ETV Bharat / health

ಸಕ್ಕರೆ ರೋಗದಿಂದ ಹಿಡಿದು ಅಧಿಕ ತೂಕದವರೆಗೆ ಎಲ್ಲವೂ ಮಾಯ: ಇವೆಲ್ಲದಕ್ಕೂ ರಾಗಿಯೇ ದಿವ್ಯೌಷಧ

- ಮಧುಮೇಹ ಸೇರಿ ಹಲವು ಕಾಯಿಲೆಗಳಿಗೆ ರಾಗಿ ಗಂಜಿ ಉತ್ತಮ ಪರಿಹಾರ - ಮಕ್ಕಳು ಸದೃಢ ಬೆಳವಣಿಗೆಗೆ ನಿತ್ಯವೂ ರಾಗಿ ಮಾಲ್ಟ್​ ಕುಡಿದರೆ ಉತ್ತಮ

benefits-of-drinking-ragi-malt-and-uses-of-taking-ragi-malt-daily-in-morning-in-kannada
ಸಕ್ಕರೆಯಿಂದ ಹಿಡಿದು ಅಧಿಕ ತೂಕದವರೆಗೆ ಎಲ್ಲವೂ ಮಾಯ: ಇವೆಲ್ಲದಕ್ಕೂ ರಾಗಿಯೇ ದಿವ್ಯೌಷಧ (Benefits of Drinking Ragi Malt ETV Bharat)
author img

By ETV Bharat Health Team

Published : Sep 9, 2024, 5:16 PM IST

What is the Benefits of Drinking Ragi Malt : ರಾಗಿ ತಿಂದವ ನಿರೋಗಿ ಎಂಬುದು ಜನಜನಿತ ಮಾತು. ಅಂದ ಹಾಗೆ ಪೋಷಾಂಶಯುಕ್ತ ಧಾನ್ಯಗಳಲ್ಲಿ ರಾಗಿಗೆ ಅಗ್ರ ಸ್ಥಾನ. ರಾಗಿ ಹಲವು ರೀತಿಯ ಪೋಷಕಾಂಶಗಳಿಂದ ತುಂಬಿವೆ. ನಿತ್ಯ ಯಾವುದಾದರೊಂದು ರೂಪದಲ್ಲಿ ರಾಗಿಯನ್ನು ಆಹಾರದ ಭಾಗವಾಗಿ ಉಪಯೋಗಿಸಿಕೊಂಡರೆ ಅತ್ಯುತ್ತಮ. ಈ ಮೂಲಕ ಅನೇಕ ಆರೋಗ್ಯ ಸಮಸ್ಯೆಗಳನ್ನು ತಡೆಯಬಹುದು ಎನ್ನುತ್ತಾರೆ ಹೈದರಾಬಾದ್ ನ ಖ್ಯಾತ ಆಹಾರ ತಜ್ಞೆ ಡಾ.ಶ್ರೀಲತಾ.

ರಾಗಿಯಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಪ್ರೋಟೀನ್, ಫೈಬರ್, ಖನಿಜಗಳು ಮತ್ತು ಅಯೋಡಿನ್ ಸಮೃದ್ಧವಾಗಿದೆ. ಅಮೈಲೇಸ್ ಎಂಬ ಕಿಣ್ವವು ರಾಗಿಯಲ್ಲಿ ಹೇರಳವಾಗಿದೆ. ಇದನ್ನು ಮಜ್ಜಿಗೆ ಅಥವಾ ಹಾಲಿನೊಂದಿಗೆ ಸೇವಿಸುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಮಲಬದ್ಧತೆ ಸಮಸ್ಯೆಯೂ ಕಡಿಮೆಯಾಗುತ್ತದೆ ಎನ್ನುತ್ತಾರೆ ಡಾ.ಶ್ರೀಲತಾ.

ಇದನ್ನು ಓದಿ: ದಿನವಿಡೀ ಶೂ, ಚಪ್ಪಲಿ ಧರಿಸುತ್ತೀರಾ? ಈ ಸಮಸ್ಯೆಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚು: ವೈದ್ಯರ ಸಲಹೆ ಹೀಗಿದೆ ನೀವೇ ನೋಡಿ - Side Effects of Wearing Shoes

ಯಾವುದೇ ತೊಂದರೆ ಇಲ್ಲದೇ ತೂಕ ಕಳೆದುಕೊಳ್ಳಿ: ನಿತ್ಯ ರಾಗಿ ಮಾಲ್ಟ್​ ಕುಡಿಯುವುದರಿಂದ ತೂಕ ಹೆಚ್ಚಾಗುವುದನ್ನು ತಡೆಯುತ್ತದೆ. ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರು ಇದನ್ನು ಅನುದಿನವೂ ಸೇವಿಸಿದರೆ ಉತ್ತಮ ಫಲಿತಾಂಶವನ್ನು ಕಾಣಬಹುದು. ಇದು ಮೂತ್ರಪಿಂಡದಲ್ಲಿ ಕಲ್ಲುಗಳು ಬೆಳೆಯುವುದನ್ನು ಯಶಸ್ವಿಯಾಗಿ ತಡೆಗಟ್ಟುತ್ತದೆ. ಅಷ್ಟೇ ಅಲ್ಲ ವಿಟಮಿನ್ ಡಿ ಕೊರತೆಯನ್ನು ನೀಗಿಸಬಹುದು.

ರಾಗಿಯಲ್ಲಿ ನಾರಿನಾಂಶ, ಕಾಲ್ಸಿಯಂ: ರಾಗಿಯಲ್ಲಿ ನಾರಿನಂಶ ಮತ್ತು ಕ್ಯಾಲ್ಸಿಯಂ ಹೇರಳವಾಗಿದೆ. ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಇರುವವರು ರಾಗಿ ಬೆಲ್ಲ ಮತ್ತು ಮಜ್ಜಿಗೆಯನ್ನು ಒಟ್ಟಿಗೆ ಸೇವಿಸಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಸೇವಿಸುವುದರಿಂದ ಹೆಚ್ಚಿನ ಪೋಷಕಾಂಶಗಳು ದೇಹಕ್ಕೆ ಸಹಜವಾಗಿ ದೊರೆಯುತ್ತದೆ. ಸಣ್ಣ ಮಕ್ಕಳಿಂದ ಹಿಡಿದು ಪ್ರತಿಯೊಬ್ಬರಿಗೂ ವಯಸ್ಕರು ರಾಗಿ ಗಂಜಿಯನ್ನು ಯಾವುದೇ ಹಿಂಜರಿಕೆಯಿಲ್ಲದೇ ಕುಡಿಯಬಹುದು. ಏಕೆಂದರೆ ಇದು ಹೆಚ್ಚಿನ ಪ್ರಮಾಣದ ಪೊಟ್ಯಾಸಿಯಮ್ ಅಂಶವನ್ನು ಹೊಂದಿದೆ ಎಂದು ಡಾ.ಶ್ರೀಲತಾ ಹೇಳಿದ್ದಾರೆ

ಇದನ್ನು ಓದಿ:70 ವರ್ಷದ ರೈತನ ಪಿತ್ತಕೋಶದಿಂದ 6,000ಕ್ಕೂ ಹೆಚ್ಚು ಕಲ್ಲು ಹೊರತೆಗೆದ ವೈದ್ಯರು! - Gallstones

ಮಕ್ಕಳಿಗೆ ಇದು ಸೂಪರ್ ಆಹಾರ: ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವವರು ದಿನವೂ ರಾಗಿ ಮಾಲ್ಟ್​ ಕುಡಿಯುವುದರಿಂದ ದೇಹವನ್ನು ಸದಾ ತಂಪಾಗಿ ಇಡಬಹುದು. ಮೊಳಕೆ ಕಾಳು, ಕಡಲೆಯನ್ನು ರಾಗಿ ಗಂಜಿಯ ಜತೆ ಬೆರಸಿ ಮಕ್ಕಳಿಗೆ ಕೊಡುವುದರಿಂದ ಮಕ್ಕಳು ದಷ್ಟಪುಷ್ಟವಾಗಿ ಬೆಳೆಯಲು ಅನುಕೂಲ ಆಗುತ್ತದೆ.

ಬಲವಾದ ಮೂಳೆ ಮತ್ತು ಹಲ್ಲುಗಳ ಸದೃಢತೆಗೆ ಇದು ಸಹಕಾರಿ: ರಾಗಿಯಲ್ಲಿರುವ ನಾರಿನಂಶವು ಹೆಚ್ಚು ಕಾಲ ಹೊಟ್ಟೆಯಲ್ಲಿ ಉಳಿಯುವುದರಿಂದ ಬೇಗ ಹಸಿವಾಗುವುದಿಲ್ಲ. ಹೀಗಾಗಿ ಸುಲಭವಾಗಿ ತೂಕ ನಷ್ಟವನ್ನು ಮಾಡಿಕೊಳ್ಳಬಹುದು. ಇದರಲ್ಲಿರುವ ಕ್ಯಾಲ್ಸಿಯಂ ಮೂಳೆಗಳು ಮತ್ತು ಹಲ್ಲುಗಳನ್ನು ಬಲವಾಗಿ ಮತ್ತು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಅಲ್ಲದೆ ಕೀಲು ನೋವಿನಿಂದ ಮುಕ್ತಿಯನ್ನು ನೀಡುತ್ತದೆ.

ಬೆಳೆಯುವ ಮಕ್ಕಳಿಗೆ ರಾಗಿ ಗಂಜಿಯನ್ನು ನೀಡುವುದರಿಂದ ತುಂಬಾ ಆರೋಗ್ಯ ಪ್ರಯೋಜನಗಳಿವೆ. ಇದರಿಂದ ಅವರ ಮೂಳೆಗಳು ಗಟ್ಟಿಯಾಗುತ್ತವೆ. ರಾಗಿಯನ್ನು ಗ್ಲೈಸೆಮಿಕ್ ಇಂಡೆಕ್ಸ್ ತುಂಬಾ ಕಡಿಮೆ ಇರುವುದರಿಂದ ಇದು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ. ಈ ಆಹಾರವು ನಿಧಾನವಾಗಿ ರಕ್ತದಲ್ಲಿ ಹೀರಲ್ಪಡುತ್ತದೆ. ಪರಿಣಾಮವಾಗಿ ಗ್ಲೂಕೋಸ್ ಮಟ್ಟ ಸರಸರನೇ ಏರಿಕೆ ಕಾಣುವುದಿಲ್ಲ. ಈ ಮೂಲಕ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು ಅಂತಾರೆ ತಜ್ಞರಾದ ಡಾ.ಶ್ರೀಲತಾ.

ಓದುಗರ ಗಮನಕ್ಕೆ : ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಇವುಗಳನ್ನು ಅನುಸರಿಸುವ ಮೊದಲು ನುರಿತ ಹಾಗೂ ನಿಮ್ಮ ವೈಯಕ್ತಿಕ ತಜ್ಞ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನು ಓದಿ: ಆಯಿಲಿ ಸ್ಕಿನ್ ಸಮಸ್ಯೆ ಇದೆಯೇ? ಈ ಸಲಹೆಗಳನ್ನು ಪಾಲಿಸಿದರೆ ಹೊಳೆಯುವ ತ್ವಚೆ ನಿಮ್ಮದು! - Oily Skin Removal Tips

ETV Bharat Logo

Copyright © 2024 Ushodaya Enterprises Pvt. Ltd., All Rights Reserved.