ETV Bharat / entertainment

'ಈ ಅವಕಾಶ ದುರ್ಬಳಕೆಯಾಗುತ್ತಿದೆ ಎಂದನಿಸುತ್ತದೆಯೇ?' ಬಿಗ್​ ಬಾಸ್​ ಮನೆಯಲ್ಲಿ ಯೋಗರಾಜ್​ ಭಟ್​ ಈ ಪ್ರಶ್ನೆ ಎತ್ತಿದ್ಯಾಕೆ? - BIGG BOSS

ಬಿಗ್​ ಬಾಸ್​ನ ವಾರಾಂತ್ಯದ ಪಂಚಾಯ್ತಿಯನ್ನು ನಿರ್ದೇಶಕ ಯೋಗರಾಜ್​ ಭಟ್​ ನಡೆಸಿಕೊಡಲಿದ್ದಾರೆ. ಅವರ ಒಂದು ಪ್ರಶ್ನೆ ಸ್ಪರ್ಧಿಗಳು ಮತ್ತು ವೀಕ್ಷಕರ ಗಮನ ಸೆಳೆದಿದೆ.

bigg boss kannada 11
ಬಿಗ್​ ಬಾಸ್​ ಕನ್ನಡ ಸೀಸನ್​ 11 (bigg boss poster)
author img

By ETV Bharat Entertainment Team

Published : Oct 26, 2024, 3:55 PM IST

ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ 'ಬಿಗ್​ ಬಾಸ್​​​'ನ ಪ್ರಮುಖ ಆಕರ್ಷಣೆ ಅಂದ್ರೆ ಅದು ಅಭಿನಯ ಚಕ್ರವರ್ತಿ ಸುದೀಪ್​​. ಕಿಚ್ಚನ ನಿರೂಪಣಾ ಶೈಲಿಗೇನೆ ಸಪರೇಟ್​ ಫ್ಯಾನ್​ ಬೇಸ್​ ಇದೆ. ಬಹುಶಃ, ವಾರದ ಕಾರ್ಯಕ್ರಗಳನ್ನು ವೀಕ್ಷಿಸದವರೂ ಸಹ ಕಿಚ್ಚನ ಸಲುವಾಗಿ ವೀಕೆಂಡ್​​ ಎಪಿಸೋಡ್​ಗಳನ್ನು ನೋಡುತ್ತಾರೆ ಅನ್ನೋದು ಹೆಚ್ಚಿನವರ ಅಭಿಪ್ರಾಯ. ವೇದಿಕೆಗೆ ಕಿಚ್ಚು ಹಚ್ಚೋ ಕಿಚ್ಚನ ಖಡಕ್​​ ಮಾತುಗಳನ್ನೇ ಕೇಳೋದೇ ಚಂದಾ ಅಂತಾರೆ ಫ್ಯಾನ್ಸ್. ಆದ್ರೆ ಬೇಸರದ ಸಂಗತಿ ಅಂದ್ರೆ ಈ ವಾರದ ಕಾರ್ಯಕ್ರಮಗಳನ್ನು ಸುದೀಪ್​ ಅವರು ನಡೆಸಿಕೊಡುತ್ತಿಲ್ಲ.

ಕಾರಣ ನಿಮಗೆ ತಿಳಿದೇ ಇದೆ. ಇತ್ತೀಚೆಗಷ್ಟೇ ಸುದೀಪ್​ ಅವರ ತಾಯಿ ನಿಧನರಾದರು. ಅಮ್ಮನ ಅಗಲಿಕೆಯ ನೋವಿನಲ್ಲಿರುವ ಸುದೀಪ್​ ಅವರು ಈ ವಾರ ಪಂಚಾಯ್ತಿ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿಲ್ಲ. ವಾರದ ಕಥೆ ಕಿಚ್ಚನ ಜೊತೆ ಮತ್ತು ಸೂಪರ್ ಸಂಡೇ ವಿತ್​ ಸುದೀಪ ಕಾರ್ಯಕ್ರಮಗಳು ಈ ಎರಡು ದಿನಗಳ ಕಾಲ ಬರೋದಿಲ್ಲ. ಆದ್ರೆ ಅಭಿನಯ ಚಕ್ರವರ್ತಿ ಜಾಗಕ್ಕೆ ಕನ್ನಡದ ಖ್ಯಾತ ನಿರ್ದೇಶಕ ಯೋಗರಾಜ್​ ಭಟ್​​ ಅವರು ಆಗಮಿಸಿದ್ದಾರೆ.

ಈಗಾಗಲೇ ಬಿಗ್​ ಬಾಸ್​​ ರಿಲೀಸ್​ ಮಾಡಿರುವ ''ದೊಡ್ಮನೆ ಬೊಂಬೆಗಳಿಗೆ ಕೀ ಕೊಡಲು ಬಂದ್ರು ಯೋಗರಾಜ್ ಭಟ್!'' ಕ್ಯಾಪ್ಷನ್​ನ ಪ್ರೋಮೋ ಪ್ರೇಕ್ಷಕರ ಗಮನ ಸೆಳೆದಿದೆ. ಭಟ್ರು ಯಾವ ರೀತಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಅನ್ನೋದನ್ನು ನೋಡುವ ಕಾತರದಲ್ಲಿ ಹೆಚ್ಚಿನ ಸಂಖ್ಯೆಯ ವೀಕ್ಷಕರಿದ್ದಾರೆ. ಈ ಪ್ರೋಮೋ ವೈರಲ್​ ಆಗುತ್ತಿದ್ದಂತೆ, ವಾಹಿನಿ ಮತ್ತೊಂದು ಪ್ರೋಮೋ ಬಿಡುಗಡೆ ಮಾಡಿ ಆಡಿಯನ್ಸ್​ನ ಕುತೂಹಲ ಕೆರಳಿಸಿದೆ. ಹೌದು, ''ಮನೆಯವರ ಅಭಿಪ್ರಾಯ ಕೇಳಿ ತಬ್ಬಿಬ್ಬಾದನಾ ಹನುಮಂತು?'' ಎಂಬ ಕ್ಯಾಪ್ಷನ್​ನೊಂದಿಗೆ ಮತ್ತೊಂದು ಪ್ರೋಮೋ ಅನಾವರಣಗೊಂಡಿದೆ.

ಇದನ್ನೂ ಓದಿ: ಕಿಚ್ಚ ಸುದೀಪ್​ ಬದಲು ಬಿಗ್​​ ಬಾಸ್​ ಪಂಚಾಯ್ತಿ ನಡೆಸಲು ಬಂದ ಖ್ಯಾತ ನಿರ್ದೇಶಕ ಯೋಗರಾಜ್​ ಭಟ್​​

ಕನ್ನಡ ಬಿಗ್​ ಬಾಸ್​ನ ಪಂಚಾಯ್ತಿ ನಡೆಸಿಕೊಡಲು ಬಂದ ಯೋಗರಾಜ್​ ಭಟ್​​​ ಅವರು, 'ಹನುಮಂತು ನಿಜವಾಗ್ಲೂ ಇನೋಸೆಂಟ್​ (ಮುಗ್ಧ) ಆ? ಅಥವಾ ಸ್ಮಾರ್ಟ್ ಆಗಿದ್ದಾನಾ?' ಎಂಬ ಪ್ರಶ್ನೆಯನ್ನು ಮನೆಮಂದಿ ಬಳಿ ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಶಿಶಿರ್​, ಸರ್ ಬುದ್ಧಿವಂತಿಕೆ ಒಂತೂ ಇದೆ. ದಡ್ಡ ಅಂತೂ ಅಲ್ಲಾ ಸರ್​ ಎಂದು ಹೇಳಿದ್ದಾರೆ. ಮತ್ತೊಂದೆಡೆ ತ್ರಿವಿಕ್ರಮ್​ ಮಾತನಾಡಿ, ಅಷ್ಟಿಲ್ಲದೇ ಅಷ್ಟೊಂದು ಶೋಗಳನ್ನು ಮಾಡಿಕೊಂಡು, ಗೆದ್ದುಕೊಂಡು ಬರಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ನಂತರ ಈ ಅವಕಾಶವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾನೆ ಅನ್ಸುತ್ತಾ ಎಂದು ಭಟ್ರು ಮರು ಪ್ರಶ್ನಿಸಿದ್ದಾರೆ. ತಲೆ ಇದ್ದೇ ಅವರು ಬಂದಿದ್ದಾರೆ, ತಲೆ ಇದ್ದೇ ಅವರು ಆಟ ಆಡ್ತಿದ್ದಾರೆ, ತಲೆ ಇದ್ದೇ ಇದ್ದಾರೆ ಎಂದು ತ್ರಿವಿಕ್ರಮ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ದೇಶದ ಎಲ್ಲ 12 ಜ್ಯೋತಿರ್ಲಿಂಗಗಳ ದರ್ಶನಕ್ಕೆ ಮುಂದಾದ 'ಕಣ್ಣಪ್ಪ' ಚಿತ್ರತಂಡ

ಮಾತು ಮುಂದುವರಿಸಿದ ನಿರ್ದೇಶಕ ಯೋಗರಾಜ್​ ಭಟ್​, 'ಹನುಮಂತ, ಬಹಳ ಕಂತ್ರಿ ಇದ್ದೀಯಾ ಅಂದ್ರೆ, ಬಹಳ ಖತರ್ನಾಕ್​ ಇದ್ದೀಯಾ ಅಂದ್ರೆ ಹೇಳ್ಬಿಡು' ಎಂದು ಹನುಮಂತು ಬಳಿ ತಿಳಿಸಿದ್ದಾರೆ. ಇದರ ಸಂಪೂರ್ಣ ಭಾಗ ವೀಕ್ಷಿಸಲು ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.