ಚೆನ್ನೈ (ತಮಿಳುನಾಡು): ನಟ ವಿಶಾಲ್ ಅವರ ಸಿನಿಮಾಗಳಿಗೆ ತಮಿಳು ಚಲನಚಿತ್ರ ನಿರ್ಮಾಪಕರ ಮಂಡಳಿ ನಿರ್ಬಂಧ ಹೇರಿದೆ. ನಿರ್ಮಾಪಕರ ಸಂಘದಿಂದ ಅಕ್ರಮವಾಗಿ ಖರ್ಚು ಮಾಡಿರುವ ಹಣವನ್ನು ಪರಿಷತ್ತಿಗೆ ಹಿಂತಿರುಗಿಸಬೇಕೆಂದು ವಿಶಾಲ್‌ಗೆ ಹಲವು ಬಾರಿ ತಿಳಿಸಿದ್ದರೂ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದರಿಂದ ತಮಿಳು ಚಲನಚಿತ್ರ ನಿರ್ಮಾಪಕರ ಮಂಡಳಿಯು ನಟ ವಿಶಾಲ್ ವಿರುದ್ಧ ಸಮರ ಸಾರಿದೆ.
ಪ್ರಕರಣದ ಹಿನ್ನೆಲೆ ಏನು?: 2017-2019ರವರೆಗೆ ತಮಿಳು ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾಗಿದ್ದ ನಟ ವಿಶಾಲ್ ಅವರ ವಿರುದ್ಧ ಕೇಳಿ ಬಂದಿರುವ ಆರೋಪಗಳ ಹಿನ್ನೆಲೆ ತಮಿಳುನಾಡು ಸರ್ಕಾರವು 2019ರಲ್ಲಿ ತಮಿಳು ಚಲನಚಿತ್ರ ನಿರ್ಮಾಪಕರ ಮಂಡಳಿಗೆ ವಿಶೇಷ ಅಧಿಕಾರಿಯನ್ನು ನೇಮಿಸಿತ್ತು.
2019ರಲ್ಲಿ, ವಿಶೇಷ ಅಧಿಕಾರಿಗಳು ಸೊಸೈಟಿಯ ಲೆಕ್ಕಪರಿಶೋಧನೆಗಾಗಿ ವಿಶೇಷ ಲೆಕ್ಕಪರಿಶೋಧಕರನ್ನು ನೇಮಿಸಿದ್ದರು. ಪ್ರಕರಣಗಳನ್ನು ಪರಿಶೀಲಿಸಿ ವಿಶೇಷ ಲೆಕ್ಕ ಪರಿಶೋಧಕರು ನೀಡಿದ ವರದಿಯಲ್ಲಿ ಸಂಘದಲ್ಲಿನ ಹಣ ದುರುಪಯೋಗವಾಗಿದೆ ಎಂದು ನಮೂದಿಸಲಾಗಿತ್ತು. ಅದರಲ್ಲಿ ಈಗಾಗಲೇ ಸಂಘದ ಬ್ಯಾಂಕ್ ಖಾತೆಗೆ ಜಮಾ ಆಗಿದ್ದ ₹7 ಕೋಟಿ 50 ಲಕ್ಷ ಹಾಗೂ 2017-2019ನೇ ಸಾಲಿನಲ್ಲಿ ₹5 ಕೋಟಿ ಆದಾಯ, ಖರ್ಚು ಸೇರಿ ಸುಮಾರು 12 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ತಿಳಿಸಿದ್ದರು.
ನಿರ್ಮಾಪಕರ ಸಂಘದಿಂದ ಅಕ್ರಮವಾಗಿ ಖರ್ಚು ಮಾಡಿರುವ ಹಣವನ್ನು ಪರಿಷತ್ತಿಗೆ ಹಿಂತಿರುಗಿಸಬೇಕೆಂದು ವಿಶಾಲ್‌ಗೆ ಹಲವು ಬಾರಿ ತಿಳಿಸಿದ್ದರೂ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದ್ದರಿಂದ ಮೇಲ್ಕಂಡ ಸಮಸ್ಯೆಯನ್ನು ಸರಿಪಡಿಸಲು ನಟ ವಿಶಾಲ್ ಅವರಿಗಾಗಿ ನಿರ್ಮಿಸಿರುವ ಹೊಸ ಚಿತ್ರಗಳ ನಿರ್ಮಾಪಕರು ಮತ್ತು ತಂತ್ರಜ್ಞರು ತಮಿಳು ಚಲನಚಿತ್ರ ನಿರ್ಮಾಪಕರ ಮಂಡಳಿಯನ್ನು ಸಂಪರ್ಕಿಸಬೇಕು. ನಂತರ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಿದ ನಿರ್ಣಯದ ಆಧಾರದ ಮೇಲೆ ತಮ್ಮ ಕೆಲಸವನ್ನು ಪ್ರಾರಂಭಿಸಲು ನಿರ್ಮಾಪಕರ ಸಂಘದ ಕಾರ್ಯಕಾರಿ ಸಮಿತಿಯ ತಿಳಿಸಿದೆೆ.
ಮಂಡಳಿ ಕಾರ್ಯದರ್ಶಿ ಹೇಳಿಕೆ: ಈ ಬಗ್ಗೆ ತಮಿಳು ಚಲನಚಿತ್ರ ನಿರ್ಮಾಪಕರ ಮಂಡಳಿ ಕಾರ್ಯದರ್ಶಿ ರಾಧಾಕೃಷ್ಣನ್ ಈಟಿವಿ ಭಾರತದ ಜೊತೆಗೆ ಮಾತನಾಡಿ, "ವಿಶಾಲ್ ರೆಡ್ ಕಾರ್ಡ್ ಹೊಂದಿಲ್ಲ. ಭವಿಷ್ಯದಲ್ಲಿ ವಿಶಾಲ್ ಜೊತೆಗಿನ ಹೊಸ ಚಿತ್ರಗಳ ನಿರ್ಮಾಪಕರು ಸಂಘದ ಜೊತೆ ಸಮಾಲೋಚಿಸಬೇಕು. ಪ್ರಸ್ತುತ ಕೆಲಸ ಮಾಡುತ್ತಿರುವ ಚಿತ್ರಗಳ ಬಗ್ಗೆ ಕಾರ್ಯಕಾರಿ ಸಮಿತಿಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು" ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಜೂ.ಎನ್ಟಿಆರ್ ಹಾಡಿಹೊಗಳಿದ ಬಾಲಿವುಡ್ ಬೆಡಗಿ ಜಾಹ್ನವಿ ಕಪೂರ್ - Janhvi on Jr NTR