ನವದೆಹಲಿ: ಕಡಿಮೆ ವಾಯುಮಾಲಿನ್ಯವು ಕಡಿಮೆ ಆತ್ಮಹತ್ಯೆ ದರದೊಂದಿಗೆ ಸಂಬಂಧ ಹೊಂದಿದೆ ಎಂದು ಚೀನಾದ ಸಂಶೋಧಕರು ತಿಳಿಸಿದ್ದಾರೆ. ಕ್ಯಾಲಿಫೋರ್ನಿಯಾದ ಯೂನಿವರ್ಸಿಟಿ ಸಂತಾ ಬರ್ಬರಾ ಸಂಶೋಧಕರು ಹವಾಮಾನ ಪರಿಸ್ಥಿತಿಯು ಮಾಲಿನ್ಯ ಮತ್ತು ಆತ್ಮಹತ್ಯೆ ದರಗಳ ಮೇಲೆ ಪರಿಣಾಮ ಬೀರುವ ಅಂಶಗಳ ಕುರಿತು ಅಧ್ಯಯನ ನಡೆಸಿದ್ದಾರೆ. ಈ ವೇಳೆ ತಂಡ ಈ ನಡುವಿನ ಸಂಪರ್ಕವನ್ನು ಪರಿಗಣಿಸಿದೆ. ಅಧ್ಯಯನವನ್ನು ನೇಚರ್ ಸಸ್ಟೈನಬಿಲಿಟಿಯಲ್ಲಿ ಪ್ರಕಟಿಸಲಾಗಿದೆ. ವಾಯು ಗುಣಮಟ್ಟವು ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರುವ ಅಂಶ ಎಂದು ಅಧ್ಯಯನ ಒತ್ತಿ ಹೇಳಿದೆ.
ವಾಯು ಮಾಲಿನ್ಯ ಕೆಲವೊಮ್ಮೆ ದೈಹಿಕ ಆರೋಗ್ಯದ ಸಮಸ್ಯೆಗೆ ಕಾರಣವಾಗುತ್ತದೆ. ಇದು ದೀರ್ಘ ಅನಾರೋಗ್ಯವಾದ ಅಸ್ತಮಾ ಮತ್ತು ಹೃದಯ ರಕ್ತನಾಳ ಸಮಸ್ಯೆ ಮತ್ತು ಶ್ವಾಸಕೋಶ ಕ್ಯಾನ್ಸರ್ಗೆ ಕಾರಣವಾಗುತ್ತದೆ ಎಂದು ಸಂಶೋಧನೆ ತಿಳಿಸಿದೆ.
ಸಂಶೋಧನಾ ತಂಡವು ಈ ಹಿಂದಿನ ಅಧ್ಯಯನದಲ್ಲಿ ಭಾರತದಲ್ಲಿ ಆತ್ಮಹತ್ಯೆ ದರವು ತಾಪಮಾನದ ಪರಿಣಾಮವನ್ನು ತಿಳಿಸಿತ್ತು. ಅಧಿಕ ಶಾಖವು ಈ ದರವನ್ನು ಹೆಚ್ಚಿಸಿದೆ ಎಂದು ಹೇಳಿತ್ತು. ಚೀನಾದ ಆತ್ಮಹತ್ಯೆ ದರವನ್ನು ಜಗತ್ತಿನ ಬೇರೆ ದೇಶಗಳಿಗೆ ಹೋಲಿಕೆ ಮಾಡಿದಾಗ ಭಾರತದಲ್ಲಿ ವಾಯು ಮಾಲಿನ್ಯ ವೇಗವಾಗಿ ಇಳಿಕೆ ಕಂಡಿದೆ ಎಂಬುದನ್ನು ತಂಡ ಗಮನಿಸಿದೆ.
2000ನೇ ವರ್ಷದಲ್ಲಿ ಚೀನಾದಲ್ಲಿ ತಲಾವಾರು ಆತ್ಮಹತ್ಯೆ ದರವು ಜಾಗತಿಕ ಸರಾಸರಿಗಿಂತ ಹೆಚ್ಚಿತ್ತು. ಆದರೆ, ಕಳೆದೆರಡು ದಶಕಗಳಿಂದ ಇದು ಕಡಿಮೆ ಸರಾಸರಿಗೆ ಇಳಿದಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಇದೇ ವೇಳೆ, ದೇಶದ ವಾಯು ಮಾಲಿನ್ಯ ಮಟ್ಟ ಕುಸಿಯುತ್ತಿದೆ. ಕಳೆದೆರಡು ವರ್ಷಗಳ ಹಿಂದಿನ ಮಾಲಿನ್ಯದ ದರ ಭಾರೀ ಇಳಿಕೆ ಕಂಡಿದೆ. ಬೇರೆ ಎಲ್ಲೆಡೆಗಿಂತಲೂ ಇಲ್ಲಿ ಹೆಚ್ಚಿನ ಕುಸಿತಗೊಂಡಿದೆ ಎಂದು ಯುಸಿ ಸಂತಾ ಬರ್ಬರಾ ಅಸಿಸ್ಟೆಂಟ್ ಪ್ರೊ. ಕರ್ಲೆಟೊನ್ ತಿಳಿಸಿದ್ದಾರೆ.(ಪಿಟಿಐ)
ಇದನ್ನೂ ಓದಿ: ವಾಯು ಮಾಲಿನ್ಯ: ಉಸಿರಾಟದ ತೊಂದರೆ ಮಾತ್ರವಲ್ಲ, ಮಾನಸಿಕ ಆರೋಗ್ಯ ಸಮಸ್ಯೆಗಳಿಗೂ ಕಾರಣ - ತಜ್ಞರು