ನವದೆಹಲಿ: ಮಕ್ಕಳ ಜಡ ಜೀವನ ಶೈಲಿಯ ಬದಲಾವಣೆಗಾಗಿ ಚೀನಾ ಸರ್ಕಾರ ವಿಶ್ವದಲ್ಲೇ ಮೊದಲ ಬಾರಿಗೆ ಅಪರೂಪದ ಕಾನೂನನ್ನು ಜಾರಿಗೆ ತಂದಿದೆ. ಅದರ ಅನುಸಾರ ಮಕ್ಕಳು ಹೊರಾಂಗಣ ಚಟಯವಟಿಕೆಯಲ್ಲಿ ತೊಡಗಿಕೊಳ್ಳುವ ಸಮಯವನ್ನು ಅಧಿಕಗೊಳಿಸಿ, ಗೇಮಿಂಗ್ ಮತ್ತು ಹೋಂವರ್ಕ್ ಚಟುವಟಿಕೆಗೆ ಸಮಯವನ್ನು ಸೀಮಿತಗೊಳಿಸಿದೆ. ಈ ಕಾನೂನು ಮಕ್ಕಳ ಜಡ ಅಥವಾ ಆಲಸ್ಯದ ನಡುವಳಿಕೆ ವಿರುದ್ಧ ಹೋರಾಡುವಲ್ಲಿ ಭರವಸೆದಾಯಕ ಫಲಿತಾಂಶವನ್ನು ತೋರಿಸಿದೆ ಎಂದು ಅಧ್ಯಯನ ತಿಳಿಸಿದೆ.
ಮಕ್ಕಳ ಜಡ ನಡುವಳಿಕೆಯು ಅವರಲ್ಲಿ ಸ್ಥೂಲಕಾಯ, ಹೃದಯ ರೋಗ, ಮಧುಮೇಹ ಮತ್ತು ಕ್ಯಾನ್ಸರ್ನಂತಹ ಹಲವು ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಬ್ರಿಸ್ಟೊಲ್ ವಿಶ್ವವಿದ್ಯಾಲಯದ ಸಂಶೋಧಕರ ನೇತೃತ್ವದಲ್ಲಿ ನಡೆದ ಅಧ್ಯಯನದಲ್ಲಿ ಚೀನಾ ಸರ್ಕಾರ ಆನ್ಲೈನ್ ಗೇಮಿಂಗ್ ಕಂಪನಿಗಳಲ್ಲಿ ವಯಸ್ಸಿನ ಗುಂಪಿಗೆ ನಿರ್ಬಂಧ ಹೇರುವ ಮತ್ತು ಶಾಲೆಗಳಲ್ಲಿ ಶಿಕ್ಷಕರು ಹೋಮ್ ವರ್ಕ್ ಅನ್ನು ಸಿಮೀತಗೊಳಿಸುವ ಹಾಗೇ ಖಾಸಗಿ ಟ್ಯೂಷನ್ ಉದ್ಯಮಗಳು ಮೇಲೆ ಕೂಡ ಮಿತಿ ಹೇರಿ ಕಾನೂನು ಜಾರಿಗೆ ತಂದಿದೆ.
ಈ ಮಾದರಿಯು ಮಕ್ಕಳ ದೈನಂದಿನ ಕೂರುವಿಕೆ ಸಮಯವನ್ನು 13.8 ರಷ್ಟು ಸಾಧಿಸಲು ಸಹಾಯ ಮಾಡಿದೆ. ಜೊತೆಗೆ ಅವರು ತಮ್ಮ ದೈಹಿಕ ಚಟುವಟಿಕೆಗೆ ಕೂಡ 45 ನಿಮಿಷ ವ್ಯಯ ಮಾಡುತ್ತಿರುವುದು ಕಂಡಿದೆ. ಸಾಮಾನ್ಯವಾಗಿ ಮಕ್ಕಳ ಸ್ಕ್ರೀನ್ ನೋಡುವ ಅವಧಿ ಮೊಬೈಲ್ ಫೋನ್, ಗೇಮಿಂಗ್, ಟ್ಯಾಬ್ಲೆಟ್ಸ್, ಟಿವಿ, ಕಂಪ್ಯೂಂಟರ್ ಗೇಮ್ ಎಲ್ಲ ವರ್ಗವೂ ಸೇರಿ ಶೇ 6.4ರಷ್ಟು ಅಂದರೆ, 10 ನಿಮಿಷ ಕಡಿತ ಮಾಡಲಾಗಿದೆ.
ಈ ಅಧ್ಯಯನವನ್ನು ಇಂಟರ್ನ್ಯಾಷನಲ್ ಜರ್ನಲ್ ಆಫ್ ಬಿಹೇವಿಯರಲ್ ನ್ಯೂಟ್ರಿಷಿಯನ್ ಅಂಡ್ ಫಿಸಿಕಲ್ ಆಕ್ಟಿವಿಟಿಯಲ್ಲಿ ಪ್ರಕಟಿಸಲಾಗಿದೆ. ಅಧ್ಯಯನದಲ್ಲಿ ಪರಿಣಾಮಕಾರಿ ಮಾದರಿಯನ್ನು ಸಾಬೀತು ಮಾಡಲಾಗಿದ್ದು, ಇದು ಭವಿಷ್ಯದ ನೀತಿಗಳಿಗೆ ಸಹಾಯ ಜೊತೆಗೆ ಮಕ್ಕಳ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮ ಸುಧಾರಿಸಲು ಸಹಾಯ ಮಾಡುತ್ತದೆ.
ಈ ಮುಂದೆ ಪ್ರಯತ್ನಿಸಿದ ಈ ರೀತಿಯ ನಿಯಂತ್ರಣಗಳ ಮಧ್ಯಸ್ಥಿತಿಯ ವಿಧವೂ ಉತ್ಸಾಹಿ ಪರಿಣಾಮವನ್ನು ತೋರಿಸಿದೆ ಎಂದು ಯುನಿವರ್ಸಿಟಿಸ್ ಸ್ಕೂಲ್ ಫಾರ್ ಪಾಲಿಸಿ ಸ್ಟಡೀಸ್ನ ತಜ್ಞ ಡಾ ಬೈ ಲಿ ತಿಳಿಸಿದ್ದಾರೆ.
ಅಧ್ಯಯನದ ಪ್ರಮುಖ ಲೇಖಕರು ಹೇಳುವಂತೆ, ಸಾಂಪ್ರದಾಯಿಕ , ಮಕ್ಕಳು ಮತ್ತು ಪೋಷಕರು ಮಕ್ಕಳ ನಡವಳಿಕೆ ಬದಲಾವಣೆ ಈ ರೀತಿ ಕೆಲಸ ಮಾಡಲು ಸಾಧ್ಯವಾಗಿರಲಿಲ್ಲ. ಇದೀಗ ಹೊಸ ಮಾದರಿಯು ಆನ್ಲೈನ್ ಗೇಮಿಂಗ್ ಕಂಪನಿ, ಶಾಲೆ ಮತ್ತು ಖಾಸಗಿ ಟ್ಯೂಟೋರಿಯಲ್ ಕಂಪನಿಗಳಿಗೆ ಬಲಾವಣೆ ತರಲು ಸಹಾಯ ಮಾಡಿದೆ
ಇದೊಂದು ವಿಭಿನ್ನ ಪ್ರಯತ್ನವಾಗಿದ್ದು, ಪರಿಣಾಮಕಾರಿಯಾಗಿದೆ. ಕಾರಣ ಇದು ಮಕ್ಕಳ ಮತ್ತು ಹದಿ ಹರೆಯದವರ ಜೀವಿಸುವ ಪರಿಸರವನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿದೆ. ಅವರ ಆರೋಗ್ಯಯುತ ಜೀವನ ಶೈಲಿಗೆ ಉತ್ತೇಜನ ನೀಡುತ್ತದೆ. (ಐಎಎನ್ಎಸ್)
ಇದನ್ನೂ ಓದಿ: ನಿಮ್ಮ ಮಕ್ಕಳು ಸರಿಯಾಗಿ ನಿದ್ದೆ ಮಾಡುತ್ತಿಲ್ಲವೇ? ಹಾಗಾದರೆ ವಯಸ್ಸಿಗೆ ಬಂದ ಮೇಲೆ ಮಾನಸಿಕ ಸಮಸ್ಯೆಗೆ ಒಳಗಾಗಬಹುದು