ಹೈದರಾಬಾದ್: ತಲೆ ಹೊಟ್ಟಿನ ಸಮಸ್ಯೆ ಬಹುತೇಕರಲ್ಲಿ ಕಿರಿಕರಿಗೆ ಕಾರಣವಾಗುತ್ತದೆ. ಇದು ಕೂದಲಿನ ಸೌಂದರ್ಯ ಮತ್ತು ಆರೋಗ್ಯವನ್ನು ಹಾನಿ ಮಾಡುತ್ತದೆ. ನಿಯಮಿತವಾಗಿ ತಲೆ ಸ್ನಾನ ಮಾಡಿದರೂ ಈ ಸಮಸ್ಯೆಯಿಂದ ಮುಕ್ತವಾಗೋದು ಅಸಾಧ್ಯ ಎಂಬಂತೆ ಆಗುತ್ತದೆ. ಇಂತಹ ಪರಿಸ್ಥಿತಿಯಿಂದ ಹೊರ ಬರುವುದು ಹೇಗೆ ಎಂದು ಯೋಚಿಸುತ್ತಿದ್ದರೆ, ಇಲ್ಲಿದೆ ತಜ್ಞರ ಸಲಹೆ.
ಹೈದರಾಬಾದ್ನ ಪ್ರಖ್ಯಾತ ಕಾಸ್ಮೋಟೊಲಾಜಿಸ್ಟ್ ಪ್ರಕಾರ ಡಾ ಶೈಲಜಾ ಸೂರಪನೆನಿ ಸಲಹೆ ನೀಡಿದ್ದಾರೆ. ಅವರ ಪ್ರಕಾರ, ಈ ಕೂದಲಿನ ಸಮಸ್ಯೆಗೆ ಕಾರಣ ಬುಡದಲ್ಲಿ ಅಗತ್ಯವಾದ ಮಟ್ಟದಲ್ಲಿ ಎಣ್ಣೆ ಬಿಡುಗಡೆ ಆಗದೇ ಇರುವುದಾಗಿದೆ. ಇದು ವಯಸ್ಸಿಗೆ ಅನುಗುಣವಾಗಿ ಬರುವ ಸಮಸ್ಯೆಯಾಗಿದೆ. ಬಹುತೇಕರಲ್ಲಿ ಈ ಸಮಸ್ಯೆ 40 ವರ್ಷದ ಬಳಿಕ ಕಾಣಿಸುತ್ತದೆ.
ಇದು ಕೂಡ ಕಾರಣ: ಅತಿಯಾಗಿ ತಲೆಸ್ನಾನ, ರಾಸಾಯನಿಕ ಶಾಂಪೂ ಬಳಕೆ, ಆಲ್ಕೋಹಾಲ್ ಮಿಶ್ರಿತ ಸ್ಟೈಲಿಂಗ್ ಉತ್ಪನ್ನಗಳು ಕೂದಲನ್ನು ಮತ್ತಷ್ಟು ಶುಷ್ಕವಾಗಿಸುತ್ತದೆ. ಜೊತೆಗೆ ಕೂದಲನ್ನು ಅತಿಯಾಗಿ ಬಿಸಿಲಿಗೆ ತೆರದಿಡುವುದರಿಂದ ಕೂಡ ಬುಡದಲ್ಲಿ ಸರಿಯಾದ ಪ್ರಮಾಣದಲ್ಲಿ ಎಣ್ಣೆ ಬಿಡುಗಡೆಯಾಗುವುದಿಲ್ಲ. ಮತ್ತೆ ಅನೇಕ ಬಾರಿ ಈ ಸಮಸ್ಯೆಗೆ ಅನುವಂಶಿಕತೆ ಕೂಡ ಕಾರಣವಾಗುತ್ತದೆ.
ಈ ರೀತಿ ಮಾಡಿ: ಕೂದಲು ಒಣಗಿದಂತೆ ಭಾಸವಾದರೆ, ಕೂದಲಿನ ಆರೋಗ್ಯ ಕಾಪಾಡಲು ವಾರದಲ್ಲಿ ಎರಡು ಬಾರಿ ಮಾತ್ರ ತಲೆ ಸ್ನಾನ ಮಾಡಿ. ಜೊತೆಗೆ ಜೊಜೊಬೊ, ಆಲಿವ್ ಮತ್ತು ಕೊಬ್ಬರಿ ಎಣ್ಣೆಯೊಂದಿಗೆ ಮಸಾಜ್ ಮಾಡಿ, ಬಳಿಕ ತಲೆಸ್ನಾನ ಮಾಡಿ. ಬಳಿಕ ಕಂಡಿಷನಿಂಗ್ ಮಾಡಿ. ಬಳಕೆ ಮಾಡುವ ಉತ್ಪನ್ನದಲ್ಲಿ ರಾಸಾಯನಿಕ ಮತ್ತು ಆಲ್ಕೋಹಾಲ್ ಮುಕ್ತ ಇದೆಯಾ ಎಂದು ಪರೀಕ್ಷಿಸಿ. ಮೆಹಂದಿ( ಹೆನ್ನಾ) ಅಥವಾ ಕಲರಿಂಗ್ ಉತ್ಪನ್ನಗಳ ಬಳಕೆ ಅತಿ ಹೆಚ್ಚು ಮಾಡಬೇಡಿ, ವಾರಕ್ಕೆ ಒಂದು ಬಾರಿ ಹೇರ್ ಮಾಸ್ಕ್ ಹಾಕುವುದರಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದು.
ಈ ರೀತಿ ಮಾಸ್ಕ್ ತಯಾರಿಸಿ: ತಲೆಗೆ ಹಚ್ಚುವ ಮಾಸ್ಕ್ಗಳು ಸಾಧ್ಯವಾದಷ್ಟು ನೈಸರ್ಗಿಕವಾಗಿರಲಿ. ಇದಕ್ಕಾಗಿ ಸಣ್ಣ ಬಟ್ಟಲಿಗೆ ಆಲಿವ್ ಎಣ್ಣೆ ಮತ್ತು ಜೇನುತುಪ್ಪ ಬೆರಸಿ. ಇದನ್ನು ಕೂದಲಿಗೆ ಹಚ್ಚಿ. ಅರ್ಧಗಂಟೆ ಬಳಿಕ ಸ್ನಾನ ಮಾಡಿ. ಈ ರೀತಿ ಮಾಡುವುದರಿಂದ ಕೂದಲಿಗೆ ಒಳ್ಳೆಯ ಪೋಷಕಾಂಶ ಲಭ್ಯವಾಗುತ್ತದೆ. ಪಿಎಚ್ 5-5.5, ಸಲ್ಫರ್ ಮುಕ್ತ, ಪ್ಯಾರಬೆನ್ಸ್, ಫಾರ್ಮಲ್ಹೈಡ್ರೇಟ್ ಮತ್ತು ಹೆಕ್ಸಾಕ್ಲೊರೊಫೆನ್ ಶ್ಯಾಂಪೂ ಬಳಕೆ ಮಾಡಿ. ಕೆಟೋಕೊನಜೋಲ್, ಜಿಂಕ್ ಪೈರುಥಾನ್, ಸೆಲೆನಿಯಮ್ ಡೈಸಲ್ಫೈಡ್ ಮತ್ತು ಟೀ ಟ್ರೀ ಆಯಿಲ್ ಅನ್ನು ಒಳಗೊಂಡಿರುವ ಉತ್ಪನ್ನಗಳನ್ನು ಬಳಸುವುದರಿಂದ ತಲೆಹೊಟ್ಟು ಕಡಿಮೆಯಾಗುವುದು ಮಾತ್ರವಲ್ಲದೇ ಕೂದಲನ್ನು ಹೊಳೆಯುವಂತೆ ಮಾಡುತ್ತದೆ.
ಈ ಆಹಾರ ಉತ್ತಮ: ಅವಕಾಡೋ, ಮೀನು, ಮೊಟ್ಟೆ, ಹಾಲು, ಲೆಟ್ಯೂಸ್, ಸಿಟ್ರಸ್ ಹಣ್ಣು, ಬಾದಾಮಿಯನ್ ನಿಮ್ಮ ಆಹಾರದಲ್ಲಿ ಸೇರಿಸುವುದರಿಂದ ಕೂದಲಿನ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಬಹುದು. ಸಾಧ್ಯವಾದರೇ ಅಡುಗೆಗೆ ಆಲಿವ್ ಎಣ್ಣೆ ಬಳಕೆ ಮಾಡುವುದು ಉತ್ತಮ.
ಓದುಗರ ಗಮನಕ್ಕೆ: ಇಲ್ಲಿ ನೀಡಲಾಗಿರುವ ಎಲ್ಲ ಆರೋಗ್ಯ ಮಾಹಿತಿ ನಿಮ್ಮ ತಿಳಿವಳಿಕೆಗಾಗಿ ಮಾತ್ರವೇ ನೀಡಲಾಗಿದೆ. ವೈಜ್ಞಾನಿಕ ಸಂಶೋಧನೆಗಳು, ಅಧ್ಯಯನಗಳು, ವೈದ್ಯಕೀಯ, ಆರೋಗ್ಯ ವೃತ್ತಿಪರ ಶಿಫಾರಸುಗಳ ಆಧಾರದ ಮೇಲೆ ನಾವು ಈ ಮಾಹಿತಿಯನ್ನು ನಿಮಗೆ ಒದಗಿಸುತ್ತಿದ್ದೇವೆ. ಆರೋಗ್ಯ ಸಮಸ್ಯೆ ಅಧಿಕಾವಗಿದ್ದರೆ ನೀವು ಮನೆ ಮದ್ದು ಬಿಟ್ಟು ವೈದ್ಯರನ್ನು ಭೇಟಿಯಾಗುವುದು ಉತ್ತಮ.