ETV Bharat / entertainment

ವಯನಾಡು ಭಯಾನಕ ಭೂಕುಸಿತಕ್ಕೆ ಮಿಡಿದ ನಟ ಪ್ರಭಾಸ್​​​: 2 ಕೋಟಿ ರೂ. ನೆರವು - Prabhas Donation - PRABHAS DONATION

ಕೇರಳದ ವಯನಾಡಿನಲ್ಲಿ ಸಂಭವಿಸಿರುವ ಭಯಾನಕ ಭೂಕುಸಿತದ ಸಂತ್ರಸ್ತರಿಗೆ ಬಾಹುಬಲಿ ನಟ ಪ್ರಭಾಸ್ ಸಹಾಯ ಹಸ್ತ ಚಾಚಿದ್ದಾರೆ. ಕೇರಳ ಸಿಎಂ ಪರಿಹಾರ ನಿಧಿಗೆ 2 ಕೋಟಿ ರೂಪಾಯಿಗಳನ್ನು ದೇಣಿಗೆಯಾಗಿ ನೀಡುವ ಮೂಲಕ ಅವರಿಗೆ ನೆರವಾಗಿದ್ದಾರೆ. ಸಂತ್ರಸ್ತ ಕುಟುಂಬಗಳಿಗೆ ಧೈರ್ಯ ತುಂಬುವ, ನೆರವಾಗುವ ಪ್ರಯತ್ನಗಳ ವಿಚಾರದಲ್ಲಿ ದಕ್ಷಿಣ ಚಿತ್ರರಂಗದ ತಾರೆಯರ ಪಟ್ಟಿಗೆ ಪ್ರಭಾಸ್ ಹೊಸ ಸೇರ್ಪಡೆ.

Prabhas Stands with Wayanad
ವಯನಾಡು ಭೂಕುಸಿತಕ್ಕೆ ಮಿಡಿದ ಪ್ರಭಾಸ್ (Photo: ANI/ETV Bharat)
author img

By ETV Bharat Entertainment Team

Published : Aug 7, 2024, 12:43 PM IST

ತಮ್ಮ ಇತ್ತೀಚಿನ ''ಕಲ್ಕಿ 2898 ಎಡಿ'' ಸಿನಿಮಾ ಯಶಸ್ಸಿನಲ್ಲಿರುವ ಪ್ಯಾನ್​ ಇಂಡಿಯಾ ಸ್ಟಾರ್ ಪ್ರಭಾಸ್ ಅವರೀಗ ತಮ್ಮ ಮಾನವೀಯ ಕಾರ್ಯಗಳಿಂದ ಸಖತ್​​​ ಸುದ್ದಿಯಲ್ಲಿದ್ದಾರೆ. ಭಯಾನಕ ಭೂಕುಸಿತಕ್ಕೆ ಕೇರಳದ ವಯನಾಡು ತತ್ತರಿಸಿದ್ದು, ಭಾರತೀಯ ಚಿತ್ರರಂಗದ ಬಹುಬೇಡಿಕೆ ನಟ ದೊಡ್ಡ ಮಟ್ಟದಲ್ಲಿ ಸಹಾಯ ಹಸ್ತ ಚಾಚಿದ್ದಾರೆ. ವಿನಾಶಕಾರಿ ಭೂಕುಸಿತದ ಸಂತ್ರಸ್ತರ ನೆರವಿಗೆ ಬಂದಿರುವ ನಟ ಕೇರಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 2 ಕೋಟಿ ರೂ. ಡೊನೇಟ್​​​ ಮಾಡಿದ್ದಾರೆ. ನಟನ ಈ ದೇಣಿಗೆ ಭೂಕುಸಿತ ಪೀಡಿತ ಕುಟುಂಬಗಳಿಗೆ ನೆರವಾಗಲು ಮತ್ತು ಚೇತರಿಕೆಯ ಕೆಲಸಗಳನ್ನು ಬೆಂಬಲಿಸಲು ಸಹಾಯವಾಗುತ್ತದೆ.

ನಟ ಪ್ರಭಾಸ್ ಮಾತ್ರವಲ್ಲದೇ ಟಾಲಿವುಡ್ ಸೇರಿದಂತೆ ಸೌತ್​ ಸಿನಿಮಾ ಸೆಲೆಬ್ರಿಟಿಗಳು ಕೇರಳ ವಿಚಾರದಲ್ಲಿ ತಮ್ಮ ಉದಾರತೆ ಮೆರೆದಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ನಟ ಅಲ್ಲು ಅರ್ಜುನ್ 25 ಲಕ್ಷ ರೂ., ಮೆಗಾಸ್ಟಾರ್​​ ಚಿರಂಜೀವಿ ಮತ್ತು ಪುತ್ರ ರಾಮ್ ಚರಣ್ 1 ಕೋಟಿ ರೂಪಾಯಿ ನೀಡಿದ್ದಾರೆ. ಜೊತೆಗೆ ನಯನತಾರಾ ಮತ್ತು ವಿಘ್ನೇಶ್ ಶಿವನ್ ದಂಪತಿಯೂ ತಮ್ಮ ದೇಣಿಗೆ ನೀಡಿದ್ದಾರೆ.

ಕೇರಳದಲ್ಲಿಯೂ ಜನರ ಪ್ರೀತಿ ಸಂಪಾದಿಸಿರುವ ಬಹುಭಾಷಾ ನಟಿ, ಕನ್ನಡತಿ ರಶ್ಮಿಕಾ ಮಂದಣ್ಣ ಅವರೂ ಕೂಡಾ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 10 ಲಕ್ಷ ರೂ. ನೀಡಿದ್ದಾರೆ. ಇತ್ತೀಷೆಗಷ್ಟೇ ಈವೆಂಟ್‌ಗಾಗಿ ಕೇರಳಕ್ಕೆ ತೆರಳಿದ್ದ ರಶ್ಮಿಕಾ, ಅಲ್ಲಿನ ಜನರ ಬಗ್ಗೆ ತಮ್ಮ ಪ್ರೀತಿ ವ್ಯಕ್ತಪಡಿಸಿದ್ದರು. ಇದೀಗ ವಯನಾಡು ದುರಂತದ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗೆ ಸಹಾಯ ಮಾಡುತ್ತಿರುವ ದಕ್ಷಿಣ ಚಿತ್ರರಂಗದ ಖ್ಯಾತನಾಮರ ಪಟ್ಟಿಯಲ್ಲಿ ಸೇರಿಕೊಂಡಿದ್ದಾರೆ.

ಇದನ್ನೂ ಓದಿ: ಕೇರಳ: ಭೂಕುಸಿತದಿಂದ ಹಾನಿಗೊಳಗಾಗಿರುವ ಪ್ರದೇಶಗಳಿಗೆ ನಟ ಮೋಹನ್​ಲಾಲ್​​ ಭೇಟಿ - Mohanlal Reaches Wayanad

ಪರಿಹಾರ ಕಾರ್ಯಗಳನ್ನು ಬೆಂಬಲಿಸಿದವರ ಪೈಕಿ ಸೂಪರ್​​ ಸ್ಟಾರ್ ಚಿಯಾನ್ ವಿಕ್ರಮ್ ಮೊದಲಿಗರು. ಸಿಎಂಡಿಆರ್‌ಎಫ್‌ಗೆ 20 ಲಕ್ಷ ರೂ. ನೀಡಿದ್ದಾರೆ. ಇಂತಹ ಕಠಿಣ ಸಂದರ್ಭ ಇಂಡಸ್ಟ್ರಿಯ ಒಗ್ಗಟ್ಟು ಪ್ರದರ್ಶನವಾಗುತ್ತಿದೆ. ತಾರೆಯರ ಈ ಮಹತ್ವದ ಹೆಜ್ಜೆ ನಿಜಕ್ಕೂ ಶ್ಲಾಘನೀಯ.

ಇದನ್ನೂ ಓದಿ: ದೇವರ ವಿಗ್ರಹದ ಬಳಿ‌‌ ದರ್ಶನ್ ಫೋಟೋ‌‌ ಇಟ್ಟು ಪೂಜೆ: ಬಳ್ಳಾರಿ ಅರ್ಚಕ ಅಮಾನತು - Darshan Photo near Temple Idol

ಕೇರಳದ ವಯನಾಡಿನಲ್ಲಿ ಸಂಭವಿಸಿರೋ ಭೂಕುಸಿತ ಈವರೆಗೆ 413 ಜನರನ್ನು ಬಲಿ ತೆಗೆದುಕೊಂಡಿದೆ. 152 ಜನರು ನಾಪತ್ತೆಯಾಗಿದ್ದು, ರಕ್ಷಣಾ ಕಾರ್ಯಾಚರಣೆ ಒಂಭತ್ತನೇ ದಿನಕ್ಕೆ ಕಾಲಿಟ್ಟಿದೆ. ರಕ್ಷಣಾ ಪಡೆಗಳು, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಪೊಲೀಸ್, ಅಗ್ನಿಶಾಮಕ ದಳ ಮತ್ತು ಸ್ವಯಂಸೇವಕರನ್ನು ಒಳಗೊಂಡ 1,000ಕ್ಕೂ ಹೆಚ್ಚು ರಕ್ಷಕರ ತಂಡ ಇಂದು ಮುಂಜಾನೆ ನಾಲ್ಕು ತೀವ್ರ ದುರಂತಕ್ಕೊಳಗಾದ ಪ್ರದೇಶಗಳಾದ ಚುರಲ್‌ಮಲಾ, ವೇಲಾರಿಮಲಾ, ಮುಂಡಕೈಲ್ ಮತ್ತು ಪುಂಚಿರಿಮಡಂನಲ್ಲಿ ಹೊಸ ಶೋಧ ಕಾರ್ಯಾಚರಣೆ ಪ್ರಾರಂಭಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.