ETV Bharat / entertainment

ವಿಡಿಯೋ: ಧನುಷ್​ ವಿರುದ್ಧದ ವಾಗ್ದಾಳಿ ಬಳಿಕ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡ ನಯನತಾರಾ - NAYANTHARA

ಇತ್ತೀಚೆಗಷ್ಟೇ ಸೌತ್ ಸೂಪರ್ ಸ್ಟಾರ್ ಧನುಷ್ ವಿರುದ್ಧ ಲೇಡಿ ಸೂಪರ್​ ಸ್ಟಾರ್​ ನಯನತಾರಾ ಬಹಿರಂಗ ವಾಗ್ದಾಳಿ ನಡೆಸಿ, ಸಂಚಲನ ಸೃಷ್ಟಿಸಿದ್ದರು. ಘಟನೆ ಬಳಿಕ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, ವಿಡಿಯೋ ವೈರಲ್​ ಆಗಿದೆ.

Nayanthara With Vignesh Shivan
ವಿಘ್ನೇಶ್ ಶಿವನ್ ಜೊತೆ ನಯನತಾರಾ (Photo: Promotional Still)
author img

By ETV Bharat Entertainment Team

Published : Nov 19, 2024, 7:37 PM IST

ನಟಿ ನಯನತಾರಾ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ಇಂದು ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಜನಪ್ರಿಯ ಸೆಲೆಬ್ರಿಟಿ ಕಪಲ್ ತಮ್ಮ ಅವಳಿ ಮಕ್ಕಳಾದ​ ಉಯಿರ್ ಮತ್ತು ಉಲಗ್ ಅವರೊಂದಿಗೆ ಕಾಣಿಸಿಕೊಂಡರು. ವಿಘ್ನೇಶ್ ಅವರ ಇನ್‌ಸ್ಟಾಗ್ರಾಮ್ ಸ್ಟೋರಿ ನೀಡಿದ ಸುಳಿವಿನ ಪ್ರಕಾರ, ದಂಪತಿ ಬಹುಶಃ ಬರ್ತ್​ಡೇ ವೆಕೇಷನ್​​​​ಗಾಗಿ ನಗರದಿಂದ ಹೊರಗೆ ಹೋದಂತಿದೆ.

ನಯನತಾರಾ ವೈಟ್​ ಕುರ್ತಾ ಮತ್ತು ಪೈಜಾಮ, ಡಾರ್ಕ್​ ಶಾಲ್​ ಧರಿಸಿ ಸರಳ ಸುಂದರಿಯಾಗಿ ಕಾಣಿಸಿಕೊಂಡರು. ಮತ್ತೊಂದೆಡೆ ವಿಘ್ನೇಶ್ ಶಿವನ್​, ವೈಟ್​ ಟಿ-ಶರ್ಟ್ ಮತ್ತು ಟ್ಯಾನ್ ಶಾರ್ಟ್ಸ್‌ನಲ್ಲಿ ಕಾಣಿಸಿಕೊಂಡಿದ್ದು, ಮಗನನ್ನು ಹಿಡಿದಿದ್ದರು. ಅವಳಿ ಮಕ್ಕಳು ಮ್ಯಾಚಿಂಗ್ ಡ್ರೆಸ್​ ಧರಿಸಿದ್ದರು. ಜನಪ್ರಿಯ ದಂಪತಿ ಪಾಪರಾಜಿಗಳನ್ನು ಕಂಡು ಮುಗುಳ್ನಕ್ಕರು.

ನಯನತಾರಾ ನವೆಂಬರ್ 18 ರಂದು 40ನೇ ಜನ್ಮದಿನ ಆಚರಿಸಿಕೊಂಡರು. ಪುಷ್ಪಾಲಂಕಾರದ ಕೋಣೆ, ಬರ್ತ್​ಡೇ ಡೆಕೊರೇಶನ್​ಗಳನ್ನೊಳಗೊಂಡ ಗ್ಲಿಂಪ್ಸ್​​ ಅನ್ನು ವಿಘ್ನೇಶ್ ಹಂಚಿಕೊಂಡಿದ್ದಾರೆ. ಈ ಸೆಲೆಬ್ರೇಶನ್​​ ಮತ್ತು ಇತ್ತೀಚಿನ ನಟ ಧನುಷ್​ ಜೊತೆಗಿನ ವಿವಾದಗಳ ಹೊರತಾಗಿಯೂ, ದಂಪತಿ ಕುಟುಂಬದ ಉತ್ತಮ ಕ್ಷಣವನ್ನು ಮಿಸ್​ ಮಾಡಿಕೊಂಡಿಲ್ಲ. ಫ್ಯಾಮಿಲಿ ಟೈಮ್​ಗೆ ತಮ್ಮ ಮೊದಲ ಆದ್ಯತೆ ನೀಡಿದ್ದಾರೆ.

ಇತ್ತೀಚೆಗಷ್ಟೇ ನಟಿ ನಯನತಾರಾ ಅವರು ಸೂಪರ್​ ಸ್ಟಾರ್​ ಧನುಷ್ ಅವರೊಂದಿಗಿನ ಕಾನೂನು ವಿವಾದವನ್ನು ಬಹಿರಂಗ ಪತ್ರದ ಮೂಲಕ ತಿಳಿಸಿದ್ದರು. ಧನುಷ್​ ವಿರುದ್ಧ ಆಕ್ರೋಶ ಹೊರಹಾಕಿದ ನಂತರ, ನಯನತಾರಾ ಮತ್ತು ವಿಘ್ನೇಶ್ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡರು.

ಇದನ್ನೂ ಓದಿ: 14 ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ: ಗೋವಾದಲ್ಲಿ ಪ್ರಿಯತಮನನ್ನು ವರಿಸಲಿರುವ ನಟಿ ಕೀರ್ತಿ ಸುರೇಶ್?

ನಯನತಾರಾ ಅವರು ತಾವು ಅಭಿನಯಿಸಿರುವ 'ನಾನೂಂ ರೌಡಿ ಧಾನ್' ಚಿತ್ರದ (2015) ಕೆಲ ದೃಶ್ಯಗಳನ್ನು ತಮ್ಮ 'ನಯನತಾರಾ: ಬಿಯಾಂಡ್ ದಿ ಫೇರಿಟೇಲ್' ಸಾಕ್ಷ್ಯಚಿತ್ರಕ್ಕಾಗಿ ಬಳಸಿಕೊಳ್ಳಲು ನಿರ್ಮಾಪಕ ಧನುಷ್ ಅವರ ಅನುಮತಿ ಕೋರಿದ್ದರು. 'ನಾನೂಂ ರೌಡಿ ಧಾನ್' ಸಿನಿಮಾವನ್ನು ಧನುಷ್​ ನಿರ್ಮಾಣ ಮಾಡಿದ್ದರು. ನಯನತಾರಾ ನಾಯಕಿಯಾಗಿದ್ದರೆ, ಪತಿ ವಿಘ್ನೇಶ್​ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ನಿರ್ಮಾಪಕ ಧನುಷ್ ಅವರ​ ಬಳಿ ಕೆಲ ದೃಶ್ಯಗಳ ಬಳಕೆಗೆ ನಟಿ ನಯನತಾರಾ ಅನುಮತಿ ಕೋರಿದ್ದರು. ಆದರೆ, ಧನುಷ್ ನಿರಾಕರಿಸಿದ್ದರು. 'ನಯನತಾರಾ: ಬಿಯಾಂಡ್ ದಿ ಫೇರಿಟೇಲ್' ಟ್ರೇಲರ್​ ಬಿಡುಗಡೆ ಆದ ಬಳಿಕ ನಯನತಾರಾಗೆ ಲೀಗಲ್​ ನೋಟಿಸ್​ ಕಳುಹಿಸಿ, 10 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ನಟಿ ಸೋಷಿಯಲ್​ ಮೀಡಿಯಾ ಪೋಸ್ಟ್​ ಮೂಲಕ ಸಾರ್ವಜನಿಕವಾಗಿ ಧನುಷ್​ ವಿರುದ್ಧ ಅಸಮಾಧಾನ ಹೊರಹಾಕಿದ್ದರು.

ಇದನ್ನೂ ಓದಿ: ಸೂಪರ್​ಸ್ಟಾರ್​ ಧನುಷ್​ ವಿರುದ್ಧ ಲೇಡಿ ಸೂಪರ್​ಸ್ಟಾರ್ ನಯನತಾರಾ ಬಹಿರಂಗ ವಾಗ್ದಾಳಿ

ಧನುಷ್ ಈ ಬಗ್ಗೆ ಸಾರ್ವಜನಿಕವಾಗಿ ಹೇಳಿಕೆ ನೀಡದಿದ್ದರೂ, ಅವರ ಕಾನೂನು ತಂಡವು ಅವರ ಕ್ರಮಗಳು ಸಮರ್ಥನೀಯ ಎಂದು ಹೇಳಿಕೊಂಡಿದೆ. ಅವರ ತಂದೆ, ಚಲನಚಿತ್ರ ನಿರ್ಮಾಪಕ ಕಸ್ತೂರಿ ರಾಜ, ವಿವಾದದ ಬಗ್ಗೆ ಪ್ರತಿಕ್ರಿಯಿಸಿಲ್ಲ. ಇದೀಗ, ನಯನತಾರಾ ಮತ್ತು ವಿಘ್ನೇಶ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದು, ವಿಡಿಯೋಗಳು ವೈರಲ್​ ಆಗಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.