ETV Bharat / entertainment

ಬಳ್ಳಾರಿ ಜೈಲಿನಲ್ಲಿ ದರ್ಶನ್ ಭೇಟಿಯಾಗಿ ಚಾರ್ಜ್​​​ಶೀಟ್ ಬಗ್ಗೆ ಚರ್ಚಿಸಿದ ಪತ್ನಿ ವಿಜಯಲಕ್ಷ್ಮಿ, ವಕೀಲ - Vijayalakshmi Meets Darshan - VIJAYALAKSHMI MEETS DARSHAN

ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್​​ ಅವರನ್ನು ​​ಪತ್ನಿ ವಿಜಯಲಕ್ಷ್ಮಿ ಮತ್ತು ವಕೀಲ ಇಂದು ಭೇಟಿಯಾಗಿದ್ದಾರೆ. 12:15ಕ್ಕೆ ಜೈಲಿನ ಒಳಹೋದ ವಿಜಯಲಕ್ಷ್ಮಿ ಮತ್ತು ವಕೀಲ 1:20ಕ್ಕೆ ಹೊರಬಂದರು. ಈ ವೇಳೆ ಚಾರ್ಜ್‌ಶೀಟ್ ಕುರಿತು ಚರ್ಚಿಸಿದ್ದಾರೆ.

Vijayalakshmi Met Darshan
ದರ್ಶನ್ ಭೇಟಿಯಾದ ಪತ್ನಿ ವಿಜಯಲಕ್ಷ್ಮಿ (ETV Bharat)
author img

By ETV Bharat Karnataka Team

Published : Sep 12, 2024, 2:22 PM IST

ದರ್ಶನ್ ಭೇಟಿಯಾದ ಪತ್ನಿ ವಿಜಯಲಕ್ಷ್ಮಿ (ETV Bharat)

ಬಳ್ಳಾರಿ: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಕೇಸ್​ನ 2ನೇ ಆರೋಪಿ ನಟ ದರ್ಶನ್​​​​ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿದ್ದು ಇಂದು ಪತ್ನಿ ವಿಜಯಲಕ್ಷ್ಮಿ ಜೈಲಿಗೆ ಭೇಟಿ ಕೊಟ್ಟರು. ವಿಜಯಲಕ್ಷ್ಮಿ ಮತ್ತು ವಕೀಲರು ಸುಮಾರು​ 1 ಗಂಟೆ 5 ನಿಮಿಷಗಳ ಕಾಲ ಜೈಲಿನೊಳಗಿದ್ದರು.

12:15 ಗಂಟೆಗೆ ಜೈಲಿನ ಒಳಹೋದ ವಿಜಯಲಕ್ಷ್ಮಿ ಮತ್ತು ವಕೀಲ 1:20ಕ್ಕೆ ಹೊರಬಂದಿದ್ದಾರೆ. 12:50ಕ್ಕೆ ಹೈ ಸೆಕ್ಯೂರಿಟಿ ಸೆಲ್​​ಗೆ ಆರೋಪಿ ದರ್ಶನ್ ತೆರಳಿದ ನಂತರ 1.20ಕ್ಕೆ ಇವರು ಹೊರಬಂದಿದ್ದಾರೆ.

ಈ ಭೇಟಿಯ ಬಳಿಕ ದರ್ಶನ್ ಪರ ವಕೀಲ ಸುನೀಲ್ ಮಾತನಾಡಿ, "ಚಾರ್ಜ್‌ಶೀಟ್ ವಿಚಾರದ ಬಗ್ಗೆ ಮಾತನಾಡಿದ್ದೇವೆ. ಜಾಮೀನು ಅರ್ಜಿ ಹಾಕುವ ಬಗ್ಗೆ ಮಾತನಾಡಿಲ್ಲ. ಜೈಲು ಬದಲಾಯಿಸುವ ಬಗ್ಗೆಯೂ ಚರ್ಚಿಸಿಲ್ಲ. ಚಾರ್ಜ್‌ಶೀಟ್​​ನಲ್ಲಿ ಏನಿದೆಯೋ ಅದರ ಬಗೆಗಷ್ಟೇ ಚರ್ಚೆ ನಡೆಸಿದ್ದೇವೆ. ಕೆಲವೊಂದಿಷ್ಟು ಗೊಂದಲಗಳಿದ್ದವು, ಆ ಬಗ್ಗೆ ಸ್ಪಷ್ಟನೆ ತೆಗೆದುಕೊಂಡಿದ್ದೇವೆ. ಮತ್ತೆ ಸಂಜೆ 4 ಗಂಟೆಗೆ ಜೈಲಿಗೆ ಬರುತ್ತೇವೆ" ಎಂದು ತಿಳಿಸಿದರು.

ದರ್ಶನ್ ಭೇಟಿಯಾದ ವಕೀಲರು (ETV Bharat)

ಇತ್ತೀಚೆಗಷ್ಟೇ ಜೈಲಿಗೆ ಬಂದಿದ್ದ ಪತ್ನಿ ವಿಜಯಲಕ್ಷ್ಮಿ: ವಿಜಯಲಕ್ಷಿ ಅವರ ಭೇಟಿ ಇದೇ ಮೊದಲಲ್ಲ. ಈಗಾಗಲೇ ಎರಡ್ಮೂರು ಬಾರಿ ಬಳ್ಳಾರಿ ಜೈಲಿಗೆ ಭೇಟಿ ಕೊಟ್ಟು ದರ್ಶನ್​​ ಜೊತೆ ಮಾತುಕತೆ ನಡೆಸಿದ್ದಾರೆ. ಸೆಪ್ಟೆಂಬರ್​​ 5 ರಂದು ಕೂಡಾ ಪತ್ನಿ ವಿಜಯಲಕ್ಷ್ಮಿ ಜೈಲಿಗೆ ಆಗಮಿಸಿದ್ದರು. ಅಂದು ದರ್ಶನ್​​ ಸಹೋದರ ದಿನಕರ್, ಸಂಬಂಧಿ ಸುಶಾಂತ್ ನಾಯ್ಡು ಜೊತೆಗಿದ್ದರು. 4.30 ರಿಂದ 5.30ಕ್ಕೆ ವಿಜಿಟರ್ಸ್​​ಗೆ ಅವಕಾಶವಿದ್ದು, ವಿಸಿಟರ್ಸ್ ಕೊಠಡಿಗೆ ದರ್ಶನ್​ ಅವರನ್ನು 4.29ಕ್ಕೆ ಹೈ ಸೆಕ್ಯೂರಿಟಿ ಸೆಲ್​​ನಿಂದ ಕರೆತರಲಾಯಿತು. ಅರ್ಧ ಗಂಟೆ ಪ್ರಕರಣದ ಕುರಿತು ಮಾತನಾಡಿ ಬಂದಿದ್ದರು. ಒಟ್ಟಾರೆ ಜೈಲು ನಿಯಮಾವಳಿ ಪ್ರಕಾರವೇ ಭೆಟಿಗೆ ಅವಕಾಶ ಮಾಡಿಕೊಡಲಾಗುತ್ತಿದೆ.

ಇದನ್ನೂ ಓದಿ: ಬೃಂದಾವನ ನಟ ವರುಣ್ ವಿರುದ್ಧದ ಪ್ರಕರಣ: ತಪ್ಪು ತಿಳುವಳಿಕೆಯಿಂದ ದೂರು ನೀಡಿದೆ ಎಂದ ಯುವತಿ - Actor Varun Aradya Case

ಚಾರ್ಜ್​​ಶೀಟ್ ಪ್ರಸಾರಕ್ಕೆ ನಿರ್ಬಂಧ: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗಷ್ಟೇ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಕೆ ಮಾಡಿದ್ದರು. ಕೇಸ್​ನ ತನಿಖೆ ನಡೆಸುತ್ತಿರುವ ಪೊಲೀಸರು ಸೆಪ್ಟೆಂಬರ್​ 4 ರಂದು 24ನೇ ಎಸಿಎಂಎಂ ನ್ಯಾಯಾಲಯಕ್ಕೆ ಚಾರ್ಜ್​ಶೀಟ್ ಸಲ್ಲಿಸಿದ್ದರು. ನಂತರ ಚಾರ್ಜ್​​​ಶೀಟ್​ ಅಂಶಗಳು ವೈರಲ್​​ ಆಗಲು ಶುರುವಾದವು. ಆರೋಪಪಟ್ಟಿಯ ಯಾವುದೇ ಅಂಶಗಳನ್ನು ಪ್ರಸಾರ ಮಾಡದಂತೆ ಮಾಧ್ಯಮ ಸಂಸ್ಥೆಗಳ ಮೇಲೆ ನಿರ್ಬಂಧ ಹೇರುವಂತೆ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಪೀಠ ಚಾರ್ಜ್​​ಶೀಟ್​ನಲ್ಲಿ ಉಲ್ಲೇಖ ಆಗಿರುವ ಯಾವುದೇ ರಹಸ್ಯ ಮಾಹಿತಿಯನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿ ಆದೇಶಿಸಿತು.

ಇದನ್ನೂ ಓದಿ: ದರ್ಶನ್​ ಭೇಟಿಯಾದ ವಿಜಯಲಕ್ಷ್ಮಿ: ಜೈಲು ಮುಂದೆ ಮಹಿಳಾ ಅಭಿಮಾನಿಯ ಹೈಡ್ರಾಮಾ - Vijayalakshmi met Darshan

ETV Bharat Logo

Copyright © 2024 Ushodaya Enterprises Pvt. Ltd., All Rights Reserved.