ಇಂದಿನ ಆಧುನಿಕ ಯಾಂತ್ರಿಕ ಯುಗದಲ್ಲಿ ಪ್ರಮುಖವಾಗಿ ಎರಡು ಸಮಸ್ಯೆಗಳು ಜನರನ್ನು ಕಾಡುತ್ತಿವೆ. ಅವುಗಳಲ್ಲಿ ಒಂದು ದೈಹಿಕ ಚಟುವಟಿಕೆಯ ಕೊರತೆ. ದಿನಕ್ಕೆ ಒಂದು ಬಾರಿಯಾದರು ಕೂಡ ಬೆವರು ಸುರಿಸದವರ ಸಂಖ್ಯೆಯೇ ಹೆಚ್ಚಿದೆ. ಕೆಲವು ಆಹಾರ ಪದಾರ್ಥಗಳನ್ನು ಸೇವಿಸುವುದರಿಂದಲೂ ಜನರಿಗೆ ಹಾನಿಯಾಗುತ್ತದೆ.
ಮೊದಲು ಜೋಳ, ಸಿರಿಧಾನ್ಯಗಳ ಜೊತೆಗೆ ಅನ್ನವನ್ನು ಮಾತ್ರ ಸೇವಿಸಲಾಗುತ್ತಿತ್ತು. ಪ್ರಸ್ತುತ ಊಟ ಮಾಡುವವರು ತಟ್ಟೆಯನ್ನು ಗಮನಿಸಿದರೆ, ಅದರಲ್ಲಿ ಫಾಸ್ಟ್ ಫುಡ್ ಮತ್ತು ಜಂಕ್ ಫುಡ್ನಿಂದ ತುಂಬಿ ಹೋಗಿರುತ್ತದೆ. ಈ ಆಹಾರ ಪದಾರ್ಥಗಳನ್ನು ಸೇವಿಸಿದರೆ, ಹೊಟ್ಟೆ ಭಾಗದಲ್ಲಿ ಹೆಚ್ಚು ಕೊಬ್ಬು ಶೇಖರಣೆಯಾಗುತ್ತದೆ. ಅದಕ್ಕಾಗಿಯೇ ವೈದ್ಯರು ಎಲ್ಲರಿಗೂ ವ್ಯಾಯಾಮ ಮಾಡಲು ಸಲಹೆ ನೀಡುತ್ತಾರೆ. ಅದು ಸಾಧ್ಯವಾಗದಿದ್ದರೆ, ದಿನಕ್ಕೆ ಒಂದಿಷ್ಟು ವಾಕಿಂಗ್ ಮಾಡಲು ತಿಳಿಸಿದ್ದಾರೆ.
ಬಹುತೇಕ ಎಂಡೋಕ್ರಿನಾಲಜಿಸ್ಟ್ ವೈದ್ಯರ ಪ್ರಕಾರ, ಪ್ರತಿ ವ್ಯಕ್ತಿ (ವಯಸ್ಕರು) ಪ್ರತಿದಿನ ಕನಿಷ್ಠ 10,000 ಸ್ಟೆಪ್ಸ್ಗಳಷ್ಟು ನಡೆಯಲು ಪ್ರಯತ್ನಿಸಬೇಕು. ಹೃದಯದ ಆರೋಗ್ಯಕ್ಕಾಗಿ ವಾಕಿಂಗ್ ಮಾಡುವುದರಿಂದ ಹಲವು ಪ್ರಯೋಜನಗಳು ಲಭ್ಯವಾಗುತ್ತದೆ. ಪ್ರತಿನಿತ್ಯ ವಾಕಿಂಗ್ ಮಾಡುವುದರಿಂದ ಹೃದ್ರೋಗಗಳನ್ನು ತಡೆಗಟ್ಟುವುದಲ್ಲದೇ, ಮಧುಮೇಹ, ಬ್ರೈನ್ ಸ್ಟ್ರೋಕ್, ಬೊಜ್ಜು, ಸ್ತನ ಕ್ಯಾನ್ಸರ್ ಮತ್ತು ಖಿನ್ನತೆಯನ್ನು ತಡೆಯಲು ಸಾಧ್ಯವಾಗುತ್ತದೆ. ವ್ಯಕ್ತಿಯು ಸಂಪೂರ್ಣವಾಗಿ ಆರೋಗ್ಯವಾಗಿ ಬದುಕಲು ಪೂರಕವಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ.
10,000 ಸ್ಟೇಪ್ಸ್ ವಾಕಿಂಗ್ ಮಾಡುವುದು ಸುಮಾರು 7.5 ಕಿಲೋಮೀಟರ್ಗೆ ಸಮವಾಗಿರುತ್ತದೆ. ಒಂದೇ ಬಾರಿ ನಿರಂತರವಾಗಿ ವಾಕಿಂಗ್ ಮಾಡುವುದು ಅಲ್ಲ. ಬೆಳಿಗ್ಗೆ ಹಾಸಿಗೆಯಿಂದ ಎಳುವುದರಿಂದ ಹಿಡಿದು, ರಾತ್ರಿ ಮಲಗುವವರಿಗೂ ಕೊನೆಯ ಹಂತದವರೆಗೆ ವಾಕಿಂಗ್ ಮಾಡುವುದು ಇದೇ ಲೆಕ್ಕದಲ್ಲಿ ಸೇರಿದೆ. ಬೆಳಗ್ಗೆ ಒಂದು ಗಂಟೆ ವಾಕ್ ಮಾಡಿದರೆ, ಅದು ಕೂಡ ಪರಿಗಣಿಸಲಾಗುತ್ತದೆ ಎನ್ನುತ್ತಾರೆ ತಜ್ಞರು. ಇನ್ನು ಮಕ್ಕಳ ವಿಚಾರಕ್ಕೆ ಬಂದರೆ.. ನಿತ್ಯ ಒಂದೂವರೆ ಗಂಟೆಯಾದರೂ ಆಟ ಆಡಬೇಕು ಎಂದು ಸಲಹೆ ನೀಡಿದ್ದಾರೆ. ಇದು ಅವರನ್ನು ಆರೋಗ್ಯವಾಗಿರಿಸುವುದು ಮಾತ್ರವಲ್ಲದೆ ದೇಹವನ್ನು ಸದೃಢಗೊಳಿಸುತ್ತದೆ.
ಯಾವ ವಯಸ್ಸಿನವರು ಎಷ್ಟು ವಾಕಿಂಗ್ ಮಾಡಬೇಕು?
- 40 ವರ್ಷದೊಳಗಿನ ಮಹಿಳೆಯರು ದಿನಕ್ಕೆ 12,000 ಸ್ಟೆಪ್ಸ್ ನಡೆಯಲು ಶಿಫಾರಸು ಮಾಡಲಾಗಿದೆ.
- 40 ರಿಂದ 50 ವರ್ಷ ವಯಸ್ಸಿನ ಮಹಿಳೆಯರು ದಿನಕ್ಕೆ 11,000 ಸ್ಟೆಪ್ಸ್ ನಡೆಯಲು ಗುರಿ ನೀಡಲಾಗಿದೆ.
- 50 ರಿಂದ 60 ವರ್ಷ ವಯಸ್ಸಿನ ಮಹಿಳೆಯರು ದಿನಕ್ಕೆ 10,000 ಸ್ಟೆಪ್ಸ್ ವಾಕ್ ಮಾಡುವುದು ಆರೋಗ್ಯಕರವಾಗಿರುತ್ತದೆ.
- 60 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು 8,000 ಸ್ಟೆಪ್ಸ್ ನಡೆದರೆ ತುಂಬಾ ಒಳ್ಳೆಯದು.
- 18ರಿಂದ 50 ವರ್ಷದ ವಯಸ್ಸಿನವರು ಪ್ರತಿದಿನ 12,000 ಸ್ಟೆಪ್ಸ್ ವಾಕಿಂಗ್ ಮಾಡಲು ವೈದ್ಯರು ಸಲಹೆ ನೀಡಿದ್ದಾರೆ.
- 50 ವರ್ಷಕ್ಕಿಂತ ಮೇಲ್ಪಟ್ಟ ಪುರುಷರು- ದಿನಕ್ಕೆ 11,000 ಸ್ಟೆಪ್ಸ್ ನಡೆಯಲು ಆರೋಗ್ಯಕ್ಕೆ ತುಂಬಾ ಅನುಕೂಲವಾಗುತ್ತದೆ.
ಈ ವಿಷಯದ ಬಗ್ಗೆ ಈಗಾಗಲೇ ಅನೇಕ ಸಂಶೋಧನೆಗಳು ನಡೆದಿವೆ. ಇವುಗಳ ಪ್ರಕಾರ, ಒಬ್ಬ ವ್ಯಕ್ತಿಯು ದಿನಕ್ಕೆ ಕನಿಷ್ಠ 4,000 ರಿಂದ 5,000 ಸ್ಟೆಪ್ಸ್ ನಡೆಯಬೇಕು. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಪೆಡ್ರೊ ಎಫ್ ಗಾರ್ಸಿಯಾ ಅವರು 2023ರಲ್ಲಿ ನಡೆಸಿದ ಅಧ್ಯಯನ ತಿಳಿಸುವಂತೆ ಕನಿಷ್ಠ 4,000 ಸ್ಟೆಪ್ಸ್ ವಾಕಿಂಗ್ ಮಾಡುವುದು ಆರೋಗ್ಯಕರವಾಗಿದೆ. ಹೆಚ್ಚು ವಾಕಿಂಗ್ ಮಾಡುವುದು ಉತ್ತಮ ಎಂದು ಸಂಶೋಧನೆ ತಿಳಿಸಿದೆ.
ಓದುಗರ ಗಮನಕ್ಕೆ: ಈ ಸ್ಟೋರಿಯಲ್ಲಿ ನಿಮಗೆ ನೀಡಿರುವ ಎಲ್ಲಾ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳುವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ನಿಮ್ಮ ವೈಯಕ್ತಿಕ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.
ಇದನ್ನೂ ಓದಿ: ನಿಮ್ಮ ಕಣ್ಣಿನ ಬಣ್ಣ ಹೀಗಿದೆಯಾ; ಹಾಗಾದ್ರೆ ನಿಮಗೆ ಲಿವರ್ ಸಮಸ್ಯೆ ಇರಬಹುದು ಎಚ್ಚರ! - Symptoms and signs of Liver Damage