ETV Bharat / health

ಮಧುಮೇಹಿಗಳಲ್ಲಿ ತಕ್ಷಣಕ್ಕೆ ಸಕ್ಕರೆ ಮಟ್ಟ ಹೆಚ್ಚಾದರೆ ಏನಾಗುತ್ತೆ; ಇಲ್ಲಿದೆ ತಜ್ಞರ ಮಾತು - diabetes alarming rate in India

ಎರಡನೇ ಅತಿ ಹೆಚ್ಚು ಸಂಖ್ಯೆಯಲ್ಲಿ ಮಧುಮೇಹಿಗಳನ್ನು ಭಾರತ ಹೊಂದಿದ್ದು, ಈ ನಿಟ್ಟಿನಲ್ಲಿ ಅದರ ಅಪಾಯ ಗಮನಿಸಬೇಕು.

diabetes are being reported at an alarming rate in India

author img

By ETV Bharat Karnataka Team

Published : Apr 24, 2024, 2:03 PM IST

ನವದೆಹಲಿ: ಮಧುಮೇಹಿಗಳಲ್ಲಿನ ಸಕ್ಕರೆ ಅಂಶ ದಿಢೀರ್​ ಏರಿಕೆ ಅಪಾಯಕಾರಿ ಆಗಿದೆ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ. ಅದರಲ್ಲೂ ರೋಗಿಗಳ ಸಕ್ಕರೆ ಮಟ್ಟ 300 ದಾಟಿದರೆ ಇದು ಅಪಾಯಕಾರಿ. ತಕ್ಷಣಕ್ಕೆ ಈ ಸಂದರ್ಭದಲ್ಲಿ ವೈದ್ಯಕೀಯ ನಿರ್ವಹಣೆ ಅಗತ್ಯವಾಗಿದೆ ಎಂದು ಡಾ ತಮೊರಿಶ್​ ತಿಳಿಸಿದ್ದಾರೆ. ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ಈ ಟಿವಿ ಭಾರತ್​ ಈ ಅಂಶದ ಕುರಿತು ನೋಡಲು ಯತ್ನಿಸಿದ್ದು, ಈ ಕುರಿತು ತಜ್ಞರ ಅಭಿಮತ ಇಲ್ಲಿದೆ.

ಮಧುಮೇಹಕ್ಕೆ ಸಾಮಾನ್ಯ ಕಾರಣ ಏನು: ಭಾರತದಲ್ಲಿ ಮಧುಮೇಹಕ್ಕೆ ಕಾರಣವಾಗುವ ಮತ್ತು ಅದರ ಮೇಲೆ ಪರಿಣಾಮ ಬೀರುವ ಬಹಳಷ್ಟು ಅಂಶಗಳಿವೆ. ಅದರಲ್ಲಿ ಅನಾರೋಗ್ಯಕರ ತಿನ್ನುವ ಹವ್ಯಾಸ, ದೈಹಿಕ ಚಟುವಟಿಕೆ ಇಳಿಕೆ, ನಗರೀಕರಣ ಮತ್ತು ಒತ್ತಡ ಪ್ರಮುಖವಾಗಿದೆ. ದಟ್ಟವಾದ ಕ್ಯಾಲೋರಿ, ಹೆಚ್ಚಿನ ಫಾಸ್ಟ್​ ಫುಡ್​ ತಿನ್ನುವಿಕೆ ಅಭ್ಯಾಸ, ಜಢ ಜೀವನಶೈಲಿಯೂ ಮಧುಮೇಹದ ಅಪಾಯದ ಮೇಲೆ ಪ್ರಭಾವ ಬೀರುತ್ತದೆ. ಇದಕ್ಕಿಂತಲೂ ಮಾಲಿನ್ಯ ಮತ್ತು ಮಾನಸಿಕ ಆರೋಗ್ಯದ ಒತ್ತಡವೂ ದೀರ್ಘ ಪರಿಸ್ಥಿತಿಯೊಂದಿಗೆ ಸಂಬಂಧ ಹೊಂದಿದೆ. ವಯೋ ನಿರ್ಧಿಷ್ಟ ಪ್ರವೃತ್ತಿ ಅನುಸಾರ, 35 ರಿಂದ 49 ವರ್ಷದರೆಗಿನ ಅತಿ ಹೆಚ್ಚು, 15- 19 ವರ್ಷದ ಯುವ ಜನತೆಯಲ್ಲಿ ಕಡಿಮೆ ಮಧುಮೇಹದ ಅಪಾಯದ ಪ್ರಮಾಣದಲ್ಲಿದೆ.

ಯಾವಾಗ ಮಧುಮೇಹದ ತೀವ್ರತೆ ಉಂಟಾಗುತ್ತದೆ: ಭಾರತದಲ್ಲಿನ ಬಹುತೇಕ ಮಧುಮೇಹಗಳು ಟೈಪ್​ 2 ಆಗಿದೆ. ಟೈಪ್​ 2 ಮಧುಮೇಹದಲ್ಲಿ ದೇಹವೂ ಸಾಕಷ್ಟು ಪ್ರಮಾಣದ ಇನ್ಸುಲಿನ್​ ಬಿಡುಗಡೆ ಮಾಡುವುದಿಲ್ಲ ಅಥವಾ ಇನ್ಸುಲಿನ್​ ಪ್ರತಿರೋಧವನ್ನು ಹೊಂದಿರುತ್ತದೆ. ಟೈಪ್​ 2 ರೋಗಿಗಳು ತೀವ್ರತರಹವಾದ ಸಮಸ್ಯೆಗಳಾದ ಡಯಾಬಿಟಿಕ್ ಕೀಟೋ ಆಸಿಡೋಸಿಸ್ ಅಥವಾ ಹೈಪರೋಸ್ಮೊಲಾರ್ ಹೈಪರ್ಟೋನಿಕ್ ನಾನ್‌ಕೆಟೋಟಿಕ್ ಸ್ಥಿತಿಯಂತಹ ಹೆಚ್ಚಿನ ಸಕ್ಕರೆ ಪರಿಸ್ಥಿತಿಗಳು ಮತ್ತು ಹೈಪೊಗ್ಲಿಸಿಮಿಯಾದಂತಹ ಕಡಿಮೆ ಸಕ್ಕರೆ ಪರಿಸ್ಥಿತಿಗಳನ್ನು ಒಳಗೊಂಡಿರುತ್ತಾರೆ. ಈ ಪರಿಸ್ಥಿತಿಯಲ್ಲಿ ನಿಖರ ಪತ್ತೆ ಮತ್ತು ನಿರ್ವಹಣೆ ಅಗತ್ಯವಾಗಿದೆ. ಆದಾಗ್ಯೂ ಮಧುಮೇಹದ ಸಮಯ, ದೀರ್ಘಾವಧಿ ಸಮಸ್ಯೆಗಳು ಉಲ್ಬಣವಾಗುತ್ತದೆ. ದೀರ್ಘಾವಧಿಯ ಸಮಸ್ಯೆಗಳಲ್ಲಿ ಮೈಕ್ರೊವಸ್ಕಯೂಲರ್​ ಮತ್ತು ಮಕ್ರೋವಸ್ಯೂಕುಲರ್​, ನಾನ್​ವಸ್ಕ್ಯೂಲರ್​​ ಸಂಕೀರ್ಣತೆ ಹೊಂದಿದೆ.

ಯಾವ ಹಂತದಲ್ಲಿ ಮಧುಮೇಹಿಗಳು ಇನ್ಸುಲಿನ್​ ಪಡೆಯಬೇಕು: ಇದಕ್ಕೆ ನಿರ್ದಿಷ್ಟ ಮಟ್ಟ ಇಲ್ಲ. ವೈದ್ಯರು ರೋಗಿಯ ಪರಿಸ್ಥಿತಿ ಮೇಲೆ ನಿರ್ಧರಿಸುತ್ತಾರೆ. ಇನ್ಸುಲಿನ್​ ಪಡೆಯುತ್ತಿರುವವರು ವೈದ್ಯರ ಸಲಹೆ ಪಡೆಯದೇ ಇದನ್ನು ನಿಲ್ಲಿಸುವಂತಿಲ್ಲ.

ಮಧುಮೇಹದ ಪ್ರಕರಣ: ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಪ್ರಕಾರ, ಮಧುಮೇಹಗಳು 15 - 49ವರ್ಷದಲ್ಲಿ ಕಂಡು ಬರುತ್ತದೆ. ಇನ್ನು ಪತ್ತೆಯಾದ ಮಧುಮೇಹ ಪ್ರಕರಣಗಳು 24.82ರಷ್ಟಿದೆ. ಇದರಲ್ಲಿ ಪುರುಷರ ಸಂಖ್ಯೆ 28.82ರಷ್ಟು ಮತ್ತು ಮಹಿಳೆಯರಲ್ಲಿ 24.22ರಷ್ಟಿದೆ.

ಭಾರತದಲ್ಲಿ ಮಧುಮೇಹದ ಅಪಾಯ ದರ: ಎರಡನೇ ಅತಿ ಹೆಚ್ಚು ಸಂಖ್ಯೆಯಲ್ಲಿ ಮಧುಮೇಹಿಗಳನ್ನು ಭಾರತ ಹೊಂದಿದೆ. 20 ರಿಂದ 79 ವರ್ಷದವರಲ್ಲಿ ಇದನ್ನು ಕಾಣಬಹುದಾಗಿದ್ದು, 2021ರಲ್ಲಿ 74.9 ಮಿಲಿಯನ್​​ ಮಧುಮೇಹಿಗಳಿದ್ದು, ಈ ಸಂಖ್ಯೆ 2045ರ ಹೊತ್ತಿಗೆ 124.9ರಷ್ಟು ಆಗಲಿದೆ. ಅಂದಾಜಿನ ಪ್ರಕಾರ, 2019ರಲ್ಲಿ ಭಾರತದಲ್ಲಿ ಮಧುಮೇಹದ ಸಾವಿನ ದರ ಲಕ್ಷ ಜನರಿಗೆ 27.35ರಷ್ಟಿದೆ.

ಇದನ್ನೂ ಓದಿ: ಭಾರತದ ದುಡಿಯುವ ವರ್ಗದಲ್ಲಿ ಕುರುಡುತನಕ್ಕೆ ಕಾರಣವಾಗುತ್ತಿರುವ ಮಧುಮೇಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.