Halim Seeds Benefits For Moms: ತಜ್ಞರು ಹೇಳುವ ಪ್ರಕಾರ, ತೂಕ ನಷ್ಟ, ಹಠಾತ್ ತೂಕ ಹೆಚ್ಚಾಗುವುದು, ಅತಿಯಾದ ಕೂದಲು ಉದುರುವಿಕೆಯಂತಹ ಸಮಸ್ಯೆಗಳು ಬಾಣಂತಿಯರಲ್ಲಿ ಸಾಮಾನ್ಯವಾಗಿದೆ. ಇವೆಲ್ಲವನ್ನೂ ಹೋಗಲಾಡಿಸಲು ಹಲೀಮ್ ಅಥವಾ ಆಳಿವೆ ಬೀಜಗಳಿಂದ ತಯಾರಿಸಿದ ಆಹಾರಗಳು ಸಹಾಯ ಮಾಡುತ್ತವೆ. ಹೆರಿಗೆ ನಂತರ ಚೇತರಿಸಿಕೊಳ್ಳಲು ಮಹಿಳೆಯರು ತೆಗೆದುಕೊಳ್ಳುವ ಪದಾರ್ಥಗಳಲ್ಲಿ ಹಲೀಮ್ ಬೀಜಗಳಿಂದ ತಯಾರಿಸಿದ ಆಹಾರಗಳು ವಿಶೇಷ ನೀಡಲಾಗುತ್ತದೆ ಎನ್ನುತ್ತಾರೆ ತಜ್ಞರು.
ಹಲೀಮ್ ಬೀಜಗಳ ಆರೋಗ್ಯ ಪ್ರಯೋಜನಗಳೇನು?:
- ಹಮೀಲ್ ಬೀಜಗಳು ಹೊಸ ತಾಯಂದಿರಲ್ಲಿ ಹಾಲಿನ ಉತ್ಪಾದನೆಯನ್ನು ಹೆಚ್ಚಿಸಬಹುದು ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ.
- ಕಬ್ಬಿಣ, ಫೋಲಿಕ್ ಆಮ್ಲ, ವಿಟಮಿನ್ 'ಎ', ವಿಟಮಿನ್ 'ಇ', ಅಗತ್ಯ ಕೊಬ್ಬಿನಾಮ್ಲಗಳಂತಹ ಪೋಷಕಾಂಶಗಳಲ್ಲಿ ಅವು ಸಮೃದ್ಧವಾಗಿವೆ ಎಂದು ಹೇಳಲಾಗುತ್ತದೆ. ಆದ್ದರಿಂದ ಈ ಬೀಜಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
- ಹಲೀಮ್ ಅಥವಾ ಆಳಿವೆ ಬೀಜಗಳು ಸುಲಭವಾಗಿ ಜೀರ್ಣವಾಗುವ ಆಹಾರಗಳಲ್ಲಿ ಒಂದಾಗಿದೆ.
- ಬಾಣಂತಿಯರು ಮತ್ತು ಋತುಬಂಧವನ್ನು ಸಮೀಪಿಸುತ್ತಿರುವ ಮಹಿಳೆಯರು, ಪ್ರೌಢಾವಸ್ಥೆಗೆ ಸಮೀಪಿಸುತ್ತಿರುವ ಹುಡುಗಿಯರು ಮತ್ತು ಅಲೋಪೆಸಿಯಾದಿಂದ ಬಳಲುತ್ತಿರುವವರು (ಕೂದಲು ಉದುರುವಿಕೆ ಮತ್ತು ನೆತ್ತಿಯ ಮೇಲೆ ಬಿಳಿ ಮಚ್ಚೆ ರಚನೆ) ಹಲೀಮ್ ಬೀಜಗಳನ್ನು ತಪ್ಪದೇ ಸೇವಿಸಲು ಸಲಹೆ ನೀಡಲಾಗುತ್ತದೆ.
- ತಮ್ಮ ಆಹಾರದಲ್ಲಿ ಹಲೀಮ್ ಬೀಜಗಳಿಂದ ಸಿದ್ಧಪಡಿಸಿದ ಆಹಾರ ಸೇವಿಸುವುದರಿಂದ ಕ್ಯಾನ್ಸರ್ ಚಿಕಿತ್ಸೆ ಪಡಯುತ್ತಿರುವ ರೋಗಿಗಳು ಆರೋಗ್ಯಕರ ಅಂಗಾಂಶಗಳ ಮೇಲೆ ಕೀಮೋಥೆರಪಿಯ ಋಣಾತ್ಮಕ ಪರಿಣಾಮಗಳನ್ನು ತಪ್ಪಿಸಬಹುದು ಎಂದು ತಜ್ಞರು ಹೇಳುತ್ತಾರೆ.
- ಮನಸ್ಸು ಚೆನ್ನಾಗಿಲ್ಲದಿದ್ದಾಗ ಮತ್ತು ಸಿಹಿ ತಿನ್ನುವ ಆಸೆ ಇದ್ದಾಗ ಇವುಗಳ ಆಹಾರ ತೆಗೆದುಕೊಳ್ಳುವುದು ಒಳ್ಳೆಯದು ಎಂದು ಹೇಳಲಾಗುತ್ತದೆ.
- ಮಕ್ಕಳಲ್ಲಿ ಏಕಾಗ್ರತೆ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸಲು ಹಲೀಮ್ ಬೀಜಗಳು ಉಪಯುಕ್ತವೆಂದು ತಜ್ಞರು ಹೇಳುತ್ತಾರೆ.
- ಈ ಕಾಳುಗಳನ್ನು ತುಪ್ಪದೊಂದಿಗೆ ಅಥವಾ ಹಾಲಿನೊಂದಿಗೆ ಬೆರೆಸಿ ಸೇವಿಸುವುದರಿಂದ ಇವುಗಳಲ್ಲಿರುವ ಪೋಷಕಾಂಶಗಳು ದೇಹಕ್ಕೆ ಚೆನ್ನಾಗಿ ಸಿಗುತ್ತದೆ ಎನ್ನುತ್ತಾರೆ ತಜ್ಞರು.
- ಹಲೀಮ್ ಬೀಜಗಳನ್ನು ತೆಗೆದುಕೊಳ್ಳುವ ಅಭ್ಯಾಸವಿಲ್ಲದವರು ಒಂದು ಚಿಟಿಕೆ ಮಾತ್ರ ತೆಗೆದುಕೊಳ್ಳಬೇಕು ಎಂದು ತಜ್ಞರು ಹೇಳುತ್ತಾರೆ, ಏಕೆಂದರೆ ಹೆಚ್ಚು ಸೇವಿಸುವುದರಿಂದ ಜೀರ್ಣಕಾರಿ ಸಮಸ್ಯೆಗಳು ಉಂಟಾಗಬಹುದು. ಇದನ್ನು ಹಾಲು ಮತ್ತು ಲಡ್ಡುಗಳ ರೂಪದಲ್ಲಿ ತೆಗೆದುಕೊಳ್ಳಲು ಸೂಚಿಸಲಾಗುತ್ತದೆ.
- ಪಿಗ್ಮೆಂಟೇಶನ್ ಅನ್ನು ಕಡಿಮೆ ಮಾಡುವುದರ ಜೊತೆಗೆ, ಹಲೀಮ್ ಬೀಜಗಳು ಕೂದಲಿನ ಬೆಳವಣಿಗೆ, ಫಲವತ್ತತೆ ಮತ್ತು ಮಾನಸಿಕ ಒತ್ತಡ-ಆತಂಕ ಹೋಗಲಾಡಿಸಲು ತುಂಬಾ ಉಪಯುಕ್ತವಾಗಿದೆ ಎಂದು ತಜ್ಞರು ಹೇಳುತ್ತಾರೆ.
ಯಾರೆಲ್ಲಾ ತೆಗೆದುಕೊಳ್ಳಬಹುದು?:
- ಆಳಿವೆ ಬೀಜಗಳನ್ನು ಯಾರು ಬೇಕಾದರೂ ಸೇವಿಸಬಹುದು. ವಿಶೇಷವಾಗಿ ಹಾಲುಣಿಸುವ ತಾಯಂದಿರು, ಪ್ರೌಢಾವಸ್ಥೆಯಲ್ಲಿರುವ ಹುಡುಗಿಯರು, ಹುಡುಗರು ಮತ್ತು ಮಧ್ಯವಯಸ್ಕರು ಇದನ್ನು ತೆಗೆದುಕೊಳ್ಳಬೇಕು ಎಂದು ತಜ್ಞರು ಹೇಳುತ್ತಾರೆ.
- ಅಲ್ಲದೆ, ಕೂದಲು ಉದುರುವಿಕೆ, ಚರ್ಮ ಬಿಳಿ ಮಚ್ಚೆ, ಅಲೋಪೆಸಿಯಾ (ಕೂದಲು ಉದುರುವಿಕೆ ಮತ್ತು ನೆತ್ತಿಯ ಮೇಲೆ ಬಿಳಿ ಮಚ್ಚೆ) ಬಳಲುತ್ತಿರುವ ಜನರು ತಮ್ಮ ಸಮಸ್ಯೆಗಳನ್ನು ಕಡಿಮೆ ಮಾಡಲು ಹಲೀಮ್ ಬೀಜಗಳನ್ನು ಸೇವಿಸುತ್ತಾರೆ ಎಂದು ಹೇಳಲಾಗುತ್ತದೆ.
- ಈ ಬೀಜಗಳು ಒತ್ತಡವನ್ನು ನಿವಾರಿಸಲು ಸಹ ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಫೋಲಿಕ್ ಆಸಿಡ್, ಕಬ್ಬಿಣಾಂಶ, ವಿಟಮಿನ್ 'ಎ' ಮತ್ತು 'ಇ'ಯಂತಹ ಪೋಷಕಾಂಶಗಳಿಂದ ಕೂಡಿರುವ ಈ ಸೂಪರ್ ಫುಡ್ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎನ್ನುತ್ತಾರೆ ತಜ್ಞರು.
ಹೇಗೆ ತೆಗೆದುಕೊಳ್ಳುವುದು: ತೆಂಗಿನಕಾಯಿ, ತುಪ್ಪ ಮತ್ತು ಬೆಲ್ಲದೊಂದಿಗೆ ಹಲೀಮ್ ಬೀಜಗಳನ್ನು ಬೆರೆಸಿ ಸೇವಿಸಬಹುದು. ಇದನ್ನು ಹೆಚ್ಚಾಗಿ ಊಟದ ಸಮಯದಲ್ಲಿ ತಿನ್ನುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ. ಇವುಗಳನ್ನು ಮಕ್ಕಳಿಗೆ ನೀಡಬಹುದು. ರಾತ್ರಿಯಲ್ಲಿ ಒಂದು ಚಿಟಿಕೆ ಹಲೀಮ್ ಬೀಜಗಳನ್ನು ಏಳೆಂಟು ಗಂಟೆಗಳ ಕಾಲ ಹಾಲಿನಲ್ಲಿ ನೆನೆಸಿ ಇಟ್ಟು ಸೇವಿಸಿದರೆ, ಉತ್ತಮ ಫಲಿತಾಂಶ ನೀಡುತ್ತದೆ ಎಂದು ತಜ್ಞರು ಸೂಚಿಸುತ್ತಾರೆ.
ಎಷ್ಟು ತೆಗೆದುಕೊಳ್ಳಬೇಕು?: ಈ ಹಿಂದೆ ಹೇಳಿದಂತೆ ಒಂದು ಚಿಟಿಕೆ ಹಲೀಮ್ ಕಾಳನ್ನು ಹಾಲಿನಲ್ಲಿ ನೆನೆಸಿ ಪಾಯಸದ ರೂಪದಲ್ಲಿ ಸೇವಿಸುವುದು ಉತ್ತಮ ಎನ್ನುತ್ತಾರೆ ತಜ್ಞರು. ಇವುಗಳನ್ನು ಅತಿಯಾಗಿ ಸೇವಿಸುವುದರಿಂದ ಜೀರ್ಣಕ್ರಿಯೆಗೆ ತೊಂದರೆಯಾಗಬಹುದು. ಹಾಗಾಗಿ ಇವುಗಳನ್ನು ಸೇವಿಸುವ ಮುನ್ನ ಎಚ್ಚರಿಕೆ ವಹಿಸಬೇಕು ಎನ್ನುತ್ತಾರೆ ತಜ್ಞರು.