ETV Bharat / health

ಮಿಜೋರಾಂನ ಮೂರು ಜಿಲ್ಲೆಗಳಲ್ಲಿ ಹಂದಿ ಜ್ವರ ಉಲ್ಬಣ - African Swine Fever - AFRICAN SWINE FEVER

ಭಾರತದ ಈಶಾನ್ಯ ರಾಜ್ಯ ಮಿಜೋರಾಂನಲ್ಲಿ ವಾತಾವರಣ ಬೆಚ್ಚಗಾದಾಗ, ಮಾನ್ಸೂನ್​ ಮಳೆ ಪ್ರಾರಂಭಕ್ಕೂ ಮುನ್ನ ಈ ಆಫ್ರಿಕನ್​ ಹಂದಿಜ್ವರ ಕಾಣಿಸಿಕೊಳ್ಳುತ್ತದೆ.

ಆಫ್ರಿಕನ್​ ಹಂದಿ ಜ್ವರ
ಆಫ್ರಿಕನ್​ ಹಂದಿ ಜ್ವರ (IANS)
author img

By ETV Bharat Karnataka Team

Published : May 14, 2024, 11:45 AM IST

ಐಜ್ವಾಲ್​​: ಸಾಂಕ್ರಾಮಿಕ ಆಫ್ರಿಕನ್​ ಹಂದಿ ಜ್ವರ (ಎಎಸ್​ಎಫ್​) ಮಿಜೋರಾಂನಲ್ಲಿ ಹರಡುತ್ತಿದೆ. ರೋಗ ಹರಡುವುದನ್ನು ತಡೆಯಲು 635 ಹಂದಿಗಳನ್ನು ಕೊಲ್ಲಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಇಲಾಖೆಯ ಅಧಿಕಾರಿಗಳ ಪ್ರಕಾರ, ಐಜ್ವಾಲ್, ಚಂಫೈ ಮತ್ತು ಸೈಚುವಲ್ ಎಂಬ ಮೂರು ಜಿಲ್ಲೆಗಳಲ್ಲಿ ಸೋಂಕು ಹರಡುತ್ತಿದೆ. ಕಳೆದ ತಿಂಗಳಿನಿಂದ ಐಜ್ವಾಲ್‌ನಲ್ಲಿ ಒಂದೇ ಕಡೆ 308 ಹಂದಿಗಳನ್ನು ಹತ್ಯೆ ಮಾಡಲಾಗಿದೆ. ಪ್ರಾಣಿಗಳಲ್ಲಿ ಸಾಂಕ್ರಾಮಿಕ ಮತ್ತಿತರೆ ರೋಗಗಳ ತಡೆ ಮತ್ತು ನಿಯಂತ್ರಣ ಕಾಯ್ದೆ 2009ರ ಅಡಿಯಲ್ಲಿ, ಮೂರು ಜಿಲ್ಲೆಗಳ ವಿವಿಧ ಗ್ರಾಮಗಳನ್ನು ಸೋಂಕಿತ ಪ್ರದೇಶಗಳೆಂದು ಘೋಷಿಸಲಾಗಿದೆ.

ಸೋಂಕಿತ ವಲಯದಿಂದ ಹಂದಿಗಳ ಪೂರೈಕೆಯನ್ನು ನಿಷೇಧಿಸಲಾಗಿದೆ. ಪಶು ಸಂಗೋಪನೆ ಇಲಾಖೆ ಕೊಂದಿರುವ ಹಂದಿಗಳ ಕಳೇಬರವನ್ನು ಗೊತ್ತುಪಡಿಸಲಾದ ಪ್ರದೇಶದಲ್ಲಿ ಸುಣ್ಣದ ಪುಡಿಯೊಂದಿಗೆ ಹೂಳಲು ಸೂಚಿಸಲಾಗಿದೆ.

ಹಂದಿ ಜ್ವರ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸಚಿವ ಸಿ.ಲಾಲಸವಿವುಂಗ ಇತ್ತೀಚೆಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ್ದರು. ರೋಗ ಎದುರಿಸಲು ಸರ್ಕಾರದ ಮಾರ್ಗಸೂಚಿಗಳು ಮತ್ತು ನಿರ್ದೇಶನಗಳನ್ನು ಎಲ್ಲರೂ ಪಾಲಿಸುವಂತೆ ಮನವಿ ಮಾಡಿದ್ದರು.

2021ರಲ್ಲಿ ಮೊದಲ ಬಾರಿಗೆ ಮಿಜೋರಾಂನಲ್ಲಿ ಆಫ್ರಿಕನ್ ಹಂದಿ ಜ್ವರ ಕಾಣಿಸಿಕೊಂಡಿತ್ತು. ಅಂದಿನಿಂದ ಪ್ರತೀ ಬೇಸಿಗೆಯಲ್ಲಿ ಈ ಸೋಂಕಿನ ವರದಿಯಾಗುತ್ತಿದೆ. ರಾಜ್ಯದಲ್ಲಿ ವಾತಾವರಣ ಬೆಚ್ಚಗಾದಾಗ, ಮಾನ್ಸೂನ್​ ಮಳೆ ಪ್ರಾರಂಭಕ್ಕೂ ಮುನ್ನ ಆಫ್ರಿಕನ್​ ಹಂದಿಜ್ವರ ಕಾಣಿಸಿಕೊಳ್ಳುತ್ತದೆ.

2021ರಿಂದ 2023ರವರೆಗೆ ಪ್ರತೀ ಬೇಸಿಗೆಯಲ್ಲಿ ಉಲ್ಬಣವಾಗುವ ಹಂದಿ ಜ್ವರಕ್ಕೆ 47,269 ಹಂದಿಗಳು ಸಾವನ್ನಪ್ಪಿದ್ದು, 25,182 ಹಂದಿಗಳನ್ನು ಈ ಅವಧಿಯಲ್ಲಿ ಕೊಲ್ಲಲಾಗಿದೆ. ಹಂದಿಜ್ವರದಿಂದ ಉಂಟಾದ ನಷ್ಟವು 132.20 ಕೋಟಿ ರೂ.ಗಿಂತ ಹೆಚ್ಚು ಎಂದು ಅಂದಾಜಿಸಲಾಗಿದೆ. ಇದು 19,017 ಕುಟುಂಬಗಳ ಮೇಲೆ ಪರಿಣಾಮ ಬೀರಿದೆ.

ಈಶಾನ್ಯ ಪ್ರದೇಶದಲ್ಲಿ ಹಂದಿ ಮಾಂಸಕ್ಕೆ ಹೆಚ್ಚಿನ ಬೇಡಿಕೆ ಇದೆ. ಈ ಪ್ರದೇಶದಲ್ಲಿ ಇದು 8ರಿಂದ 10 ಸಾವಿರ ಕೋಟಿ ರೂ ವಹಿವಾಟಿ ನಡೆಸುತ್ತದೆ. ಅಸ್ಸಾಂ ಅತೀ ದೊಡ್ಡ ಹಂದಿ ಮಾಂಸ ಪೂರೈಕೆ ಮಾರುಕಟ್ಟೆಯಾಗಿದೆ.(ಐಎಎನ್​ಎಸ್​)

ಇದನ್ನೂ ಓದಿ: ಬೆಂಬಿಡದೇ ಕಾಡುವ ಬೆನ್ನುನೋವು ನಿವಾರಣೆಗೆ ಮನೆಯಲ್ಲೇ ಮಾಡಿ ಈ ವ್ಯಾಯಾಮ; ನೋವೆಲ್ಲ ಮಂಗಮಾಯ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.