ETV Bharat / health

ಬ್ರೈನ್ ಟ್ಯೂಮರ್ ಶಸ್ತ್ರಚಿಕಿತ್ಸೆ ಯಶಸ್ವಿ: 450 ಗ್ರಾಂ ತೂಕದ ಗಡ್ಡೆ ಹೊರತೆಗೆದ ವೈದ್ಯರು - Brain tumor surgery successful

ಹುಬ್ಬಳ್ಳಿಯ ಬಾಲಾಜಿ ಆಸ್ಪತ್ರೆಯ ತಜ್ಞ ವೈದ್ಯರು 37 ವರ್ಷದ ಮಹಿಳೆಗೆ ಶಸ್ತ್ರಚಿಕಿತ್ಸೆ ನಡೆಸಿ, ಮೆದುಳಿನಲ್ಲಿದ್ದ 450 ಗ್ರಾಂ ತೂಕದ ಬೃಹತ್ ಗಾತ್ರದ ಗಡ್ಡೆಯನ್ನು (ಬ್ರೈನ್ ಟ್ಯೂಮರ್) ಯಶಸ್ವಿಯಾಗಿ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

Brain tumor  Brain tumor surgery successful  surgery successful  Dharwad
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Health Team

Published : Sep 4, 2024, 5:08 PM IST

ಹುಬ್ಬಳ್ಳಿ: ಬ್ರೈನ್ ಟ್ಯೂಮರ್ (ಮೆದುಳಿನಲ್ಲಿರುವ ಗಡ್ಡೆ) ಸಮಸ್ಯೆಯಿಂದ ಬಳಲುತ್ತಿದ್ದ 37 ವರ್ಷದ ಮಹಿಳೆಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. 450 ಗ್ರಾಂ ತೂಕದ ಬೃಹತ್ ಗಾತ್ರದ ಗಡ್ಡೆ ಹೊರತೆಗೆಯುವಲ್ಲಿ ನಗರದ ಬಾಲಾಜಿ ಆಸ್ಪತ್ರೆಯ ತಜ್ಞ ವೈದ್ಯರು ಯಶಸ್ವಿಯಾಗಿದ್ದಾರೆ.

ಹಾವೇರಿ ಮೂಲದ ಈ ಮಹಿಳೆ ತಲೆನೋವು, ವಾಂತಿ, ಫಿಟ್ಸ್ ಹಾಗೂ ಕಣ್ಣು ಮಂಜಾಗುತ್ತಿದೆ ಎಂದು ಆಸ್ಪತ್ರೆಗೆ ದಾಖಲಾಗಿದ್ದರು. ರೋಗಿಯ ಆರೋಗ್ಯದ ಕುರಿತು ಕೂಲಂಕಷವಾಗಿ ತಪಾಸಣೆ ನಡೆಸಿದ ಆಸ್ಪತ್ರೆ ಚೇರ್ಮನ್ ಹಾಗೂ ಖ್ಯಾತ ನರರೋಗ ತಜ್ಞರಾದ ಡಾ. ಕ್ರಾಂತಿಕಿರಣ ಅವರು, ಮಹಿಳೆಗೆ ಎಂ.ಆರ್.ಐ ಸ್ಕ್ಯಾನ್ ಮಾಡಿಸಿ ನೋಡಿದಾಗ ಮೆದುಳಿನಲ್ಲಿ ಬೃಹತ್ ಗಾತ್ರದ ಗಡ್ಡೆ ಇರುವುದು ಕಂಡು ಬಂದಿದೆ. ಕೂಡಲೇ ಕಾರ್ಯಪ್ರವೃತ್ತರಾದ ಆಸ್ಪತ್ರೆ ವೈದ್ಯರ ತಂಡ, ಮಹಿಳೆಗೆ ಸತತ 5 ಗಂಟೆಗಳ ಕಾಲ ಕೌಶಲ್ಯಾಧಾರಿತ ಅತ್ಯಾಧುನಿಕ ತಂತ್ರಜ್ಞಾನದ ಶಸ್ತ್ರಚಿಕಿತ್ಸೆ ನಡೆಸಿ 450 ಗ್ರಾಂ ತೂಕದ ಬೃಹತ್ ಗಡ್ಡೆಯನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

Brain tumor  Brain tumor surgery successful  surgery successful  Dharwad
ಮೆದುಳಿನಲ್ಲಿ 450 ಗ್ರಾಂ ತೂಕದ ಬೃಹತ್ ಗಾತ್ರದ ಗಡ್ಡೆ ಹೊರತೆಗೆದ ವೈದ್ಯರು (ETV Bharat)

ಈ ಕುರಿತು ಮಾತನಾಡಿದ ಖ್ಯಾತ ನರರೋಗ ತಜ್ಞ ಡಾ. ಕ್ರಾಂತಿಕಿರಣ, ಪ್ರತಿ ವಯಸ್ಕ ಮನುಷ್ಯನ ಮೆದುಳಿನ ತೂಕ ಸರಾಸರಿ 1200 ಗ್ರಾಂ (1.2 ಕೆ.ಜಿ)ಯಷ್ಟು ಇರುತ್ತದೆ. ಆಸ್ಪತ್ರೆಗೆ ದಾಖಲಾದ ಮಹಿಳೆಯ ಮೆದುಳಿನಲ್ಲಿ 450 ಗ್ರಾಂ ನಷ್ಟು ಬೃಹತ್ ಗಾತ್ರದ ಗಡ್ಡೆ ಬೆಳೆದಿತ್ತು. ಇನ್ನು ಕೆಲ ದಿನ ಬಿಟ್ಟಿದ್ದರೆ ಜೀವಕ್ಕೆ ಆಪತ್ತು ಎದುರಾಗುತ್ತಿತ್ತು. ಸ್ಕ್ಯಾನ್ ವರದಿ ಬಳಿಕ ತಡಮಾಡದೇ ವೈದ್ಯರು ಕಾರ್ಯಪ್ರವೃತ್ತರಾಗಿದ್ದಾರೆ. ಆಧುನಿಕ ತಂತ್ರಜ್ಞಾನ ಬಳಕೆ ಮತ್ತು ಉನ್ನತ ಕೌಶಲ್ಯಗಳನ್ನು ಅಳವಡಿಸಿಕೊಂಡಿದ್ದರಿಂದ ಅತ್ಯಂತ ಕ್ಲಿಷ್ಟಕರವಾಗಿದ್ದ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿ ರೋಗಿಯ ಮೆದುಳಿಗೆ ಹಾನಿಯಾಗದಂತೆ ಗಡ್ಡೆಯನ್ನು ಹೊರ ತೆಗೆಯಲಾಗಿದೆ.

ಬ್ರೈನ್​ ಟ್ಯೂಮರ್​​​​​​​​​​​​​​​​​​ ಲಕ್ಷಣಗಳೇನು? - ಹೀಗಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ: ಬ್ರೈನ್ ಟ್ಯೂಮರ್​ಗೆ ಎಲ್ಲ ಸಂದರ್ಭದಲ್ಲೂ ಒಂದೇ ತೆರನಾದ ನಿರ್ದಿಷ್ಟ ಕಾರಣಗಳಿರುವುದಿಲ್ಲ. ಮೆದುಳಿನಲ್ಲಿರುವ ಜೀವಕೋಶಗಳು ಅಸಹಜವಾಗಿ ಬೆಳೆದು ಒಂದೆಡೆ ಸಂಗ್ರಹವಾಗುವುದಕ್ಕೆ ಟ್ಯೂಮರ್ ಎನ್ನಲಾಗುತ್ತದೆ. ನಿರಂತರ ತಲೆ ನೋವು, ತಲೆ ಸುತ್ತು, ವಾಕರಿಕೆ, ದೃಷ್ಟಿಯಲ್ಲಿ ಬದಲಾವಣೆ, ಮಾತಿನಲ್ಲಿ ಅಸ್ಪಷ್ಟತೆ, ಜ್ಞಾಪಕಶಕ್ತಿ ಕುಂಠಿತ, ಕೇಳುವಿಕೆಯಲ್ಲಿ ಗೊಂದಲ, ಫಿಟ್ಸ್, ಕೈ ಕಾಲುಗಳು ಸ್ವಾಧೀನ ಕಳೆದುಕೊಳ್ಳುವುದು ಇತ್ಯಾದಿ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ತಪಾಸಣೆಗೊಳಗಾಗಿ ಚಿಕಿತ್ಸೆ ಪಡೆಯಬೇಕು. ಇಲ್ಲದಿದ್ದಲ್ಲಿ ಜೀವಕ್ಕೆ ಅಪಾಯ ಎದುರಾಗಬಹುದು ಎಂದು ವೈದ್ಯರು ತಿಳಿಸುತ್ತಾರೆ.

ಪ್ರಸ್ತುತ ರೋಗಿ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ಆಕೆಯ ತಲೆನೋವು ಮಾಯವಾಗಿ, ದೃಷ್ಟಿಯಲ್ಲಿ ಸ್ಪಷ್ಟತೆ, ಕೇಳುವಿಕೆ ಮತ್ತು ಮಾತಿನಲ್ಲಿ ಸುಧಾರಣೆ ಕಂಡು ಬಂದ ಹಿನ್ನೆಲೆಯಲ್ಲಿ ಇತ್ತೀಚಿಗಷ್ಟೇ ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಮನೆಗೆ ಮರಳಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಶಸ್ತ್ರಚಿಕಿತ್ಸಾ ತಂಡದಲ್ಲಿ ಡಾ. ಕ್ರಾಂತಿಕಿರಣ, ಡಾ. ಇತಿ ಸಿಂಗ್ ಪರ್ಮಾರ್, ಡಾ. ಅಖಿಲೇಶ್ ಜೋಶಿ, ಡಾ. ಭೀಮಾಶಂಕರ್, ಆಸ್ಪತ್ರೆಯ ಇತರೆ ವೈದ್ಯಕೀಯ ಸಿಬ್ಬಂದಿ ಪಾಲ್ಗೊಂಡಿದ್ದರು.

ಇದನ್ನೂ ಓದಿ:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.