ETV Bharat / entertainment

ನಟ ಸಲ್ಮಾನ್​ ಖಾನ್​ ಮನೆಯಿಂದ ಬಿಷ್ಣೋಯಿ ಹೆಸರಲ್ಲಿ ಕಾರ್​ ಬುಕ್​ ಮಾಡಿದ ಯುವಕನ ಬಂಧನ - Youth Arrested for Booking Cab - YOUTH ARRESTED FOR BOOKING CAB

ಕ್ಯಾಬ್​ ಬುಕ್​ ಮಾಡಿದ ವ್ಯಕ್ತಿ ಗಾಜಿಯಾಬಾದ್​ನ 20 ವರ್ಷದ ವಿದ್ಯಾರ್ಥಿಯಾಗಿದ್ದು, ರೋಹಿತ್​ ತ್ಯಾಗಿ ಎಂಬುದಾಗಿ ಗೊತ್ತಾಗಿದೆ.

youth-arrested-for-booking-cab-as-gangster-lawrence-bishnoi-from-salman-khans-residence

author img

By ETV Bharat Karnataka Team

Published : Apr 20, 2024, 12:51 PM IST

ಹೈದರಾಬಾದ್​: ಗ್ಯಾಂಗ್​ಸ್ಟರ್​ ಲಾರೆನ್ಸ್ ಬಿಷ್ಣೋಯಿ ಹೆಸರಿನಲ್ಲಿ ಬಾಲಿವುಡ್​ ಸೂಪರ್​ಸ್ಟಾರ್​ ಸಲ್ಮಾನ್​ ಖಾನ್​ ಮನೆಯಿಂದ ಕ್ಯಾಬ್​ ಬುಕ್​ ಮಾಡಿದ ಯುವಕನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಗಾಜಿಯಾಬಾದ್​ನ 20 ವರ್ಷದ ರೋಹಿತ್​ ತ್ಯಾಗಿ ಬಂಧಿತ ಆರೋಪಿ.

ಸಲ್ಮಾನ್​ ಖಾನ್​ ನಿವಾಸ ಗ್ಯಾಲಕ್ಸಿ ಅಪಾರ್ಟ್​ಮೆಂಟ್​​ಗೆ ಕ್ಯಾಬ್​​ ಡ್ರೈವರ್​ ಬಂದಾಗ. ಲಾರೆನ್ಸ್​​ ಬಿಷ್ಣೋಯಿ ಹೆಸರಿನಲ್ಲಿ ಕ್ಯಾಬ್​ ಬುಕ್​ ಮಾಡಿರುವ ಕುರಿತು ವಾಚ್​ಮಾನ್​ಗೆ ಕೇಳಿದ್ದಾರೆ. ಇದನ್ನು ಕೇಳಿದಾಕ್ಷಣ ವಾಚ್​ಮೆನ್​​​ ಗಾಬರಿಗೊಂಡಿದ್ದಾನೆ. ತಕ್ಷಣಕ್ಕೆ ಬುಕ್ಕಿಂಗ್​ ಕುರಿತು ಬಾಂದ್ರಾ ಪೊಲೀಸ್​ ಠಾಣೆಗೆ ಮಾಹಿತಿ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಮುಂಬೈ ಬಾಂದ್ರಾ ಪೊಲೀಸರು ಕ್ಯಾಬ್​ ಡ್ರೈವರ್​ನ ವಿಚಾರಣೆ ನಡೆಸಿದಾಗ ಆನ್​ಲೈನ್​ ಮೂಲಕ ವಾಹನ ಬುಕ್​ ಮಾಡಿದ ವ್ಯಕ್ತಿಯ ಮಾಹಿತಿ ಪಡೆದಿದ್ದಾರೆ.

ಕ್ಯಾಬ್​ ಬುಕ್​ ಮಾಡಿದ ವ್ಯಕ್ತಿ ಗಾಜಿಯಾಬಾದ್​ನ 20 ವರ್ಷದ ವಿದ್ಯಾರ್ಥಿಯಾಗಿದ್ದು, ರೋಹಿತ್​ ತ್ಯಾಗಿ ಎಂಬುದಾಗಿ ಪತ್ತೆಯಾಗಿದೆ. ತನಿಖೆ ವೇಳೆ ದುರುದ್ದೇಶದಿಂದ ಹುಸಿ ಬೆದರಿಕೆ ಒಡ್ಡುವ ನೆಪದಲ್ಲಿ ಆರೋಪಿ ಲಾರೆನ್ಸ್​ ಬಿಷ್ಣೋಯಿ ಹೆಸರಲ್ಲಿ ಈ ರೀತಿ ಕ್ಯಾಬ್​ ಬುಕ್​ ಮಾಡಿರುವುದಾಗಿ ತಿಳಿದು ಬಂದಿದೆ. ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಉತ್ತರ ಪ್ರದೇಶದ ಗಾಜಿಯಾಬಾದ್​ ಪೊಲೀಸರು ಆತನ ವಶಕ್ಕೆ ಪಡೆದಿದ್ದಾರೆ. ಇದಾದ ಬಳಿಕ ಆತನನ್ನು ಮುಂಬೈಗೆ ಕರೆತರಲಾಗಿದ್ದು, ಇಲ್ಲಿ ಕೋರ್ಟ್​​ ಮುಂದೆ ಹಾಜರು ಪಡಿಸಿ, ಎರಡು ದಿನ ಬಾಂದ್ರಾ ಪೊಲೀಸ್​ ಕಸ್ಟಡಿಗೆ ಒಪ್ಪಿಸಲಾಗಿದೆ.

ಇನ್ನು ಸಲ್ಮಾನ್​ ಖಾನ್ ಮನೆ ಮೇಲಿನ ದಾಳಿ ಸಂಬಂಧ ಕಚ್​​ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಮುಂಬೈ ಅಪರಾಧ ದಳಕ್ಕೆ ಒಪ್ಪಿಸಿದ್ದಾರೆ. ವಿಕ್ಕಿ ಗುಪ್ತಾ (24) ಮತ್ತು ಸಾಗರ್​​ ಪಾಲ್​ (21) ಅವರನ್ನು ವೈದ್ಯಕೀಯ ಪರೀಕ್ಷೆ ಬಳಿಕ ಕೋರ್ಟ್​​ಗೆ ಕರೆ ತಂದಿದ್ದಾರೆ.

ಸಾಗರ್​ ಮತ್ತು ವಿಕ್ಕಿ ಎಂಬ ಇಬ್ಬರು ಆರೋಪಿಗಳು ಭಾನುವಾರ ಅಂದರೆ ಜೂನ್​ 14ರಂದು ಬೆಳಗ್ಗೆ 5 ಗಂಟೆಗೆ ಮುಸುಕು ಧರಿಸಿ ಗ್ಯಾಲಕ್ಸಿ ಅಪಾರ್ಟ್​ಮೆಂಟ್​ ಮೇಲೆ ನಾಲ್ಕು ಸುತ್ತಿನ ಗುಂಡಿನ ದಾಳಿ ನಡೆಸಿ, ಪರಾರಿಯಾಗಿದ್ದರು. ಸಿಸಿಟಿವಿ ಫೂಟೇಜ್​ನಲ್ಲಿ ತೋರಿಸಿದಂತೆ ಆರೋಪಿಗಳು ಹೆಡ್​ಗೇರ್​​ ಮತ್ತು ಬ್ಯಾಕ್​ಪ್ಯಾಕ್​ ತರಿಸಿರುವುದು ಕಂಡು ಬಂದಿದೆ. ಆರೋಪಿಗಳು ನಟನ ಮನೆ ಮೇಲೆ ಗುಂಡಿನ ದಾಳಿ ನಡೆಸಿರುವುದು ಸ್ಪಷ್ಟವಾಗಿ ಕಂಡಿದೆ. ಆರೋಪಿಗಳ ಬಂಧನದ ಬಳಿಕ ಆರೋಪಿಗಳು ಲಾರೆನ್ಸ್​ ಬಿಷ್ಣೋಯಿ ಗ್ಯಾಂಗ್​ ಜೊತೆ ಸಂಪರ್ಕ ಹೊಂದಿರುವುದು ಕಂಡು ಬಂದಿದೆ.

ಘಟನೆ ಬಳಿಕ ನಟ ಸಲ್ಮಾನ್​ ಖಾನ್​ ಅವರ ಭದ್ರತೆಯನ್ನು ಹೆಚ್ಚಿಸಲಾಗಿದೆ. ಅವರಿಗೆ ಇದೀಗ ವೈ ಪ್ಲಸ್​ ಭದ್ರತೆ ನೀಡಲಾಗುತ್ತಿದೆ. ಸಲ್ಮಾನ್​ ಖಾನ್​ರಿಗೆ ಗೋಲ್ಡಿ ಬ್ರಾರ್​​ ಮತ್ತು ಲಾರೆನ್ಸ್​​ ಬಿಷ್ಣೋಯಿ ಅವರಿಂದ ಬೆದರಿಕೆ ಇದೆ. ಜೊತೆಗೆ ನಟ ತಮ್ಮ ವೈಯಕ್ತಿಕ ಪಿಸ್ತೂಲ್​ ಹಾಗೂ ಹೊಸ ಬುಲೆಟ್​ ಪ್ರೂಫ್​ ಕಾರ್​ ಕೊಂಡೊಯ್ಯಲು ಅನುಮತಿ ನೀಡಲಾಗಿದೆ.

ಇದನ್ನೂ ಓದಿ: ಬಿಗಿ ಭದ್ರತೆಯಲ್ಲಿ ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿ ದುಬೈಗೆ ತೆರಳಿದ ಸಲ್ಮಾನ್ ಖಾನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.