ ಸೀಮಿತ ಅವಕಾಶ ನೀಡಿ, ಹಾಗೇ ಅವರಿಗೆ ಸಮತೋಲಿತ ಆಹಾರವನ್ನು ನೀಡಿ. ಹೆಚ್ಚು ಹಣ್ಣು, ತರಕಾರಿ ಬೇಳೆಕಾಳು, ತೆಳು ಪ್ರೋಟಿನ್​ ಆಹಾರ ನೀಡಿ. ಅವರನ್ನು ದೈಹಿಕ ಚಟುವಟಿಕೆಗೆ ಉತ್ತೇಜಿಸಿ ಮತ್ತು ಹೊರಾಂಗಣ ಆಟಗಳಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಿ ಎಂದು ಸಲಹೆ ನೀಡಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ಮಕ್ಕಳ ಆಲಸ್ಯ ಹೋಗಲಾಡಿಸಲು ಹೊಸ ನಿಯಮ ತಂದ ಸರ್ಕಾರ: ಹೊರಗೆ ಇಂತಿಷ್ಟು ಸಮಯ ಆಡಲೇಬೇಕು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.