ETV Bharat / health

ಕಿಡ್ನಿ ದಾನ ಮಾಡಿ ಮಗಳ ಜೀವ ಉಳಿಸಿದ ತಾಯಿ; ಪುತ್ರಿಗೆ ಮರುಜನ್ಮ ನೀಡಿದ ಅಮ್ಮ

World kidney day 2024: ಇಂದು ವಿಶ್ವ ಕಿಡ್ನಿ ದಿನಾಚರಣೆ. ಕಿಡ್ನಿ ವೈಫಲ್ಯ, ಇದಕ್ಕೆ ಕಾರಣಗಳು ಮತ್ತು ವೈದ್ಯರ ಸಲಹೆ ಕುರಿತ ಮಾಹಿತಿ ಇಲ್ಲಿದೆ.

dehradun-mother-saved-her-daughters-life-by-donating-a-kidney

author img

By ETV Bharat Karnataka Team

Published : Mar 14, 2024, 10:47 AM IST

ಡೆಹ್ರಾಡೂನ್​: ಜನನಿ ಜನ್ಮ ಭೂಮಿಶ್ಚ.. ಸ್ವರ್ಗಾದಪಿ ಗರೀಯಸಿ.. ಅಂದ್ರೆ ಹೆತ್ತ ತಾಯಿ, ಹೊತ್ತ ಭೂಮಿ ಸ್ವರ್ಗಕ್ಕಿಂತಲು ಮಿಗಿಲು ಎಂಬ ಮಾತಿದೆ. ಇನ್ನೊಂದು ತಾಯಿಗಿಂತ ಬಂಧುವಿಲ್ಲ.. ಉಪ್ಪಿಗಿಂತ ರುಚಿ ಇಲ್ಲ ಎಂದು ಹೇಳಲಾಗುತ್ತೆ. ಈ ಮಾತನ್ನು ಸಾಬೀತುಪಡಿಸುವ ಘಟನೆಗಳು ಆಗಾಗ ನಡೆಯುತ್ತಿರುವೆ. ಇಲ್ಲೋರ್ವ ತಾಯಿ ಕೂಡ ತನ್ನ ಮಗಳನ್ನು ಬದುಕಿಸಲು ಜೀವ ಪಣಕ್ಕಿಟ್ಟು ಅಂಗಾಂಗ ದಾನ ಮಾಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಮಗಳನ್ನು ಬದುಕಿಸಲು ತಾಯಿ ತನ್ನ ಮೂತ್ರಪಿಂಡವನ್ನು ದಾನ ಮಾಡುವ ಮೂಲಕ ಪುತ್ರಿಗೆ ಮರುಜನ್ಮ ನೀಡಿದ್ದಾರೆ.

ನಮ್ಮ ದೇಹದ ಅಗತ್ಯ ಅಂಗ ಈ ಮೂತ್ರಪಿಂಡ: ದೇಹದ ದ್ರವಗಳನ್ನು ಸೋಸುವಿಕೆಯಲ್ಲಿ ಕಿಡ್ನಿ ಪ್ರಮುಖ ಪಾತ್ರ ವಹಿಸುತ್ತದೆ. ಸರಳವಾಗಿ ಹೇಳೋದಾದ್ರೆ ಇದು ದೇಹದಲ್ಲಿ ಆರ್​ಒ ರೀತಿ ಕಾರ್ಯ ನಿರ್ವಹಿಸುತ್ತದೆ. ಇದರ ಮಹತ್ವವನ್ನು ತಿಳಿಸುವ ಉದ್ದೇಶದಿಂದ 2006ರಲ್ಲಿ ಮೊದಲ ಬಾರಿಗೆ ಮಾರ್ಚ್​ 24ರಂದು ವಿಶ್ವ ಕಿಡ್ನಿ ದಿನಾಚರಣೆಯನ್ನು ಜಾರಿಗೆ ತರಲಾಯಿತು. ಇಂಟರ್ನ್ಯಾಷನಲ್​ ಸೊಸೈಟಿ ಆಫ್​ ನೆಫ್ರಾಲಾಜಿ ಮತ್ತು ದಿ ಇಂಟರ್ನ್ಯಾಷನಲ್​ ಫೆಡರೇಷನ್​ ಆಫ್​​ ಕಿಡ್ನಿ ಫೌಂಡೇಷನ್​ ವಿಶ್ವ ಕಿಡ್ನಿ ದಿನವನ್ನು ಆಚರಿಸಲು ಪ್ರಾರಂಭಿಸಿದವು. ಈ ವರ್ಷದ ಕಿಡ್ನಿ ದಿನದ ಪ್ರಮುಖ ಧ್ಯೇಯ ವಾಕ್ಯ ಎಲ್ಲರಿಗಾಗಿ ಕಿಡ್ನಿ ಆರೋಗ್ಯ ಎಂಬುದಾಗಿದೆ.

ಬಿಪಿಯಿಂದ ಕಿಡ್ನಿ ಕಳೆದುಕೊಂಡಿದ್ದ ಪ್ರಿಯಾ: ಪ್ರಿಯಾ ಯಾದವ್​ ತಲೆ ನೋವಿನಿಂದ ಬಳಲುತ್ತಿದ್ದಳು. ಈ ಸಂಬಂಧ ಚಿಕಿತ್ಸೆ ಪಡೆಯುವಾಗ ಆಕೆಗೆ ಬಿಪಿ ಸಮಸ್ಯೆ ಇರುವುದನ್ನು ವೈದ್ಯರು ಪತ್ತೆ ಮಾಡಿದ್ದರು. ಇದಕ್ಕೆ ಕಾರಣ ಅತಿ ಸಣ್ಣ ವಯಸ್ಸಿನಲ್ಲಿಯೇ ಪ್ರಿಯಾ ಸಾಕಷ್ಟು ನೋವು ನಿವಾರಕ ಮಾತ್ರೆಗಳನ್ನು ಸೇವಿಸುತ್ತಿದ್ದಳು. ಇದರಿಂದಾಗಿ ಆಕೆಯ ಎರಡೂ ಮೂತ್ರಪಿಂಡಗಳು ಹಾನಿಗೆ ಒಳಗಾಗಿದ್ದವು.

ಮಗಳನ್ನು ಉಳಿಸಿದ ತಾಯಿ: ಪ್ರಿಯಾ ಮೂತ್ರಪಿಂಡ ವೈಫಲ್ಯವಾಗಿದ್ದು, ಅದಕ್ಕಿರುವ ಏಕೈಕ ಚಿಕಿತ್ಸೆ ಎಂದರೆ ಮೂತ್ರಪಿಂಡ ಕಸಿ ಚಿಕಿತ್ಸೆಯಾಗಿತ್ತು. ಈ ವೇಳೆ ಮಗಳನ್ನು ಉಳಿಸಲು ಮುಂದಾದ ತಾಯಿ ತನ್ನ ಮೂತ್ರಪಿಂಡವನ್ನೇ ದಾನ ಮಾಡಲು ನಿರ್ಧರಿಸಿದಳು. ಇದೀಗ ಮಗಳಿಗೆ ತನ್ನ ಒಂದು ಕಿಡ್ನಿ ನೀಡಿರುವ ತಾಯಿ ಜೀವನ ಪರ್ಯಂತ ಚಿಕಿತ್ಸೆಯ ನಿಗಾದಲ್ಲಿರಬೇಕು. ಅಲ್ಲದೇ ಕಿಡ್ನಿ ಸೇರಿದಂತೆ ಇತರೆ ಆರೋಗ್ಯ ಸಮಸ್ಯೆ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಬೇಕಿದೆ.

ಅನಗತ್ಯ ಮಾತ್ರೆ ಸೇವನೆ ಬೇಡ: ಕಿಡ್ನಿ ಆರೋಗ್ಯದ ಕುರಿತು ಮಾತನಾಡಿರುವ ಡಾ ಕೆಸಿ ಪಂತ್​​, ಕಿಡ್ನಿ ಆರೋಗ್ಯದಲ್ಲಿ ಮೂರು ವಿಷಯಗಳು ಹೆಚ್ಚಿನ ಪರಿಣಾಮ ಬೀರುತ್ತವೆ. ಅವುಗಳೆಂದರೆ ರಕ್ತದೊತ್ತಡ, ಮಧುಮೇಹ ಮತ್ತು ಅನಗತ್ಯ ಮಾತ್ರೆಗಳ ಸೇವನೆ ಆಗಿದೆ. ಅನಗತ್ಯವಾಗಿ, ವೈದ್ಯರ ಸಲಹೆ ಇಲ್ಲದೇ ಸೇವಿಸುವ ಔಷಧಗಳು ಮೂತ್ರಪಿಂಡದ ಮೇಲೆ ಪರಿಣಾಮ ಬೀರಿ, ಹಾನಿ ಮಾಡುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಕೆಎಫ್​ಟಿ ಪರೀಕ್ಷೆ ಅಗತ್ಯ. ಕಿಡ್ನಿ ನಮ್ಮ ದೇಹದ ಆರ್​ಒ ಆಗಿದ್ದು, ಅದು ದುರ್ಬಲವಾದರೆ ಸಮಸ್ಯೆ ಉಂಟಾಗುತ್ತದೆ. ಬಿಪಿ ಅಥವಾ ಶುಗರ್​ ಹೊಂದಿರುವವರಲ್ಲಿ 50 ವರ್ಷದ ಬಳಿಕ ಉಂಟಾಗುವ ಸಮಸ್ಯೆ ಪ್ರಿಯಾಳಲ್ಲಿ ಸಣ್ಣ ವಯಸ್ಸಿನಲ್ಲಿ ಪತ್ತೆಯಾಗಿದೆ.

ಮಾದಕವಸ್ತು ಬಳಕೆ ಅಪಾಯ: ಕಿಡ್ನಿಗಳು ವಿಷಕಾರಿಯಾಗಿ ಹಾನಿ ಮಾಡುವಲ್ಲಿ ಮಾದಕವಸ್ತುಗಳು ಪ್ರಮುಖವಾಗಿವೆ. ಆರಂಭಿಕ ಹಂತದಲ್ಲಿ ಮೋಜಿಗಾಗಿ ಸೇವಿಸುವ ಮಾದಕದ್ರವ್ಯಗಳ ಬಳಕೆ ನಂತರದಲ್ಲಿ ಚಟವಾಗುತ್ತದೆ. ನಂತರ ಇದು ಜೀವನವನ್ನು ಹೆಚ್ಚು ಕ್ಲಿಷ್ಟಕರವಾಗಿಸುತ್ತದೆ. ಹೀಗಾಗಿ ಯುವ ಜನತೆ ತಮ್ಮ ದೇಹದ ಬಗ್ಗೆ ಹೆಚ್ಚಿನ ಜಾಗೃತಿ ವಹಿಸಬೇಕಿದೆ ಎಂದು ಡಾ ಕೆಸಿ ಪಂತ್​ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ನಿವೃತ್ತ ಪೊಲೀಸ್ ಅಧಿಕಾರಿ ದೇಹದಲ್ಲಿ ಎರಡಲ್ಲ, ಮೂರು ಕಿಡ್ನಿಗಳು ಪತ್ತೆ: ಜಗತ್ತಿನ ವೈದ್ಯಕೀಯ ಇತಿಹಾಸದಲ್ಲೇ 100ನೇ ಪ್ರಕರಣ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.