ಕಣ್ಣಿನ ಶಸ್ತ್ರಚಿಕಿತ್ಸೆ ವದಂತಿ ಮಧ್ಯೆ ನಿರ್ದೇಶಕ ಸಿದ್ಧಾರ್ಥ್ ಆನಂದ್ ಬರ್ತ್ಡೇ ಪಾರ್ಟಿಯಲ್ಲಿ ಶಾರುಖ್ ಭಾಗಿ - Shah Rukh Khan - SHAH RUKH KHAN
ದೇಶ, ವಿದೇಶಗಳಲ್ಲಿ ದೊಡ್ಡ ಮಟ್ಟದ ಅಭಿಮಾನಿ ಬಳಗ ಹೊಂದಿರುವ ಶಾರುಖ್ ಖಾನ್ ಕಣ್ಣಿನ ಶಸ್ತ್ರಚಿಕಿತ್ಸೆಗಾಗಿ ಯುಎಸ್ಎಗೆ ತೆರಳಲಿದ್ದಾರೆ ಎಂದು ವರದಿಯಾಗಿತ್ತು. ಈ ನಡುವೆ ಕಳೆದ ರಾತ್ರಿ ಮುಂಬೈನಲ್ಲಿ ನಿರ್ದೇಶಕ ಸಿದ್ಧಾರ್ಥ್ ಆನಂದ್ ಅವರ ಬರ್ತ್ಡೇ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.
By ETV Bharat Entertainment Team
Published : Aug 1, 2024, 4:38 PM IST
ಹೈದರಾಬಾದ್: ಬಾಲಿವುಡ್ ನಟ ಶಾರುಖ್ ಖಾನ್ ಅವರು ಕಳೆದ ರಾತ್ರಿ ನಿರ್ದೇಶಕ ಸಿದ್ಧಾರ್ಥ್ ಆನಂದ್ ಅವರ ಬರ್ತ್ಡೇ ಪಾರ್ಟಿಯಲ್ಲಿ ಕಾಣಿಸಿಕೊಂಡರು. ಸಿದ್ಧಾರ್ಥ್ ಆನಂದ್ ಬುಧವಾರ 46ನೇ ಜನ್ಮದಿನ ಆಚರಿಸಿಕೊಂಡಿದ್ದು, ಮುಂಬೈನಲ್ಲಿ ಅದ್ಧೂರಿಯಾಗಿ ಪಾರ್ಟಿ ಹಮ್ಮಿಕೊಳ್ಳಲಾಗಿತ್ತು. ಈ ಸಂಭ್ರಮಾಚರಣೆಯಲ್ಲಿ ಕಿಂಗ್ ಖಾನ್ ಭಾಗಿಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಫೋಟೋ, ವಿಡಿಯೋಗಳು ವೈರಲ್ ಆಗುತ್ತಿವೆ.
ಕಣ್ಣಿನ ಶಸ್ತ್ರಚಿಕಿತ್ಸೆಗಾಗಿ ಶಾರುಖ್ ಖಾನ್ ಯುನೈಟೆಡ್ ಸ್ಟೇಟ್ಸ್ಗೆ(ಯುಎಸ್‌ಎ)ಗೆ ತೆರಳುತ್ತಿದ್ದಾರೆ ಎಂಬ ವದಂತಿ ಹರಡಿತ್ತು. ಈ ವದಂತಿಯ ನಡುವೆ ರಾತ್ರಿ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ. ಬಿಗಿ ಭದ್ರತೆಯಲ್ಲಿ ಅವರು ಪಾರ್ಟಿಗೆ ಆಗಮಿಸಿದ್ದರು.
ಗ್ರ್ಯಾಂಡ್ ಬರ್ತ್ಡೇ ಪಾರ್ಟಿಯಲ್ಲಿ ಪಾಲ್ಗೊಳ್ಳಲು ಎಸ್ಆರ್ಕೆ ಮುಂಬೈನ ರೆಸ್ಟೋರೆಂಟ್‌ಗೆ ಬರುತ್ತಿರುವುದನ್ನು ವಿಡಿಯೋಗಳಲ್ಲಿ ನೋಡಬಹುದು. 'ಜವಾನ್' ನಟನ ಕೈಯಲ್ಲಿ ಸ್ಲಿಂಗ್ ಬ್ಯಾಗ್ ಇತ್ತು. ಬ್ಲ್ಯಾಕ್ ಟೀ ಶರ್ಟ್, ಸನ್ಗ್ಲಾಸ್, ಜೀನ್ಸ್‌ನಲ್ಲಿ ಸಖತ್ ಸ್ಟೈಲಿಷ್ ಲುಕ್ ನೀಡಿದರು. ಪಾಪರಾಜಿಗಳು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ವಿಡಿಯೋವೊಂದರಲ್ಲಿ ರೆಸ್ಟೋರೆಂಟ್‌ಗೆ ಹಿಂದಿನ ಗೇಟ್ ಮೂಲಕ ಪ್ರವೇಶ ಪಡೆದಂತೆ ಗೋಚರಿಸಿದೆ.
ಇದನ್ನೂ ಓದಿ: ಟಾಕ್ಸಿಕ್ ಸಿನಿಮಾಗಾಗಿ ಯಶ್ 'ಪಾಂಪಡೋರ್' ಹೇರ್‌ಸ್ಟೈಲ್'; ಸೋಷಿಯಲ್ ಮೀಡಿಯಾದಲ್ಲಿ ಸದ್ದು - Yash New Hairstyle
ಬಿಗಿ ಭದ್ರತೆಯಲ್ಲಿದ್ದ ಶಾರುಖ್ ಫೋಟೋಗ್ರಾಫರ್ಗಳ ಕ್ಯಾಮರಾಗಳಿಗೆ ಪೋಸ್ ನೀಡಲು ನಿರಾಕರಿಸಿದರು.
ಇದನ್ನೂ ಓದಿ: ಡಿವೋರ್ಸ್ ವದಂತಿ ಮಧ್ಯೆ ಮಗಳೊಂದಿಗೆ ದೇಶಕ್ಕೆ ವಾಪಸ್ಸಾದ ಐಶ್ವರ್ಯಾ - ವಿಡಿಯೋ - Aishwarya Rai
ಶಾರುಖ್ ಮುಂದಿನ ಸಿನಿಮಾಗಳು: ಸುಜೋಯ್ ಘೋಷ್ ಅವರೊಂದಿಗೆ 'ದಿ ಕಿಂಗ್' ಸಿನಿಮಾದಲ್ಲಿ ಶಾರುಖ್ ತಮ್ಮ ಮಗಳು ಸುಹಾನಾ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಚಿತ್ರೀಕರಣ ಇನ್ನಷ್ಟೇ ಶುರುವಾಗಬೇಕಿದೆ. ಅಭಿಷೇಕ್ ಬಚ್ಚನ್ ಕೂಡಾ ಚಿತ್ರದಲ್ಲಿದ್ದಾರೆ. ಅಮಿತಾಭ್ ಬಚ್ಚನ್ ಈಗಾಗಲೇ ತಮ್ಮ ಪುತ್ರ ಅಭಿಷೇಕ್ ಈ ಸಿನಿಮಾಗೆ ಸೇರ್ಪಡೆಯಾಗಿದ್ದಕ್ಕೆ ಅಭಿನಂದಿಸಿದ್ದಾರೆ. 'ಆಲ್ ದಿ ಬೆಸ್ಟ್' ಎಂಬ ಕ್ಯಾಪ್ಷನ್ ಜೊತೆಗೆ ಅನೌನ್ಸ್ಮೆಂಟ್ನ ನ್ಯೂಸ್ ಕ್ಲಿಪ್ ಅನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಕಳೆದ ವರ್ಷ ಬಿಡುಗಡೆಯಾದ ಶಾರುಖ್ ನಟನೆಯ 'ಪಠಾನ್', 'ಜವಾನ್', 'ಡಂಕಿ' ಚಿತ್ರಗಳು ಹಿಟ್ ಆಗಿದ್ದವು.