ETV Bharat / health

'ಹಿತಮಿತವಾಗಿ ಬೆಟ್ಟದ ನೆಲ್ಲಿಕಾಯಿ ಸೇವಿಸಿದರೆ ಆರೋಗ್ಯಕ್ಕೆ ಲಭಿಸುತ್ತೆ ಉತ್ತಮ ಲಾಭ': ತಜ್ಞರ ಸಲಹೆ - Amla Health Benefits - AMLA HEALTH BENEFITS

Health Benefits Of Amla In Kannada: ಆಮ್ಲಾ ಅಥವಾ ಬೆಟ್ಟದ ನೆಲ್ಲಿಕಾಯಿ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ, ಹಲವು ಪೋಷಕಾಂಶಗಳು ಮತ್ತು ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಬೆಟ್ಟದ ನೆಲ್ಲಿಕಾಯಿಯನ್ನು ನೀವು ಹಿತಮಿತವಾಗಿ ನಿತ್ಯ ಸೇವಿಸಿದರೆ ದೇಹದ ಆರೋಗ್ಯಕ್ಕೆ ಉತ್ತಮವಾಗಿದೆ ಎಂದು ಹೇಳುತ್ತಾರೆ ತಜ್ಞರು. ಪರಿಣತರು ನೀಡಿರುವ ಸಲಹೆಗಳ ಕುರಿತು ತಿಳಿಯೋಣ.

HEALTH BENEFITS OF AMLA  AMLA HEALTH BENEFITS IN Kannada  AMLA FOR GOOD HEALTH
ಬೆಟ್ಟದ ನೆಲ್ಲಿಕಾಯಿ (ETV Bharat)
author img

By ETV Bharat Health Team

Published : Sep 18, 2024, 8:05 PM IST

Health Benefits Of Amla In Kannada: ಬೆಟ್ಟದ ನೆಲ್ಲಿಕಾಯಿ (ಆಮ್ಲಾ)ದಲ್ಲಿ ಅನೇಕ ಪೋಷಕಾಂಶಗಳು ಅಡಕವಾಗಿವೆ. ಬೆಟ್ಟದ ನೆಲ್ಲಿಕಾಯಿಯನ್ನು ಪೋಷಕಾಂಶಗಳ ಕಣಜ ಮತ್ತು ಇದನ್ನು ಸೂಪರ್ ಫುಡ್ ಅಂತಲೂ ಕರೆಯಬಹುದು. ಮೇಲಾಗಿ.. ಈ ಬೆಟ್ಟದ ನೆಲ್ಲಿಕಾಯಿಯಲ್ಲಿ ಔಷಧೀಯ ಗುಣಗಳು ಸಮೃದ್ಧವಾಗಿವೆ. ಅಷ್ಟೇ ಏಕೆ.. ಬೆಟ್ಟದ ನೆಲ್ಲಿಕಾಯಿಯನ್ನು ಆಯುರ್ವೇದ ಔಷಧ ಎಂದು ಹೇಳಗುತ್ತದೆ. ಏತನ್ಮಧ್ಯೆ, ವಿಟಮಿನ್ ಮತ್ತು ಖನಿಜಗಳಿಂದ ತುಂಬಿರುವ ಆಮ್ಲಾವನ್ನು ಪ್ರತಿದಿನ ಸೇವಿಸುವುದರಿಂದ ನಿಮ್ಮ ದೇಹದಲ್ಲಿ ಅನೇಕ ಬದಲಾವಣೆಗಳು ಸಂಭವಿಸುತ್ತವೆ ಎಂದು ತಜ್ಞರು ಹೇಳುತ್ತಾರೆ.

HEALTH BENEFITS OF AMLA  AMLA HEALTH BENEFITS IN Kannada  AMLA FOR GOOD HEALTH
ಬೆಟ್ಟದ ನೆಲ್ಲಿಕಾಯಿ (ETV Bharat)

ರೋಗನಿರೋಧಕ ಶಕ್ತಿ ಹೆಚ್ಚಿಸುತ್ತೆ: ಬೆಟ್ಟದ ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ, ಆ್ಯಂಟಿ ಆಕ್ಸಿಡೆಂಟ್‌ಗಳು, ಫೈಟೊಕೆಮಿಕಲ್‌ಗಳು, ಕ್ಯಾಲ್ಸಿಯಂ, ರಂಜಕ, ಕಬ್ಬಿಣ ಮತ್ತು ಇತರ ಪೋಷಕಾಂಶಗಳು ಸಮೃದ್ಧವಾಗಿದೆ. ನೀವು ಪ್ರತಿದಿನ ಆಮ್ಲಾ ಸೇವಿಸಿದರೆ, ಅದರಲ್ಲಿರುವ ವಿಟಮಿನ್ ಸಿ ದೇಹಕ್ಕೆ ಲಭಿಸುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಚರ್ಮದಲ್ಲಿ ಕಾಲಜನ್ ರಚನೆಗೆ ಇದು ಉಪಯುಕ್ತವಾಗಿದೆ ಎಂದು ಹೇಳುತ್ತಾರೆ ತಜ್ಞರು.

2020ರಲ್ಲಿ 'ಫುಡ್ ಫಂಕ್ಷನ್' ಜರ್ನಲ್‌ನಲ್ಲಿ ಪ್ರಕಟವಾದ ವರದಿ ಪ್ರಕಾರ, ಆಮ್ಲಾ ಜ್ಯೂಸ್ ಸೇವನೆಯು ರೋಗನಿರೋಧಕ ಶಕ್ತಿ ಸುಧಾರಿಸುತ್ತದೆ. ಚೀನಾದ ಕೃಷಿ ವಿಶ್ವವಿದ್ಯಾಲಯದ ಖ್ಯಾತ ಪೌಷ್ಟಿಕತಜ್ಞ ಡಾ.ಜಿಯಾನ್ ಶು ಈ ಸಂಶೋಧನೆಯಲ್ಲಿ ಭಾಗವಹಿಸಿದ್ದರು. ನಿತ್ಯ ಆಮ್ಲಾ ಸೇವನೆಯು ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಅವರು ತಿಳಿಸುತ್ತಾರೆ.

ಫ್ರೀ ರ್ಯಾಡಿಕಲ್ ಡ್ಯಾಮೇಜ್ ಕಡಿಮೆ ಮಾಡುತ್ತದೆ: ನೀವು ನಿತ್ಯ ಸೇವಿಸಿದರೆ ಆಮ್ಲಾದಲ್ಲಿರುವ ವಿಟಮಿನ್ ಸಿ ಶಕ್ತಿಯುತವಾದ ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಅಲ್ಲದೇ ಈ ಹಣ್ಣಿನಲ್ಲಿ ಪಾಲಿಫಿನಾಲ್, ಟ್ಯಾನಿನ್, ಫ್ಲೇವನಾಯ್ಡ್​ಗಳಿವೆ. ಇವೆಲ್ಲವೂ ದೇಹವನ್ನು ಆಕ್ಸಿಡೇಟಿವ್ ಸ್ಟ್ರೆಸ್ ಮತ್ತು ಫ್ರೀ ರ್ಯಾಡಿಕಲ್ ಡ್ಯಾಮೇಜ್‌ಗಳಿಂದ ರಕ್ಷಿಸಲು ತುಂಬಾ ಸಹಕಾರಿ ಎಂದು ತಜ್ಞರು ಹೇಳುತ್ತಾರೆ. ಮೇಲಾಗಿ.. ನಿತ್ಯ ಬೆಟ್ಟದ ನೆಲ್ಲಿಕಾಯಿ ತಿಂದರೆ ದೇಹದಲ್ಲಿ ಉರಿ, ಕೋಶ ಹಾನಿ ಕಡಿಮೆಯಾಗುತ್ತದೆ. ದೀರ್ಘಕಾಲದ ಕಾಯಿಲೆಗಳ ಅಪಾಯ ಕಡಿಮೆ ಮಾಡಬಹುದು ಎಂದು ಸಂಶೋಧನೆಯಿಂದ ತಿಳಿದಿದೆ.

ಜೀರ್ಣಕ್ರಿಯೆ ಸುಧಾರಿಸುತ್ತೆ: ''ನಿತ್ಯ ಆಮ್ಲಾ ಸೇವಿಸುವುದರಿಂದ ಜೀರ್ಣಕ್ರಿಯೆಯ ಆರೋಗ್ಯ ಸುಧಾರಿಸುತ್ತದೆ. ಇದು ವಿಶೇಷವಾಗಿ ಮಲಬದ್ಧತೆ ತಡೆಯುತ್ತದೆ'' ಎಂದು ತಜ್ಞರು ಹೇಳುತ್ತಾರೆ. ಇದಲ್ಲದೇ.. ಆಮ್ಲಾ ಜೀರ್ಣಕಾರಿ ರಸಗಳ ಸ್ರವಿಸುವಿಕೆಯನ್ನು ಉತ್ತೇಜಿಸುತ್ತದೆ ಮತ್ತು ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಸುಧಾರಿಸುತ್ತದೆ. ಇದರಿಂದ ಅಜೀರ್ಣ, ಹೊಟ್ಟೆ ಉಬ್ಬರದಂತಹ ಸಮಸ್ಯೆಗಳು ಕಡಿಮೆಯಾಗುತ್ತವೆ'' ಎನ್ನುತ್ತಾರೆ ತಜ್ಞರು.

ಹೃದಯದ ಆರೋಗ್ಯಕ್ಕೆ ಒಳ್ಳೆಯದು: ಬೆಟ್ಟದ ನೆಲ್ಲಿಕಾಯಿಯಲ್ಲಿರುವ ಪೋಷಕಾಂಶಗಳು ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುತ್ತದೆ. ರಕ್ತದೊತ್ತಡ ಕಡಿಮೆ ಮಾಡುತ್ತದೆ. ರಕ್ತ ಪರಿಚಲನೆ ಸುಧಾರಿಸುತ್ತದೆ. ಇದರಿಂದ ಹೃದಯದ ಆರೋಗ್ಯ ಚೆನ್ನಾಗಿರುತ್ತದೆ ಎಂದು ತಜ್ಞರು ಹೇಳುತ್ತಾರೆ. ಇದಲ್ಲದೇ, ಅದರ ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳು ಅಪಧಮನಿಗಳಲ್ಲಿ ಪ್ಲೇಕ್ ನಿರ್ಮಾಣವನ್ನು ತಡೆಯಲು ಸಹಾಯ ಮಾಡುತ್ತದೆ. ಪರಿಣಾಮವಾಗಿ, ಇದು ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ.

ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣ: ಬೆಟ್ಟದ ನೆಲ್ಲಿಕಾಯಿಯು ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲು ಸಹಾಯ ಮಾಡುವ ಸಂಯುಕ್ತಗಳನ್ನು ಹೊಂದಿರುತ್ತದೆ. ಹಾಗಾಗಿ.. ಮಧುಮೇಹ ಇರುವವರಿಗೆ ಅಥವಾ ಬರುವ ಅಪಾಯದಲ್ಲಿರುವವರಿಗೆ ಇದು ತುಂಬಾ ಪ್ರಯೋಜನಕಾರಿ. ಇದಲ್ಲದೇ. ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಸ್ಥಿರವಾಗಿಡಲು ಆಮ್ಲಾ ಸಹಾಯ ಮಾಡುತ್ತದೆ ಎಂದು ತಿಳಿಸುತ್ತಾರೆ ತಜ್ಞರು.

ಮೆದುಳಿನ ಕಾರ್ಯ ಸುಧಾರಿಸುತ್ತೆ: ಬೆಟ್ಟದ ನೆಲ್ಲಿಕಾಯಿ ಸೇವಿಸುವುದರಿಂದ ಮೆದುಳಿನ ಕಾರ್ಯ ಸುಧಾರಿಸಬಹುದು. ಏಕೆಂದರೆ.. ಇದರಲ್ಲಿ ಹೇರಳವಾಗಿರುವ ಆ್ಯಂಟಿ - ಆಕ್ಸಿಡೆಂಟ್‌ಗಳು ಮೆದುಳಿನ ಕೋಶಗಳನ್ನು ಫ್ರೀ ರ್ಯಾಡಿಕಲ್‌ಗಳಿಂದ ಉಂಟಾಗುವ ಹಾನಿಯಿಂದ ರಕ್ಷಿಸುತ್ತದೆ. ಇದಲ್ಲದೆ, ಇದು ಆಲ್ಝೈಮರ್ಸ್ ಮತ್ತು ಪಾರ್ಕಿನ್ಸನ್‌ನಂತಹ ನ್ಯೂರೋ ಡಿಜೆನೆರೆಟಿವ್ ಕಾಯಿಲೆಗಳ ಅಪಾಯ ಕಡಿಮೆ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.

ಕೂದಲು, ತ್ವಚೆಯ ಆರೋಗ್ಯಕ್ಕೆ ಒಳ್ಳೆಯದು: ಬೆಟ್ಟದ ನೆಲ್ಲಿಕಾಯಿಯಲ್ಲಿರುವ ವಿಟಮಿನ್ ಸಿ ಮತ್ತು ಆಂಟಿ - ಆಕ್ಸಿಡೆಂಟ್ ಗುಣಗಳು ಕೂದಲು ಮತ್ತು ಚರ್ಮದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬೆಟ್ಟದ ನೆಲ್ಲಿಕಾಯಿ ನಿಯಮಿತವಾಗಿ ಸೇವಿಸುವುದರಿಂದ ಕೂದಲಿನ ಕಿರುಚೀಲಗಳು ಬಲಗೊಳ್ಳುತ್ತವೆ ಮತ್ತು ಕೂದಲು ಉದುರುವಿಕೆ ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ. ಅಲ್ಲದೇ, ಆಮ್ಲಾದಲ್ಲಿನ ಉರಿಯೂತದ ಗುಣಲಕ್ಷಣಗಳು ಚರ್ಮದ ಕಿರಿಕಿರಿ ಮತ್ತು ಮೊಡವೆಗಳನ್ನು ಕಡಿಮೆ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.

ತಮ್ಮ ದೈನಂದಿನ ಆಹಾರದಲ್ಲಿ ಸೇರಿಸಲು ಯೋಚಿಸುತ್ತಿರುವವರು ಮೊದಲು ಆರೋಗ್ಯ ವೃತ್ತಿಪರರನ್ನು ಸಂಪರ್ಕಿಸಿ ನಂತರ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ ಎನ್ನುತ್ತಾರೆ ತಜ್ಞರು.

ಹೆಚ್ಚಿನ ಮಾಹಿತಿಗಾಗಿ ನೀವು ಈ ವೆಬ್​ಸೈಟ್​ಗಳನ್ನು ಸಂಪರ್ಕಿಸಬಹುದು:

https://www.ncbi.nlm.nih.gov/pmc/articles/PMC9137578/

ಇದನ್ನೂ ಓದಿ:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.