ETV Bharat / entertainment

ನಾಳೆ ಘೋಷಣೆಯಾಗಲಿದೆ ವಿನಯ್ ರಾಜ್​ಕುಮಾರ್ ನಟನೆಯ 'ಪೆಪೆ' ರಿಲೀಸ್​ ಡೇಟ್ - PEPE Release Date - PEPE RELEASE DATE

ಶ್ರೀಲೇಶ್ ಎಸ್.ನಾಯರ್ ನಿರ್ದೇಶನದ ಚೊಚ್ಚಲ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಕನ್ನಡದ ಭರವಸೆಯ ನಟ ವಿನಯ್ ರಾಜ್​ಕುಮಾರ್ ಮುಖ್ಯಭೂಮಿಕೆಯಲ್ಲಿ ಬಣ್ಣ ಹಚ್ಚಿದ್ದು, ಸಿನಿಮಾ ಬಿಡುಗಡೆಗೆ ದಿನ ನಿಗದಿಯಾಗಿದೆ. ನಾಳೆ ಸಂಜೆ 5:07ಕ್ಕೆ ಪೆಪೆ ರಿಲೀಸ್​​ ಡೇಟ್ ಅನೌನ್ಸ್​ ಆಗಲಿದೆ ಎಂದು ಚಿತ್ರನಿರ್ಮಾಪಕರು ತಿಳಿಸಿದ್ದಾರೆ.

PEPE Poster
ಪೆಪೆ ಪೋಸ್ಟರ್ (KRG Studios and Vinay Instagram)
author img

By ETV Bharat Entertainment Team

Published : Aug 13, 2024, 6:43 PM IST

ನಟ ವಿನಯ್ ರಾಜ್​ಕುಮಾರ್, ವಿಶಿಷ್ಠ, ವಿಭಿನ್ನ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆ ಹುಟ್ಟಿಸಿರುವ ರಾಜ್​ ಕುಟುಂಬದ ಕುಡಿ. ಕೊನೆಯದಾಗಿ ಒಂದು ಸರಳ ಪ್ರೇಮಕಥೆ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ನಟನ ಮುಂದಿನ ಬಹುನಿರೀಕ್ಷಿತ ಚಿತ್ರ 'ಪೆಪೆ'. ಇದು ಕನ್ನಡ ಚಿತ್ರರಂಗದಲ್ಲಿ ದಿ ಮೊಸ್ಟ್ ಎಕ್ಸ್​​ಪೆಕ್ಟೆಡ್​ ಸಿನಿಮಾಗಳಲ್ಲೊಂದಾಗಿದ್ದು ಬಿಡುಗಡೆಗೆ ತಯಾರಿ ನಡೆಯುತ್ತಿದೆ.

ಕನ್ನಡ ಚಿತ್ರರಂಗದ ಭರವಸೆಯ ನಟನಾಗಿರುವ ವಿನಯ್ ರಾಜ್​ಕುಮಾರ್ ಮುಂದಿನ ಚಿತ್ರಗಳ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ. ಸಿನಿಪ್ರಿಯರ ಗಮನ ಸೆಳೆಯುತ್ತಿರುವ ಪೆಪೆ ಬಿಡುಗಡೆ ದಿನಾಂಕಕ್ಕೆ ಅಭಿಮಾನಿಗಳು ಎದುರು ನೋಡುತ್ತಿದ್ದರು. ಚಿತ್ರತಂಡದಿಂದ ಅಧಿಕೃತ ಮಾಹಿತಿ ನಿರೀಕ್ಷಿಸಿದ್ದರು. ಫೈನಲಿ ಇಂದು ಪೋಸ್ಟ್​ ಒಂದನ್ನು ಶೇರ್​ ಮಾಡುವ ಮೂಲಕ ಚಿತ್ರನಿರ್ಮಾಪಕರು ಅಭಿಮಾನಿಗಳ ಮೊಗದಲ್ಲಿ ನಗು ತರಿಸಿದ್ದಾರೆ.

ರಿಲೀಸ್​ ಡೇಟ್: ವಿನಯ್ ರಾಜ್​ಕುಮಾರ್ ಅವರನ್ನೊಳಗೊಂಡ ಪೋಸ್ಟರ್ ಹಂಚಿಕೊಂಡ ಕೆಆರ್​​ಜಿ ಸ್ಟುಡಿಯೋಸ್​, ನಾಳೆ ಸಂಜೆ 5:07ಕ್ಕೆ ಪೆಪೆ ರಿಲೀಸ್​​ ಡೇಟ್ ಅನೌನ್ಸ್​ ಆಗಲಿದೆ ಎಂದು ಬರೆದುಕೊಂಡಿದೆ. ಮತ್ತೊಂದೆಡೆ, ನಾಯಕ ನಟ ವಿನಯ್​ ರಾಜ್​ಕುಮಾರ್​ ಕೂಡಾ ಪೆಪೆ ಬಿಡುಗಡೆ ದಿನಾಂಕ ನಾಳೆ ಘೋಷಣೆಯಾಗಲಿದೆ ಎಂಬ ಗ್ಲಿಂಪ್ಸ್ ಒಂದನ್ನು ಶೇರ್ ಮಾಡಿದ್ದಾರೆ. ಈ ಬಗ್ಗೆ ಪ್ರೇಕ್ಷಕರು ಉತ್ಸುಕರಾಗಿದ್ದಾರೆ. ​​

ಸೆನ್ಸಾರ್ ಪರೀಕ್ಷೆಯಲ್ಲಿ 'ಎ' ಸರ್ಟಿಫಿಕೇಟ್: ಚಿತ್ರೀಕರನ ಪೂರ್ಣಗೊಳಿಸಿಕೊಂಡಿರುವ 'ಪೆಪೆ' ಇತ್ತೀಚೆಗಷ್ಟೇ ಸೆನ್ಸಾರ್ ಪರೀಕ್ಷೆಯಲ್ಲೂ ಪಾಸಾಗಿದೆ. ಸದ್ಯ ಚಿತ್ರತಂಡದಿಂದ ಬಿಡುಗಡೆ ದಿನಾಂಕದ ಬಗ್ಗೆ ಅಭಿಮಾನಿಗಳಿಗೆ ಗುಡ್​ ನ್ಯೂಸ್​​ ಕೊಟ್ಟಿದೆ.

ಪೆಪೆ ವಿತರಿಸಲಿದೆ ಕೆಆರ್​ಜಿ: ಕೆಆರ್​​ಜಿ ಸ್ಟುಡಿಯೋಸ್​ನ ಕಾರ್ತಿಕ್ ಗೌಡ ಮತ್ತು ಯೋಗಿ ಜಿ.ರಾಜ್ ಅವರು ಈ ಚಿತ್ರವನ್ನು ರಾಜ್ಯಾದ್ಯಂತ ವಿತರಿಸಲಿದ್ದಾರೆ.

ವಿನಯ್ ರಾಜ್‌ಕುಮಾರ್ ಅವರು ಈವರೆಗೆ ಕ್ಲಾಸ್​​​ ಲುಕ್​ನಲ್ಲಿ ಕಾಣಿಸಿಕೊಂಡಿದ್ದರು. ಸಾಫ್ಟ್ ಚಿತ್ರಗಳ ಮೂಲಕವೇ ಹೆಚ್ಚು ಗಮನ ಸೆಳೆದಿರುವ ನಟ ಈ ಚಿತ್ರಕ್ಕಾಗಿ ವಿಭಿನ್ನ ಅವತಾರ ಎತ್ತಿದ್ದಾರೆ. ಕ್ಲಾಸ್​​ನಿಂದ ಮಾಸ್​ಗೆ ಶಿಫ್ಟ್​​ ಆಗಿರೋ ನಟನ ಪಾತ್ರದ ಮೇಲೆ ಅಭಿಮಾನಿಗಳ ಗಮನ ನೆಟ್ಟಿದೆ. ರಗಡ್​​ ಅವತಾರದಲ್ಲಿ ವಿನಯ್​ ಚಿತ್ರಮಂದಿರಗಳಲ್ಲಿ ಅಬ್ಬರಿಸಲು ಸಜ್ಜಾಗಿದ್ದಾರೆ.

ಇದನ್ನೂ ಓದಿ: 'ಸೋತ ಹಾಡುಗಳು ನನ್ನನ್ನು ಕಾಡುತ್ತವೆ': ಗೀತೆ ರಚನೆಕಾರ ಕೆ.ಕಲ್ಯಾಣ್ - K Kalyan Interview

ಶ್ರೀಲೇಶ್ ಎಸ್.ನಾಯರ್ ಆ್ಯಕ್ಷನ್​ ಕಟ್​ ಹೇಳಿರುವ 'ಪೆಪೆ' ಸಿನಿಮಾ ಶೀಘ್ರದಲ್ಲೇ ಬಿಡುಗಡೆ ಆಗುವ ನಿರಿಕ್ಷೆ ಇದೆ. ಶ್ರೀಲೇಶ್ ಅವರಿಗಿದು ಚೊಚ್ಚಲ ಪ್ರಯತ್ನ. ನಿರ್ದೇಶಕನಾಗಿ ಮೊದಲ ಹೆಜ್ಜೆಯಲ್ಲೇ ಸ್ಟಾರ್​ ನಟನಿಗೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಕಾಜಲ್‌ ಕುಂದರ್‌ ನಾಯಕಿಯಾಗಿ ವಿನಯ್​ ಜೊತೆ ತೆರೆಹಂಚಿಕೊಂಡಿದ್ದಾರೆ. ಉಳಿದಂತೆ ಮಯೂರ್‌ ಪಟೇಲ್‌, ಯಶ್‌ ಶೆಟ್ಟಿ, ಬಲ ರಾಜ್‌ವಾಡಿ, ಮೇದಿನಿ ಕೆಳಮನೆ, ಅರುಣಾ ಬಾಲರಾಜ್‌, ನವೀನ್‌ ಡಿ.ಪಡೀಲ್​ ಸೇರಿದಂತೆ ಹಲವರು ನಟಿಸಿದ್ದಾರೆ. ಅಭಿಷೇಕ್‌ ಜಿ.ಕಾಸರಗೋಡು ಅವರ ಕ್ಯಾಮರಾ ಕೈಚಳಕ, ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ಈ ಚಿತ್ರಕ್ಕಿದೆ. ಆ್ಯಕ್ಷನ್​ ಸೀನ್​ಗಳನ್ನು ರವಿವರ್ಮಾ, ಚೇತನ್‌ ಡಿಸೋಜಾ, ಡಿಫ್ರೆಂಟ್‌ ಡ್ಯಾನಿ, ನರಸಿಂಹ ನಿರ್ದೇಶಿಸಿದ್ದಾರೆ. ಬೆಂಗಳೂರು, ಮೈಸೂರು, ಕೊಡಗು, ಸಕಲೇಶಪುರ ಸುತ್ತಮುತ್ತ ಶೂಟಿಂಗ್​ ನಡೆದಿದೆ. ಉದಯ್‌ ಸಿನಿ ವೆಂಚರ್‌, ದೀಪ ಫಿಲ್ಮ್ಸ್ ಬ್ಯಾನರ್‌ ಅಡಿ ಉದಯ್ ಶಂಕರ್ ಎಸ್ ಮತ್ತು ಕೋಲಾರದ ಬಿ.ಎಂ.ಶ್ರೀರಾಮ್ ಸೇರಿ ಚಿತ್ರ ನಿರ್ಮಿಸಿದ್ದಾರೆ.

ಇದನ್ನೂ ಓದಿ: ವಿನಯ್ ರಾಜ್​​ಕುಮಾರ್ 'ಪೆಪೆ' ಸಿನಿಮಾ ವಿತರಿಸಲಿದೆ ಕೆಆರ್‌ಜಿ ಸ್ಟುಡಿಯೋಸ್ - Vinay Rajkumar PEPE

ಇತ್ತೀಚೆಗಷ್ಟೇ 'ಪೆಪೆ' ಪ್ರಿಸೆಟ್ ಎಂಬ ಶೀರ್ಷಿಕೆಯಡಿ ಹಾಡೊಂದು ಬಿಡುಗಡೆ ಆಗಿತ್ತು. ಜೇನು ಕುರುಬ ಬುಡಕಟ್ಟು ಜನಾಂಗದ ಕುರಿತ ಹಾಡು ಗಮನ ಸೆಳೆದಿತ್ತು. ಬಿಡುಗಡೆ ದಿನಾಂಕ ನಾಳೆ ಗೊತ್ತಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.