ETV Bharat / health

ಬೆಂಗಳೂರಿನ ಕೊಳಚೆ ನೀರಿನಲ್ಲಿ ಜೆಎನ್​.1 ರೂಪಾಂತರ​ ಪತ್ತೆಗೆ ಮುಂದಾದ ಸ್ಟಾರ್ಟಪ್​ - ಜೆಎನ್​1 ರೂಪಾಂತರ

ಜೀನ್​ ಎಡಿಟಿಂಗ್​ ತಂತ್ರಜ್ಞಾನದ ಮೂಲಕ ಬೆಂಗಳೂರಿನ ಒಳಚರಂಡಿ ನೀರಿನಲ್ಲಿ ಕೋವಿಡ್​​ ಜೆಎನ್​.1 ಉಪತಳಿ ಸಂಶೋಧನೆಗೆ ನವೋದ್ಯಮವೊಂದು ಮುಂದಾಗಿದೆ.

gene editing platform OmiCrisp monitoring sewage samples to track jn.1

author img

By ETV Bharat Karnataka Team

Published : Feb 5, 2024, 2:59 PM IST

ಹೈದರಾಬಾದ್​: ಬೆಂಗಳೂರಿನ ಸ್ಟಾರ್ಟಪ್ ಆಗಿರುವ ಕ್ರಿಸ್​ಪ್ರಬಿಟ್ಸ್​​ನ ಜೀನ್​ ಎಡಿಟಿಂಗ್​ ಫ್ಲಾಟ್​ಫಾರ್ಮ್​ ಓಮಿಕ್ರಿಸ್ಪ್​​ ಎಂಬುದು ಒಳಚರಂಡಿ ನೀರಿನಲ್ಲಿ ವೇಗವಾಗಿ ಹರಡಬಲ್ಲ ಕೋವಿಡ್​​ ಉಪತಳಿ ಜೆಎನ್​.1 ರೂಪಾಂತರ ಪತ್ತೆ ಹಚ್ಚುವ ಕೆಲಸ ಕೈಗೊಂಡಿದೆ.

ಓಮಿಕ್ರಿಸ್ಪ್​​​ ಸಂಸ್ಥೆಯು ಕ್ರಿಸ್ಪರ್ (CRISPR) ಆಧಾರದಲ್ಲಿ ಪರೀಕ್ಷೆ ನಡೆಸುವ ಫ್ಲಾಟ್​ಫಾರಂ ಆಗಿದೆ. ಸಾರ್ಸ್​​ ಕೋವ್​ 1 ಇರುವಿಕೆ ಮತ್ತು ವೇಗದ ಪತ್ತೆಗೆ ಜೀನ್​ ಎಡಿಟಿಂಗ್​ ತಂತ್ರಜ್ಞಾನವನ್ನು ಇದು ಬಳಸುತ್ತಿದೆ. ಇದಕ್ಕಾಗಿ ಬೆಂಗಳೂರಿನ 14 ವಿವಿಧ ಪ್ರದೇಶಗಳಲ್ಲಿ ವಾರಕ್ಕೊಮ್ಮೆ ಒಳಚರಂಡಿ ನೀರಿನಲ್ಲಿ ಜೆಎನ್​.1 ತಳಿಯ ಮೇಲ್ವಿಚಾರಣೆ ನಡೆಸಲಿದೆ.

CRISPR ಆಧಾರದಲ್ಲಿ ನಡೆಯುವ ಈ ಪರೀಕ್ಷೆಯು ವೈರಸನ್ನಷ್ಟೇ ಪತ್ತೆ ಮಾಡುವುದಿಲ್ಲ. ಇದು ಓಮ್ರಿಕಾನ್​​ ವಂಶವಾಹಿನಿಯ ಹಿಂದಿರುವ ರೂಪಾಂತರ ತಳಿಗಳನ್ನೂ ಪ್ರತ್ಯೇಕಿಸುತ್ತದೆ. ಈ ತಂತ್ರಜ್ಞಾನವು ಅನುಕ್ರಮ ಬದಲಾವಣೆಗಳಿಂದಾಗಿ ಸಿಗ್ನಲ್‌ನ ಅನುಪಸ್ಥಿತಿಯನ್ನು ಅವಲಂಬಿಸಿರುವ ಬದಲು ವೈರಸ್ ರೂಪಾಂತರಗೊಳ್ಳುವ ನಿಜವಾದ ಮೂಲ ಬದಲಾವಣೆಗಳನ್ನು ನಿರ್ದಿಷ್ಟವಾಗಿ ಪ್ರತ್ಯೇಕಿಸುತ್ತದೆ.

ಈ ಕುರಿತು ಜರ್ನಲ್​ ಆಫ್​ ಬಯೋಟೆಕ್ನಾಲಜಿ ಆ್ಯಂಡ್​ ಬಯೋಮೆಡಿಸಿನ್​ನಲ್ಲಿ ತಿಳಿಸಲಾಗಿದೆ. ​ಓಮಿಕ್ರಿಸ್ಪ್ ​80 ಕ್ಲಿನಿಕಲ್​ ಮಾದರಿ ಮತ್ತು 160 ತ್ಯಾಜ್ಯ ನೀರಿನ ಫಲಿತಾಂಶವನ್ನು ಅನುಮೋದಿತ qRTPCR ಪರೀಕ್ಷೆಯ ಮೂಲಕ ಹೋಲಿಸಿ ಮೌಲ್ಯೀಕರಿಸಿದೆ.

ಓಮಿಕ್ರಿಸ್ಪ್​​ ಪರಿಸರದ ಮಾದರಿಯಲ್ಲಿ CRISPR ಆಧಾರಿತ ಪರೀಕ್ಷೆ ಮೌಲ್ಯೀಕರಿಸಿದ ಮೊದಲ ಅಧ್ಯಯನವಾಗಿದೆ ಎಂದು ಅಧ್ಯಯನದ ಲೇಖಕ ಮತ್ತು ಕ್ರಿಸ್ಪ್ರಬಿಟ್ಸ್​​ನ ಸಹ ಸಂಸ್ಥಾಪಕ ವಿಜಯ್​ ಚಂದ್ರು ತಿಳಿಸಿದ್ದಾರೆ.

CRISPR ಆಧಾರದ ಈ ಪರೀಕ್ಷೆಯು ಒಳಚರಂಡಿಗಳಲ್ಲಿ ಕಳಪೆ ಗುಣಮಟ್ಟದ ಮಾದರಿಗಳನ್ನು ಪ್ರದರ್ಶಿಸಿತು. ಕೆಳಮಟ್ಟದ ಸ್ಥಿರತೆಯ ಮಾಟ್ರಿಕ್ಸ್​​ಗಳಲ್ಲಿ ಒಂದೇ ಮೂಲ ಬದಲಾವಣೆಯನ್ನು ಗ್ರಹಿಸುವಲ್ಲಿ ಮತ್ತು ಅದರ ಉಪಯುಕ್ತತೆಯನ್ನು ಎತ್ತಿ ತೋರಿಸುತ್ತದೆ.

2020ರಲ್ಲಿ ಬಿಟ್ಸ್​​ ಪಲನಿ ಮತ್ತು ಕ್ರಿಸ್ಪರ್​ಬಿಟ್ಸ್​​ನ ಐವರು ಹಳೆಯ ವಿದ್ಯಾರ್ಥಿಗಳು ಈ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಕ್ರಿಸ್ಟಪರ್​ಬಿಟ್ಸ್​​ ಎಂಬುದು ಸೆಲ್ಯುಲಾರ್​ ಮತ್ತು ಮಾಲಿಕ್ಯುಲರ್​ ಫ್ಲಾಟ್‌ಫಾರ್ಮ್​ ಸ್ಟಾರ್ಟಪ್​ ಆಗಿದೆ. CRISPR ತಂತ್ರಜ್ಞಾನವನ್ನು ಬಳಸಿಕೊಂಡು ಪರಿಹಾರ ಹುಡುಕುವುದು ಇದರ ಗುರಿ.

ಓಮಿಕ್ರಿಸ್ಪ್​​ ಎಂಬುದು ಒಳಚರಂಡಿಗಳಲ್ಲಿ ಓಮ್ರಿಕಾನ್​ ತಳಿ ಮತ್ತು ಅದರ ವಂಶವಾಹಿನಿಯನ್ನು ಹುಡುಕುವ CRISPR ಆಧಾರಿತ ಪತ್ತೆ ಮತ್ತು ಸ್ಕ್ರೀನಿಂಗ್​ ಸಾಧನ. ಇದು ಹೆಚ್ಚು ನಿಖರತೆ ಹೊಂದಿದೆ. ಕೋವಿಡ್​ ಮತ್ತು ಇತರ ಸೋಂಕಿನ ವಿರುದ್ಧ ಭಾರತದ ಸಿದ್ಧತೆಯಲ್ಲಿ ಹೆಚ್ಚು ಪರಿಣಾಮವನ್ನು ಇದು ಹೊಂದಿದೆ.(ಐಎಎನ್​ಎಸ್​​)

ಇದನ್ನೂ ಓದಿ: ಜಪಾನ್‌ಗೆ ಕೋವಿಡ್​ 10ನೇ ಅಲೆ ಭೀತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.