ETV Bharat / health

ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡಬೇಕಾ? ಹಾಗಾದ್ರೆ ಬೆಳ್ಳುಳ್ಳಿ ಸೇವಿಸಿ - Garlic Cloves Reduce Blood Sugar - GARLIC CLOVES REDUCE BLOOD SUGAR

Garlic Cloves Reduce Blood Sugar: ಮಧುಮೇಹ ಮತ್ತು ಹೃದ್ರೋಗದ ಅಪಾಯವನ್ನು ತಡೆಯಲು ಬೆಳ್ಳುಳ್ಳಿ ಸೇವನೆ ಪ್ರಯೋಜನಕಾರಿಯಾಗಿದೆ ಎಂದು ಕಂಡು ಬಂದಿದೆ.

can-having-garlic-cloves-daily-reduce-both-blood-sugar-and-cholesterol-know-truth
ಬೆಳ್ಳುಳ್ಳಿ ಸೇವನೆ ಪ್ರಯೋಜನ (ಸಂಗ್ರಹ ಚಿತ್ರ)
author img

By ETV Bharat Karnataka Team

Published : Jun 13, 2024, 1:57 PM IST

ನವದೆಹಲಿ: ಬೆಳ್ಳುಳ್ಳಿ ಅಡುಗೆ ರುಚಿ ಹೆಚ್ಚಿಸುವ ಜೊತೆಗೆ ಇದರಿಂದ ಆರೋಗ್ಯದ ಪ್ರಯೋಜನ ಇದೆ. ಊರಿಯೂತದ ಗುಣಲಕ್ಷಣ ಹೊಂದಿರುವ ಈ ಸಾಂಪ್ರದಾಯಿಕ ಔಷಧ ಗುಣವಿರುವ ಬೆಳ್ಳುಳ್ಳಿ ಮಧುಮೇಹ ಮತ್ತು ಹೃದಯಾಘಾತ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಜೊತೆಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಮತ್ತು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ. ಇದರ ಪ್ರಯೋಜನ ಪಡೆಯಲು ಪ್ರತಿದಿನ ಬೆಳಗ್ಗೆ ಬೆಚ್ಚಗಿನ ನೀರಿನ ಜೊತೆ ಎರಡು ಎಸಳು ಬೆಳ್ಳುಳ್ಳಿಯನ್ನು ಸೇವಿಸುವುದು ಉತ್ತಮ.

ಈ ನಡುವೆ, 29 ಮೆಟಾ ವಿಶ್ಲೇಷಣೆ ಅಧ್ಯಯನದಲ್ಲಿ ಬಹಿರಂಗವಾದ ಮಾಹಿತಿ ಪ್ರಕಾರ, ಪ್ರತಿದಿನ ಎರಡು ಬೆಳ್ಳುಳ್ಳಿ ಎಸಳನ್ನು ತಿನ್ನುವುದರಿಂದ ಸಾಕಷ್ಟು ಪ್ರಯೋಜನಕಾರಿ ಎಂದು ಕಂಡುಬಂದಿದೆ. ಮಧುಮೇಹ ಮತ್ತು ಹೃದ್ರೋಗದ ಅಪಾಯವನ್ನು ತಡೆಯಲು ಬೆಳ್ಳುಳ್ಳಿ ಸೇವನೆ ಪ್ರಯೋಜನಕಾರಿಯಾಗಿದೆ.

ಬೆಳ್ಳುಳ್ಳಿ ಸೇವನೆಯ ಪ್ರಯೋಜನ: ಉಪವಾಸದ ಸಮಯದಲ್ಲಿ ಬೆಳ್ಳುಳ್ಳಿ ಸೇವನೆ ಮಾಡುವುದರಿಂದ ರಕ್ತದಲ್ಲಿನ ಗ್ಲುಕೋಸ್​ ಮಟ್ಟ ಕಡಿಮೆಯಾಗುತ್ತದೆ. ಇದು ಮಧುಮೇಹ ನಿರ್ವಹಣೆಗೆ ಹಾಗೂ ಕೊಲೆಸ್ಟ್ರಾಲ್​ ಮಟ್ಟ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಪಧಮನಿಯಲ್ಲಿ ಅಭಿವೃದ್ಧಿಯಾಗುವ ಪ್ಲೇಕ್​ ತಡೆಯುವ ಜೊತೆಗೆ ಹೃದಯಾಘಾತದ ಅಪಾಯ ಕಡಿಮೆ ಮಾಡುತ್ತದೆ.

ಮೂರು ತಿಂಗಳ ಅಧ್ಯಯನದಲ್ಲಿ ತಿಳಿದುಬಂದ ಮತ್ತೊಂದು ವಿಚಾರ ಎಂದರೆ, ಬೆಳ್ಳುಳ್ಳಿ ಹೆಚ್​ಬಿಎ1ಸಿ ಮಟ್ಟವನ್ನು ಸ್ವಲ್ಪ ಕಡಿಮೆ ಮಾಡುತ್ತದೆ. ಜೊತೆಗೆ ಕಡಿಮೆ ಸಾಂದ್ರತೆಯ ಲಿಪೊಪ್ರೋಟಿನ್​ ಅಥವಾ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಸಹ ನಿಯಂತ್ರಿಸುತ್ತದೆ. ಕೊಲೆಸ್ಟ್ರಾಲ್​ ಸಂಶ್ಲೇಷಣೆ ಮತ್ತು ಎಲ್​ಡಿಎಲ್​ ಕೊಲೆಸ್ಟ್ರಾಲ್​ ಕಡಿಮೆ ಮಾಡುತ್ತದೆ.

ರಕ್ತ ಹೆಪ್ಪುಗಟ್ಟುವಿಕೆ ತಕ್ಷಣಕ್ಕೆ ಸರಿಪಡಿಸಲು ಸಹಾಯ ಮಾಡುವ ಜೊತೆಗೆ ರಕ್ತದೊತ್ತಡವನ್ನು ಕಡಿಮೆಗೊಳಿಸುತ್ತೆ. ಈ ಮೂಲಕ ಹೃದಯದ ಆರೋಗ್ಯ ಕಾಪಾಡುತ್ತದೆ. ಈ ಪ್ರಕ್ರಿಯೆಯಲ್ಲಿ ಹೆಚ್​ಡಿಎಲ್​ ಸಾಂದ್ರತೆ ಹೆಚ್ಚುತ್ತದೆ.

ಬೆಳ್ಳುಳ್ಳಿ ಸೇವನೆ ಹೇಗೆ? ಬೆಳ್ಳುಳ್ಳಿಯನ್ನು ಹಾಗೆಯೇ ಕಚ್ಚಾ ತಿನ್ನಬಹುದು. ಮಸಾಲೆ ಬೆರಸಿ, ಇಲ್ಲ ಅಡುಗೆಯಲ್ಲೂ ಸೇರಿಸಬಹುದು. ಬೆಳ್ಳುಳ್ಳಿ ಸಮೃದ್ಧ ಆಹಾರ, ಬೆಳ್ಳುಳ್ಳಿ ಎಣ್ಣೆ, ಬೆಳ್ಳುಳ್ಳಿ ಸಾಸ್​ ಮೂಲಕವೂ ಸೇವಿಸಬಹುದು. ಬೆಳ್ಳುಳ್ಳಿಯ ಕಟುವಾದ ರುಚಿ ಮತ್ತು ವಾಸನೆ ಹೊಂದಿದ್ದರೂ, ಇದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.

ವಿಶೇಷ ಸೂಚನೆ : ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ಒದಗಿಸಲಾಗಿದೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ನೀವು ನಿಮ್ಮ ಆಪ್ತ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ: ಆರೋಗ್ಯ ಸಮಸ್ಯೆಗಳಿಗೆ ಬೆಳ್ಳುಳ್ಳಿ ರಾಮಬಾಣ.. ಸೋಂಕು ತಡೆಗೆ ಬೇಕು 'ರಸೌನ್​'

ETV Bharat Logo

Copyright © 2025 Ushodaya Enterprises Pvt. Ltd., All Rights Reserved.