ನವದೆಹಲಿ: ಬಿಹಾರದ ಗಯಾದಲ್ಲಿರುವ ಬ್ರಹ್ಮಯೋನಿ ಬೆಟ್ಟದಲ್ಲಿ ಔಷಧೀಯ ಗುಣಗಳನ್ನು ಹೊಂದಿರುವ ವಿಶೇಷ ಸಸ್ಯಗಳನ್ನು ಸಂಶೋಧಕರ ತಂಡ ಪತ್ತೆ ಹಚ್ಚಿದೆ. ಇಲ್ಲಿ ದೊರೆತ ಗುರ್ಮಾರ್ ಎಂದು ಕರೆಯಲಾಗುವ ಜಿಮ್ನೆಮಾ ಸಿಲ್ವೆಸ್ಟ್ರೆ ಸಸ್ಯ ಮಧುಮೇಹ ವಿರೋಧಿ ಗುಣಗಳನ್ನು ಹೊಂದಿದೆ. ಈ ಕುರಿತ ಅಧ್ಯಯನ ವರದಿ ಇಂಟರ್ನ್ಯಾಷನಲ್ ಜರ್ನಲ್ ಆಫ್ ಕ್ರಿಯೇಟಿವ್ ರಿಸರ್ಚ್ ಥಾಟ್ಸ್‌ನಲ್ಲಿ ಪ್ರಕಟಗೊಂಡಿದೆ.
ಸಿಎಸ್ಐಆರ್ ಸಂಶೋಧನಾ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ, ಈ ಔಷಧಿಯ ಸಸ್ಯ ಮಧುಮೇಹ ವಿರೋಧಿ ಔಷಧವಾಗಿರುವ ಬಿಜಿಆರ್-34ರ ಅಭಿವೃದ್ಧಿಗೆ ಬಳಸಲಾಗುತ್ತದೆ ಎಂದು ತಿಳಿಸಲಾಗಿದೆ,
ಗುರ್ಮಾರ್ ಸಸ್ಯದಲ್ಲಿ ಗ್ಲೇಮ್ನೆಮಿಕ್ ಆಮ್ಲವಿದೆ. ಇದು ರಕ್ತದ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವ ಸಾಮರ್ಥ್ಯ ಹೊಂದಿದೆ. ಸಸ್ಯದ ಫ್ಲೇವನೋಯ್ಸ್ಡ್ ಮತ್ತು ಸಪೊನಿನ್ಸ್ ಲಿಪಿಡ್ ಚಯಾಪಚಯವನ್ನು ನಿಯಂತ್ರಿಸಲು ಸಹಾಯಕ. ಫ್ಲೇವನೋಯ್ಡ್ಸ್ ಉರಿಯೂತ ವಿರೋಧಿ ಗುಣ ಹೊಂದಿದ್ದು, ಸಪೊನಿನ್ಸ್ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುತ್ತದೆ ಎಂದು ಮಗಧ ಯುನಿವರ್ಸಿಟಿ ಪ್ರೊಫೆಸರ್ಗಳು ತಿಳಿಸಿದ್ದಾರೆ. (ಎಎನ್ಐ)
ಇದನ್ನೂ ಓದಿ: ಜನರನ್ನು ಆತಂಕಕ್ಕೆ ದೂಡುತ್ತಿವೆ ಸ್ಮಾರ್ಟ್ವಾಚ್ನಂತಹ ಸಾಧನಗಳು