ETV Bharat / entertainment

ಆರ್ಟಿಕಲ್​ 370: ಗರ್ಭಿಣಿಯಾಗಿದ್ದಾಗ ನಟನೆಯ ಸವಾಲು ವಿವರಿಸಿದ ಯಾಮಿ ಗೌತಮ್ - ಆರ್ಟಿಕಲ್​​ 370

'ಆರ್ಟಿಕಲ್​ 370' ಸಿನಿಮಾ ಟ್ರೇಲರ್​ ಬಿಡುಗಡೆ ಕಾರ್ಯಕ್ರಮದಲ್ಲಿ ನಟಿ ಯಾಮಿ ಗೌತಮ್ ಮಾತನಾಡಿದರು.

ಯಾಮಿ ಗೌತಮ್
Yami Gautam
author img

By ETV Bharat Karnataka Team

Published : Feb 27, 2024, 3:08 PM IST

ಹೈದರಾಬಾದ್​: 'ಆರ್ಟಿಕಲ್​ 370' ಸಿನಿಮಾದ ಟ್ರೇಲರ್​​ ಬಿಡುಗಡೆ ಸಂದರ್ಭದಲ್ಲಿ ನಟಿ ಯಾಮಿ ಗೌತಮ್ ಅವರು ತಾವು ತಾಯಿಯಾಗುತ್ತಿರುವ ವಿಚಾರ ಬಹಿರಂಗಪಡಿಸಿದರು. ಪೋಷಕತ್ವದ ಹೊಸ ಜವಾಬ್ದಾರಿಗೆ ಸಿದ್ಧರಾಗುತ್ತಿರುವ ಕುರಿತು ಸಂತಸ ವ್ಯಕ್ತಪಡಿಸಿದರು. ಚೊಚ್ಚಲ ಗರ್ಭಾವಸ್ಥೆಯಲ್ಲೇ ಸಿನಿಮಾ ಶೂಟಿಂಗ್​ನಲ್ಲಿ ಭಾಗಿಯಾದ ಅನುಭವವನ್ನು ಸುದ್ದಿಸಂಸ್ಥೆಯೊಂದರ ಸಂದರ್ಶನದಲ್ಲಿ ಹಂಚಿಕೊಂಡರು.

ವೃತ್ತಿ ಮತ್ತು ವೈಯಕ್ತಿಕ ಜೀವನದ ಜವಾಬ್ದಾರಿಯಲ್ಲಿ ಸಮತೋಲನ ಕಾಪಾಡುವ ಬಗ್ಗೆ ಮಾತನಾಡಿದ ಯಾಮಿ, ಗರ್ಭಿಣಿಯಾಗುವ ಮೊದಲೇ ಕೆಲವು ಸಾಹಸ ದೃಶ್ಯಗಳ ತರಬೇತಿ ಪಡೆದು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದೆ. ಗರ್ಭಿಣಿಯಾದ ಬಳಿಕ ಹೊರಾಂಗಣ ಚಿತ್ರೀಕರಣ, ಪ್ರಯಾಣದ ಶಾಟ್​​ಗಳಿದ್ದವು. ಹಿಂದೆಂದೂ ನಟಿಸದ ಪಾತ್ರಕ್ಕೆ ಜೀವ ತುಂಬುವ ಅವಕಾಶ ನನಗೆ ಸಿಕ್ಕಿತು ಎಂದರು.

  • " class="align-text-top noRightClick twitterSection" data="">

ಗರ್ಭಿಣಿಯಾಗಿರುವ ಸಂದರ್ಭದಲ್ಲಿ ತಾವು ಎದುರಿಸಿದ ಸವಾಲಿನ ಕುರಿತು ಮಾತನಾಡುತ್ತಾ, ನಾನು ನನ್ನ ಜವಾಬ್ದಾರಿ ನಿರ್ವಹಣೆಗೆ ವೈದ್ಯರ ಸಲಹೆ ಪಡೆದೆ. ಅವರು ತಾಯ್ತನದ ಪ್ರಾಮುಖ್ಯತೆಯನ್ನು ತಿಳಿಸಿದರು. ಇದೊಂದು ಅದ್ಭುತ ಅನುಭವ ಎಂದು ಹೇಳಿದರು.

ತಾಯಿ ಮತ್ತು ಪತಿ ಆದಿತ್ಯ ಧರ್ ಅವ​​ರಿಂದಲೂ ಹೆಚ್ಚಿನ ಬೆಂಬಲ ಪಡೆದೆ. ಆದಿತ್ಯ ಧರ್​​​ ಚಿತ್ರದ ನಿರ್ಮಾಪಕರಾಗಿದ್ದು, ತಂಡದಲ್ಲಿ ವೈದ್ಯರು ಲಭ್ಯವಾಗುವಂತೆ ನೋಡಿಕೊಳ್ಳುವುದರೊಂದಿಗೆ ಸೆಟ್​ನಲ್ಲಿ ವಿಶೇಷ ಮುನ್ನೆಚ್ಚರಿಕೆ ವಹಿಸಿದರು. ಅವರಿಂದ ನನಗೆ ಸಿಕ್ಕ ಭಾವನಾತ್ಮಕ ಬೆಂಬಲ ಅದ್ಭುತ ಎಂದು ತಿಳಿಸಿದರು.

ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರದ ಆಯ್ಕೆಯ ಕುರಿತು ಮಾತನಾಡಿದ ನಟಿ, ನಿರ್ಭೀತ ಒಳಧ್ವನಿಯಿಂದಾಗಿ ಚಿತ್ರದ ಆಯ್ಕೆ ಮಾಡಿದೆ. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ, ಅದರಿಂದ ಉಂಟಾದ ರಾಜಕೀಯ ಅಸ್ಥಿರತೆ ಮತ್ತು ಅದನ್ನು ತೊಡೆದುಹಾಕಲು ಸೇನೆ ಮತ್ತು ರಾಜಕೀಯ ಪಕ್ಷಗಳು ಎದುರಿಸಿದ ಅಡೆತಡೆಗಳ ಕುರಿತ ಸಿನಿಮಾ ಇದಾಗಿದೆ ಎಂದರು.

ಇದನ್ನೂ ಓದಿ: ನನ್ನ ಸೂರ್ಯ- ಚಂದ್ರ ನೀನು, ಒಂದು ದಿನ ತಡವಾಗಿ ಪತಿಯ ಜನ್ಮದಿನದ ಶುಭಾಶಯ ಕೋರಿದ ಪತ್ನಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.