ETV Bharat / health

ಮುಖದಲ್ಲಿನ ಕಲೆಗಳನ್ನು ಹೋಗಲಾಡಿಸಲು ಆಯುರ್ವೇದದ ಪರಿಹಾರ: ಮನೆಯಲ್ಲೇ ಸಿದ್ಧಪಡಿಸಿ ಫೇಸ್ ಪ್ಯಾಕ್, ಔಷಧ! - Skin dark spots Ayurvedic treatment

Skin Dark Spots Ayurvedic Treatment: ಮುಖದ ಮೇಲಿನ ಕಪ್ಪು ಕಲೆಗಳಿಂದ ಹಲವರಿಗೆ ನಾಲ್ಕು ಮಂದಿಯ ನಡುವೆ ಬೆರೆಯಲು ಕಷ್ಟವಾಗುತ್ತದೆ. ಇನ್ಮುಂದೆ ಅಂತಹ ನೋವು ಕಾಡುವುದಿಲ್ಲ. ಏಕೆಂದರೆ, ಮನೆಯಲ್ಲೇ ಇರುವ ಪದಾರ್ಥಗಳಿಂದ ಸಿದ್ಧಪಡಿಸಿದ ಔಷಧದಿಂದಲೇ ನಿಮ್ಮ ಮುಖದ ಮೇಲಿನ ಕಲೆಗಳನ್ನು ಕಡಿಮೆ ಮಾಡಿಕೊಳ್ಳಬಹುದು ಎನ್ನುತ್ತಾರೆ ಆಯುರ್ವೇದ ವೈದ್ಯರು. ಈ ಕುರಿತು ವರದಿ ಇಲ್ಲಿದೆ ಸಂಪೂರ್ಣವಾಗಿ ಓದಿ..

SKIN SPOTS REMOVAL FACE PACK  SKIN MARK REMOVAL CREAM  SKIN MARK REMOVAL FACE PACK AT HOME  AYURVEDA SKIN TREATMENT FOR SPOTS
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Health Team

Published : Aug 26, 2024, 11:34 AM IST

Updated : Aug 26, 2024, 12:25 PM IST

Ayurvedic Treatment for Dark Spots: ಪ್ರತಿಯೊಬ್ಬರೂ ಕೂಡ ಚೆನ್ನಾಗಿ ಕಾಣಲು ಪ್ರಯತ್ನಿಸುತ್ತಾರೆ. ಆದರೆ, ಪ್ರಸ್ತುತ ಬದಲಾದ ಜೀವನಶೈಲಿ ಚರ್ಮದ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ಈ ಕಾರಣದಿಂದಾಗಿ ಬಹುತೇಕ ಜನರು ಮುಖದ ಮೇಲಿನ ಕಲೆಗಳು ಸೇರಿದಂತೆ ವಿವಿಧ ಚರ್ಮದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇವುಗಳನ್ನು ಕಡಿಮೆ ಮಾಡಲು ಅವರು ವೈದ್ಯರನ್ನು ಸಂಪರ್ಕಿಸುವ ಮೂಲಕ ಔಷಧಗಳನ್ನು ಬಳಸಿ ಮತ್ತು ಸಲಹೆಗಳನ್ನು ಅನುಸರಿಸುತ್ತಾರೆ. ಆದರೂ ಈ ಚರ್ಮದ ಸಮಸ್ಯೆ ಕಡಿಮೆಯಾಗುವುದಿಲ್ಲ. ಆದರೆ, ಇಂತಹ ಸಮಸ್ಯೆಯಿಂದ ಬಳಲುತ್ತಿರುವವರು ಸುಲಭವಾಗಿ ಮನೆಯಲ್ಲಿಯೇ ಫೇಸ್ ಪ್ಯಾಕ್ ಜೊತೆಗೆ ಮನೆ ಮದ್ದು ತಯಾರಿಸಿಕೊಳ್ಳಬಹುದು ಎನ್ನುತ್ತಾರೆ ಆಯುರ್ವೇದ ತಜ್ಞರು.

ಮನೆಯಲ್ಲೇ ತಯಾರಿಸುವ ಔಷಧಗಳನ್ನು ಬಳಸುವುದರಿಂದ ಉತ್ತಮ ಫಲಿತಾಂಶ ದೊರೆಯುತ್ತದೆ ಎನ್ನುತ್ತಾರೆ ಖ್ಯಾತ ಆಯುರ್ವೇದ ತಜ್ಞೆ, ವೈದ್ಯರಾದ ಡಾ.ಗಾಯತ್ರಿದೇವಿ. ಹಾಗಾದರೆ ಆ ಫೇಸ್​​​ ಪ್ಯಾಕ್​ ಯಾವುದು? ಮನೆಯಲ್ಲೇ ಔಷಧ ಸಿದ್ಧಪಡಿಸಲು ಬೇಕಾಗುವ ಪದಾರ್ಥಗಳು ಯಾವುವು? ಅದನ್ನು ತಯಾರಿಸುವುದು ಹೇಗೆ? ಎಂಬುದನ್ನು ತಿಳಿದುಕೊಳ್ಳೋಣ.

ಫೇಸ್ ಪ್ಯಾಕ್‌ ಸಿದ್ಧಪಡಿಸಲು ಬೇಕಾಗುವ ಪದಾರ್ಥಗಳು:

  • ಯಷ್ಟಿಮಧು ಪುಡಿ ಅರ್ಧ ಚಮಚ
  • ಲೋಧ್ರಾ ಪುಡಿ ಅರ್ಧ ಚಮಚ
  • ಬಾರ್ಲಿ ಪುಡಿ ಒಂದು ಚಮಚ
  • ಸ್ವಲ್ಪ ಹುಳಿ ಮೊಸರು

ಸಿದ್ಧಪಡಿಸುವ ಪ್ರಕ್ರಿಯೆ ಹೇಗೆ?:

  • ಮೊದಲು ಬಾರ್ಲಿ ಬೀಜಗಳನ್ನು ಮೃದುವಾದ ಪೇಸ್ಟ್ ಆಗಿಸಲು ಪುಡಿ ಮಾಡಿಕೊಳ್ಳಿ. ಮತ್ತು ಅದನ್ನು ಒಂದು ಪಾತ್ರೆಯಲ್ಲಿ ಹಾಕಿಕೊಳ್ಳಿ.
  • ನಂತರ ಲೋಧ್ರ ಪುಡಿ ಮತ್ತು ಯಷ್ಟಿಮಧು ಚೂರ್ಣ ಮಿಶ್ರಣ ಮಾಡಿ.
  • ಬಳಿಕ ಸ್ವಲ್ಪ ಹುಳಿ ಮೊಸರು ಸೇರಿಸಿ ಪೇಸ್ಟ್ ಮಾಡಿಕೊಳ್ಳಿ.
  • ಈ ಮಿಶ್ರಣ ಫೇಸ್ ಪ್ಯಾಕ್​ ನಂತೆ ಸಿದ್ಧಪಡಿಸಿ, ಬಾಧಿತ ಪ್ರದೇಶಕ್ಕೆ ಔಷಧದ ರೀತಿಯಲ್ಲಿ ಹಚ್ಚಿ.
  • ಇದನ್ನು ನಿತ್ಯ 15 ನಿಮಿಷಗಳ ಕಾಲ ಮುಖಕ್ಕೆ ಹಚ್ಚಿ ನಂತರ ತೊಳೆದರೆ ಉತ್ತಮ ಫಲಿತಾಂಶ ಸಿಗುತ್ತದೆ ಎನ್ನುತ್ತಾರೆ ಆಯುರ್ವೇದ ವೈದ್ಯರು.

ಲಭಿಸಿವ ಪ್ರಯೋಜನಗಳೇ?:

  • ಬಾರ್ಲಿ: ಬಾರ್ಲಿಯಲ್ಲಿ ನೈಸರ್ಗಿಕವಾಗಿ ಕಲೆಗಳನ್ನು ನಿವಾರಿಸುವ ಗುಣವಿದೆ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ.
  • ಲೋದ್ರಾ: ಲೋದ್ರಾ ಕೇವಲ ಕಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ಮುಖ ಕಾಂತಿಯುತಗೊಳಿಸಲು ಸಹಾಯ ಮಾಡುತ್ತದೆ.
  • ಯಷ್ಟಿಮಧು: ಯಷ್ಟಿಮಧು ತ್ವಚೆಗೆ ಉತ್ತಮ ಹೊಳಪು ನೀಡುತ್ತದೆ ಎನ್ನುತ್ತಾರೆ ಆಯುರ್ವೇದ ವೈದ್ಯರು. ಇದಲ್ಲದೇ, ಇದು ಮುಖದ ಮೇಲಿನ ಕಲೆಗಳನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ.

ಮುಖದ ಕಲೆಗಳನ್ನು ಹೋಗಲಾಡಿಸಲು ಮನೆಮದ್ದು ಸಿದ್ಧಪಡಿಸುವುದು ಹೇಗೆ?:

ಬೇಕಾಗುವ ಪದಾರ್ಥಗಳೇನು?

  • ಒಂದು ಚಮಚ ಲಾವಂಚ ಬೇರು (ವೆಟಿವರ್) ಪುಡಿಮಾಡಿ
  • ಒಂದು ಚಮಚ ಶ್ರೀಗಂಧದ ಪುಡಿ
  • ಒಂದು ಚಮಚ ಸುಗಂಧ ಪಾಲ ಎಲೆ ಪುಡಿ (ಸುಗಂಧ ಪಾಲ ಸಸ್ಯದ ಎಲೆ)
  • ಒಂದು ಚಮಚ ಜೇನುತುಪ್ಪ

ಸಿದ್ಧಪಡಿಸುವ ಪ್ರಕ್ರಿಯೆ ಹೇಗೆ?:

  • ಮೊದಲು ಒಲೆ ಹೊತ್ತಿಸಿ ಮತ್ತು ಕಡಾಯಿಯಲ್ಲಿ ಒಂದು ಲೋಟ ನೀರು ಸುರಿಯಿರಿ.
  • ಅದರ ನಂತರ ಒಣಗಿದ ಲಾವಂಚ ಬೇರು (ವೆಟಿವರ್) ಪುಡಿ ಮತ್ತು ಸುಗಂಧ ಪಾಲ ಎಲೆ ಪುಡಿ ಸೇರಿಸಿ.
  • ಬಳಿಕ, ಅದೆಲ್ಲವನ್ನೂ ಮಿಶ್ರಣ ಮಾಡಿ. ಅದು ಆರಿದ ನಂತರ, ಶ್ರೀಗಂಧದ ಪುಡಿ ಮಿಕ್ಸ್​ ಮಾಡಬೇಕು, ಕುದಿಯುತ್ತಿರುವಾಗ ಶ್ರೀಗಂಧದ ಪುಡಿಯನ್ನು ಹಾಕಿ ಮಿಕ್ಸ್​ ಮಾಡಿದರೆ, ಅದರ ಔಷಧೀಯ ಗುಣಗಳು ಕಡಿಮೆ ಆಗುತ್ತದೆ.
  • ಈ ಔಷಧವನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಂಡು ಅದನ್ನು ತಣ್ಣಗಾಗಲು ಬಿಡಿ. ನಂತರ ಒಂದು ಚಮಚ ಜೇನು ತುಪ್ಪ ಸೇರಿಸಿ.
  • ನಿಮ್ಮ ಮುಖದ ಮೇಲಿನ ಕಲೆಗಳನ್ನು ಕಡಿಮೆ ಮಾಡಲು ನೀವು ಈ ಮದ್ದು ತಯಾರಿಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.
  • ಬೆಳಗ್ಗೆ ಮತ್ತು ಸಂಜೆ 30 - 40 ಮಿಲಿ ಸೇವಿಸಬೇಕು ಎಂದು ವೈದ್ಯರು ತಿಳಿಸುತ್ತಾರೆ.
  • ಈ ಔಷಧವನ್ನು ಕನಿಷ್ಠ 2 ರಿಂದ 3 ತಿಂಗಳ ಕಾಲ ಸೇವಿಸುವುದರಿಂದ ಕಲೆಗಳು ಕಡಿಮೆಯಾಗಿ ತ್ವಚೆ ಸಾಮಾನ್ಯವಾದ ಬಣ್ಣಕ್ಕೆ ತಿರುಗುತ್ತದೆ ಎನ್ನುತ್ತಾರೆ ಆಯುರ್ವೇದ ತಜ್ಞರು.

ಲಾವಂಚ ಬೇರು: ಲಾವಂಚ ಬೇರು (ವೆಟಿವರ್) ಬೇರುಗಳು ನಮ್ಮ ದೇಹದಲ್ಲಿನ ರಕ್ತ ಶುದ್ಧೀಕರಿಸುವ ಗುಣ ಹೊಂದಿವೆ. ಇದು ಸಾಮಾನ್ಯವಾಗಿ ಚರ್ಮದ ಬಣ್ಣವನ್ನು ಬದಲಾಯಿಸುತ್ತದೆ ಎಂದು ಆಯುರ್ವೇದದ ತಜ್ಞರು ಹೇಳುತ್ತಾರೆ.

ಸುಗಂಧ ಪಾಲ ಸಸ್ಯದ ಎಲೆ: ಸುಗಂಧ ಪಾಲ ಸಸ್ಯದ ಎಲೆ ಪುಡಿ ರಕ್ತ ಶುದ್ಧೀಕರಿಸುವುದು ಮಾತ್ರವಲ್ಲದೇ ಪಿತ್ತ ದೋಷ ಕಡಿಮೆ ಮಾಡುತ್ತದೆ ಮತ್ತು ಚರ್ಮದ ಮೇಲಿನ ಕಲೆಗಳನ್ನು ಕಡಿಮೆ ಮಾಡುತ್ತದೆ.

ಶ್ರೀಗಂಧ: ಶ್ರೀಗಂಧವು ತ್ವಚೆಗೆ ಎಷ್ಟು ಒಳ್ಳೆಯದು ಎಂಬುದು ಹಲವರಿಗೆ ಗೊತ್ತು. ಇದು ಚರ್ಮದ ಕಾಂತಿ ಹೆಚ್ಚಿಸಲು ಉಪಯುಕ್ತವಾಗಿದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ:

Last Updated : Aug 26, 2024, 12:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.